Thursday, 21st November 2024

ತಪ್ಪು ಮಾಡಿದೆವು ಡಾಕ್ಟ್ರೇ . . . .

ಡಾ ಎನ್. ಭಾಸ್ಕರ ಆಚಾರ್ಯ

ಆಕೆಯ ಪತಿ ಮಾತ್ರ ಮುಂದೆ ಬಂದವನೆ, ‘ತಪ್ಪಾಾಯ್ತು ಡಾಕ್ಟ್ರೆೆ, ನಮ್ಮದು ತಪ್ಪಾಾಯ್ತು. ಅದಕ್ಕೆೆ ಆ ದೇವರು ಸರಿಯಾದ ಶಿಕ್ಷೆಯನ್ನೆೆ ಕೊಟ್ಟ’ ಎಂದು ಅಳತೊಡಗಿದ. ಆತನನ್ನು ಅಲ್ಲಿಂದ ಎಬ್ಬಿಿಸಬೇಕಾದರೆ ಬಹಳ ಕಷ್ಟವಾಯಿತು.

ಡಾ. ರಾಜೇಶ್ ಇನ್ನೇನು ಮನೆಗೆ ಹೊರಡಲಿಕ್ಕಿಿದ್ದ. ಸಂಜೆ ಏಳುಗಂಟೆಯಾಗುತ್ತಾಾ ಬಂದಿತ್ತು. ಸ್ತ್ರೀ ರೋಗ ತಜ್ಞನಾಗಿದ್ದ ಆತನ ಆ ದಿನದ ಕೊನೆಯ ರೋಗಿ ಒಳಗೆ ಬಂದಳು. ಅವಳೊಡನೆ ಆಕೆಯ ಗಂಡನೂ ಒಳ ಬಂದಿದ್ದ. ಬಂದಾತನೆ, ಕೋಣೆಯೊಳಗೆ ಅತ್ತಿಿತ್ತ ನೋಡಿ, ಅಲ್ಲಿ ಯಾವಾಗಲೂ ಇರುತ್ತಿಿದ್ದ ಸಿಸ್ಟರ್ ಇಲ್ಲದ್ದನ್ನು ನೋಡಿ ಸೀದಾ ಹಿಂದೆ ತಿರುಗಿ, ಒಳಗಿನಿಂದ ಕೋಣೆಯ ಚಿಲಕ ಹಾಕಿದ.

ರಾಜೇಶನಿಗೊಮ್ಮೆೆ ಎದೆ ಧಸಕ್ಕೆೆಂದಿತ್ತು. ಈಗೀಗ ವಾಟ್ಸಪ್ ನಲ್ಲಿ, ಪೇಪರ್‌ಗಳಲ್ಲಿ ಬರುತ್ತಿಿದ್ದ ವೈದ್ಯರ ಮೇಲಿನ ಹಲ್ಲೆೆ ಸುದ್ದಿಗಳನ್ನು ಓದಿರುತ್ತಿಿದ್ದ ಆತನಿಗೆ ಈಗ ತನ್ನ ಪರಿಸ್ಥಿಿತಿಯೂ ಹಾಗೇನಾದರೂ ಆದರೆ ಎಂಬ ಭಯ ಕಾಡತೊಡಗಿತು. ಅವರಿಬ್ಬರ ಮುಖ ನೋಡಿದಾಕ್ಷಣ, ಇವರನ್ನು ಮೊದಲೊಮ್ಮೆೆ ನೋಡಿದ ನೆನಪಾಯ್ತು. ಅಲ್ಲದೇ ಅವರಿಬ್ಬರ ನಡೆನುಡಿಗಳಲ್ಲಿ ಅಂಥಾ ಆವೇಶ ಕಾಣ ಬರಲಿಲ್ಲ. ಹೆಂಗಸು ಮಾತ್ರ ಭಾವರಹಿತಳಾಗಿದ್ದು, ಈತನನ್ನು ಗುರುತಿಸಿದಂತೆ ತೋರ್ಪಡಿಸಿಕೊಳ್ಳಲಿಲ್ಲ. ಆಕೆಯ ಪತಿ ಮಾತ್ರ ಮುಂದೆ ಬಂದವನೆ, ಸೀದಾ, ರಾಜೇಶನ ಕಾಲಿಗೆ ಬಿದ್ದ. ಆತನ ಎರಡೂ ಕಾಲುಗಳನ್ನು ಹಿಡಿದುಕೊಂಡು, ‘ತಪ್ಪಾಾಯ್ತು ಡಾಕ್ಟ್ರೆೆ, ನಮ್ಮದು ತಪ್ಪಾಾಯ್ತು. ಅದಕ್ಕೆೆ ಆ ದೇವರು ಸರಿಯಾದ ಶಿಕ್ಷೆಯನ್ನೆೆ ಕೊಟ್ಟ’ ಎಂದು ಅಳತೊಡಗಿದ. ಆತನನ್ನು ಅಲ್ಲಿಂದ ಎಬ್ಬಿಿಸಬೇಕಾದರೆ ಬಹಳ ಕಷ್ಟವಾಯಿತು.

‘ಆಯ್ತಪ್ಪ ಎದ್ದೇಳು, ಏನು ತೊಂದರೆ? ಏಕೆ ಇಲ್ಲಿಗೆ ಬಂದು ಹೀಗೆಲ್ಲ ಆಡುತ್ತಿಿದ್ದಿರಿ? ಇದೆಲ್ಲ ಸರಿಯಲ್ಲ’ ಎಂದು ಅವನ ಭುಜ ಹಿಡಿದು ಮೇಲೆತ್ತಿಿದ್ದ. ಅಷ್ಟಾಾದರೂ, ಆತನ ಪತ್ನಿಿ ಮಾತ್ರ ತನಗೂ ಇದಕ್ಕೂ ಏನು ಸಂಬಂಧವಿಲ್ಲವೆಂಬಂತೆ ಸುಮ್ಮನೆ ನಿಂತಿದ್ದಳು. ‘ಇಲ್ಲ ಡಾಕ್ಟ್ರೆೆ, ನಾವು ತಪ್ಪುು ಮಾಡಿದೆವು. ನಿಮಗೆ ನೆನಪಾಗಲಿಲ್ಲವೇ? ವರ್ಷದ ಹಿಂದೆ ನಾವಿಲ್ಲಿಗೆ ಬಂದಿದ್ದೆೆವು. ನಿಮ್ಮನ್ನು ಒತ್ತಾಾಯ ಮಾಡಿದ್ದೆೆವು. ನೀವು ಬೇಡ ಎಂದಿದ್ದಿರಿ’ ಎಂದ.

ಒಂದು ಕ್ಷಣ ರಾಜೇಶನಿಗೆ ಏನೂ ತಿಳಿಯಲಿಲ್ಲ. ಥಟ್ಟಂತ ನೆನಪಿಗೆ ಬಂತು. ಹೌದು ಆ ದಂಪತಿಗಳು ವರ್ಷದ ಹಿಂದೆ ಬಂದಿದ್ದರು. ಆ ಪಟ್ಟಣದವರಲ್ಲ ಇವರು. ಆಗ ಆ ಹೆಂಗಸು ಮೂರು ತಿಂಗಳ ಗರ್ಭಿಣಿ. ಅವರ ಊರಿನಲ್ಲಿ ಸ್ಕ್ಯಾಾನಿಂಗ್ ಮಾಡಿಸಿಕೊಂಡೇ ಬಂದಿದ್ದರು. ಅವಳು ಬಂದಿದ್ದು ಗರ್ಭಪಾತ ಮಾಡಿಸಲಿಕ್ಕೆೆ. ಅವರಿಗೆ ಎರಡು ಚಿಕ್ಕ ಚಿಕ್ಕ ಮಕ್ಕಳು, ಒಂದಕ್ಕೆೆ ಮೂರು ವರ್ಷ, ಇನ್ನೊೊಂದಕ್ಕೆೆ ಹತ್ತು ತಿಂಗಳಷ್ಟೇ. ಮಗು ಹಾಲು ಕುಡಿಯುವಾಗ ಮುಟ್ಟು (ತಿಂಗಳಸ್ರಾಾವ) ಆಗುವುದಿಲ್ಲ ಎಂದುಕೊಂಡಿದ್ದರಂತೆ. ಕೊನೆಗ್ಯಾಾಕೋ ಬೆಳಿಗ್ಗೆೆ ಬೆಳಿಗ್ಗೆೆ ವಾಂತಿ ಪ್ರಾಾರಂಭವಾಗಿ, ಸಂಶಯ ಬಂದು ಮೂತ್ರ ಪರೀಕ್ಷೆ ಮಾಡಿಸಿದಾಗ ಗರ್ಭಿಣಿ ಎಂದು ತಿಳಿದು ಬಂತಂತೆ. ಸ್ಕ್ಯಾಾನಿಂಗ್‌ನಲ್ಲಿ ಮೂರು ತಿಂಗಳು ದಾಟಿದೆ ಎಂಬ ವರದಿ ಬಂತಂತೆ. ಹಾಗಾಗಿ ಆ ಊರಿನಲ್ಲಿ ಬೇಡ ಎಂದುಕೊಂಡು ದೂರದ ರಾಜೇಶ್ ಬಳಿ ಬಂದಿದ್ದರು. ‘ಈಗ ಮೂರು ತಿಂಗಳು ದಾಟಿಯಾಗಿದೆ. ಈಗ ಗರ್ಭಪಾತ ಮಾಡುವುದು ಗರ್ಭಿಣಿಗೆ ತೊಂದರೆ ಉಂಟುಮಾಡಬಹುದು. ಇದೊಂದು ಮಗು ಆಗಲಿ ಬಿಡಿ. ನಂತರ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆೆ ಮಾಡಬಹುದು’ ಎಂದು ವಾಪಾಸು ಕಳಿಸಿದ್ದ.

ಒಂದು ವಾರದ ಬಳಿಕ ಅದೇ ದಂಪತಿ ಪುನಃ ರಾಜೇಶ್ ಬಳಿ ಬಂದಿದ್ದರು. ಆತ ಗರ್ಭಪಾತ ಮಾಡಿಸಲು ನಿರಾಕರಿಸಿದ್ದರಿಂದ, ಅವರ ಊರಿನಲ್ಲಿ ಗರ್ಭಪಾತ ಮಾಡಿಸುವ ಮಾತ್ರೆೆಗಳನ್ನು ತೆಗೆದುಕೊಂಡಿದ್ದರಂತೆ. ಆದರೆ ಹೊಟ್ಟೆೆ ನೋವು ವತ್ತು ಸ್ವಲ್ಪ ಮಾತ್ರ ರಕ್ತಸ್ರಾಾವವಾಗಿದ್ದು ಬಿಟ್ಟರೆ ಬೇರೇನೂ ಆಗಿರಲಿಲ್ಲ. ‘ಇದ್ಯಾಾರು ನಿಮಗೆ ಆ ಮಾತ್ರೆೆಗಳನ್ನು ಕೊಟ್ಟರು? ಅದನ್ನು ಗರ್ಭ ನಿಂತ 7-8 ವಾರದೊಳಗೆ ತೆಗೆದುಕೊಳ್ಳಬೇಕು. ನಂತರ ಅದು ಕೆಲಸ ಮಾಡುವುದಿಲ್ಲ. ಯಾವ ವೈದ್ಯರೂ ಅದನ್ನು ಕೊಡಲಿಕ್ಕಿಿಲ್ಲ’ ಎಂದಾಗ ಗಂಡ, ‘ಹೌದು ಡಾಕ್ಟ್ರೆೆ, ನಾವು ವೈದ್ಯರ ಹತ್ತಿಿರ ಹೋಗಲಿಲ್ಲ. ಅಲ್ಲಿ ಪೇಟೆಯ ಯಾವುದೋ ಮೆಡಿಕಲ್‌ನಲ್ಲಿ ಕೊಡುತ್ತಿಿದ್ದರು, ಗ್ಯಾಾರಂಟಿ ಹೋಗುತ್ತದೆ ಎಂದಿದ್ದರು. ಅದಕ್ಕೆೆ ತೆಗೆದುಕೊಂಡೆವು’ ಎಂದು ಹೇಳಿದ್ದ.

ಒಮ್ಮೆೆ ಆ ಮಾತ್ರೆೆಗಳನ್ನು ತೆಗೆದುಕೊಂಡ ನಂತರ ಗರ್ಭ ಮುಂದುವರೆದರೆ, ಮಗುವಿಗೆ ತೊಂದರೆ/ವಿಕಲತೆ ಆಗುವ ಸಂಭವವಿತ್ತು. ಹಾಗಾಗಿ ದಾಖಲೆ ಪತ್ರಗಳಿಗೆ ದಂಪತಿಗಳ ಲಿಖಿತ ಅನುಮತಿ ಪಡೆದು, ಆಕೆಯನ್ನು ಆಸ್ಪತ್ರೆೆಯಲ್ಲಿ ದಾಖಲಾತಿ ಮಾಡಿ, ಬೇಕಾದ ಚಿಕಿತ್ಸೆೆ ನೀಡಿ ಗರ್ಭಪಾತ ಮಾಡಿಸಿದ್ದ. ಆ ಭ್ರೂಣವನ್ನು ಅವರ ಜಾತಿ ಪದ್ಧತಿಯಂತೆ ದಂಪತಿಗಳೇ ತೆಗೆದುಕೊಂಡು ಹೋಗಿದ್ದರು. ತಿಂಗಳ ನಂತರ ಒಮ್ಮೆೆ ಬಂದು ತೋರಿಸಿ ಹೋಗಿ ಎಂದು ಈತ ಸಲಹೆ ಕೊಟ್ಟಿಿದ್ದರೂ ಅವರು ಮತ್ತೆೆ ಬಂದಿರಲಿಲ್ಲ.

ಕಾಲಿಗೆ ಬಿದ್ದ ಪತಿಯನ್ನು ಎಬ್ಬಿಿಸಿ, ಇಬ್ಬರನ್ನೂ ಎದುರಿಗೆ ಕುಳ್ಳಿಿರಿಸಿ, ‘ಈಗ ಹೇಳಿ ಏನಾಯಿತು? ಸಮಾಧಾನ ಮಾಡಿಕೊಂಡು ಹೇಳಿ’ ಎಂದ. ಆಗ ಆ ಗಂಡ ಬಾಯ್ಬಿಿಟ್ಟ. ‘ಡಾಕ್ಟ್ರೆೆ, ನಮಗೆ ಇಬ್ಬರು ಮಕ್ಕಳು, ಎರಡೂ ಹೆಣ್ಣೇ. ಒಂದು ಗಂಡು ಮಗು ಬೇಕೆಂಬ ಆಸೆ ಇತ್ತು. ಸಣ್ಣ ಮಗುವಿಗೆ ಹತ್ತು ತಿಂಗಳಾಗುವಷ್ಟರಲ್ಲಿ ಈಕೆ ಪುನಃ ಬಸಿರಾದಳು. ಊರಲ್ಲಿನ ನಮ್ಮ ಡಾಕ್ಟರರಿಗೆ ತೋರಿಸಿದೆವು. ಅವರು ಹೇಳಿದಂತೆ ಸ್ಕ್ಯಾಾನಿಂಗ್ ಮಾಡಿಸಿದ್ದೆೆವು. ಹಾಗೆ, ಅಲ್ಲಿನ ಸ್ಕ್ಯಾಾನಿಂಗ್ ಡಾಕ್ಟರನ್ನು ಮಗು ಯಾವುದೆಂದು ಕೇಳಿಕೊಂಡಾಗ ಅವರು ತಿಳಿಸಲಿಲ್ಲ. ಮತ್ತೆೆ ಆ ಬಗ್ಗೆೆ ಕೇಳಲೇ ಬೇಡಿ ಎಂದು ಬಯ್ದು ಕಳಿಸಿದರು. ನಂತರ ನಮ್ಮ ಸಂಬಂಧಿಯೊಬ್ಬ, ಅಲ್ಲೇ ಪಕ್ಕದ ಊರಿನ ಇನ್ನೊೊಬ್ಬ ಡಾಕ್ಟರ ಬಳಿ ಕರೆದುಕೊಂಡು ಹೋದ. ಅವರು ಮೂರು ತಿಂಗಳಾದಾಗ ಸ್ಕ್ಯಾಾನಿಂಗ್ ಮಾಡಿ ಮಗು ಹೆಣ್ಣು ಎಂದು ಹೇಳಿದರು. ನನ್ನ ಹೆಂಡತಿಯಂತೂ ಅದನ್ನು ಕೇಳಿ ಊಟ ನಿದ್ದೆೆ ಎರಡನ್ನೂ ಮಾಡಲಿಲ್ಲ. ಈ ಮಗು ನನಗೆ ಬೇಡ ಎಂದು ಒಂದೇ ಹಠ.

ಅವಳಿಗೆ ದೇವರು ಕೊಟ್ಟದ್ದು ಬೇಡ ಎನಬೇಡ ಎಂದು ಸಮಾಧಾನ ಮಾಡಿದರೂ ಕೇಳಲಿಲ್ಲ. ಕೊನೆಗೆ ಅವಳ ಒತ್ತಾಾಯಕ್ಕೆೆ ನಮ್ಮ ವೈದ್ಯರ ಬಳಿ ಕರೆದುಕೊಂಡು ಹೋದೆ. ಹೆಣ್ಣು ಮಗು ಎಂಬ ವಿಷಯ ತಿಳಿಸಲಿಲ್ಲ. ಗರ್ಭಪಾತ ಮಾಡಿಸಲು ಅವರು ಬಿಲ್‌ಕುಲ್ ಒಪ್ಪಲಿಲ್ಲ. ನೀವು ಬೇಗ ಬರಬೇಕಿತ್ತು. ಮೂರು ತಿಂಗಳಾದ ನಂತರ ಮಾಡುವುದು ಒಳ್ಳೆೆಯದಲ್ಲ ಅಂದರು. ಹಾಗಾಗಿ ನಿಮ್ಮ ಬಳಿ ಕರೆದುಕೊಂಡು ಬಂದೆ. ನಿಮ್ಮಲ್ಲೂ ಸುಳ್ಳು ಹೇಳಿದ್ದೆೆ. ನೀವು ಬಯ್ದು ವಾಪಾಸು ಕಳಿಸಿದಿರಿ. ಆಗ ಆ ನಮ್ಮ ಸಂಬಂಧಿಯೇ ಅಲ್ಲಿನ ಮೆಡಿಕಲ್‌ಸ್‌ ಒಂದರಿಂದ ಮಾತ್ರೆೆ ತಂದುಕೊಟ್ಟ.

ಆತ ಹೇಳಿದಂತೆ ತೆಗೆದುಕೊಂಡರೂ ಗರ್ಭ ಇಳಿಯಲಿಲ್ಲ. ನಂತರ ಪುನಃ ನಿಮ್ಮ ಬಳಿ ಬಂದಾಗ ನೀವು ಗರ್ಭಪಾತ ಮಾಡಿಸಿದ್ದೀರಿ, ನಮ್ಮಲ್ಲಿನ ಪದ್ಧತಿಯಂತೆ ಅದನ್ನು ಊರಿಗೆ ತೆಗೆದುಕೊಂಡು ಹೋದೆವು. ಆ ಮಗು ಮಾತ್ರ ಗಂಡಾಗಿತ್ತು! ಆ ವೈದ್ಯರು ತಿಳಿಸಿದಂತೆ ಹೆಣ್ಣಾಾಗಿರಲಿಲ್ಲ. ಅವರು ಮೋಸ ಮಾಡಿದರು. ಅದು ಹೇಗೋ ವಿಷಯ ಇವಳಿಗೆ ತಿಳಿಯಿತು. ಅಲ್ಲಿಂದ ನೋಡಿ ಇವಳು ಮಂಕಾದಳು, ತನ್ನಷ್ಟಕ್ಕೆೆ ತಾನು ಮಾತನಾಡುವುದು, ಅಳುವುದು ಎಲ್ಲಾಾ ಮಾಡುತ್ತಿಿದ್ದಳು. ಕೊನೆಗೆ ಊರಿನ ಮಾನಸಿಕ ಡಾಕ್ಟರ್ ಬಳಿ ಇವಳನ್ನು ಕರೆದುಕೊಂಡು ಹೋದೆ. ವಿಷಯ ಎಲ್ಲಾಾ ಹೇಳಿದೆ. ಈಗ ಎಂಟು ಒಂಭತ್ತು ತಿಂಗಳುಗಳಿಂದ ಚಿಕಿತ್ಸೆೆ ನಡೆಯುತ್ತಿಿದೆ. ಇವಳಿಗೆ ಇನ್ನೊೊಂದು ಮಗುವಾದರೆ ಒಳ್ಳೆೆಯದು, ಬೇಗ ಹುಷಾರಾಗಬಹುದು. ಗರ್ಭಿಣಿಯಾದರೆ ತೊಂದರೆ ಬರದಂತೆ ಔಷಧಿ ಬದಲಿಸಿ ಕೊಡುತ್ತೇನೆ ಎಂದರು. ಈಗ ಇವಳು ಪುನಃ ಬಸುರಿ, ಮೂತ್ರ ಟೆಸ್‌ಟ್‌ ಮಾಡಿಸಿ ನೋಡಿದಾಗ ಗೊತ್ತಾಾಯಿತು, ಮಾನಸಿಕ ಡಾಕ್ಟರೇ ಹೆರಿಗೆ ಡಾಕ್ಟರಿಗೆ ತೋರಿಸಿ ಎಂದರು. ಊರಲ್ಲಿ ನಮ್ಮ ವೈದ್ಯರಿಗೆ ಮುಖ ತೋರಿಸುವುದು ಹೇಗೆ? ಅವರಿಗೆ ಸುಳ್ಳು ಹೇಳಿದ್ದೇನಲ್ಲ! ನಿಮ್ಮ ಬಳಿ ಈಗ ಬಂದಿದ್ದೇವೆ. ಪೂರ್ತಿ ಚೆಕ್ ಅಪ್, ನಂತರ ಹೆರಿಗೆ ಎಲ್ಲಾಾ ನಿಮ್ಮಿಿಂದಲೇ ಆಗಲಿ. ಸ್ಕ್ಯಾಾನಿಂಗ್ ಎಲ್ಲಾಾ ಮಾಡಿಸಿ. ಹೆಣ್ಣಾಾಗಲಿ ಗಂಡಾಗಲಿ ಈಕೆಗೆ ಇನ್ನೊೊಂದು ಮಗುವಾಗಿ ಈಕೆ ಹುಷಾರಾಗಲಿ. ಆ ದೇವರು ಕಣ್ಣು ಬಿಡಲಿ ಡಾಕ್ಟ್ರೆೆ. ನಾವು ಮಾಡಿದ ತಪ್ಪಿಿಗೆ ಆ ದೇವರೇ ಶಿಕ್ಷೆ ಕೊಟ್ಟ. ಇನ್ನಾಾದರೂ ಕ್ಷಮಿಸಲಿ’ ಎಂದು ಆ ಗಂಡ ದೀರ್ಘವಾಗಿ ತನ್ನ ಕಥೆ – ವ್ಯಥೆ ತೋಡಿಕೊಂಡ.

ಅತ್ಯಾಾಚಾರದಿಂದ ಗರ್ಭಿಣಿಯಾದರೆ ಅಥವಾ ಸುರಕ್ಷಾ ವಿಧಾನಗಳನ್ನು ಮೀರಿ ಗರ್ಭಿಣಿಯಾದರೆ, ಆ ಬೇಡದ ಮಗುವನ್ನು ಗರ್ಭಿಣಿಗೆ ಐದು ತಿಂಗಳು (20 ವಾರ) ಗಳಾಗುವುದರೊಳಗೆ ಗರ್ಭಪಾತ ಮಾಡಿ ತೆಗೆಸಲು ಕಾನೂನಿನಲ್ಲಿ ಅವಕಾಶ ಇದೆ. ದೇಶದ ಒಟ್ಟು ಶಿಶು ಜನನಗಳಲ್ಲಿ ಸಾಧಾರಣ ಮೂರನೇ ಒಂದಂಶ, ಬೇಡದ ಅಥವಾ ಬಯಸದ ಮಕ್ಕಳೇ ಆಗಿರುತ್ತವೆ ಎಂದು ಇತ್ತೀಚೆಗೆ ಓದಿದ ನೆನಪು. ಅದರಿಂದ ದೇಶದ ಆರ್ಥಿಕತೆಯ ಮೇಲೆ ಬಹಳಷ್ಟು ಒತ್ತಡ ಬೀಳುತ್ತದೆ. ಹಾಗಾಗಿ ಜನಸಂಖ್ಯಾಾ ನಿಯಂತ್ರಣ ಮಾಡುವುದು ಇಂದಿನ ಅವಶ್ಯಕತೆ. ಆದರೆ, ಹೆಣ್ಣು ಶಿಶುವಿನ ಜನನ ಬಹಳಷ್ಟು ಕಡಿಮೆಯಾಗಿದೆ. ಹೆಣ್ಣು ಗಂಡು ಅಸಮತೋಲನವನ್ನು ಕಡಿಮೆ ಮಾಡಿಸಲು ಸರ್ಕಾರ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆೆ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಆದರೂ ಕೆಲವು ಕಡೆ ಭ್ರೂಣಲಿಂಗ ಪತ್ತೆೆ ಮಾಡುವಂಥಾ ವೈದ್ಯರಿರುವುದು ವಿಷಾದನೀಯ. ಆ ನಿಟ್ಟಿಿನಲ್ಲಿ ಜನರ ಒತ್ತಾಾಯ ಕೂಡಾ ಖಂಡನೀಯ.

ಆದರೆ ಜನರು ಸಾಮಾನ್ಯವಾಗಿ ತಿಳಿದಂತೆ, ಸ್ಕ್ಯಾಾನಿಂಗ್ ಮಾಡಿ ಭ್ರೂಣಲಿಂಗ ನಿರ್ಧಾರ ಮಾಡುವುದು, ಎಲ್ಲಾಾ ಬಾರಿಯೂ ನೂರಕ್ಕೆೆ ನೂರರಷ್ಟು ಸರಿಯಾಗಿರುವುದು ಅಸಂಭವ – ಅದೂ ಮೂರು – ನಾಲ್ಕನೇ ತಿಂಗಳ ಗರ್ಭಿಣಿಯರಲ್ಲಿ. ಐದು ತಿಂಗಳಲ್ಲಿ ಸಾಧಾರಣವಾಗಿ ಭ್ರೂಣಲಿಂಗ ಪತ್ತೆೆ ಮಾಡಬಹುದಾದರೂ, ಅದು ಗೊತ್ತಾಾಗಲೇ ಬೇಕೆಂದಿಲ್ಲ, ನಿಜವಾಗಲೇ ಬೇಕೆಂದಿಲ್ಲ. ಹಾಗೆ ತಪ್ಪಾಾಗುವುದು, ವೈದ್ಯರ ನಿರ್ಲಕ್ಷದಿಂದಲೂ ಅಲ್ಲ. ಸ್ಕ್ಯಾಾನಿಂಗ್ ಮಾಡುವಾಗ ತಾಯಿಯ ಗರ್ಭಕೋಶದೊಳಗೆ ಭ್ರೂಣದ ಸ್ಥಾಾನ ಹಾಗೂ ತಾಯಿಯ ದೈಹಿಕ ಪರಿಸ್ಥಿಿತಿಯನ್ನು ಹೊಂದಿಕೊಂಡು ಭ್ರೂಣದ ಲಿಂಗ ಹಾಗೂ ದೈಹಿಕ ದೋಷಗಳು ಪತ್ತೆೆಯಾಗಬಹುದು ಅಥವಾ ಆಗದೇ ಇರಬಹುದು. ಹಳ್ನೀರಿನ(ಅಞ್ಞಜಿಟಠಿಜ್ಚಿಿ ಊ್ಝ್ಠಜಿ) ಪರೀಕ್ಷೆಯಿಂದ ಮಾತ್ರ ಇವೆರಡನ್ನೂ ಸರಿಯಾಗಿ ಪತ್ತೆೆ ಮಾಡಬಹುದು. ಆದರೆ ಈ ವಿಧಾನ ಕೆಲವೊಮ್ಮೆೆ ಅಪಾಯಕಾರಿಯಾಗಬಹುದು. ಅಲ್ಲದೇ ಅದನ್ನು ಎಲ್ಲಾಾ ಆಸ್ಪತ್ರೆೆಗಳಲ್ಲೂ ಮಾಡುವುದಿಲ್ಲ. ಅದರ ಶುಲ್ಕವೂ ದುಬಾರಿ. ವೈದ್ಯರು ಭ್ರೂಣದ ಕಾಹಿಲೆಯೇನಾದರೂ ಕಂಡುಬಂದರೆ ಮಾತ್ರ ಅದರ ಧೃಢೀಕರಣಕ್ಕಾಾಗಿ ಈ ಪರೀಕ್ಷೆಯನ್ನು ಹೆಚ್ಚಾಾಗಿ ಮಾಡಿಸುತ್ತಾಾರೆ.

ಆದ್ದರಿಂದ ಜನರು ಅಲ್ಟ್ರಾಾಸೌಂಡ್ ಸ್ಕ್ಯಾಾನಿಂಗ್ ಮೂಲಕ ಭ್ರೂಣಲಿಂಗ ಪತ್ತೆೆಗೆ ವೈದ್ಯರನ್ನು ಒತ್ತಾಾಯಿಸುವುದು ಅಪಾಯಕ್ಕೆೆ ಆಹ್ವಾಾನ ನೀಡಿದಂತೆ. ಅದು ಈ ಮೇಲಿನ ದಂಪತಿಗಳಿಗಾದಂತೆ ತೊಂದರೆಯನ್ನುಂಟು ಮಾಡಬಹುದು. ಈ ಎಲ್ಲಾಾ ಗೋಳಿಗಿಂತ ಸುಮ್ಮನೆ ಇದ್ದು ದೇವರು ಕೊಟ್ಟಂತಾಗಲಿ ಎನ್ನುವುದೇ ಶ್ರೇಯಸ್ಕರ.