Thursday, 21st November 2024

ಅತಿ ಆಸೆ ಬೇಕಿಲ್ಲ

* ವೇದಾವತಿ ಹೆಚ್.ಎಸ್.

ಕಾಡಿನ ಅಂಚಿನ ಚಿಕ್ಕದೊಂದು ಗುಡಿಸಲಿನಲ್ಲಿ ರಾಮ ಮತ್ತು ಶಾಮ ಎಂಬ ಸಹೋದರರಿಬ್ಬರು ವಾಸವಾಗಿದ್ದರು. ಇಬ್ಬರೂ ತುಂಬಾ ಆತ್ಮೀಯರು. ಒಂದು ದಿನ ಮನೆಯಲ್ಲಿ ಅಡುಗೆ ಪದಾರ್ಥಗಳು ಖಾಲಿಯಾಗಿದೆಯೆಂದು ಶಾಮನು ಅಣ್ಣನಿಗೆ ಹೇಳುತ್ತಾಾನೆ. ಆಗ ರಾಮನು ಕಾಡಿಗೆ ಹೋಗಿ ಕಟ್ಟಿಿಗೆ ಕಡಿದು, ಮಾರಿ ಬರುವ ಹಣದಿಂದ ಮನೆಗೆ ಬೇಕಾದ ಸಾಮಾಗ್ರಿಿಗಳನ್ನು ತೆಗೆದುಕೊಂಡು ಬರುತ್ತೇನೆಂದು ಕೊಡಲಿಯನ್ನು ಹಿಡಿದು ಹೊರಟನು.

ಕಾಡಿನ ಮಧ್ಯದಲ್ಲಿ ದೊಡ್ಡದಾಗಿ ಬೆಳೆದ ಮಾವಿನ ಮರವನ್ನು ನೋಡುತ್ತಾಾನೆ. ಅದರಲ್ಲಿ ಮಾವಿನ ಕಾಯಿ ಮತ್ತು ಹಣ್ಣುಗಳಿದ್ದವು. ಕಟ್ಟಿಿಗೆಯ ಜೊತೆಗೆ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಿ ಹೆಚ್ಚಿಿಗೆ ಹಣವನ್ನು ಸಂಪಾದನೆ ಮಾಡಬಹುದೆಂದು ಯೋಚಿಸುತ್ತಾಾನೆ.

ಮರದ ಬುಡಕ್ಕೆೆ ಕೊಡಲಿಯ ಪೆಟ್ಟು ಕೊಡುತ್ತಾಾನೆ. ಆಗ ಒಂದು ಆಶರೀರವಾಣಿ ಕೇಳಿಸುತ್ತದೆ. ‘ಮಗು, ನನ್ನನ್ನು ನೀನು ಕಡಿಯಬೇಡ’ ಎನ್ನುತ್ತದೆ. ರಾಮನು ಧ್ವನಿ ಬಂದ ಕಡೆ ಸುತ್ತಮುತ್ತಲೂ ನೋಡುತ್ತಾಾನೆ. ಯಾರೂ ಕಾಣಿಸುವುದಿಲ್ಲ. ‘ಯಾರು ನೀನು, ನೀನೇಕೆ ಈ ಮರವನ್ನು ಕಡಿಯಬೇಡ ಎನ್ನುವೆ?’ ಎಂದನು. ‘ದಯವಿಟ್ಟು ಹಾಗೆ ಮಾಡಬೇಡ. ನಾನು ಮಾಂತ್ರಿಿಕ ಮಾವಿನ ಮರ. ಬೇಕಿದ್ದರೆ ನಾನು ನಿನ್ನ ಕಷ್ಟವನ್ನು ಪರಿಹಾರ ಮಾಡಬಲ್ಲೆ’ ಎಂದಿತು ಆ ಮಾವಿನ ಮರ. ‘ಹೇಗೆ?’ ಎಂದ ರಾಮ.
‘ನಿನಗೆ ಒಂದಿಷ್ಟು ಚಿನ್ನದ ಮಾವಿನ ಹಣ್ಣುಗಳನ್ನು ಕೊಡುತ್ತೇನೆ. ಅದನ್ನು ಮಾರಾಟ ಮಾಡಿ ಕಷ್ಟಗಳನ್ನು ನೀಗಿಸಿಕೋ’ ಎಂದಿತು ಆ ಮರ.

ಅದಕ್ಕೆೆ ಸಂತೋಷದಿಂದ ಒಪ್ಪಿಿಗೆ ಕೊಟ್ಟ ರಾಮ. ಮಾವಿನ ಮರವು ಚಿನ್ನದ ಮಾವಿನ ಹಣ್ಣುಗಳನ್ನು ಉದುರಿಸಿತು. ಆದರೆ ಎಷ್ಟು ಹಣ್ಣುಗಳನ್ನು ಕೊಟ್ಟರು ಅವನಿಗೆ ತೃಪ್ತಿಿ ಕಾಣಲಿಲ್ಲ. ‘ಇನ್ನೂ ಹಣ್ಣುಗಳನ್ನು ಉದುರಿಸು, ಇಲ್ಲವಾದರೆ ನಿನ್ನನ್ನು ಕಡಿಯುತ್ತೇನೆ’ ಎಂದು ಹಠ ಹಿಡಿದ ರಾಮ.

ಮಾವಿನ ಮರಕ್ಕೆೆ ಇವನ ದುರಾಸೆಯನ್ನು ಕಂಡು ಕೋಪ ಬಂದಿತು. ಅವನಿಗೆ ಪಾಠ ಕಲಿಸಬೇಕೆಂದು ಚಿನ್ನದ ಮಾವಿನ ಹಣ್ಣಿಿನ ಬದಲಿಗೆ ಕಲ್ಲಿನ ಮಾವಿನ ಹಣ್ಣುಗಳನ್ನು ಉದುರಿಸಲು ಪ್ರಾಾರಂಭಿಸಿತು. ರಾಮನ ತಲೆಯ ಮೇಲೆ ಕಲ್ಲುಗಳು ಬಿದ್ದು ರಕ್ತ ಬರಲು ಪ್ರಾಾರಂಭವಾಯಿತು. ನೋವನ್ನು ತಳಲಾರದೆ ಪ್ರಜ್ಞೆ ತಪ್ಪಿಿ ಅಲ್ಲಿಯೇ ಬಿದ್ದನು.

ಸೌದೆ ತರಲು ತೆರಳಿದ ರಾಮನು ಮರಳಿ ಬರದಿರುವುದನ್ನು ಕಂಡು ಶಾಮನು ಹುಡುಕುತ್ತಾಾ, ಮಾವಿನ ಮರದ ಹತ್ತಿಿರ ಬಂದನು. ಅಲ್ಲಿ ತನ್ನ ಸಹೋದರ ಪ್ರಜ್ಞೆ ತಪ್ಪಿಿ ಬಿದ್ದಿರುವುದು ಕಾಣುತ್ತಾಾನೆ. ಅವನ ಹತ್ತಿಿರ ಹೋಗಿ ಅಳಲಾರಂಭಿಸಿದನು.
ಅಗ ಅವನಿಗೆ ಆಶರೀರವಾಣಿ ಕೇಳಿ ಬರುತ್ತದೆ.

‘ಮಗು, ನಾನೇ ಅವನಿಗೆ ಗಾಯ ಮಾಡಿದ್ದು. ನನ್ನನ್ನು ಕಡಿಯಬೇಡ ನಿನಗೆ ಚಿನ್ನದ ಮಾವಿನ ಹಣ್ಣುಗಳನ್ನು ಕೊಡುತ್ತೇನೆ ಎಂದು ಹೇಳಿದೆ. ಆದಕ್ಕೊೊಪ್ಪಿಿದ. ಆದರೆ ನಾನು ಎಷ್ಟು ಚಿನ್ನದ ಮಾವಿನ ಹಣ್ಣುಗಳನ್ನು ಕೊಟ್ಟರು, ತೃಪ್ತಿಿಯಾಗದೇ ಪುನಃ ನನ್ನನ್ನು ಕಡಿಯಲು ಪ್ರಯತ್ನಿಿಸಿದ. ಅವನ ದುರಾಸೆಗೆ ತಕ್ಕ ಪಾಠವನ್ನು ಕಲಿಸಿದ್ದೇನೆ’ ಎಂದಿತು ಮಾವಿನ ಮರ.

‘ಮಾವಿನ ಮರವೇ. ದಯವಿಟ್ಟು ಅವನ ತಪ್ಪನ್ನು ಮನ್ನಿಿಸಿ ಅವನನ್ನು ಮೊದಲಿನ ಸ್ಥಿಿತಿಗೆ ಬರುವಂತೆ ಮಾಡು. ಮುಂದೆಂದೂ ಹೀಗೆ ದುಡುಕದಂತೆ ಅವನಿಗೆ ನಾನು ಬುದ್ಧಿಿ ಹೇಳುತ್ತೇನೆ. ಅವನಿಲ್ಲದೆ ನನ್ನಿಿಂದ ಬದಕಲು ಸಾಧ್ಯವಿಲ್ಲ’ ಎಂದು ಶಾಮನು ಮಾವಿನ ಮರದ ಬಳಿ ಗೋಗೆರೆಯಲು ಪ್ರಾಾರಂಭಿಸಿದನು.

‘ಸರಿ ಮಗು. ಆದರೆ ಮುಂದೆಂದೂ ಅತಿ ಆಸೆ ಪಡಬಾರದೆಂದು ನೆನಪಿಸು’ ಎಂದಿತು ಮಾವಿನ ಮರ.
ಶಾಮನು ನಿದ್ದೆಯಿಂದ ಎದ್ದವನಂತೆ ಮಲಗಿದ ಜಾಗದಿಂದ ಎದ್ದನು. ತನ್ನ ಅತಿಯಾದ ದುರಾಸೆಗೆ ಕ್ಷಮೆಯನ್ನು ಕೇಳಿದನು. ಮುಂದೆಂದೂ ಇಂತಹ ಕೆಟ್ಟ ಕೆಲಸಕ್ಕೆೆ ಕೈಹಾಕುವುದಿಲ್ಲವೆಂದು ತನ್ನ ತಪ್ಪನ್ನು ಒಪ್ಪಿಿಕೊಂಡನು.
ಮಾವಿನ ಮರ ಚಿನ್ನದ ಮಾವಿನ ಹಣ್ಣುಗಳನ್ನು ಕೊಟ್ಟು ಕಳುಹಿಸಿತು.