Thursday, 21st November 2024

ಬಾರೋ ರಾಜಕುಮಾರಾ

ಟಿ. ಎಸ್. ಶ್ರವಣ ಕುಮಾರಿ

ದೂರದ ಅಮೆರಿಕದಲ್ಲಿರುವ ಮಗಳ ಹೆರಿಗೆಗೆ ಹೋದ ತಾಯಿಯೊಬ್ಬರು ತನ್ನ ಮೊಮ್ಮಗ ರಾಜಕುಮಾರ ಬರುವು ದನ್ನು ಸಂಭ್ರಮಿಸಿದ ಪರಿ ವಿಶಿಷ್ಟ.

ಬಾರೋ ರಾಜಕುಮಾರಾ ಎಂದು ನಾನು ದಿನದಿನವೂ ಕರೆದರೂ ಅವನೇಕೋ ‘ಕಡಿಯಲೊಲ್ಲೆೆ ನಾ ಕರುಳ ಬಳ್ಳಿ, ಒಲವೂಡುತಿ
ರುವ ತಾಯೇ ಬಿಡದಾ ಭುವಿಯ ಮಾಯೇ’ ಎಂದು ಹೊಟ್ಟೆೆಯೊಳಗೇ ಹಾಡಿಕೊಳ್ಳುತ್ತಿದ್ದನೇನೋ, ಅಮ್ಮನಿಗೇ ಅಂಟಿಕೊಂಡು ಒಳಗೇ ಕುಳಿತುಬಿಟ್ಟಿದ್ದ.

‘ಹೆರಿಗೆಯ  ಸಂಭಾವ್ಯ ದಿನಾಂಕ ಆಗಷ್‌ಟ್‌ ಇಪ್ಪತ್ತೈದು. ಹದಿನೈದನೇ ತಾರೀಖಿನಿಂದ ಯಾವ ದಿನವೇ ಆದರೂ ಅದು ಪೂರ್ಣಾವಧಿಯ ಹೆರಿಗೆಯೇ. ನೀವು ಬೇಕಾದ್ದೆೆಲ್ಲವನ್ನೂ ಜೋಡಿಸಿಟ್ಟುಕೊಂಡು ಮಾನಸಿಕವಾಗಿ ಸಿದ್ಧರಾಗಿರಿ’ ಎಂದು ತಿಂಗಳ
ಹಿಂದಿನ ಚೆಕಪ್‌ನಲ್ಲಿ ಡಾಕ್ಟರಮ್ಮ ಹೇಳಿದ್ದರಂತೆ. ನಾವೂ ಹೆಚ್ಚು ಕಡಿಮೆ ತಿಂಗಳ ಮುಂಚಿತವಾಗೇ ಮಗಳ ಮನೆಯಿದ್ದ ಅಮೆರಿಕ ತಲುಪಿ, ಸೀಮಂತವನ್ನೂ ಮುಗಿಸಿ, ‘ಇನ್ನು ಯಾವಾಗ ಬೇಕಾದರೂ ಬಾರಯ್ಯ, ಎರಡೂ ಕೈಗಳಲ್ಲೆೆತ್ತಿಕೊಂಡು ತೊಡೆಯ ಮೇಲೆ ಮಲಗಿಸಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ಅಲವತ್ತುಕೊಳ್ಳುತ್ತಿದ್ದರೂ ಅವನಿಗೆ ಯಾಕೋ ಆ ಅವಸರವೇ ಇಲ್ಲ.

‘ಬಾರೋ ರಾಜಕುಮಾರ’ ಎಂದು ನಾನು ಕರೆದಿದ್ದಕ್ಕೆೆ ನಮ್ಮಲ್ಲಿ ಬಹಳಷ್ಟು ಜನ ಹರಸುವ ಹಾಗೆ ‘ಗಂಡುಮಗುವಿನ ತಾಯಾಗು’ ಎಂದು ನನ್ನ ಇಚ್ಛೆೆಯನ್ನು ಹೇಳಿದ್ದಲ್ಲ. ರಾಜಕುಮಾರನೋ, ರಾಜಕುಮಾರಿಯೋ ನನಗೆ ಅಂಥ ಯಾವ ಇಚ್ಛೆೆಯೋ, ಆಯ್ಕೆ ಯೋ ಮನಸ್ಸಿನಲ್ಲಿಲ್ಲ. ಆದರೆ ಇಲ್ಲಿನಂತೆ ಭ್ರೂಣದ ಲಿಂಗಪರೀಕ್ಷೆಗೆ ಅಮೆರಿಕದಲ್ಲಿ ನಿಷೇಧವಿಲ್ಲ. ಅಲ್ಲಿನ ಸಮಾಜದಲ್ಲಿ ಗಂಡು ಮಗುವಿನ ಬಗ್ಗೆೆ ವಿಶೇಷವಾದ ಆಸಕ್ತಿಯಾಗಲೀ, ಅಸ್ಥೆೆಯಾಗಲೀ ಇಲ್ಲದಿರುವುದರಿಂದ ಆ ಕಾರಣಕ್ಕಾಗಿ ಭ್ರೂಣಹತ್ಯೆೆಯ ಪ್ರಸಕ್ತಿ ಯಿಲ್ಲ. ‘ಮುಂದಿನವಾರದ ಸ್ಕಾನಿಂಗ್‌ನಲ್ಲಿ ಯಾವ ಮಗು ಅಂತ ಗೊತ್ತಾಗತ್ತೆೆ. ನೀವು ತಿಳ್ಕೊಬೇಕಾ ಅಂತ ಡಾಕ್ಟರ್ ಕೇಳಿದ್ರು. ನಾವು ಹ್ಞೂಂ ಅಂದ್ವಿ’ ಎಂದಳು ಮಗಳು. ಅದೂ ಸರೀನೇ, ಎಂದು ಬರುತ್ತಿರೋದು ರಾಜಕುಮಾರನೇ ಅಂತ ತಿಳಿದು ಕೊಂಡಾಯ್ತು ಬಿಡಿ.

ಆಗಷ್‌ಟ್‌ ಹದಿನೈದರ ನಂತರ ಪ್ರತಿದಿನ ಬೆಳಗ್ಗೆೆ ಅವಳೆದ್ದು ಬಂದ ತಕ್ಷಣದ ಕಾತುರದ ಮೊದಲ ಪ್ರಶ್ನೆೆ ‘ಹೇಗಿದೀಯಾ?’. ಅವಳದೂ ಅದೇ ಉತ್ತರ ‘ಆರಾಮಾಗೇ ಇದೀನಿ’ ಎನ್ನುತ್ತಾ ಡಿಶ್‌ವಾಷರ್‌ನ ಒಳಗಿದ್ದ ಪಾತ್ರೆಗಳನ್ನು ಕೂತು, ಬಗ್ಗಿ, ಎದ್ದು,
ನಿಲುಕಿ ಜೋಡಿಸಲು ಆರಂಭಿಸುತ್ತಿದ್ದಳು. ವಾಷಿಂಗ್ ಮೆಷೀನ್‌ನಲ್ಲಿದ್ದ ಒಣಗಿದ ರಾಶಿ ಬಟ್ಟೆೆಗಳನ್ನು ಹೊತ್ತು ತಂದು ಗುಡ್ಡೆೆ
ಹಾಕುತ್ತಿದ್ದಳು. ಮೊದಲ ದಿನ ಅವಳ ಈ ಭರತನಾಟ್ಯವನ್ನು ನೋಡಿ ನಾನು ಹೆದರಿ ‘ಅಯ್ಯೋ ಹೇಗ್ಹೇಗೋ ಬಗ್ಬೇಡ. ಸರ‌್ರಂತ ಎದ್ದು ಕೂತು ಮಾಡ್ಬೇೇಡ ಸ್ವಲ್ಪ ನಿಧಾನ. ದಭದಭಾಂತ ಓಡಾಡ್ಬೇೇಡ’ ಎಂದು ಎದ್ದರೆ ನನ್ನ ಮಾತುಗಳು ಅವಳ ತಲೆಯ ಮೇಲೆ ಹಾರಿಹೋಯಿತೇ ಹೊರತು ಕಿವಿಯೊಳಗಂತೂ ಇಳಿಯಲಿಲ್ಲ. ‘ಡಾಕ್ಟರ್ ಎಲ್ಲಾ ಹೇಳಿದಾರೆ, ಏನೂ ಆಗಲ್ಲ, ನೀನು ಸುಮ್ಸುಮ್ನೆ ಹೆದರ್ಕೋತೀಯಾ’ ಎಂದು ನಗುತ್ತಾ ತನ್ನ ಕೆಲಸ ಮುಗಿಸುತ್ತಿದ್ದಳು.

ಬಸುರಿಗೆ ತರಬೇತಿ

ತಿಂಡಿ ತಿಂದ ಮೇಲೆ ಅಡುಗೆಯವರೆಗೆ ಇನ್ನೇೇನೂ ಕೆಲಸವಿಲ್ಲವಲ್ಲ. ಹೋಗಲಿ ಅಮೆರಿಕದಲ್ಲಿ ಅದೇನು ತರಬೇತಿ ಕೊಡ್ತಾರೋ ತಿಳ್ಕೊೊಂಡೇ ಬಿಡೋಣ ಅಂತ ಅದರ ಬಗ್ಗೆೆ ಕೇಳಿದೆ. ‘ನಮ್ಮಲ್ಲಿ ಅಜ್ಜೀರು ಮಾಡ್ತಿದ್ದ ಕೆಲ್ಸಾನ ಇಲ್ಲಿ ಡಾಕ್ಟರು ಮಾಡ್ತಿದಾರೆ ಬಿಡು’ ಅಂದೆ. ‘ಇದಕ್ಕೆೆ ಸಂಬಂಧ ಪಟ್ಟಹಾಗೆ ಬೇರೆ ಬೇರೆ ಟ್ರೈನಿಂಗ್ ಕೂಡಾ ಇದ್ಯಮ್ಮಾ. ಲೇಬರ್ ಪೇನ್ ಎಂದರೆ ಹೇಗಿರತ್ತೆೆ. ತೆಗೆದುಕೊಂಡು ಹೋಗೋ ಕಿಟ್ನಲ್ಲಿ ಅವಶ್ಯವಾಗಿ ಏನೇನಿರ್ಬೇಕು. ಲೇಬರ್ ವಾರ್ಡಲ್ಲಿ ಗಂಡ ಹೆಂಡತಿಯ ಜೊತೆಗಿದ್ದು ಹೇಗೆ ಮಾನಸಿಕ, ನೈತಿಕ ಬೆಂಬಲ ಕೊಡಬೇಕು; ಹುಟ್ಟಿದ ಮಗುವನ್ನು ಹೇಗೆ ಎತ್ಕೋಬೇಕು, ಡೈಪರ್ ಹಾಕೋದು; ‘ಬೊರಿಟ್ಟೋ’ ತರಹ ಬಟ್ಟೆೆಯಲ್ಲಿ ಸುತ್ತೋದು ಎಲ್ಲಾ ಹೇಳಿಕೊಡ್ತಾರೆ’ ಎಂದಳು. ‘ಹಾಗಾದ್ರೆ ನಂಗೆ ಇಲ್ಲಿನ್ನೇನು ಕೆಲ್ಸ?’ ಅಂದೆ.

ಮಾತಾಡುತ್ತಿರುವ ಹಾಗೆಯೇ ಒಂದು ದೊಡ್ಡ ಬಾಲಿ ನಂತಹುದನ್ನು ರೂಮಿನಿಂದ ತೆಗೆದುಕೊಂಡು ಅದರ ಮೇಲೆ ಕುಳಿತು ಕೊಂಡು ಪುಟಿಯತೊಡಗಿದಳು. ‘ಏ ಬಿದ್ದೀಯ’ ರೇಗಿದೆ. ಇದೂ ಎಕ್ಸರ್‌ಸೈಸ್. ಇದರಿಂದ ನಾರ್ಮಲ್ ಡೆಲಿವರಿಗೆ ತುಂಬಾ ಸಹಾಯ ಆಗತ್ತಂತೆ. ತಲೆ ಚಚ್ಚಿಕೊಂಡೆ. ನಗುತ್ತಾ ಇನ್ನಷ್ಟು ಜೋರಾಗಿ ಪುಟಿಯತೊಡಗಿದಳು ಬಸುರಿಯ ಫೋಟೋ ಶೂಟ್
‘ಅಮ್ಮಾ ಈ ಫೋಟೋಸ್ ನೋಡು. ಮೆಟೆರ್ನಿಟಿ  ಸೆಲಬ್ರೇಷನ್ ಫೋಟೋ ಸೆಷನ್’ ಎಂದು ಮೊಬೈಲಲ್ಲಿ ಒಂದಷ್ಟು ಫೋಟೋ ಗಳನ್ನು ತೋರಿಸಿದಳು. ಬಸುರಿಯ ಹೊಟ್ಟೆೆ ಎದ್ದು ತೋರುವಂತೆ ವಿವಿಧ ಭಂಗಿಗಳು ಬೇರೆ ಬೇರೆ ದಿರಿಸುಗಳಲ್ಲಿ, ಹಿನ್ನೆೆಲೆಯಲ್ಲಿ, ಭಾವ ಭಂಗಿಗಳಲ್ಲಿ ಒಂದಷ್ಟು ಕ್ಲಿಕ್‌ಗಳು ಗಂಡ ಹೆಂಡತಿ ಆಪ್ಯಾಯಮಾನವಾಗಿ ಬಸಿರನ್ನು ಸಂಭ್ರಮಿಸುತ್ತಿರುವ ಕ್ಷಣಗಳು. ನಮ್ಮಮ್ಮನೋ ಅಜ್ಜಿಯೋ ನೋಡಿದ್ದರೆ ‘ಇದೇನೀ ಅವತಾರ!

ಯಾರ್‌ಯಾರ ಕಣ್ಣುಗಳು ಬೀಳತ್ವೋ. ಮುಚ್ಚಿಟ್ ಮುತ್ತಿನ ಹಾಗಿರ್ಬೇಕು ಬಸುರೀರು’ ಅಂತ ಬೈಗಳ ಗ್ಯಾರೆಂಟಿ! ನಮ್ಮ ಹಿರಿಯ ರಿಗೆ ಕೆಟ್ಟಕಣ್ಣು ಬೀಳುವ ಭಯ! ಈಗಿನವರಿಗೆ ಸಂಭ್ರಮಿಸುವ ಉತ್ಸಾಹ! ನನ್ನಂತ ತ್ರಿಶಂಕುಗಳಿಗೆ ಯಾವುದು ಸರಿಯೋ,
ಯಾವುದು ತಪ್ಪೋ ನಿರ್ಧರಿಸಲಾಗದೆ ಎರಡರ ಗುಣಗಳನ್ನೂ ಒಪ್ಪಿಕೊಳ್ಳುವ ತ್ರಿಶಂಕುವಿನ ಪೀಕಲಾಟ.

ಡಾಕ್ಟರ್ ನಿಗದಿ ಮಾಡಿದ್ದ ದಿನದಂದು ಚೆಕಪ್‌ಗೆ ಹೋದರೆ ‘ಎಲ್ಲಾ ಚೆನ್ನಾಗಿದೆ. ಇನ್ನೂ ಒಂದು ವಾರ ನೋಡೋಣ,
ಅಷ್ಟರೊಳಗೆ ಆಗದಿದ್ದರೆ ಸೆಪ್ಟೆೆಂಬರ್ ಒಂದರಂದು ಬನ್ನಿ ಆಗ ಮುಂದಿನ ಯೋಚನೆ ಮಾಡೋಣ’ ಎಂದರು ಕೂಲಾಗಿ.
ಇಲ್ಲಿ ಸ್ಕೂಲಿಗೆ ಸೇರಲು ಸೆಪ್ಟೆೆಂಬರ್ ಒಂದು ಗರಿಷ್ಠ ಮಿತಿ. ಅದರ ನಂತರ ಹುಟ್ಟಿದವರು ಮುಂದಿನ ವರ್ಷಕ್ಕೆೆ ಸೇರ
ಬೇಕು. ಕೇಳಲೋ, ಬೇಡವೋ ಎನ್ನುವ ಹೆದರಿಕೆಯಲ್ಲೇ ಇದರ ಕಡೆ ಡಾಕ್ಟರ ಗಮನವನ್ನು ಸೆಳೆದರೆ ‘ಏನಾಯ್ತೀಗ. ಮುಂದಿನ ವರ್ಷ ಅವನೇ ಕ್ಲಾಸ್‌ನಲ್ಲಿ ಎಲ್ಲರಿಗಿಂತ ದೊಡ್ಡವನಾಗಿದ್ದು ಕ್ಲಾಸ್ ಲೀಡರ್ ಆಗ್ತಾನೆ ಬಿಡಿ.

ಅದಕ್ಕೋಸ್ಕರ ನಾವು ಪ್ರಕೃತಿಯ ವಿರುದ್ಧ ಹೋಗುವುದಿಲ್ಲ. ಪ್ರಕೃತಿಯೇ ಮಗು ಹುಟ್ಟುವ ದಿನವನ್ನು ನಿರ್ಧರಿಸಬೇಕು’
ಎನ್ನುತ್ತಾ ಕೈತೊಳೆದು ಟವಲಲ್ಲಿ ಒರಸಿಕೊಂಡರು. ನಿಗದಿಯಾದಂತೆ ಸೆಪ್ಟೆೆಂಬರ್ ಒಂದರಂದು ಆಸ್ಪತ್ರೆೆಗೆ ದಾಖಲಾಗಿ ದ್ದಾಯಿತು. ಡಾಕ್ಟರು, ಅವರ ಸಹಾಯಕಿಯರು ಏನೇನು ಪ್ರಯತ್ನ, ಪ್ರಯೋಗ ಮಾಡಿದರೂ ನಮ್ಮ ರಾಜಕುಮಾರ ಮಾನಿಟರ್‌ನಲ್ಲಿ ತನ್ನ ಹೃದಯದ ಬಡಿತ ಕೇಳಿಸುತ್ತಿದ್ದವನು, ತಾನು ಮಾತ್ರ ಹಂದಾಡಲಿಲ್ಲ. ನಾವು ಬರುವುದಕ್ಕೆೆ ಸ್ವಲ್ಪ ಮುಂಚೆ ನನ್ನಣ್ಣನ ಮಗಳಿಗೆ ಹೀಗೇ ತಡವಾಗಿ ಕಡೆಗೆ ಮಗು ಹೊಟ್ಟೆೆಯಲ್ಲೇ ಹೋಗಿದ್ದ ಸುದ್ದಿ ಕೇಳಿದ್ದೆೆ. ಮೂರನೆಯ ದಿನದ ಹೊತ್ತಿಗೆ ನಮ್ಮೆಲ್ಲರ ಧೈರ್ಯವೆಲ್ಲವೂ ಉಡುಗಿ ಹೋಗಿ ನೆನಪಿಗೆ ಬಂದ ದೇವರಿಗೆಲ್ಲಾ ಹರಸಿಕೊಂಡಿದ್ದಾಯಿತು.

ಅಂದು ಬೆಳಗಿನ ಡ್ಯೂಟಿಯನ್ನು ಮುಗಿಸಿ ಹೊರಟ ಡಾಕ್ಟರ ತಂಡ ಸಹಜ ‘ಹೆರಿಗೆಗೆ ನಾವು ಎಲ್ಲ ಪ್ರಯತ್ನವನ್ನೂ ಮಾಡಿದ್ದೇವೆ. ಆದರೆ ಆಗುತ್ತಿಲ್ಲ. ಮಧ್ಯಾಹ್ನದ ಡ್ಯೂಟಿಗೆ ಬರುವ ಡಾಕ್ಟರ್ ತಂಡ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಿನಗೆ ಒಳಿತಾಗಲಿ’ ಎಂದು ಪಲುಕಿ ಹೊರಟರು. ಒಂದು ಗಂಟೆಯ ನಂತರ ಮಧ್ಯಾಹ್ನದ ಡ್ಯೂಟಿಗೆ ಬಂದ ಡಾಕ್ಟರ್ ತನ್ನನ್ನು ಪರಿಚಯಿಸಿಕೊಂಡು, ಅವಳನ್ನು ಪರೀಕ್ಷೆ ಮಾಡಿದವರೇ ‘ನಾರ್ಮಲ್ ಡೆಲಿವರಿಗೆ ಸಿದ್ಧಳಾಗಿದ್ದಾಳಲ್ಲ.

ಇನ್ನೇೇಕೆ ತಡ’ ಎನ್ನುತ್ತಾ ತಮ್ಮ ಸಹಾಯಕಿಯರ ತಂಡಕ್ಕೆೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲು ಸೂಚಿಸಿ ನಮ್ಮನ್ನು ಆಚೆ
ಕಳುಹಿಸಿದರು. ಅಂತು ದೇವರು ಕಣ್ಣುಬಿಟ್ಟ ಎಂದುಕೊಂಡು ಹೊರಬಂದು ನಿರೀಕ್ಷಣಾ ಕೊಠಡಿಯಲ್ಲಿ ಕುಳಿತು ಕಾಯತೊಡಗಿ ದೆವು. ಸಂಜೆ ನಾಲ್ಕೂಕಾಲಿಗೆ ಮೊಬೈಲ್‌ನಲ್ಲಿ ‘ಬಂದನಾ ರಾಜಕುಮಾರ’ ಎಂದು ಅಳಿಯನ ವಾಟ್ಸಾಪ್ ಮೆಸೇಜು ಮಗುವಿನ ಫೋಟೋದೊಂದಿಗೆ ಬಂತು. ಮಗುವನ್ನು ನೋಡಿದ ತಕ್ಷಣದ ಸಂತೋಷಕ್ಕ, ಅಷ್ಟು ಹೊತ್ತು ಅವಳು ಪಟ್ಟಿದ್ದ ಕಷ್ಟಕ್ಕೋ ಒಂದು ಮಿಶ್ರಭಾವದಲ್ಲಿ ಕಣ್ಣು ತುಂಬಿತು. ಆದರೆ ಇಲ್ಲಿನ ಹಾಗೆ ಅಮೆರಿಕದಲ್ಲಿ ಮಗುವನ್ನು ತಕ್ಷಣ ತೋರಿಸುವುದಿಲ್ಲ. ಮಗು ಹುಟ್ಟಿದ ಕೂಡಲೆ ಅಮ್ಮನ ಮಡಿಲ ಮೇಲೆ ಮಲಗಿಸುತ್ತಾರಂತೆ. ಚರ್ಮ ಚರ್ಮದ ಸ್ಪರ್ಶದಿಂದ ಮಗುವಿಗೆ ತಾಯಿಯೊಂದಿಗೆ ಒಂದು ಅವಿನಾಭಾವ ಸಂಬಂಧ ಬೆಳೆಯುವುದೆಂದು ಅವರ ನಂಬಿಕೆ, ಸಿದ್ಧಾಾಂತ. ನಾನದರ ತರ್ಕಕ್ಕೆೆ ಹೋದರೆ ಬೇರೆಯೇ ಕತೆಯಾದೀತು. ಅಂತೂ ಸೂರ್ಯ ಕಂತುವ ಹೊತ್ತಲ್ಲಿ ನಮ್ಮ ಮನೆ-ಮನಗಳಲ್ಲಿ ಹುಣ್ಣಿಮೆಯ ಚಂದ್ರ ಬೆಳಗಿದ್ದ.