Sunday, 24th November 2024

ಸೀತಜ್ಜಿಯೂ ಜಲಭೇದಿ ಸೊಪ್ಪೂ

* ಎಸ್. ವಿಜಯ ಗುರುರಾಜ

ಹೊಟ್ಟೆೆ ಕೆಟ್ಟು ಭೇದಿ ಶುರುವಾದಾಗ ಸೀತಮ್ಮಜ್ಜಿಿ ಹೇಳಿದ ಔಷಧಿ ಎಂದರೆ ಜಲಭೇದಿ ಸೊಪ್ಪುು. ಅದನ್ನು ಸೇವಿಸಿದಾಗ ಆದ ಎಡವಟ್ಟಾಾದರೂ ಏನು?

ಸೀತಮ್ಮಜ್ಜಿಿಗೆ ಓಡಾಟ ನಾಮಕರಣ, ಗೃಹಪ್ರವೇಶ ಹೀಗೆ ಎಲ್ಲಾ ಕಡೆ ಇವರಿಗೆ ಹೇಳಿಕೆ ಇದ್ದೇ ಇರುತ್ತೆೆ. ಹಿರೀ ದಂಪತಿಗಳು ಎಂಬ ಹೆಗ್ಗಳಿಕೆಯಿಂದ ರಾಮಜ್ಜಂಗೂ, ಸೀತಜ್ಜಿಿಗೂ ಕೂತಲ್ಲಿ ಮಣೆ, ನಿಂತಲ್ಲಿ ನೀರು, ಉಡುಗೊರೆ, ಉಪಚಾರದಲ್ಲಿ ಎಲ್ಲರಿಗಿಂತ ಒಂದು ಕೈ ಜಾಸ್ತೀನೆ. ಉಂಡೂ ಹೋದ,ಕೊಂಡೂ ಹೋದ ಎಂಬ ಗಾದೆಯಂತೆ ಆರೇಳು ತೆಂಗಿನಕಾಯಿ, ಬೂಂದಿಲಾಡು, ಖಾರಾಸೇವೆ, ಚಿರೋಟಿ , ಉಂಡೆ ಚಕ್ಕುಲಿ ಮೊದಲಾದ ಭಕ್ಷ್ಯಗಳನ್ನು ಗಂಟು ಕಟ್ಟಿಿಸಿ ಕೊನೆಯದಾಗಿ ಬೀಗರೂಟ ಉಂಡು ಬಾಯಿತುಂಬ ತಾಂಬೂಲ ಮೆದ್ದು ಅಡಿಕೆಪುಡಿಯನ್ನಷ್ಟು ಕರ್ಚೀಫಿನಲ್ಲಿ ಗಂಟು ಕಟ್ಟಿಿ ಆಟೋ ತುಂಬಿಸಿಕೊಂಡ ಲಗ್ಗೇಜ್ ಗಳೊಂದಿಗೆ ಗಲಾ, ಗಲಾ ಎಂದು ತಮ್ಮ ಮನೆ ತುಂಬಿಸಿಕೊಳ್ಳುತ್ತಿಿದ್ದರು.

‘ರಾತ್ರಿಿಗೆ ಸೀತೂ ನಾಲ್ಕು ಬಾಳೆಹಣ್ಣು ಒಂದ್ಲೋೋಟ ಬಾದಾಮಿ ಹಾಲು ಕೊಟ್ ಬಿಡೆ ಸಾಕು’ ಎಂಬ ಉವಾಚ ರಾಮಜ್ಜನಿಂದ. ಅಂತೆಯೆ ಹಣ್ಣು ಹಾಲುಗಳ ಆರೋಗಣೆಯಾಗಿ ರಾತ್ರಿಿಯೆಲ್ಲ ಗೊರಕೆ ಹೊಡೆದು ಮುಂಜಾನೆ ಎದ್ದಾಗ ರಾಮಜ್ಜನ ಹೊಟ್ಟೆೆಯೆಲ್ಲ ಗುಡ, ಗುಡಾ. ಹೊಟ್ಟೆೆನೀವಿಕೊಳ್ಳುತ್ತ ‘ತಿಂಡಿ, ತೀರ್ಥ ಒಂದೂ ಬ್ಯಾಾಡ ಕಣೆ. ಅನ್ನ, ಮೆಣಸಿನ ಸಾರು ಮಾಡು ಸಾಕು’ ಎಂದರು ವೈರಾಗ್ಯದಿಂದ. ಎಂಟಾನೆಂಟು ದಿನಗಳಿಂದ ಒಂದೇ ಸಮನೆ ಬೆಳ್ಳಂಬೆಳಿಗ್ಗೆೆಯೇ ಬಗೆ ಬಗೆಯ ತಿಂಡಿಗಳ ನೈವೇದ್ಯ ವನ್ನು ಬುಂಜಿಸಿದ್ದ ಉದರವು ಇಂದೇಕೊ ಮುಷ್ಕರ ಹೂಡಿತ್ತು.

ಆಗ ಸೀತಜ್ಜಿಿ ‘ಅಯ್ಯೋ ಇಷ್ಟೇಕೆ ಅಲವತ್ತು ಕೊಳ್ತೀರಿ, ನಂಗೂ ಸ್ವಲ್ಪ ಹಾಗೆ ಹೊಟ್ಟೆೆಯೆಲ್ಲ ತೊಳಸಂಬಟ್ಟೆೆಯಾಗಿದೆ’ ಎಂದು ಮುಖ ಕಿವುಚಿಕೊಳ್ಳುತ್ತಾಾ ಒಂತೊಟ್ಟು ಕಾಫಿ ಕುಡ್ದು ಹಾಗೇ ಕಾಲಾಡಿಸ್ಕೊೊಂಡು ಬನ್ನಿಿ. ಬರುವಾಗ ಪಾರ್ಕಿನಲ್ಲಿ ನಾನು ಆವತ್ತು ತೋರ್ಸಿದ್ನಲ್ಲ ಒಂದು ಗಿಡ, ಅದು ಜಲಬೇದಿ ಸೊಪ್ಪೂೂಂತ – ಅದರ ಎಲೇನ್ನ ಒಂದು ಹಿಡಿಯಷ್ಟು ಕಿತ್ತು ತನ್ನಿಿ. ಅದರ ಚಟ್ನಿಿ ತಿಂದ್ರೆೆ ಹೊಟ್ಟೇ ಕಡ್ತ ಎಲ್ಲ ಓಡಿಹೋಗುತ್ತೆೆ’ ಎನ್ನುತ್ತಾಾ ಮುಂದಿದ್ದ ಪಾವಿನ ಲೋಟದಷ್ಟು ಕಾಫಿಯನ್ನು ಜೊರ‌್ರನೆ ಹೀರಿದರು ಸೀತಜ್ಜಿಿ.
‘ಆಯ್ತ್ ಕಣೆ ತರ್ತೀನಿ, ನಾನ್ ಕಾಣ್ನೆೆ ನಿಮ್‌ಪ್ಪನ ಅಳಲೇಕಾಯಿ ಪಾಂಡಿತ್ಯ ಅದೇನ್ ಮಹಾ ಸಂಪತ್ತು’ ಎಂದವರೆ ಶಾಲು ಹೊದ್ದು ಬಿರಬಿರನೆ ನಡೆದರು. ಅದೇನೊ ಕಾಣೆ ಇವ್ರಿಿಗೆ ಮದುವೆಯಾದಾಗ್ನಿಿಂದ್ಲೂ ಸತ್ ಸ್ವರ್ಗ ಸೇರಿರೊ ನಮ್ಮಪ್ಪನ್ ವೈದ್ಯ ಎಂದ್ರೆೆ ಮೂಗು ಮುರೀತಾರೆ ಎಂದು ವಟಗುಟ್ಟುತ್ತ ಸ್ನಾಾನಕ್ಕೆೆ ನಡೆದರು ಸೀತಜ್ಜಿಿ.
ಘಂ ಎಂದ ಸೊಪ್ಪಿಿನ ಚಟ್ನಿಿ
ಸೀತೂ ತಗೋಳೆ ಸೊಪ್ಪುು ಅದೇನ್ ಮಾಡ್ತೀಯೊ ಮಾಡು ಒಂಚೊಂಬು ಸ್ನಾಾನ ಮಾಡಿ ಪೂಜೆ ಮುಗ್ಸಿಿ ಬರ್ತೀನಿ ಎಂದು ಬಚ್ಚಲಿಗಿಳಿದರು. ಸೀತಜ್ಜಿಿ ಕನ್ನಡಕ ಧರಿಸಿ ಸೊಪ್ಪಿಿನ ಎಲೆಗಳನ್ನು ತಿರುಗಿಸಿ, ತಿರುಗಿಸಿ ನೋಡಿ ಅದೇ ಜಲಬೇದಿ ಸೊಪ್ಪೆೆಂದು ಖಾತ್ರಿಿ ಮಾಡಿಕೊಂಡು ಬಾಣಲೆಗೆ ಎಣ್ಣೆೆಹಾಕಿ ಒಂದು ಹಿಡಿ ತೊಗರಿ ಬೇಳೆಹುರಿದು ತೊಳೆದ ಸೊಪ್ಪುು, ಒಣಮೆಣಸು , ಹುಳಿ ಉಪ್ಪುು ಸೇರಿಸಿ ಚಟ್ನಿಿ ತಿರುವಿ ಘಂ ಎನ್ನುವ ಇಂಗಿನ ಒಗ್ಗರಣೇ ಕೊಡುವ ವೇಳೆಗೆ ದೇವರ ಮುಂದೆ ಮೂಗು ಹಿಡಿದು ಕುಳಿತಿದ್ದ ರಾಮಜ್ಜನ ಮೂಗಿಗೆ ಇಂಗಿನ ಪರಿಮಳ ಹೊಡೆದು ಕಣ್ಣು ಬಿಟ್ಟವರೆ ದೇವರಿಗೊಂದು ಧೀರ್ಘ ದಂಡ ಹಾಕಿ ಉಟ್ಟ ಪಾಣಿ ಪಂಚೆಯಲ್ಲೇ ಆಡಿಗೆ ಮನೆಯ ಮಣೆಯ ಮೇಲೆ ಕುಳಿತರು.
ತಟ್ಟೆೆಗೆ ಒಂದು ಒಬ್ಬೆೆ ಬಿಸಿ ಅನ್ನ ಬಡಿಸಿ ಅದರ ತಲೆಯ ಮೇಲೆ ನಿಂಬೆ ಗಾತ್ರ ಚಟ್ನಿಿಹಾಕಿದರು. ಗಂಡ ಹಾಲು , ಮೊಸರಿಲ್ಲದೆ ತುತ್ತೆೆತ್ತುವುದಿಲ್ಲವೆಂದು ಅರಿತಿದ್ದ ಸೀತಜ್ಜಿಿ ಚಟ್ನಿಿಯ ತಲೆಯ ಮೇಲೆ ಒಂದು ಮಿಳ್ಳೆೆ ತುಪ್ಪ ಸುರಿದರು. ಹದನಾಗಿ ಅನ್ನ ಕಲಸಿದ ರಾಮಜ್ಜ ಲೊಟ್ಟೆೆ ಹೊಡೆಯುತ್ತ ದಿವಿನಾಗಿದೆ ಕಣೆ ಸೀತು ಚಟ್ನಿಿ,ಅನ್ನ ಎಂದು ಊಟ ಮುಗಿಸುವ ವೇಳೆಗೆ ತಪ್ಪಲೆಯಲ್ಲಿದ್ದ ಅನ್ನಕ್ಕೆೆ ಉಳಿದ ಚಟ್ಣಿಿಯೂ ಸೀತಜ್ಜಿಿಯ ಉದರ ಸೇರಿತ್ತು. ಮುಸುರೆ ಆಚೆ ಹಾಕಿದವರೆ ಇಬ್ಬರೂ ಮಂಚದ ಮೇಲೆ ಅಡ್ಡಾಾದರು.
ಮೊದಲು ರಾಮಜ್ಜನಿಗೆ ಎಚ್ಚರವಾಗಿ ಬಾತ್ ರೂಮ್ ಗೆ ಹೋಗಿ ಬಂದು ಅಬ್ಬ ಹೊಟ್ಟೆೆ ಈಗ ಎಷ್ಟು ಆರಾಮಾಗಿದೆ . ಪರವಾಗಿಲ್ಲವೆ ಇವಳ ಅಪ್ಪನ ಮದ್ದು ನಯಾಪೈಸೆ ಖರ್ಚಿಲ್ಲದೆ ಹೊಟ್ಟೆೆ ಖಾಲಿ ಮಾಡಿಸಿತಲ್ಲ ಪಾಪ ಪುಣ್ಯಾಾತ್ಮ ಸ್ವರ್ಗದಲ್ಲಿದ್ದಾರೆ ಎಂದು ಕೊಳ್ಳುತ್ತಿಿದ್ದಂತೆಯೆ ಹೊಟ್ಟೆೆಯಲ್ಲಿ ಗೊಳ, ಗೊಳ ಎಂದಂತಾಗಿ ಹೋಗಿ ಕೂತು ಉಸ್ಸಪ್ಪ ಹೀಗೆ ಒಂದೆರಡು ಸಲ ಹೋಗತ್ತೆೆ ಅಂತ ಕಾಣುತ್ತೆೆ ಹೋಗ್ಲಿಿ ಬಿಡು ಕೆಟ್ಟದ್ದೆಲ್ಲ ಹೊಟ್ಟೇಲ್ಯಾಾಕೆ ಇರ್ಬೇಕು ಎಂದು ಸಮಜಾಯಿಶಿ ಕೊಟ್ಟುಕೊಂಡರು.
ಸರಿಯಾಗಿ ಪಂಚೆ ಉಟ್ಟು ಅಂದಿನ ಪೇಪರ್ ಕೈಗೆತ್ತುಕೊಂಡರೊ ಇಲ್ಲವೊ ಮತ್ತೆೆ ಅದು ಬರುವಂತಾಗಿ ಪಂಚೆ ಕಿತ್ತೆೆಸೆದು ಅಷ್ಟರಲ್ಲಿ ಸೀತಜ್ಜಿಿ ಕೂತಾಗಿತ್ತು. ಬೇಗ ಬಾರೆ ಎಂದು ಮಜುಗರದಿಂದ ಅವಸರಿಸಿದರು. ರಮಜ್ಜನಿಗೆ ಬಟ್ಟೆೆಯೆಲ್ಲಾ ಬೇಧಿಯಾಗಿ ಎಲ್ಲಿ ರಂಪವಾಗುವುದೊ ಎಂದು ಹೆದರಿ ಬಾಗಿಲನ್ನು ದಬ, ದಬನೆ ಬಡಿಯತೊಡಗಿದಾಗ ಸೀತಜ್ಜಿಿ ಬಾಗಿಲು ತೆಗೆದ ಕೂಡಲೆ ಅವರನ್ನು ತಲ್ಲಿಕೊಂಡೆ ಒಳ ಹೋಗಿ ಕೂತರು ಪಿಚಕಾರಿ ಹೊಡೆದಂತೆ ಹೊಟ್ಟೆೆಯ ನೀರೆಲ್ಲ ಖಾಲಿಯಾಯಿತು.
ಹುಶ್ಶಪ್ಪ ಎಂದು ಹೊರ ಬರುವ ವೇಳೆಗೆ ಸೀತಜ್ಜಿಿ ರೀ ನನ್ನ ಹೊಟ್ಟೆೆ ಕೆಠ್ಹೋೋಗಿದೆ ಕಣ್ರಿಿ ಎಂದವರೆ ಒಳ ನುಗ್ಗಿಿದ ಸೀತಜ್ಜಿಿ ಹೊಟ್ಟೆೆ ಖಾಲಿ ಮಾಡಿ ಬರುವ ವೇಳೆಗೆ ಹಿತ್ತಿಿಲಿನಲ್ಲೇ ಹಳೇ ಚಾಪೆ ಹಾಸಿ ಮೂಲುಗುತ್ತ ಮಲಗಿದ್ದರು ರಾಮಜ್ಜ.
ಸೀತಜ್ಜಿಿಗೆ ಹೆದರಿಕೆಯಾಗಿ ಏನೂಂದ್ರೆೆ ಎಂದಾಗ ಹೋಗೇ ಆ ನಿನ್ನಪ್ಪ ಅಳಲೇಕಾಯಿ ಪಂಡಿತ ಅಂತೂ ನನ್ನ ಮೇಲಿನ ಕೋಪ ತೀರ್ಸಕ್ಕೆೆ ಇದೇ ಅವುಷ್ದಾಾ ಬೇಕಾಗಿತ್ತೆೆ ಅದು ಯಾವ ನಾಯಿ ಬೇದಿ ಎಲೆನೊ, ಏನೊ ನನ್‌ನ್‌ ಪ್ರಾಾಣ ಹೋಗ್ತಿಿದೆ ಎಂದವರೆ ಓಡಿದರು.
ಸೀತಜ್ಜಿಿಯಂತೂ ಎರಡೇ ಸಲಕ್ಕೆೆ ಸುಸ್ತಾಾಗಿದ್ದರು ಗಂಡ ಬಂದ ಕೂಡಲೆ ಅವರು ಓಡಿದರು. ಒಬ್ಬರಾದ ಮೇಲೊಬ್ಬರು ಪೈಪೋಟಿಗೆ ಒಳಗಾದವರಂತೆ ಸಂಡಾಸಿನ ಒಳ ಹೊರಗೆ ಓಡುತ್ತ ಅಂಗಳದಲ್ಲೇ ಮಲಗಿ ಮೂಲುಗುತ್ತಿಿದ್ದರು.
ಮುಂಜಾನೆಯೇ ಕಾಲೇಜಿಗೆ ಹೋಗಿದ್ದ ಅವರ ಮೊಮ್ಮಗ ಮದ್ಯಾಾನ್ಹ ಬಂದವನೆ ಅಂಗಳದಲ್ಲಿ ಮಲಗಿದ್ದ ಅಜ್ಜಿಿ, ತಾತನನ್ನು ಕಂಡು ಗಾಭರಿಯಾದನು. ಆಗ ಸೀತಜ್ಜಿಿ ನಿಧಾನವಾಗಿ ಜಲಬೇಧಿ ಸೊಪ್ಪಿಿನ ಅವಾಂತರವನ್ನು ತಿಳಿಸಿದಾಗ ಅವನಿಗೆ ನಗು ಬರುತ್ತಿಿದ್ದರೂ ಲೋಟಕ್ಕೆೆ ನೀರು , ಉಪ್ಪುು , ಸಕ್ಕರೆ ಹಾಕಿ ಇಬ್ಬರಿಗೂ ಕುಡಿಸಿದ. ಹತ್ತಿಿರದ ಮೆಡಿಕಲ್ ಶಾಪಿಗೆ ಹೋಗಿ ಭೇದಿ ನಿಲ್ಲುವ ಮಾತ್ರೆೆ ತಂದು ಕೊಟ್ಟ ನಂತರ ಸಂಜೆಯ ವೇಳೆಗೆ ಹೊಟ್ಟೆೆ ತಹಬಂದಿಗೆ ಬಂದು ಇಬ್ಬರೂ ಚೇತರಿಸಿಕೊಂಡಿದ್ದರು.
ರಾತ್ರಿಿ ಮಜ್ಜಿಿಗೆ ಅನ್ನ ತಿನ್ನುತ್ತ ರಾಮಜ್ಜ ಸೀತೂ ಇನ್ಮೇಲೆ ನಿಮ್ಮಪ್ಪನ್ ಪಾಂಡಿತ್ಯ ನನ್ಮೇಲೆ ತೋರಿಸ್ಬೇಡ ಎಂದು ಗುಡುಗಿದರು.
ಹಾಗಲ್ಲರಿ ಇನ್ಮೇಲೆ ಮದ್ವೆೆ ಮುಂಜಿಗಳಿಗೆ ಪಟ್ಟಾಾಗಿ ಹೋಗಿ ಯದ್ವಾಾ ತದ್ವಾಾ ತಿನ್ನೋೋದ್ನ ಬಿಡ್ಬೇಕು ನಮ್ಗೂ ವಯಸ್ಸಾಾಯ್ತಲ್ಲ ಅರಗೋಲ್ಲ ಎಂಬ ಹೆಂಡತಿಯ ಮಾತಿಗೆ ಅನುಮೋದನೆಯೆಂಬಂತೆ ಅದೂ ಸರೀನ್ನು, ಎಂದ ರಾಮಜ್ಜ ಸೀತಜ್ಜಿಿಯ ಮಾತಿಗೆ ಅಸ್ತು ಎಂದರು.