Thursday, 21st November 2024

ಕಂಗಳ ಹಿಂದಿನ ಚಿಗುರು

* ಮಂಜುಳಾ ಡಿ.

ಇಂಟರ್‌ನೆಟ್‌ಗಾಗಿ ಹೊಸದೊಂದು ಸಿಮ್ ಖರೀಸಿದೆ. ನಾಲ್ಕಾಾರು ದಿನ ಕಳೆದಿರಬೇಕು. ವಾಟ್ಸಾಾಪ್- ಟೆಕ್‌ಷ್ಟ್‌ ಮೆಸೇಜ್ ಎರಡರಲ್ಲೂ ಹೇಗಿದ್ದೀರಾ ‘ನನ್ನ ನೆನಪಿಲ್ವ’ ಅಂತರಾಳದಿಂದ ಹೊರಬಂದ ಧ್ವನಿಗಳಂಥ ಮೆಸೇಜ್‌ಗಳು ಬರಲಾರಂಭಿಸಿದಾಗಲೇ ಗೊತ್ತಾಾಗಿದ್ದು ಅದು ಬೇರೆಯವರು ಬಳಸಿದ ಸಿಮ್ ಅಂತ.
ಬಳಸಿದ ಸಿಮ್‌ಗಾಗಿ ಅದೇ ಧ್ವನಿ-ಅದೇ ಉಸಿರ ಏರಿಳಿತ ಕೇಳಲು ಇಷ್ಟೊೊಂದು ತಡಕಾಡಿದರೆ ಬಳಸಿದ ಮನುಷ್ಯರನ್ನು ಹುಚ್ಚರಂತೆ ಹುಡುಕಾಡಿದರೆ ಆಶ್ಚರ್ಯವೇನು…ಅದು ತೀರಾತಿತೀರಾ ಸಹಜ..

ಮೆಸೇಜ್ ಮಾಡ್ತಿಿರೊದು ಮೇಲ್ ಅಥವಾ ಫೀಮೇಲ್ ಗೊತ್ತಿಿಲ್ಲ. ರಿಸೀವ್ ಮಾಡಿ ನಾನು ಫೀಮೇಲ್ ಅಂತ ಗೊತ್ತಾಾಗಿ ಇನ್ನೇನಾದರೂ ರಗಳೆ ಮೊದಲಿಟ್ಟರೆ ಅಂತ. ಒಂದಕ್ಕೂ ಉತ್ತರಿಸದೇ ಉಳಿದೆ. ಆದರೆ ದಿನಗಳೆದಂತೆ ಮೆಸೇಜ್ – ಕಾಲ್‌ಗಳು ಹೆಚ್ಚಾಾದವು. ಬೇರೆ ಸಿಬ್ಬಂದಿ ಉತ್ತರಿಸಿದ್ದು ಉಪಯೋಗಕ್ಕೆೆ ಬರಲಿಲ್ಲ ಅಥವಾ ಆ ಕಡೆಯಿದ್ದವರು ಸತಾಯಿಸುತ್ತಿಿದ್ದಾರೆ ಅಂದುಕೊಂಡಿದ್ದರೋ ಗೊತ್ತಾಾಗಲಿಲ್ಲ. ಯಾಕಾದರೂ ಸಿಮ್ ಕೊಂಡೆನೋ ಎನ್ನುವಂತಾಗಿತ್ತು.

ಅದೊಂದು ಬೆಳಿಗ್ಗೆೆ ಆ ದಿನ ಅವರ ಬರ್ತಡೇ ಇರಬೇಕು – ಬೆಳಿಗ್ಗೆೆ ರಾತ್ರಿಿ ಹನ್ನೆೆರಡು ಇಪ್ಪತ್ತಕ್ಕೆೆ ಬೆಳಿಗ್ಗೆೆ ಐದು ಮುಕ್ಕಾಾಲಿಗೆ ಮೆಸೇಜ್ ಆರಂಭವಾದವು. ‘ಈ ದಿನ ಸಹ ನೆನಪಿಲ್ಲವಾ?’ ನನಗೋ ಆ ದಿನ ಅತೀ ತಲೆನೋವಿನ ಟೆನ್ಷನ್‌ಗಳಿದ್ದವು. ಬೆಳಿಗ್ಗೆೆಯಿಂದ ಎಂಟತ್ತು ಕರೆಗಳು. ಒಂದು ಇದಕ್ಕೊೊಂದು ಅಂತ್ಯ ಹಾಡಬೇಕು ಅಂದುಕೊಂಡು ಮಧ್ಯಾಾನ್ಹ ಲಂಚ್ ಬ್ರೇಕ್ ವೇಳೆ ಕಾಲ್ ತೆಗೆದೆ. ಒಂದಷ್ಟು ದಿನದ ಕಾಲ್ – ಮೆಸೇಜ್‌ಗಳ ಕಾಟ . ನನಗೆ ಗೊತ್ತಿಿದ್ದ ಒಂದಷ್ಟು ಬೈಗುಳ ಬೈಯಬೇಕೆಂದು ರೆಡಿಯಾಗಿ.
ಈ ಕಡೆಯಿಂದ- ಹಲೋ ಅಂದೆ. ನಾನು ಹಲೋ ಅಂದಿದ್ದು ಕೆಳಿತ್ತೋೋ ಇಲ್ಲವೋ
ಆ ಕಡೆಯಿಂದ ಹೆಣ್ಣು ಅತ್ಯಂತ ಕಾತರದಿಂದ ಹಲೋ – ಹಲೋ ಅಂದಿತು. ಆ ಕಡೆಯಿರುವುದು ಹುಡುಗಿಯೆಂದು ತಿಳಿದಾಕ್ಷಣ ನನ್ನ ರೇಜಿಗೆ ಅರ್ಧಕ್ಕಿಿಳಿಯಿತು.

ನಾನು ಹಲೋ ಅಂದಿದ್ದು ಕೇಳಿಲ್ಲ…

ಆಕೆ ಚೈತನ್ಯ ಬಸಿದ ಧ್ವನಿಯಲ್ಲಿ ‘ಇವತ್ತಾಾದರೂ ಎಲ್ಲಾ ಮರೆತು ವಿಷ್ ಮಾಡಬಾರದ. ಅಷ್ಟು ಬೇಗ ಮರೆತೆಯಾ’ ಅಂತೆಲ್ಲಾ ಮಧ್ಯೆೆ ಉಸಿರು ತೆಗೆದುಕೊಳ್ಳುತ್ತಾಾ ಹೇಳುತ್ತಲೇ ಹೋಯಿತು. ಆ ಗಾಢ ಭಾವನೆಗೆ ತಕ್ಕ ಸಮಾಧಾನದ ಮಾತು ಹೊಳೆಯಲಿಲ್ಲ. ಶಬ್ದಗಳಿಗೆ ತಡವರಿಸುತ್ತಾಾ – ‘ಇಲ್ಲ ಇತ್ತೀಚೆಗಷ್ಟೇ ನೆಟ್‌ಗಾಗೀ ಈ ಸಿಮ್ ಕೊಂಡೆ. ನೀವಂದುಕೊಂಡವರು ನಾನಲ್ಲ. ಕ್ಷಮಿಸಿ’ ಅಂದೆ.

ನನ್ನ ಧ್ವನಿಯ ಸತ್ಯತೆ ತಲುಪಿತೇನೋ – ಆ ಕಡೆಯಿಂದ ಕಾಲ ಒಮ್ಮೆೆಲೇ ಸ್ಥಗಿತಗೊಂಡಂತಹ ಅಭೇಧ್ಯ ಮೌನ. ಉಕ್ಕಿಿ ಬಂದ ದುಃಖದ ಬಿಕ್ಕು ಒತ್ತಿಿ ಹಿಡಿದಿದ್ದು ಮಾತ್ರ ಅರಿವಿಗೆ ಬಂತು. ಏನು ಹೇಳಬೇಕೇ ಆಕೆಗೆ. ಸಿಮ್ ಆಕ್ಟೀವ್ ಆಗಿದ್ದು ಕಂಡು ಜೀವಬಂದಂತಾಗಿರಬಹುದೇನೋ….ಈಗ ನೋಡಿದರೆ ಯುಗಗಳಿಂದ ಉಂಡುಟ್ಟ ನೀರಿಕ್ಷೆಯ ಕೊನೆ ಎಳೆಯೂ ಕಳಚಿದಂತೆ…. ಉಸಿರನ್ನು ತಹಬದಿಗೆ ತಂದುಕೊಂಡವಳೇ ‘ನೀವು ಯಾರು- ಏನು ಮಾಡ್ತಿಿದೀರಿ’ ಇತ್ಯಾಾದಿ ಪ್ರಶ್ನೆೆ ಕೇಳಿದೆ. ತಡಬಡಿಸುತ್ತಾಾ ಏನು ಹೇಳಿತ್ತಿಿದ್ದೇನೆ ಎಂಬ ಅರಿವಿಲ್ಲದೇ ಹೇಳುತ್ತಾಾ ಹೋದಳು. ಒಂದಷ್ಟು ಸ್ಪಂದನೆಗೆ ಧುಮ್ಮಿಿಕ್ಕಿಿ ಹರಿಯುವಂತಿದ್ದ ಆಕೆಯ ಭಾವನೆಗಳ ಆಳ ಅಂದಾಜಿಸಬಲ್ಲವಳಾಗಿದ್ದೆ. ನಿಜಕ್ಕೂ ಯಾರ ಮಾತುಗಳೂ ಆಕೆಯನ್ನು ಆಗ ಸಮಾಧಾನಗೊಳಿಸುವುದು ಸಾಧ್ಯವಿರಲಿಲ್ಲ – ಅವಳೇ ಅತ್ತು ಹಗುರಾಗುವುದು ಬಿಟ್ಟರೆ.

ಆದರೆ ಹಾಗೇ ಫೋನಿಡಲು ಮನಸಾಗದೇ, ‘ನಿಮ್ಮ ಮೇಲೆ ನೀವು ಮೊದಲು ಗಮನ ಹರಿಸಿಕೊಳ್ಳಿಿ – ಆರೋಗ್ಯ ಚೆನ್ನಾಾಗಿ ನೋಡಿಕೊಳ್ಳಿಿ. ಮಾತಾಡಬೇಕು- ಏನಾದರೂ ಹಂಚಿಕೊಳ್ಳಬೇಕು ಅನ್ನಿಿಸಿದರೆ ಫೋನ್ ಮಾಡಿದರೆ ಹಂಚಿಕೊಳ್ಳಬಲ್ಲೆ. ನೀವು ಕೂಡಿಟ್ಟ ನಿಮ್ಮ ಕನಸನ್ನೆೆಲ್ಲ ಎರಕಹೊಯ್ದ ಬಣ್ಣದ ಹಣತೆ ನಿಮಗಾಗಿ ಬೆಳಗಲಿಲ್ಲ ಅಂತ ನೋಯುವ ಬದಲು ನೀವೇ ನಿಮಗಾಗಿ ಉರಿದು ಬೆಳಗಿಕೊಳ್ಳುವ ಬಗ್ಗೆೆ ಯೋಚಿಸಬಹುದೇನೋ. ಅದೇ ಕನಸುಗಳ ಬಣ್ಣದ ಹಣತೆಯಲ್ಲದಿದ್ದರೂ ದೇವರು ಎಲ್ಲಾದರೂ ಒಂದು ಕಿರು ದೀವಿಗೆಯ ಸಹಾರೆ ಒದಗಿಸಬಹುದೇನೋ.’ ಅಂದೆ. ಮುಂದೆ ನನಗೂ ಮಾತು ಹೊಳೆಯಲಿಲ್ಲ.

‘ಹ್ಯಾಾಪಿ ದೀಪಾವಳಿ ಮತ್ತು ಬರ್ತಡೇ’ ಅಂತ ವಿಷ್ ಮಾಡಿದೆ. ಕೆಲವು ಕ್ಷಣ ಶೀತಲ ಕಲ್ಲಿನಂಥ ಮೌನ. ಅತ್ತಲಿಂದ ಕಣ್ಣೊೊರೆಸಿಕೊಳ್ಳತ್ತಾಾ ‘ಹೂ…’ ಅಂದವಳೇ ಫೋನಿಟ್ಟಳು. ಯಾವುದೋ ಗಾಢ ಭಾವನೆಯ ಅರಿವು ನೆನಪು ಆದ್ರತೆ ಸುಳಿದು ಕಣ್ಣಂಚು ಒದ್ದೆಯಾಯಿತು.