ಫಾರ್ಕಿನ್ಸನ್ ಖಾಯಿಲೆ ರೋಗ ನಿರ್ಧಾರಕ್ಕೆ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳೇ ಮುಖ್ಯವಾದವುಗಳಾಗಿವೆ. ಅವಶ್ಯಕತೆ ಇzಗ ತಲೆಯ ಸಿಟಿ ಸಾನ್, ಎಂಆರ್, ಪೆಟ್ ಸ್ಕಾನ್ ಬೇಕಾಗುತ್ತದೆ. ಪಾರ್ಕಿನ್ಸನ್ ಖಾಯಿಲೆ ನಿಧಾನವಾಗಿ ಹೆಚ್ಚಾಗುವ ಖಾಯಿಲೆಯಾಗಿದ್ದು ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ. ಕೆಲವು ಔಷಧೋಪಚಾರಗಳಿಂದ ಪಾರ್ಕಿನ್ಸನ್ ಹೆಚ್ಚಾಗುವ ಗತಿಯನ್ನ ಕಡಿಮೆ ಮಾಡಬಹುದು.
-ಡಾ.ಉಮಾಶಂಕರ್ ಆರ್. ನರರೋಗ ತಜ್ಞರು, ಬೆಂಗಳೂರು ನ್ಯೂರೋ ಸೆಂಟರ್, ೯೮೮೦೧೫೮೭೫೮.
ಫಾರ್ಕಿನ್ ಸನ್ ಮೆದುಳಿನ ಒಂದು ಭಾಗದಲ್ಲಿ (ಬೇಸಲ್ ಗ್ಯಾಂಗ್ಲಿಯಾ) ಉಂಟಾಗುವ ತೊಂದರೆ ಗಳಿಂದ ಉಂಟಾಗುವ ಖಾಯಿಲೆ. ಸಾಮಾನ್ಯವಾಗಿ ಮೆದುಳಿನಲ್ಲಿ ಹಲವಾರು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಇದರಲ್ಲಿ ಒಂದು ಮುಖ್ಯವಾದ ರಾಸಾಯಿನಿಕ ಡೋಪಮಿನ್. ಮೆದುಳು ಮಾಂಸಖಂಡಗಳ ಚಲನೆಗೆ ಸೂಚನೆ ಕೊಡಬೇಕಾದಾಗ ಅದನ್ನು ನಿಯಂತ್ರಿಸಲು ಡೋಪಮಿನ್ ಮುಖ್ಯವಾದ ಅಂಶ. ಪಾರ್ಕಿನ್ ಸನ್ ಖಾಯಿಲೆಯಲ್ಲಿ ಡೋಪಮಿನ್ ಉತ್ಪಾದನೆ ಮಾಡುವ ನರಕೋಶಗಳಿಗೆ ತೊಂದರೆ ಉಂಟಾಗುತ್ತದೆ.
ಇದರಲ್ಲಿ ಕೆಲವು ರೀತಿಯ ಲಕ್ಷಣಗಳು ಕೈಕಾಲುಗಳಲ್ಲಿ ನಡುಕ; ಕೈಕಾಲುಗಳು ವಿಶ್ರಾಂತಿ ಸ್ಥಿತಿಯಲ್ಲಿzಗ ನಡುಕ ಉಂಟಾಗುವುದು, ಪಿಲ್ ರೋಲ್ ನಡುಕ ಇವುಗಳು ಪ್ರಮುಖವಾದವು. ನಿಧಾನವಾದ ಚಲನ ವಲನ, ನಡೆಯುವಾಗ ಸಮತೋಲನ ತಪ್ಪುವುದು. ಕಾರಣವಿಲ್ಲದೇ ಬೀಳುವುದು, ಕೈಕಾಲುಗಳಲ್ಲಿ ಬಿಗಿತ, ಕಡಿಮೆಯಾಗುವ ಕಣ್ಣಿನ ರೆಪ್ಪೆಯ ಚಲನೆ, ಆಹಾರ ನುಂಗಲು ತೊಂದರೆ, ಬೆನ್ನು ಭಾಗುವಿಕೆ, ಅಸ್ಥಿರವಾದ ಭಂಗಿಗಳು, ಕೆಲವು ಬೇರೆ ಲಕ್ಷಣ(ಜೊಲ್ಲು ಸುರಿಯುವುದು, ವಾಸನೆ ಗ್ರಹಿಕೆಯಲ್ಲಿ ತೊಂದರೆ, ಮಲಬದ್ಧತೆ, ನಿರ್ಭಾವುಕತೆ, ನಿದ್ರಾಹೀನತೆ, ಮಲಗಿದಾಗ ಕಾಲುಗಳಲ್ಲಿ ಚಲನೆ) ಇವು ಪ್ರಮುಖ ಲಕ್ಷಣಗಳಾಗಿವೆ.
ಪಾರ್ಕಿನ್ ಸನ್ ನಿಧಾನವಾಗಿ ಕಾಲಕ್ರಮೇಣ ಹೆಚ್ಚಾಗುವ ತೊಂದರೆ. ಯಾವ ಕಾಲಮಿತಿಯಲ್ಲಿ ಹೆಚ್ಚಾಗುತ್ತದೆ ಎನ್ನುವುದು ನರಕೋಶಗಳ ದೌರ್ಬಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಐದು ಹಂತಗಳಲ್ಲಿ ಪಾರ್ಕಿನ್ಸನ್ ಖಾಯಿಲೆಗಳನ್ನು ವಿಂಗಡಿಸುತ್ತೇವೆ. ಮೊದಲ ಹಂತದಲ್ಲಿ ಸೌಮ್ಯ ಲಕ್ಷಣಗಳಾದ ಕಣ್ಣಿನ ರೆಪ್ಪೆ ಅಲುಗಾಡಿಸುವುದು ಕಡಿಮೆಯಾಗುವುದು, ಸಣ್ಣ ಬರವಣಿಗೆ, ಚೊಲ್ಲು ಸುರಿಯುವುದು, ನಿರ್ಭಾವುಕತೆ, ಆಹಾರ ಸೇವನೆಯಲ್ಲಿ ತೊಂದರೆ, ಧ್ವನಿಯಲ್ಲಿ ಕ್ಷೀಣತೆ.
ಎರಡನೇ ಹಂತದಲ್ಲಿ ಕೈಕಾಲುಗಳಲ್ಲಿ ನಡುಕ, ಬಿಗಿತ ಹೆಚ್ಚುವುದು ಮೂರನೇ ಹಂತದಲ್ಲಿ ನಿಧಾನವಾಗುವ ನಡಿಗೆ, ನಡಿಗೆಯಲ್ಲಿ ನಿಯಂತ್ರಣ ತಪ್ಪುವುದು ನಾಲ್ಕನೇ ಹಂತದಲ್ಲಿ ದೈನಂದಿನ ಚಟುವಟಿಕೆಗಳಿಗಾಗಿ ಇತರರ ಮೇಲೆ ಅವಲಂಬನೆ. ಐದನೇ ಹಾಗೂ ಕೊನೆಯ ಹಂತದಲ್ಲಿ ಗಾಲಿ
ಕುರ್ಚಿ ಅಥವಾ ಹಾಸಿಗೆ ಹಿಡಿಯುವಂತಹದ್ದು. ಸಾಮಾನ್ಯವಾಗಿ ರೋಗ ನಿರ್ಧಾರವಾದ ಬಳಿಕ ಹಂತಗಳು ಏರಿಕೆಯಾಗಲು ೧೫ರಿಂದ ೨೦
ವರ್ಷಗಳವರೆಗೂ ಸಮಯ ಹಿಡಿಯುತ್ತದೆ.
ವಿವಿಧ ರೀತಿಯ ಪಾರ್ಕಿನ್ಸನ್ ಖಾಯಿಲೆಗಳು ಇರುತ್ತವೆ. ಇವುಗಳಲ್ಲಿ ಪಿಎಸ್ಪಿ ಮತ್ತು ಎಂಎಸ್‌ಎ ಮುಖ್ಯವಾದವುಗಳು.
ಫಾರ್ಕಿನ್ಸನ್ ಉಂಟಾಗಲು ಕಾರಣಗಳೇನು?
ವಯಸ್ಕರಲ್ಲಿ ಪ್ರಮುಖವಾಗಿ ಪಾರ್ಕಿನ್ ಸನ್ ಕಾಣಿಸುತ್ತದೆ. ಅಪರೂಪದ ಪ್ರಕರಣಗಳಲ್ಲಿ ಅನುವಂಶೀಯವಾಗಿಯೂ ಕೂಡ ಕಾಣಿಸಬಹುದು.
ಸರಳವಾಗಿ ಹೇಳುವುದಾದರೆ, ನರಕೋಶಗಳಲ್ಲಿ ಒಂದು ರೀತಿಯ ಪ್ರೋಟೀನ್ ಅಲಾ ಸಿನ್ ನ್ಯೂಕ್ಲಿನ್ ಎಂಬ ಪ್ರೋಟೀನ್ ಸೇರಿಕೊಂಡು
ನರಕೋಶಗಳ ಕಾರ್ಯವೈಖರಿಗೆ ತೊಂದರೆ ಉಂಟುಮಾಡುತ್ತದೆ ಹಾಗೂ ನರಕೋಶಗಳ ನಾಶಕ್ಕೆ ಕಾರಣವಾಗುತ್ತದೆ. ಕೆಲವೊಂದು ಔಷಧಿಗಳಿಂದಲೂ ಕೂಡ ಪಾರ್ಕಿನ್ಸನ್ ಖಾಯಿಲೆ ಊಂಟಾಗುತ್ತದೆ. ಕೆಲವೊಂದು ರೀತಿಯ ವಿಷಕಾರಿ ಅಂಶಗಳಿಂದ ಅಥವಾ ತಲೆಗೆ ಪೆಟ್ಟುಬೀಳುವುದರಿಂದಲೂ ಕೂಡ ಉಂಟಾಗುತ್ತದೆ.
ಫಾರ್ಕಿನ್ಸನ್ ಪರೀಕ್ಷೆ ಹೇಗೆ?
ಫಾರ್ಕಿನ್ಸನ್ ಖಾಯಿಲೆ ರೋಗ ನಿರ್ಧಾರಕ್ಕೆ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳೇ ಮುಖ್ಯವಾದವುಗಳಾಗಿವೆ. ಅವಶ್ಯಕತೆ ಇzಗ ತಲೆಯ ಸಿಟಿ
ಸಾನ್, ಎಂಆರ್, ಪೆಟ್ ಸ್ಕಾನ್ ಬೇಕಾಗುತ್ತದೆ. ಪಾರ್ಕಿನ್ಸನ್ ಖಾಯಿಲೆ ನಿಧಾನವಾಗಿ ಹೆಚ್ಚಾಗುವ ಖಾಯಿಲೆಯಾಗಿದ್ದು ಇದನ್ನು ಸಂಪೂರ್ಣವಾಗಿ
ತಡೆಯಲು ಸಾಧ್ಯವಾಗುವುದಿಲ್ಲ. ಕೆಲವು ಔಷಧೋಪಚಾರಗಳಿಂದ ಪಾರ್ಕಿನ್ಸನ್ ಹೆಚ್ಚಾಗುವ ಗತಿಯನ್ನ ಕಡಿಮೆ ಮಾಡಬಹುದು.
ಫಾರ್ಕಿನ್ ಸನ್‌ಗೆ ಚಿಕಿತ್ಸೆ ಹೇಗೆ?
ಡೋಪಮಿನ್ ರಸಾಯನಿಕವನ್ನು ಮಾತ್ರೆಗಳ ಮುಖಾಂತರ ನೀಡುವುದು, ಡೋಪಮಿನ್ ಉತ್ಪಾದನೆಯನ್ನೇ ಹೆಚ್ಚು ಮಾಡುವ ಮಾತ್ರೆಗಳನ್ನು
ಕೊಡುವುದು ಮುಖ್ಯವಾದ ಚಿಕಿತ್ಸೆ. ಉಳಿದಂತೆ ಕೆಲವು ಬಾರಿ ಡೀ ಬ್ರೇನ್ ಸ್ಟಿಮ್ಯುಲೇಷನ್ ಎನ್ನುವ ಶಸ್ತ್ರಚಿಕಿತ್ಸೆಯಿಂದಲೂ ಕೂಡ ರೋಗಿಯನ್ನು ಗುಣಮುಖ ಮಾಡಬಹುದು. ಫಿಸಿಯೋಥೆರಪಿ ಚಿಕಿತ್ಸೆಯೂ ಒಂದು ಮುಖ್ಯವಾದ ಭಾಗ.