ಶಶಾಂಕ್ ಮುದೂರಿ
ಡಾಎಸ್.ಎಲ್.ಭೈರಪ್ಪನವರ ಕುರಿತು, ಅವರ ಕೃತಿಗಳ ಕುರಿತು, ಆ ಕೃತಿಗಳು ಹೇಗೆ ತಮ್ಮ ಜೀವನದ ಮೇಲೆ ಪ್ರಭಾವ ಬೀರಿತು ಎನ್ನುವ ಕುರಿತು ಅವರ ನೂರಕ್ಕೂ ಹೆಚ್ಚು ಓದುಗರು 433 ಪುಟಗಳ ಬೃಹತ್ ಪುಸ್ತಕವೊಂದನ್ನು ರಚಿಸಿದ್ದಾರೆ!
ಕನ್ನಡದ ಅಸಾಧಾರಣ ಕಾದಂಬರಿಕಾರ ಎನಿಸಿರುವ ಬೈರಪ್ಪನವರ ಕೃತಿಗಳನ್ನು ನಾನಾ ನೆಲೆಯ ಓದುಗರು ಗ್ರಹಿಸಿದ ವಿಭಿನ್ನ ಆಯಾಮಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ಇಷ್ಟನ್ನು ಹೇಳಿದರೆ, ಈ ಸಂಕೀರ್ಣ ಕೃತಿಯ ಕುರಿತಾಗಿ ತೀರ ಸರಳವಾಗಿ ಹೇಳಿದಂತಾಗುತ್ತದೆ. ಆದರೆ ಇದೊಂದು ಕೃತಿಯ ಮೂಲಕ, ಇಲ್ಲಿ ಅಡಕಗೊಂಡಿರುವ ವಿಭಿನ್ನ ಹಿನ್ನೆೆಲೆಯ ಓದುಗರ
ಪ್ರಾಮಾಣಿಕ ಅನಿಸಿಕೆಯ ಮೂಲಕ, ಸಾಹಿತಿ ಭೈರಪ್ಪನವರು ತಲುಪಿರುವ ಔನ್ನತ್ಯದ ಪರಿಚಯವಾಗುವುದಂತೂ ನಿಜ.
ಗೃಹಭಂಗ, ವಂಶವೃಕ್ಷ, ಪರ್ವ, ದಾಟು, ಸಾರ್ಥ, ಆವರಣ, ತಬ್ಬಲಿಯು ನೀನಾದೆ ಮಗನೆ, ಯಾನ ಮೊದಲಾದ ಅತ್ಯಂತ ಮಹತ್ವಪೂರ್ಣ ಕಾದಂಬರಿಗಳನ್ನು ರಚಿಸಿರುವ ಭೈರಪ್ಪನವರ ಅಂತಾರಾಷ್ಟ್ರೀಯ ವ್ಯಾಪ್ತಿಯನ್ನು ಸಹ ಈ ಪುಸ್ತಕ ಸಮರ್ಥವಾಗಿ ಬಿಂಬಿಸುತ್ತದೆ.
‘‘ವಿಶ್ವ ಸಾಹಿತಿ’’ ಎಂಬ ಮಾತು ಭಾರತೀಯ ಸಾಹಿತ್ಯ ಕ್ಷೇತ್ರದಲ್ಲೇ ಇಂದು ಯಾರಿಗಾದರೂ ಅರ್ಥಪೂರ್ಣ ರೀತಿಯಲ್ಲಿ ಅನ್ವ
ಯವಾಗುವುದಿದ್ದರೆ, ಅದು ಭೈರಪ್ಪನವರಿಗೆ ಮಾತ್ರ ಎಂದರೆ ಅದೇನೂ ಅತಿಶಯೋಕ್ತಿಯಾಗಲಾರದು. ಕಳೆದ ವರ್ಷ ಲಂಡನ್ನಿ
ನಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಡೊಯ್ದಿದ್ದ ಪುಸ್ತಕಗಳಲ್ಲಿ ಭೈರಪ್ಪನವರ ಪರ್ವ ಕಾದಂಬರಿಯ ಇಂಗ್ಲಿಷ್ ಅನುವಾದದ 200 ಪ್ರತಿಗಳೂ ಸಂಪೂರ್ಣವಾಗಿ ಮಾರಾಟವಾಗಿಬಿಟ್ಟವಂತೆ.
ಅವರ ಅನೇಕ ಮಹತ್ವದ ಕೃತಿಗಳು ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲಿ ಮಾತ್ರವಲ್ಲದೆ, ಸಂಸ್ಕೃತ ಮತ್ತು ಉರ್ದು ಭಾಷೆಗಳಿಗೂ ಅನುವಾದಗೊಂಡಿವೆ.’’ (ಡಾ ಪ್ರಧಾನ್ ಗುರುದತ್ತ ಅವರ ಮಾತುಗಳು, ಪುಟ 12) ಇಂತಹ ಬರಹಗಳು ಭೈರಪ್ಪನವರನ್ನು ಒಂದು ನೆಲೆಯಲ್ಲಿ ಪರಿಚಯಿಸಿದರೆ, ಇನ್ನೊೊಂದು ನೆಲೆಯಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಮರಾಠಿ,
ಒರಿಯಾ ಮೊದಲಾದ ಭಾಷೆಗಳಿಗೆ ಅನುವಾದಿಸಿದ ಅನುವಾದಕರ ಅಭಿಪ್ರಾಯಗಳು, ಒಟ್ಟು ಪುಸ್ತಕಕ್ಕೆೆ ಹೊಸ ಆಯಾಮವನ್ನೇ
ನೀಡುತ್ತವೆ. ಭೈರಪ್ಪನವರನ್ನು ಮರಾಠಿಯ ಜನರು ತಮ್ಮದೇ ಭಾಷೆಯ ಲೇಖಕನಿಗೆ ನೀಡುವಷ್ಟು ಗೌರವದಿಂದ ಸ್ವೀಕರಿಸುತ್ತಾ
ರೆಂಬ, ಇದಕ್ಕೆೆ ಹೋಲುವ ಹಲವು ವಿದ್ಯಮಾನಗಳು ಇಲ್ಲಿನ ಬರಹಗಳಲ್ಲಿ ಬಿಂಬಿತವಾಗಿರುವ ಪರಿ ವಿಶಿಷ್ಟ.
ಕಾದಂಬರಿಕಾರ ಭೈರಪ್ಪನವರಿಂದಾಗಿ ಸಂತೆಶಿವರ ಎಂಬ ತೆಂಗಿನಸೀಮೆಯ ಹಳ್ಳಿಯು ವಿಶ್ವಖ್ಯಾತಿ ಪಡೆಯಿತು! ಆ ಊರಿನಲ್ಲಿ ವಾಸಿಸಿದ್ದ, ಭೈರಪ್ಪನವರನ್ನು ಹತ್ತಿರದಿಂದ ಕಂಡ ಮಹನೀಯರ ಬರಹಗಳು ಈ ಪುಸ್ತಕಕ್ಕೆೆ ಜೀವ ತುಂಬಿದ ಪರಿ ಅನನ್ಯ. ಸಂತೆಶಿವರ ಹಳ್ಳಿಯ ಜನರನ್ನು, ವಾತಾವರಣವನ್ನು, ಅಲ್ಲಿನ ಸಂಸ್ಕೃತಿಯನ್ನು ತಮ್ಮ ಕಾದಂಬರಿಗಳಲ್ಲಿ ವ್ಯಾಪಕವಾಗಿ, ಸಮರ್ಥವಾಗಿ ದುಡಿಸಿಕೊಂಡಿರುವ ಭೈರಪ್ಪನವರು, ಇಂದಿಗೂ ಆ ಊರಿನೊಂದಿಗೆ ಆತ್ಮೀಯ ಸಂಬಂಧವನ್ನಿರಿಸಿಕೊಂಡು, ಹಳ್ಳಿಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಪರಿಯನ್ನು ಆ ಊರಿನ ಓದುಗರು ಬರೆದುಕೊಂಡದ್ದನ್ನು ಕಂಡಾಗ, ಭೈರಪ್ಪನವರ ಬದುಕಿನ ಇನ್ನೊೊಂದು ಮಗ್ಗುಲಿನ ಪರಿಚಯವಾಗುತ್ತದೆ.
ಈ ಪುಸ್ತಕದಲ್ಲಿ 110ಕ್ಕೂ ಹೆಚ್ಚಿನ ಓದುಗರ ಬರಹಗಳಿವೆ. ನಮ್ಮ ರಾಜ್ಯದ ಮತ್ತು ಪರರಾಜ್ಯಗಳ ವಿವಿಧ ಹಿನ್ನೆೆಲೆಯ ಜನಸಾಮಾನ್ಯರು, ವೃತ್ತಿನಿರತರು, ಗೃಹಿಣಿಯರು, ವಿದ್ಯಾರ್ಥಿಗಳು, ವೃತ್ತಿನಿರತರು, ಬ್ಯಾಾಂಕ್ ಉದ್ಯೋಗಿಗಳು, ಪೊಲೀಸ್ ಅಧಿಕಾರಿಗಳು, ಆಕಾಶವಾಣಿ ಉದ್ಯೋಗಿಗಳು, ಪತ್ರಕರ್ತರು, ಶಿಕ್ಷರು, ನಿವೃತ್ತರು, ಅನುವಾದಕರು ಮತ್ತು ವಿದ್ವಾಾಂಸರು ಭೈಯರಪ್ಪನವರನ್ನು ಗ್ರಹಿಸಿದ ಪರಿಯನ್ನು ಬಿಂಬಿಸುವ ಈ ಬರಹಗಳು ಕಟ್ಟಿಕೊಡುವ ಸಮಗ್ರ ನೋಟ ವಿಶಿಷ್ಟ. ಆ ನೋಟವು ಭೈರಪ್ಪನವರ ಪ್ರಭಾವಳಿಯ ಪ್ರಖರತೆಯನ್ನು ಹೆಚ್ಚಿಸುತ್ತದೆ ಎಂದೇ ಹೇಳಬಹುದು.
ಬೆಂಗಳೂರಿನ ಮಂಡಕ್ಕಿ ಅಂಗಡಿಯ ಮಾಲಿಕರೊಬ್ಬರು ಭೈರಪ್ಪನವರ ಕಾದಂಬರಿಗಳಿಂದ ತಾನು ಹೇಗೆ ಪ್ರಭಾವಿತನಾದೆ
ಎಂದು ಬರೆದ ಬರಹ ಈ ಪುಸ್ತಕದ ಮೊದಲ ಲೇಖನ. ಮಂಡಕ್ಕಿ ಮಾರುವವರಿಂದ ಹಿಡಿದು, ನಿವೃತ್ತ ಹಿರಿಯ ಅಧಿಕಾರಿಗಳೂ,
ವಿದ್ವಾಾಂಸರು ಭೈರಪ್ಪನವರ ಕೃತಿಗಳಿಂದ ಹೇಗೆ ಪ್ರಭಾವಿತರಾಗಿದ್ದರು ಎಂದು ತೋರಿಸಿಕೊಡುವ ಈ ಪುಸ್ತಕವು ಭೈರಪ್ಪನವರನ್ನು ಓದುಗರು ಇನ್ನೊೊಂದೇ ಆಯಾದಲ್ಲಿ ಅರ್ಥೈಸಿಕೊಳ್ಳಲು ಸಹಕಾರಿ.
ಕನ್ನಡದ ಅಸಾಮಾನ್ಯ ಕಾದಂಬರಿಕಾರ, ಪ್ರಧಾನ ಗುರುದತ್ತ ಅವರೆಂದಂತೆ ವಿಶ್ವ ಸಾಹಿತಿ ಡಾ ಎಸ್.ಎಲ್.ಭೈರಪ್ಪನವರ ಕೃತಿಗಳನ್ನು ಓದಿ, ಪ್ರಭಾವಿತರಾದ ಜನಸಾಮಾನ್ಯರ ಸ್ಪಂದನೆಗಳನ್ನು ದಾಖಲಿಸಿರುವ ಈ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆೆ ಒಂದು ಅಪೂರ್ವ ಕೊಡುಗೆ.
ನಮ್ಮ ಭೈರಪ್ಪನವರ ಹುಟ್ಟೂರೇ ನನ್ನ ಹುಟ್ಟೂರು ಸಹ. ಅದೇ ಸಂತೆಶಿವರ. ನನ್ನ ಬಾಲ್ಯದಿಂದ, ನನಗಾಗ ಹತ್ತು ವರ್ಷ, ನಾನು
ಎಸ್‌ಎಸ್‌ಎಲ್‌ಸಿ ಓದುವವರೆಗೂ ಸಂತೆಶಿವರದಲ್ಲಿ ಭೈರಪ್ಪನವರನ್ನು ಅನೇಕ ಸಲ ಭೆಟ್ಟಿಯಾಗುತ್ತಿದ್ದೆೆ. ನನ್ನ ಅಣ್ಣ ಭೈರಪ್ಪನವರ ಬಾಲ್ಯ ಸ್ನೇಹಿತ. ಭಿತ್ತಿಯಲ್ಲಿ ಭೈರಪ್ಪನವರು ಪ್ರಸ್ತಾಪಿಸಿರುವ ‘‘ರಾಜ’’ನೇ ನನ್ನ ಅಣ್ಣ.
-ಜಯರಾಮ ಎಸ್. ಸಂತೆಶಿವರ
ನಾನು ಪಿಎಚ್.ಡಿ.ಗಾಗಿ ಕೆಲ ಸೂಕ್ಷ್ಮ ವಿಚಾರಗಳನ್ನು ಅವರೊಂದಿಗೆ ಚರ್ಚಿಸಬೇಕೆಂದು ಅವರ ಮನೆಗೆ ಕರೆಮಾಡಿದೆ. ನನ್ನ ಕರೆ ತೆಗೆದುಕೊಂಡವರು ‘‘ಅವರು ಬರೆಯುವುದರಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಮೂರು ತಿಂಗಳು ಯಾರನ್ನೂ ಭೇಟಿಯಾಗುವುದಿಲ್ಲ’’ ಎಂದರು. ಕಡೇ ಪಕ್ಷ ಫೋನಿನಲ್ಲಾದರೂ ಕೇಳಬಹುದೇ ಎಂದು ಕೇಳಿದೆ. ಅವರು ‘‘ಫೋನಿಗೂ ಸಿಗುವುದಿಲ್ಲ. ಈ ಸಮಯದಲ್ಲಿ ಅವರು ಏಕಾಂತ ಬಯತ್ತಾರೆ. ಮನೆಯಲ್ಲೂ ಯಾರೊಂದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ. ಬೇಜಾರು ಮಾಡಿಕೊಳ್ಳಬೇಡಿ’’ ಎಂದರು. ಅದಕ್ಕೇ ಏನೋ ಭೈರಪ್ಪನವರು ನನಗೆ ಸದಾ ತಾಪಸಿಯಂತೆ ಕಾಣುತ್ತಾರೆ.
-ಡಾ ಶುಭಶ್ರೀ ಪ್ರಸಾದ್ ಮಂಡ್ಯ
ನಾನು ಹುಟ್ಟು ದೃಷ್ಟಿಸವಾಲಿಗ ವ್ಯಕ್ತಿ. ಎನ್‌ವಿಡಿಎ ಎನ್ನುವ ತಂತ್ರಾಾಂಶದ ಮೂಲಕ ಓದಬಲ್ಲೆೆ, ಬರೆಯಬಲ್ಲೆೆ, ಕಂಪ್ಯೂಟರ್ ಬಳಸಬಲ್ಲೆೆ… ಗೃಹಭಂಗ ಕಾದಂಬರಿಯ ನಂಜಮ್ಮ ಅನುಭವಿಸಿದ ಕಷ್ಟಗಳನ್ನೇ ನನ್ನ ತಾಯಿಯೂ ಕೂಡ ಅನುಭವಿಸಿದ್ದಾರೆ. ಮದುವೆಯಾದ ಬಳಿಕ ಬಿ.ಎ. ಪದವಿ ಮತ್ತು ಬಿ.ಎಡ್. ಶಿಕ್ಷಣವನ್ನು ಪಡೆದಿದ್ದಾರೆ. ಅಕ್ಕ-ತಂಗಿಯರ ಮದುವೆ ಮಾಡಿದ್ದಾರೆ. ನನ್ನ ಮದುವೆಯನ್ನು ಕೂಡ ನಾ ಒಪ್ಪಿದ ಹುಡುಗಿಯೊಂದಿಗೆ ನೆರವೇರಿಸಿದ್ದಾರೆ. ನನ್ನನ್ನು ಸಲಹುವ ಆ ಹೊತ್ತಿನಲ್ಲಿ ಸುತ್ತಮುತ್ತಲಿನ ಕೊಂಕು ಮಾತುಗಳು ಮತ್ತು ವರ್ತನೆಗಳನ್ನು ಕಡೆಗಣಿಸಿ ನನ್ನನ್ನು ಬೆಳೆಸಿದ್ದಾರೆ.
-ಶ್ರೀನಿವಾಸಮೂರ್ತಿ ಬಿ.ಜಿ. ಬೆಂಗಳೂರು