ಸುರೇಂದ್ರ ಪೈ, ಭಟ್ಕಳ
ನಮ್ಮ ಸುತ್ತಲೂ ಕಾಗೆ ಹಾರಿಸುವವರ ಸಂಖ್ಯೆ ಹೆಚ್ಚಾದ್ದರಿಂದಲೇ ಕಾ..ಕಾ.. ಕಾ..ಕಾಗೆ ಕಾಣೆಯಾಗಿವೆ ಎಂದು ಹೇಳಬಹುದೇ?
ಪದೇ ಪದೇ ಯಾರಾದರೂ ನಮ್ಮನ್ನು ಯಾಮಾರಿಸಲು ಪ್ರಯತ್ನಪಟ್ಟಾಗ ತಕ್ಷಣವೇ ಕಾಗೆ ಹಾರಿಸಿದ್ದು ಸಾಕು
ನಿಲ್ಲಿಸು ಎನ್ನುವುದುಂಟು. ಬಾಯಾರಿದ ಕಾಗೆಯು ತನ್ನ ಬುದ್ದಿವಂತಿಕೆಯಿಂದ ಒಂದೊಂದೇ ಕಲ್ಲನ್ನು ಬಾಟಲಿ ಯೊಳಗೆ ಹಾಕಿ ನೀರನ್ನು ಮೇಲೆ ಬರುವಂತೆ ಮಾಡಿ ಕುಡಿದು ಹಾರಿಹೋದ ಕಥೆಯನ್ನಾದರೂ ಕೇಳಿರ
ಬೇಕಲ್ಲ. ಮಲೆನಾಡಿನ ತಪ್ಪಲಿನಲ್ಲಿರುವ ಊರು ನನ್ನದು. ಬಾಲ್ಯದಿಂದಲೂ ಸುತ್ತ ಮುತ್ತಲಿನ ಪರಿಸರದಲ್ಲಿ ಪಕ್ಷಿ, ಪ್ರಾಣಿಗಳನ್ನು ನೋಡುತ್ತಾ ಬೆಳೆದವರು ನಾವೆಲ್ಲಾ.
ಮುಂಜಾನೆ ಕೋಳಿಯ ಕೋ….ಕೋ… ಕೋ.. ಎಂಬ ಕೂಗು ಹಾಗೂ ಕಾಗೆಯ ಕಾ.. ಕಾ..ಕಾ..ಎಂಬ ಧ್ವನಿ ಬೆಳಗಾ ಯಿತು ಹಾಸಿಗೆ ಯಿಂದ ಎಳಿ ಎಂಬ ಸಂಕೇತ ನೀಡುತ್ತಿದ್ದವು. ಕಾಗೆಗಳು ಮನೆಯ ಹಂಚಿನ ಮಾಡಿನ ಮೇಲೋ, ಮರದ ಮೇಲೋ ಗುಂಪು ಗುಂಪಾಗಿ ಬಂದು ಕುರುತ್ತಿದ್ದವು. ರೊಟ್ಟಿಯ ಚೂರು, ದೋಸೆ, ಅವಲಕ್ಕಿಯನ್ನು ಅಂಗಳ ದಲ್ಲಿ ಎಸೆದರೆ ಸಾಕು, ಕಾಗೆಗಳು ಬಂದು ತಿಂದು ಹೋಗುತ್ತಿದ್ದ ಆ ಚಿತ್ರಣ ಕಣ್ಣಿಗೆ ಕಟ್ಟಿದ ಹಾಗಿದೆ. ಕಾಗೆ ಎಂಬ ಪಕ್ಷಿಯು ಪಿತೃಪಕ್ಷದಲ್ಲಿ ಶುಭ ಶಕುನ, ಇನ್ನುಳಿದ ತಿಂಗಳಲ್ಲಿ ಅಪಶಕುನದ ಪಕ್ಷಿಯಾಗಿ ಬಿಡುತ್ತದೆ.
ಕಾಗೆ ಮನುಷ್ಯನ ಮೈಯನ್ನು ಸ್ಪರ್ಶಿಸಿದರೆ, ಅದೆನೋ ಅಪಶುಕನ ಜರುಗುತ್ತದೆ ಎಂಬ ನಂಬಿಕೆ. ಅದು ಯಮ ರಾಜನ ಸಂಕೇತವೆಂಬ ಭಾವನೆ ಇದೆ. ಪಿತೃಪಕ್ಷದ ಸಮಯದಲ್ಲಿ, ಪೂರ್ವಜರ ಆತ್ಮಗಳು ಕಾಗೆಯ ರೂಪದಲ್ಲಿ
ಭೂಮಿಗೆ ಇಳಿಯುತ್ತವೆ. ಈ ಸಮಯದಲ್ಲಿ ಅವರ ಕುಟುಂಬದವರು ಪಿಂಡದಾನ, ಶ್ರಾದ್ಧ ವಿಧಿವಿಧಾನಗಳು ಮತ್ತು ತರ್ಪಣವನ್ನು ನೀಡಿದ ಬಳಿಕ ಕಾಗೆಗಳಿಗೆ ಊಟ ಹಾಕುವುದೂ ಮುಖ್ಯ ಎಂಬ ನಂಬಿಕೆ ಇದೆ.
ಇದರಿಂದ ಪಿತೃಗಳು ಸಂತೋಷಗೊಳ್ಳುವರೆಂಬ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಗೆಗಳೇ ಕಣ್ಮರೆಯಾಗು ತ್ತಿವೆ! ಬೆಂಗಳೂರಿನಂತಹ ನಗರದಲ್ಲಿ, ಕಾಗೆಗಳು ತುಂಬಾ ಕಡಿಮೆಯಾಗಿ ಬಿಟ್ಟಿವೆ! ಇದಕ್ಕೆ ಮನುಷ್ಯನ ದಿನಚರಿಯೇ ಕಾರಣ. ಕಾಗೆಗಳಲ್ಲಿ ನಮ್ಮ ಪಿತೃಗಳನ್ನು ನೋಡುವ ನಾವು ಕಾಗೆಗಳ ಸಂತತಿಯನ್ನೇ ಭೂಮಿಯಿಂದ ಕಣ್ಮರೆ ಯಾಗುವಂತೆ ಮಾಡಿದ್ದೇವಲ್ಲ ಎನು ಮಾಡೋಣ ಹೇಳಿ. ಕೊನೆಗೆ ಪಿತೃಪಕ್ಷದ ಪಿಂಡದಾನವನ್ನು ಕಾಗೆಯ ಬದಲಾಗಿ, ಗೋವುಗಳಿಗೋ, ನದಿಗಳಿಗೋ ಬಿಡುವ ಬದಲಿ ವ್ಯವಸ್ಥೆಯನ್ನು ಹುಡುಕಿದ್ದೇವೆ ನಿಜ.
ಆದರೆ ನೋಡ ನೋಡುತ್ತಿದ್ದಂತೆಯೇ, ನಮ್ಮ ಸುತ್ತಲಿನ ಕೊಳೆಯನ್ನು ತಿಂದು ಸ್ವಚ್ಚ ಗೊಳಿಸುತ್ತಿದ್ದ
ಕಾಗೆಗಳನ್ನು, ಪರಿಸರ ವ್ಯವಸ್ಥೆಯ ಒಂದು ಅಂಗ ವಾಗಿದ್ದ ಈ ಪಕ್ಷಿಯ ಸಂತತಿಗೆ ಕುಂದುಂಟು ಮಾಡಿಬಿಟ್ಟಿ
ದ್ದೇವೆ ಎಂಬ ಪಾಪ ಪ್ರಜ್ಞೆ ಯಾರಿಗೂ ಬಂದ ಹಾಗಿಲ್ಲ. ಕಾಗೆ ಒಂದು ಚೊಕ್ಕಟ ಮಾಡುವ ಪಕ್ಷಿಯೂ ಹೌದು.
ಸತ್ತುಬಿದ್ದ ಇಲಿಗಳನ್ನು, ಇತರ ಅಂತಹ ವಸ್ತು ಗಳನ್ನು ತಿಂದು ಶುದ್ಧ ಮಾಡುವ ಹಕ್ಕಿ ಅದು. ಆದರೆ, ಈಚಿನ
ದಿನಗಳಲ್ಲಿ ಮರಗಳು ಕಡಿಮೆ ಯಾಗಿ, ಎತ್ತರದ ಮರಗಳಲ್ಲಿ ಗೂಡು ಕಟ್ಟಲು ಕಾಗೆಗಳಿಗೆ ಸಾಧ್ಯವಾಗುತ್ತಿಲ್ಲ. ಅವುಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿವೆ.
ಕಾಗೆಗಳು ಕೀಟಗಳನ್ನು ತಿನ್ನುತ್ತವೆ. ಬೆಳೆಗಳಲ್ಲಿ ಕೀಟನಾಶಕಗಳನ್ನು ಬಳಸುತ್ತಾರೆ, ಕಾಗೆಗಳು ಸತ್ತ ಕೀಟಗಳನ್ನು ತಿನ್ನುವುದರಿಂದ ಅವುಗಳ ಮೊಟ್ಟೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಕಾಗೆಗಳ ಸಂಖ್ಯೆ ಕ್ರಮೇಣ
ಕಡಿಮೆಯಾಗುತ್ತಿದೆ. ಕಾಗೆಗಳ ಸಂತತಿ ನಶಿಸಿಹೋದರೆ ಬೆಳೆಗಳಿಗೆ ಕೀಟಬಾಧೆ ಉಂಟಾಗಿ ಆಹಾರದ ಕೊರತೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಪಿತೃಪಕ್ಷವೇನೋ ಮುಗಿದು ಹೋಯಿತು. ಆದರೆ ಕಾಗೆಯೇ
ಇಲ್ಲದಿರುವಾಗ ಮಾಡಿದ ಕ್ರಿಯಾವಿಧಿಗಳ ಫಲ ನೀಡುತ್ತವೆಯೇ ಇಲ್ಲವೇ ಎಂಬುದಕ್ಕಿಂತಲೂ, ಕಾಗೆ ಇಲ್ಲದ ಜಗತ್ತು ಹೇಗಿರುತ್ತದೆ ಎಂಬ ಕಳವಳ ಅಧಿಕ ಎನಿಸಿದೆ. ಈಗ ಅಲ್ಲಲ್ಲಿ ಒಂದೊಂದು ಪ್ರದೇಶದಲ್ಲಿ ವಿರಳ ವಾಗಿ ಅವು
ಇವೆ ನಿಜ; ಆದರೆ ನೂರಾರು ಸಂಖ್ಯೆಯಲ್ಲಿದ್ದ ಕಾಗೆಗಳು ಎಲ್ಲಿ ಗೆ ಹೋದವು? ನೀವೆಲ್ಲಾದರೂ ನೋಡಿದ್ದಿರಾ