Thursday, 12th December 2024

ಸರ್ವೋತ್ತಮ ಶಿಕ್ಷಣ ದೊರೆಯ ಆಶಯ

ರಂಜಿತ್‌ ಎಚ್.ಅಶ್ವತ್ಥ

ಖಾಸಗಿ ಶಿಕ್ಷಣ ಸಂಸ್ಥೆಗಳೆಂದ ಕೂಡಲೇ ಡೊನೇಷನ್, ಲಕ್ಷ ಲಕ್ಷ ಫೀಸು, ತಮ್ಮ ಸಂಸ್ಥೆಗಳ ಉದ್ಧಾರಕ್ಕೆ ಸರಕಾರಿ ಶಾಲೆ ಗಳ ಅಭಿವೃದ್ಧಿಗೆ ತೊಡಕಾಗುವ ಆರೋಪಗಳೇ ಹೆಚ್ಚು. ಇನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ‘ತಾವಾಯಿತು ತಮ್ಮ ಸಂಸ್ಥೆ ಗಳಾಯಿತು.. ತಮ್ಮ ವಿದ್ಯಾರ್ಥಿಗಳಾಯಿತು’ ಎನ್ನುವ ಮನಸ್ಥಿತಿಯಲ್ಲಿಯೇ ಇರುತ್ತವೆ. ಆದರೆ ಇಲ್ಲೊಬ್ಬರು ಮಾತ್ರ, ತಮ್ಮ ಶಿಕ್ಷಣ ಸಂಸ್ಥೆಯ ಏಳ್ಗೆಯ ಜತೆಜತೆಯ ಲ್ಲಿಯೇ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕಳೆದ ಎರಡುವರೆ ದಶಕದಿಂದ ಅಹರ್ನಿಶಿ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ ಪ್ರೊ. ಎಂ.ಆರ್. ದೊರೆಸ್ವಾಮಿ, ಪಿಇಎಸ್ ಸಂಸ್ಥಾಪಕರು.

ದೇಶದ ಮೂಲೆ ಮೂಲೆಯಲ್ಲಿ ತಮ್ಮದೇಯಾದ ಶಿಕ್ಷಣ ಸಂಸ್ಥೆಗಳಿವೆ. ಸುಮಾರು ೨೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎರಡು ಸಾವಿರಕ್ಕೂ ಹೆಚ್ಚು ಉಪನ್ಯಾಸಕರು, ನೂರಾರು ಶಾಖೆಗಳು, ಸ್ವಂತ ವಿಶ್ವವಿದ್ಯಾಲಯಗಳನ್ನು ಕಟ್ಟಿದ್ದರೂ, ಇವರಿಗೆ ಮಾತ್ರ ‘ಸರಕಾರಿ ಶಾಲೆಗಳ ಮೇಲೆ ಎಲ್ಲಿಲ್ಲದ ಮೋಹ-ಮಮಕಾರ’.

ಆ ಕಾರಣಕ್ಕಾಗಿಯೇ ಕಳೆದ ಎರಡುವರೆ ದಶಕದಲ್ಲಿ ೪೦ಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಆಮೂಲಾಗ್ರ ಬದಲಾವಣೆ ತರುವುದರೊಂದಿಗೆ ಆ ಭಾಗದ ಖಾಸಗಿ ಶಾಲೆಗಳನ್ನೇ ಸೆಡ್ಡು ಹೊಡೆಯುವಂತೆ ರೂಪಿಸಿದ್ದಾರೆ.
ಸರಕಾರಿ ಶಾಲೆಗಳ ಅಭಿವೃದ್ಧಿಯನ್ನು ತಪಸ್ಸಿನ ರೀತಿ ಮಾಡಿಕೊಂಡು ಬಂದಿರುವ ಇವರು ಮತ್ಯಾರು ಅಲ್ಲ, ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮುಖ್ಯಮಂತ್ರಿಗಳ ಶಿಕ್ಷಣ ಸುಧಾರಣಾ ಸಮಿತಿ
ಸಲಹೆಗಾರರಾಗಿರುವ ಪ್ರೊ.ಎಂ.ಆರ್. ದೊರೆಸ್ವಾಮಿ ಅವರು.

ಸರಕಾರಿ ಶಾಲೆಗಳ ಅಭಿವೃದ್ಧಿಗೆ ‘ಎಲೆ ಮರೆಯ ಕಾಯಿಯಂತೆ’ ಮೌನ ಕ್ರಾಂತಿಯನ್ನು ಮಾಡಿಕೊಂಡು ಬಂದಿರುವ ಅವರು, ಆರಂಭದಲ್ಲಿ ತಾವೇ ಮುಂದೆ ನಿಂತು ತಮ್ಮ ವಿವಿಯಿಂದಲೇ ಸರಕಾರಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರು. ಬಳಿಕ ಅದೇ ಮಾದರಿಯನ್ನು ಎಲ್ಲ ವಿಶ್ವವಿದ್ಯಾಲ ಯಗಳು ಪಾಲಿಸುವಂತೆ ನೋಡಿಕೊಂಡರು.

ರಜತ ಮಹೋತ್ಸವದ ಅಮೃತ ತೀರ್ಮಾನ

ಅದು ೧೯೯೮-೯೯ರ ಅವಧಿ. ಪಿಇಎಸ್ ಶಿಕ್ಷಣ ಸಂಸ್ಥೆ ಹುಟ್ಟಿ ಅಂದಿನ ೨೫ ವರ್ಷ ಸಂದಿದ್ದವು. ರಜತ ಮಹೋತ್ಸವದ ಸಮಯ ದಲ್ಲಿ ವಿಶ್ವವಿದ್ಯಾಲಯದಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಲೋಚನೆಯಲ್ಲಿ ಇಡೀ ಆಡಳಿತ ಮಂಡಳಿ ಯಿತ್ತು. ಅದಕ್ಕೆ ದೊರೆಸ್ವಾಮಿ ಅವರೇನು ವಿರೋಽಸಲಿಲ್ಲ. ಆದರೆ ಈ ರೀತಿಯ ಅದ್ಧೂರಿ ಕಾರ್ಯಕ್ರಮ ಮೂರು ದಿನ ನೆನಪಲ್ಲಿ ಉಳಿಯು ತ್ತವೆ. ಆಮೇಲೆ ಮರೆತು ಹೋಗುತ್ತೇವೆ. ಆದರೆ ನಾವೇನಾದರೂ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಕಾರ್ಯ ಮಾಡಬೇಕು ಎಂದು ಆಲೋಚಿಸಿದರು. ಆ ಆಲೋಚನೆಯ -ಲವೇ ಸರಕಾರಿ ಶಾಲೆಗಳ ದತ್ತು ಕಾರ್ಯಕ್ರಮ.

ಸರಕಾರಿ ಶಾಲೆಗಳ ಅವಲೋಕನ
ರಜತ ಮಹೋತ್ಸವದ ಕಾರ್ಯಕ್ರಮದ ವೇಳೆ ಈ ಆಲೋಚನೆಯನ್ನು ಮಾಡಿದ್ದ ದೊರೆಸ್ವಾಮಿ ಅವರು, ಬಳಿಕ ಅದನ್ನು ಕೇವಲ ಆಲೋಚನೆಗೆ ಬಿಡದೇ ಕಾರ್ಯರೂಪಕ್ಕೆ ತರಲು ಮುಂದಾದರು. ಆಗ ಸ್ವತಃ ದೊರೆಸ್ವಾಮಿ ಅವರೇ ಬೆಂಗಳೂರಿನ ಹೊರ ಭಾಗ ದಲ್ಲಿದ್ದ ಸರಕಾರಿ ಶಾಲೆಗಳ ಪರಿಸ್ಥಿತಿ ಅವಲೋಕಿಸಲು ಮುಂದಾದರು. ಆ ಸಮಯದಲ್ಲಿ ಸಿಕ್ಕ ಹತ್ತು ಹಲವು ಶಾಲೆಗಳನ್ನು ಅಭಿವೃದ್ಧಿಪಡಿಸಲು ಟೊಂಕಕಟ್ಟಿ ನಿಂತು, ಯಶಸ್ವಿಯಾದರು.

೧೯೯೮-೯೯ರ ಅವಧಿಯಲ್ಲಿ ಇಂದಿನ ಬೆಂಗಳೂರಿನ ಹೃದಯ ಭಾಗವಾಗಿರುವ ಹೊಸಕರೆಹಳ್ಳಿ, ವೀರಭದ್ರನಗರಗಳು ಇನ್ನೂ ನಗರೀಕರಣಕ್ಕೆ ಒಳಗಾಗಿರಲಿಲ್ಲ. ಅಲ್ಲಿನ ಸರಕಾರಿ ಶಾಲೆಗಳ ಪರಿಸ್ಥಿತಿಯನ್ನು ನೋಡಿ ಮರುಗಿದ ದೊರೆಸ್ವಾಮಿ, ಅವರು ಸ್ವತಃ ಅವರೇ ಮುಂದೆ ನಿಂತು ಯಾವ ರೀತಿ ಸೌಲಭ್ಯ ಒದಗಿಸಬೇಕು ಎನ್ನುವ ಯೋಜನೆ ಸಿದ್ಧಪಡಿಸಿಕೊಂಡರು. ಬಳಿಕ ಅಂದಿನ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳ ಮುಂದೆ ಈ ಪ್ರಸ್ತಾಪವನ್ನು ಮುಂದಿಟ್ಟು, ‘ಶಿಕ್ಷಣ ಇಲಾಖೆ ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ನಡುವೆ’ ಒಪ್ಪಂದವನ್ನು ಮಾಡಿಕೊಂಡು ಅಭಿವೃದ್ಧಿಪಡಿಸಿದರು.

ಇನ್ನು ಈ ರೀತಿ ದತ್ತು ಪಡೆದ ಶಾಲೆಗಳ ಕಟ್ಟಡ ನಿರ್ಮಾಣ, ಮೂಲ ಸೌಕರ್ಯ ಮಾತ್ರವಲ್ಲದೇ, ಅಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡುವ ಮಹತ್ವದ ತೀರ್ಮಾನವನ್ನು ಪಿಇಎಸ್ ಸಂಸ್ಥೆ ತಗೆದುಕೊಂಡಿತ್ತು. ಇದರಿಂದಾಗಿ ಕಟ್ಟಡಗಳ ನವೀಕರಣ ದೊಂದಿಗೆ,
ಆ ಶಾಲೆಯ ಶಿಕ್ಷಕರಿಗೂ ಇಂದಿನ ಶಿಕ್ಷಣ ಪದ್ಧತಿಯ ಬಗ್ಗೆ ಮಾಹಿತಿ ಸಿಗುತ್ತಿತ್ತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಆ ಶಾಲೆಗಳಿಗೆ ಪಿಇಎಸ್ ವಿಶ್ವವಿ ದ್ಯಾಲಯ ಶಿಕ್ಷಣ ತಜ್ಞ ಉಪನ್ಯಾಸಕರನ್ನು ಕಳಿಸಿ ಪಾಠ ಮಾಡುವ ಸಾಹಸಕ್ಕೂ ಕೈಹಾಕಿದ್ದರು.

ವಿದ್ಯಾರ್ಥಿಗಳನ್ನು ವಿವಿ ಕರೆಸಿ ಉಪಚಾರ
ಇನ್ನು ಈ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ ಬಳಿಕ ಅಲ್ಲಿಗೆ ತಮ್ಮ ಕೆಲಸ ಮುಗಿಯಿತೆಂದು ಕೈಬಿಡಲಿಲ್ಲ. ದೊರೆಸ್ವಾಮಿ ಅವರು, ಮೊದಲ ಹಂತದಲ್ಲಿ ದತ್ತು ಪಡೆದ ೧೨ ಶಾಲೆಗಳ ವಿದ್ಯಾರ್ಥಿಗಳನ್ನು ವರ್ಷಕ್ಕೊಮ್ಮೆ ಪಿಇಎಸ್ ವಿಶ್ವವಿದ್ಯಾಲಯಕ್ಕೆ ಕರೆಸಿಕೊಂಡು, ಇಡೀ ದಿನ ವಿಶ್ವವಿದ್ಯಾಲಯದಲ್ಲಿ ಸುತ್ತು ಹಾಕಿಸಿ, ಅವರಿಗೆ ಹಬ್ಬದ ಊಟವನ್ನು ಹಾಕಿಸಿ ವಾಪಸು ತೆರಳುವಾಗ ಶಾಲಾ ಬ್ಯಾಗ್, ಶೈಕ್ಷಣಿಕ ಸಾಮಗ್ರಿಗಳನ್ನು ಕೊಟ್ಟುಕಳಿಸುತ್ತಿದ್ದರಂತೆ. ಆ ದಿನ ಮಕ್ಕಳಲ್ಲಿ ಕಾಣುತ್ತಿದ್ದ ಆನಂದವನ್ನು ನೋಡುವುದೇ ನನಗೆ ಆನಂದವಾಗುತ್ತಿತ್ತು ಎನ್ನುವ ಮಾತನ್ನು ಹೇಳುವಾಗ ಈಗಲೂ ದೊರೆಸ್ವಾಮಿ ಅವರ ಮುಖದಲ್ಲಿ ಒಂದು ಧನ್ಯತೆಯ ಭಾವ ಮೂಡುತ್ತದೆ.

ಈಗಲೂ ಸರಕಾರಿ ಶಾಲೆಗಳ ಬಗ್ಗೆ ದೊರೆಸ್ವಾಮಿ ಅವರನ್ನು ಮಾತಿಗೆ ಎಳೆದರೆ, ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಸರಕಾರ ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಸುಮಾರು ೬೦ರಿಂದ ೭೦ ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ವಂಚನೆ ಮಾಡಿದಂತೆ, ಅಂದರೆ ಮಕ್ಕಳ ಸಾಂವಿಧಾನಿಕ ಹಕ್ಕು ಕಸಿದುಕೊಂಡಂತೆ ಆಗುತ್ತದೆ ಎನ್ನುವ ಮಾತನ್ನು ಹೇಳುತ್ತಾರೆ.

ವಿವಿಗಳಿಗೆ ಯೋಜನೆ

ದೊರೆಸ್ವಾಮಿ ಅವರು ತಾವು ಆರಂಭಿಸಿದ ಈ ಯೋಜನೆಯನ್ನು ಅವರು ಮುಖ್ಯಮಂತ್ರಿಗಳ ಶಿಕ್ಷಣ ಸುಧಾರಣೆಗಳ ಸಲಹೆಗಾರ ರಾದ ಬಳಿಕ ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ಜಾರಿಗೊಳಿಸಲು ಮುಂದಾದರು. ಇದರೊಂದಿಗೆ ಶಾಸಕರು, ಸಚಿವರು, ಸಂಸದರು ತಮ್ಮ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳನ್ನು ದತ್ತು ಪಡೆಯಬೇಕು ಎನ್ನುವ ಅಭಿಯಾನವನ್ನು ಆರಂಭಿಸಿದರು. ಆರಂಭದಲ್ಲಿ ಅನೇಕರು ವಿಶ್ವವಿದ್ಯಾಲಯಗಳು ಈ ಅಭಿಯಾನವನ್ನು ಕೈಗೆತ್ತಿಕೊಳ್ಳುವುದಿಲ್ಲ ಎನ್ನುವ ಕೊಂಕನ್ನು ಆಡಿದ್ದರು. ಆದರೆ ಬಳಿಕ ಎಲ್ಲ ವಿಶ್ವವಿದ್ಯಾಲಯಗಳು ಈ ಅಭಿಯಾನವನ್ನು ಅತ್ಯುತ್ಸಾಹದಲ್ಲಿ ಆರಂಭಿಸಿ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟಿವೆ.

ಇನ್ನು ಮುಖ್ಯಮಂತ್ರಿಗಳಿಗೆ ಶಿಕ್ಷಣ ಸಲಹೆಗಾರರಾಗಿದ್ದ ಸಮಯದಲ್ಲಿ ದೊರೆಸ್ವಾಮಿ ಅವರು, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಅದರ ಪ್ರಸ್ತುತತೆ ಹಾಗೂ ರಾಜ್ಯದಲ್ಲಿ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ತರಬೇಕಾಗಿರುವ ಬದಲಾವಣೆಗಳಿಗೆ ಸಂಬಂಽಸಿದಂತೆ ವರದಿಯೊಂದನ್ನು ಸಿದ್ಧಪಡಿಸಿ, ಶಿ-ರಸನ್ನು ರಾಜ್ಯ ಸರಕಾರಕ್ಕೆ ಮಾಡಿದ್ದರು. ಅದರಲ್ಲಿ ಸರಕಾರಿ ಶಾಲೆ ದತ್ತು ಪ್ರಕ್ರಿಯೆ, ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಮೂಡಿಸುವ ಹಾಗೂ ಇನ್ನು ಹತ್ತು ಹಲವು ವಿಷಯಗಳನ್ನು ಹೇಳಿದ್ದಾರೆ.

ಸ್ವಂತ ಕಾರಿನಲ್ಲಿ ಕೆಲಸಗಾರರನ್ನು ಕರೆಸಿ ಕೆಲಸ
ದೊರೆಸ್ವಾಮಿ ಅವರು ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎನ್ನುವ ಸಲುವಾಗಿ ಹೊಸಕೆರೆಹಳ್ಳಿ ಸರಕಾರಿ ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ, ಅಲ್ಲಿದ್ದ ಶಾಲೆ ರಾಜಕಾಲುವೆಯ ಪಕ್ಕದಲ್ಲಿಯೇ ಇತ್ತಂತೆ. ಆ ವೇಳೆ ರಾಜಕಾಲುವೆ ಕಟ್ಟಿಕೊಂಡು, ಸಹಿಸಿಕೊ ಳ್ಳಲು ಸಾಧ್ಯವಾಗ ದಷ್ಟು ವಾಸನೆ ಬರುತ್ತಿತ್ತಂತೆ. ಆ ವೇಳೆ ತಕ್ಷಣ, ತಮ್ಮ ಕಾರನ್ನು ಪಿಇಎಸ್ ವಿವಿಗೆ
ಕಳಿಸಿ, ಅಲ್ಲಿದ್ದ ಕೆಲಸಗಾರರನ್ನು ಹಾಗೂ ಸಾಮಗ್ರಿಗಳನ್ನು ತರಿಸಿ ಕಟ್ಟಿಕೊಂಡಿದ್ದ ಮೋರಿಯನ್ನು ಸ್ವಚ್ಛಗೊಳಿಸಿದ್ದರಂತೆ. ಇದೇ ರೀತಿ ತಾತಗುಣಿಗೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ಶಿಕ್ಷಕಿಗೆ ಕೂತುಕೊಳ್ಳುವುದಕ್ಕೂ ಕುರ್ಚಿ ಇರಲಿಲ್ಲವಂತೆ. ಈ ವೇಳೆ ಅವರು ಕಾರು ಚಾಲಕನನ್ನು ಕಳುಹಿಸಿ, ಕುರ್ಚಿ ತರಿಸಿಕೊಟ್ಟಿದ್ದನ್ನು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.

***

ನಾಲ್ಕು ಕೋಟಿ ವೆಚ್ಚದಲ್ಲಿ ಉ.ಕರ್ನಾಟಕ ಶಾಲೆಗಳ ಅಭಿವೃದ್ಧಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿ ಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಪ್ರವಾಹದಿಂದ ನೂರಾರು ಸರಕಾರಿ ಶಾಲೆಗಳ ಕಟ್ಟಡ ನೆಲಕಚ್ಚಿದವು. ಇನ್ನು ಕೆಲವು ಅಧ್ಯಯನ ನಡೆಸಲು ಸಾಧ್ಯವಾದಷ್ಟು ಹಾಳಾದವು. ಈ ವೇಳೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ನೆರವನ್ನು ಪಿಇಎಸ್ ಸಂಸ್ಥೆ ನೀಡಿತ್ತು. ಆದರೆ ಅದನ್ನು ಅಲ್ಲಿಗೆ ನಿಲ್ಲಿಸದೇ, ಉತ್ತರ ಕರ್ನಾಟಕ ಭಾಗದ ಏಳು ಶಾಲೆ ಹಾಗೂ ಎರಡು
ಅಂಗನವಾಡಿಗಳ ಅಭಿವೃದ್ಧಿಗೆ ಪಣತೊಟ್ಟು, ದತ್ತು ಪಡೆಯಿತು.

ಒಂಬತ್ತು ಶಾಲೆಗಳ ಅಭಿವೃದ್ಧಿಗೆ ೪.೦೧ ಕೋಟಿ ರು. ಖರ್ಚು ಮಾಡಿ ನಿರ್ಮಾಣ ಮಾಡಲಾಯಿತು. ಈ ವೇಳೆ ಕೇವಲ ಕಟ್ಟಡ ನಿರ್ಮಾಣ ಮಾತ್ರವಲ್ಲದೇ, ಸ್ಮಾರ್ಟ್ ಕ್ಲಾಸ್ ರೂಂ, ಕಂಪ್ಯೂಟರ್ ಕ್ಲಾಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯವನ್ನು ನೀಡಲಾಗಿದೆ.

ಪ್ರವಾಹಪೀಡಿತ ಶಾಲೆಗಳ ಪುನರ್ ನಿರ್ಮಾಣ
ಶಾಲೆ ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ತಾಲೂಕು(ಜಿಲ್ಲೆ) ಹಿರಿಯ ಪ್ರಾಥಮಿಕ ಶಾಲೆ, ಒಂಟಿಗೋಡಿ ೩೦೦ ಮುಧೋಳ (ಬಾಗಲಕೋಟೆ) ಹಿರಿಯ ಪ್ರಾಥಮಿಕ ಶಾಲೆ, ಬುದ್ನಿ ೧೨೫ ಮುಧೋಳ (ಬಾಗಲಕೋಟೆ) ಹಿರಿಯ ಪ್ರಾಥಮಿಕ ಶಾಲೆ, ಕರ್ಲಾ ಕೊಪ್ಪ ೬೮ ಮುಧೋಳ (ಬಾಗಲಕೋಟೆ) ಹಿರಿಯ ಪ್ರಾಥಮಿಕ ಶಾಲೆ, ಹೆಸರೆತೋಟ ೫೦ ಅಥಣಿ (ಬೆಳಗಾವಿ)
ಹಿರಿಯ ಪ್ರಾಥಮಿಕ ಶಾಲೆ, ತೀರ್ಥ್ ೧೮೭ ಅಥಣಿ (ಬೆಳಗಾವಿ) ಹಿರಿಯ ಪ್ರಾಥಮಿಕ ಶಾಲೆ, ಮಹಿಷಾವಾಡಿ ೨೬೭ ರಾಯಭಾಗ್ (ಬೆಳಗಾವಿ) ಕಿರಿಯ ಪ್ರಾಥಮಿಕ ಶಾಲೆ, ನದಿ ಇಂಗಾಲಗಾವ್ ೧೫೭ ಅಥಣಿ(ಬೆಳಗಾವಿ) ಅಂಗನವಾಡಿ, ಒಂಟಿಗೋಡಿ ೩೦
ಮುಧೋಳ (ಬಾಗಲಕೋಟೆ) ಅಂಗನವಾಡಿ, ಬುದ್ನಿ ಬಿ.ಕೆ ೩೦ ಮುಧೋಳ (ಬಾಗಲಕೋಟೆ)

*
ಯಾವುದೇ ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯವಾಗುತ್ತದೆ. ಆದ್ದರಿಂದ ಎಲ್ಲ ಸರಕಾರಗಳ ಮೂಲಮಂತ್ರ ಶಿಕ್ಷಣವಾಗಿರಬೇಕು. ಈ ನಿಟ್ಟಿನಲ್ಲಿ ಸರಕಾರ, ಖಾಸಗಿ ಸಂಸ್ಥೆಗಳನ್ನು ಜತೆಗೂಡಿಸಿಕೊಂಡು ಕೆಲಸ ಮಾಡಬೇಕಿದೆ ಎಂದು ಪಿಇಎಸ್ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸರಕಾರಿ ಶಾಲೆಗಳ ದತ್ತು ಯೋಚನೆ ಬಂದಿದ್ದು ಹೇಗೆ? ನಮ್ಮ ವಿಶ್ವವಿದ್ಯಾಲಯದ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಪ್ರಸ್ತಾವನೆ ೧೯೯೮ರಲ್ಲಿ ನಮ್ಮ ಮುಂದೆ ಬಂತು. ಆಗ ಅದ್ಧೂರಿ ಕಾರ್ಯಕ್ರಮ ಮಾಡಿ ಮೂರು ದಿನ ಜನ ನೆನಪು ಮಾಡಿಕೊಂಡು ಮರೆತು ಹೋಗುತ್ತಾರೆ. ಆದರೆ ಸದಾ ನೆನಪಿನಲ್ಲಿ ಉಳಿಯುವಂತ ಯೋಜನೆ ಮಾಡಬೇಕು ಎಂದು, ಈ ಸರಕಾರಿ ದತ್ತು ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡೆ.

ಆರಂಭದಲ್ಲಿ ೧೦ ಶಾಲೆಗಳನ್ನು ಮಾಡಿ, ಬಳಿಕ ಬಿಬಿಎಂಪಿ ವ್ಯಾಪ್ತಿ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದ ಹಾಗೂ ಇದೀಗ ಎರಡನೇ ಹಂತದಲ್ಲಿ ಶಾಲೆಗಳ ದತ್ತು ಕಾರ್ಯಕ್ರಮ ಚಾಲ್ತಿಯಲ್ಲಿದೆ.

ಸರಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಆಸಕ್ತಿ ಹುಟ್ಟಿದ್ದು ಏಕೆ?
ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ದಿನಗಳ ವಿದ್ಯಾರ್ಥಿಯ ಮನಸಿನಲ್ಲಿ ಅಚ್ಚು ಮೂಡಿಸುವ ದಿನಗಳು. ಆ ಸಮಯದಲ್ಲಿ ಉತ್ತಮ ಕಟ್ಟಡ, ಉತ್ತಮ ವಾತಾವರಣ, ಪಿಠೋಪಕರಣವಿದ್ದರೆ, ಆಗ ವಿದ್ಯಾರ್ಥಿಗಳಿಗೂ ಶಿಕ್ಷಣದಲ್ಲಿ ಆಸಕ್ತಿ ಮೂಡುತ್ತದೆ. ಆದ್ದರಿಂದ ಸರಕಾರಿ ಶಾಲೆಗಳನ್ನು ದತ್ತು ಪಡೆಯಬೇಕು ಎನ್ನುವ ದೃಢ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ.
ಸರಕಾರಿ ಶಾಲೆಗಳ ಅಭಿವೃದ್ಧಿ ಸರಕಾರವೇನು ಮಾಡಬಹುದು? ರಾಜ್ಯದಲ್ಲಿ ಸುಮಾರು ೬೦ ಸಾವಿರ ಸರಕಾರಿ ಶಾಲೆಗಳಿದ್ದು, ಎಲ್ಲವನ್ನು ಸರಕಾರದಿಂದಲೇ ಅಭಿವೃದ್ಧಿಪಡಿಸಬೇಕು ಎಂದು ಹೇಳುವುದು ಸರಿಯಲ್ಲ.

ಆದ್ದರಿಂದ ರಾಜ್ಯ ಸರಕಾರ ರಾಜಧಾನಿ ಬೆಂಗಳೂರಿನಲ್ಲಿರುವ ಐಟಿ-ಬಿಟಿ ಕಂಪನಿಗಳ ನೆರವನ್ನು ಕೇಳಬಹುದು. ಖಾಸಗಿ ಕಂಪನಿಗಳ ಸಿಎಸ್ ಆರ್ ಫಂಡ್ ಅನ್ನು ಬಳಸಿಕೊಂಡು ಸರಕಾರಿ ಶಾಲೆಗಳ ಅಭಿವೃದ್ಧಿಗೊಳಿಸಬಹುದು. ಆದರೆ ಈ ಕೆಲಸವನ್ನು ಮುಖ್ಯಮಂತ್ರಿ ಮಟ್ಟದಲ್ಲಿ ಮಾಡಿದಾಗ ಮಾತ್ರ, ಯಶಸ್ವಿಯಾಗುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಯಾವ ಮಟ್ಟದಲ್ಲಿ ಒತ್ತು ನೀಡಬೇಕು?
ಯಾವುದೇ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಎನ್ನುವುದು ಬಹುಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ಶಿಕ್ಷಣ ಪ್ರತಿ ಸರಕಾರದ ಮೂಲಮಂತ್ರವಾಗಿರಬೇಕು. ಆ ವಿಷಯದಲ್ಲಿ ದೆಹಲಿಯಲ್ಲಿರುವ ಅರವಿಂದ ಕೇಜ್ರಿವಾಲ್ ಅವರ ಸರಕಾರ ನಿರ್ಮಿಸಿರುವ ಮಾದರಿ ಶಾಲೆಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಅಲ್ಲಿನ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸಿಕೊಂಡು,
ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸಮಾಡಬೇಕು.

**
೧೯೯೮-೯೯ನೇ ಸಾಲಿನಲ್ಲಿ ದತ್ತು ಪಡೆದ ಶಾಲೆಗಳು
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಓಬಿಚೂಡನಹಳ್ಳಿ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾತಗುಣಿ

?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಲಘಟ್ಟಪುರ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಜರಹಳ್ಳಿ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉತ್ತರಹಳ್ಳಿ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಕರೆಹಳ್ಳಿ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಭದ್ರನಗರ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುತ್ತುರಾಯನಗರ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಳಗೆರೆಹಳ್ಳಿ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಬೆಲೆ
?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಬೆಲೆ ಕಾಲೋನಿ

?ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಬಳಗೋಡು

೨೦೦೮-೦೯ನೇ ಸಾಲಿನಲ್ಲಿ ದತ್ತು ಪಡೆದ ಶಾಲೆಗಳು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀನಗರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗವಿಪುರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಕೇನಹಳ್ಳಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾಮರಾಜಪೇಟೆ, ಗುಟ್ಟಹಳ್ಳಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಂಕರಪುರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎನ್.ಆರ್. ಕಾಲೋನಿ

***

ಸರಕಾರಿ ಶಾಲೆಯಲ್ಲಿ ನೀಡಲಾಗುತ್ತಿರುವ ಬಿಸಿಯೂಟ ಯೋಜನೆಯಿಂದ ಹಲವು ಶಾಲೆಗಳು ಪಾಠಶಾಲೆಯ ಬದಲು  ಪಾಕಶಾಲೆಗಳಾಗಿ ಪರಿವರ್ತನೆಯಾಗಿವೆ. ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವುದಕ್ಕಿಂತ, ಅಕ್ಷಯಪಾತ್ರ ದಂತಹ ಸಂಸ್ಥೆಗಳಿಗೆ ಈ ಜವಾಬ್ದಾರಿಗಳನ್ನು ನೀಡಿ ಶಿಕ್ಷಕರ ಮೇಲಿನ ಅನಗತ್ಯ ಹೊರೆ ತಗ್ಗಿಸಬೇಕು.

-ಪ್ರೊ. ಎಂ.ಆರ್. ದೊರೆಸ್ವಾಮಿ ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಪಿಇಎಸ್ ಸಂಸ್ಥಾಪಕರು