Sunday, 15th December 2024

ಬಹುಮನಿ ಸುಲ್ತಾನರ ಬೀದರ್ ಕೋಟೆ

*ಸಂತೋಷ್ ರಾವ್ ಪೆರ್ಮುಡ

ಕರ್ನಾಟಕದ ಬೃಹತ್ ಕೋಟೆಗಳಲ್ಲಿ ಒಂದಾಗಿರುವ ಬೀದರ್ ಕೋಟೆಯು ಇಂದಿಗೂ ಸಾಕಷ್ಟು ಸುಸ್ಥಿಿತಿಯಲ್ಲಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿಿದೆ. ಶತಮಾನಗಳು ಉರುಳಿದರೂ, ಕರ್ನಾಟಕದ ಹಂಪೆ ಮೊದಲಾದ ಕೋಟೆಗಳಿಗೆ ಹೋಲಿಸಿದರೆ, ಬೀದರ್ ಕೋಟೆ ವೈರಿಗಳ ಕೈಗೆ ಸಿಕ್ಕು ನಾಶವಾಗದೇ ಉಳಿದಿರುವುದು ವಿಶೇಷ.

ಬೀದರ್ ಪಟ್ಟಣವನ್ನು ಕೋಟೆಗಳ ನಗರವೆಂದೇ ಕರೆಯಲಾಗುತ್ತದೆ. ಇಲ್ಲಿನ ಕೋಟೆಯನ್ನು ಬಹುಮನಿ ಸಂಸ್ಥಾಾನದ ಬಹ್ಮನ್ ಅಲಾ-ಉದ್-ದಿನ್ 1424 ರಲ್ಲಿ ನಿರ್ಮಿಸಿದನು. ಬೀದರ್ ಕೋಟೆಯ ಒಳಗೆ ಸುಮಾರು 30ಕ್ಕೂ ಹೆಚ್ಚು ಸ್ಮಾಾರಕಗಳಿವೆ. ಬೀದರ್ ಕೋಟೆಯು ಭಾರತದ ಬಹು ದೊಡ್ಡ ಕೋಟೆಗಳಲ್ಲಿ ಒಂದು. ಬಹುಮನಿ ಸುಲ್ತಾಾನರ ರಾಜಧಾನಿಯಾಗಿದ್ದ ಸಂಧರ್ಭದಲ್ಲಿ ನಿರ್ಮಾಣವಾಗಿದ್ದ ಮಸೀದಿಗಳು, ಮಹಲುಗಳು ಅವುಗಳ ಕಟ್ಟಡಗಳ ಶೈಲಿಯಿಂದ ವಿಶ್ವ ವಿಖ್ಯಾಾತಿಯನ್ನು ಪಡೆದಿವೆ.

ಬಹಮನಿ ರಾಜಮನೆತನವು ಧಕ್ಕನ್ ಪ್ರಸ್ತಭೂಮಿಯಲ್ಲಿ ಆಳ್ವಿಿಕೆ ನಡೆಸಿದ್ದ ಸಮಯದಲ್ಲಿ ಪರ್ಷಿಯನ್ ವಾಸ್ತುಶಿಲ್ಪದ ದಟ್ಟವಾದ ಪ್ರಭಾವವನ್ನು ಬೀದರಿನ ಸುತ್ತಮುತ್ತಲ ಸ್ಮಾಾರಕಗಳಲ್ಲಿ ಕಾಣಬಹುದು. ಈ ರಾಜಮನೆತನದ ಆಳ್ವಿಿಕೆಯ ಕಾಲದಲ್ಲಿ ಬೀದರ್ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ, ನಗರದಾಚೆ ಸಹ ಕೋಟೆ, ಕೊತ್ತಲ, ಮಸೀದಿ ಮತ್ತು ಬುರುಜುಗಳನ್ನು ನಿರ್ಮಿಸಲಾಯಿತು. ಬೀದರ್ ನಗರವು ತನ್ನ ಜಲ ನಿರ್ವಹಣೆಗಾಗಿ ಪ್ರಸಿದ್ಧಿಿಯನ್ನು ಪಡೆದಿತ್ತು.

ಧಕ್ಕನ್ ಪ್ರಸ್ತಭೂಮಿಯ ಒಂದು ಅಂಚಿನಲ್ಲಿ ಸ್ಥಾಾಪಿತವಾಗಿರುವ ಬೀದರ್ ಕೋಟೆಯನ್ನು ಚೌಕಾಕಾರದಲ್ಲಿ ಕಟ್ಟಲಾಗಿದೆ. ಈ ಕೋಟೆಯ 1.21 ಕಿ.ಮೀ ಉದ್ದ ಮತ್ತು 0.80 ಕಿ.ಮೀ ಅಗಲವಿದೆ. ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ.

ಗುಂಬಜ್ ದರ್ವಾಜಾ
ಬೀದರ್ ಕೋಟೆಯು ಏಳು ದ್ವಾಾರಗಳನ್ನು ಹೊಂದಿದ್ದು, ‘ಗುಂಬದ್ ದರ್ವಾಜ’ ಎಂದು ಕರೆಯಲ್ಪಡುವ ಮುಖ್ಯ ದ್ವಾಾರವನ್ನು ಪರ್ಷಿಯನ್ ವಾಸ್ತುಶಿಲ್ಪದ ಮಾದರಿಯನ್ನು ಅನುಸರಿಸಿ ನಿರ್ಮಿಸಲಾಗಿದೆ. ಬೀದರ್ ಕೋಟೆಯ ಒಳ ಬರಲು ಬಳಸುವ ಮತ್ತೊೊಂದು ದ್ವಾಾರ ಶೇಜರ್ ದರ್ವಾಜಾ. ಈ ದ್ವಾಾರದ ಮೇಲೆ ಎರಡು ಹುಲಿಗಳನ್ನು ಕೆತ್ತಲಾಗಿದೆ. ಶಿಯಾ ಸಮುದಾಯದ ನಂಬಿಕೆಯ ಪ್ರಕಾರ ಹುಲಿಯು ವಿಜಯದ ಸಂಕೇತವಾಗಿದೆ. ಈ ಹುಲಿಗಳ ಲಾಂಛನವು ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿತ್ತು. ಈ ಕೋಟೆಯಲ್ಲಿರುವ ಮೂರನೇ ದ್ವಾಾರ ದಕ್ಷಿಣದಲ್ಲಿರುವ ಫತೇಹ್ ದರ್ವಾಜವು ಅಷ್ಟಾಾಕಾರದ ಸ್ಥಂಭಗಳು ಮತ್ತು ಕೀಲು ಸೇತುವೆಯನ್ನು ಹೊಂದಿದೆ. ಪೂರ್ವದಲ್ಲಿ ತಾಲ್ಘಾಾಟ್ ದರ್ವಾಜ, ಡೆಲ್ಲಿ ದರ್ವಾಜ ಮತ್ತು ಮಾಂಡು ದರ್ವಾಜ ಗಳಿವೆ. ಈ ಕೋಟೆಯ ಪ್ರವೇಶದ್ವಾಾರದಲ್ಲಿ ಬೃಹತ್ ತೋಪೊಂದನ್ನು ನಿಲ್ಲಿಸಲಾಗಿದೆ

ಹಿಂದೆ ಬೀದರ್ ಜಿಲ್ಲೆೆಯು ಬಿಜಾಪುರದ ಬಹಮನಿ ಸುಲ್ತಾಾನರ ಆಳ್ವಿಿಕೆಯಲ್ಲಿತ್ತು. ಈ ಸಂದರ್ಭದಲ್ಲಿ ಇವರ ಸಾಮ್ರಾಾಜ್ಯದಲ್ಲಿ ಬೀದರ್, ಗೋಲ್ಕೊೊಂಡಾ, ಬಿಜಾಪುರ, ಗುಲ್ಬರ್ಗ ಮತ್ತು ಬಿರಾರ್ ಸಂಸ್ಥಾಾನಗಳೂ ಸೇರಿಕೊಂಡಿದ್ದವು. ಪ್ರಸ್ತುತ ಬೀದರ್ ಕೋಟೆಯ ಇತಿಹಾಸವನ್ನು ಅಲ್-ಆ-ಉದ್-ದಿನ್-ಬಹಮನ್-ಶಾನ ಮೂಲಕ ತಿಳಿಯಬಹುದಾಗಿದೆ. ಈತ ಬಹಮನಿ ಸುಲ್ತಾಾನರ ಮೊದಲ ರಾಜನಾಗಿದ್ದನು ಹಾಗೂ ತನ್ನ ರಾಜಧಾನಿಯನ್ನು ಗುಲ್ಬರ್ಗ (ಕಲಬುರಗಿ) ದಿಂದ ಬೀದರ್‌ಗೆ ಸ್ಥಳಾಂತರಿಸಿದ್ದನು.

ವಿಶಾಲವಾದ ಬೀದರ್ ಕೋಟೆಯಲ್ಲಿನ ಹಲವು ರಚನೆಗಳು ಪ್ರವಾಸಿ ಆಕರ್ಷಣೆಗಳಾಗಿ ಅಂದಿನ ಕಾಲದ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಧರ್ಮಾಚರಣೆಯ ಕುರಿತು ವಿವರಿಸುತ್ತವೆ. ತಖ್‌ತ್‌ ಮಹಲ್ – ಬೀದರ್ ಕೋಟೆಯ ಒಂದು ಭಾಗವಾಗಿದೆ ಈ ಅರಮನೆ. ರಂಗೀನ್ ಮಹಲ್ – ಕೋಟೆಯ ಮತ್ತೊೊಂದು ಭಾಗವಾಗಿರುವ ಈ ಅರಮನೆಯಲ್ಲಿ ಬಗೆ ಬಗೆಯ ವರ್ಣಗಳು ಬಳಸಲ್ಪಟ್ಟಿಿರುವುದನ್ನು ಕಾಣಬಹುದಾಗಿದೆ. ಈ ಅರಮನೆಯು ಅಲಿ ಬರೀದ್ ಶಾ ನಿಂದ ನಿರ್ಮಾಣಗೊಂಡಿದೆ. ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಮಾಾರಕಗಳಲ್ಲಿ ರಾಜ್ಯದಲ್ಲೆೆ ರಂಗೀನ್ ಮಹಲ್ ಮಂಚೂಣಿಯಲ್ಲಿದೆ. ಬೀದರ್ ಕೋಟೆಯ ಪ್ರಾಾಂಗಣದಲ್ಲಿರುವ ಗಗನ್ ಮಹಲ್ ಮತ್ತೊೊಂದು ಸುಂದರ ರಚನೆ. ಎರಡು ಸಭಾಂಗಣಗಳನ್ನು ಇಲ್ಲಿ ಕಾಣಬಹು.

ಬಣ್ಣ ಬಣ್ಣದ ಗೋಡೆಗಳಿಂದ ನಿರ್ಮಿಸಿದ ಕಟ್ಟಡವಾದ ರಂಗೀನ್ ಮಹಲ್, ಮಹಾರಾಜನು ತನ್ನ ಟರ್ಕಿಯ ಮಹಾರಾಣಿಗೋಸ್ಕರ ನಿರ್ಮಿಸಿದ ಕಟ್ಟಡವಾದ ತರ್ಕಶ್ ಮಹಲ್, ಬಹುಮನಿ ಸುಲ್ತಾಾನರು ಮೊದಲಾಗಿ ಕಟ್ಟಿಿದ ಕಟ್ಟಡವನ್ನು ಬರಿದಷಾ ಸುಲ್ತಾಾನರು ಅಧಿಕಾರಕ್ಕೆೆ ಬಂದ ನಂತರ ಇನ್ನಷ್ಟು ಅಭಿವೃದ್ಧಿಿ ಪಡಿಸಿದ ಕಟ್ಟಡವಾದ ಗಗನ್ ಮಹಲ್, ಬಹುಮನಿ ಸುಲ್ತಾಾನರ ಮಹಾರಾಜನು ವಾಸವಾಗುತ್ತಿಿದ್ದ ಕೊಠಡಿ ಎಂದು ಗುರುತಿಸಲಾದ ತಖ್‌ತ್‌ ಮಹಲ್.

ಮೊಹಮ್ಮದ್ ಗವಾನ್ ವಿಶ್ವವಿದ್ಯಾಾಲಯ
ಖ್ವಾಾಜಾ ಮೊಹಮ್ಮದ್ ಗವಾನ್‌ರು ನಿರ್ಮಿಸಿದ ಆಗಿನ ಕಾಲದ ವಿಶ್ವ ವಿದ್ಯಾಾಲಯವಾದ ಮದರಸಾ ಆಫ್ ಮೊಹಮ್ಮದ್ ಗವಾನ್ ಇಲ್ಲಿ ವಿದ್ಯಾಾರ್ಥಿಗಳಿಗೆ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಬೋಧನೆ ಮಾಡಲಾಗುತ್ತಿಿತ್ತು. ಇಲ್ಲಿ ಉಚಿತವಾಗಿ ಶಿಕ್ಷಣವನ್ನು ಮತ್ತು ವಸತಿ ಸೌಲಭ್ಯವನ್ನು ಕೂಡ ಕಲ್ಪಿಿಸಲಾಗಿತ್ತು. ಬೀದರ್ ಪಟ್ಟಣದ ಮಧ್ಯ ಭಾಗದಲ್ಲಿ ನಿರ್ಮಿಸಲಾದ ಉದ್ದನೆಯ ಚತುರ್ಮುಖದ ಕಲ್ಲಿನ ಗೋಪುರವೊಂದಿದ್ದು, ಇದನ್ನು ಚೌಬಾರಾ ಎನ್ನಲಾಗುತ್ತದೆ. ಇದರ ನಾಲ್ಕೂ ದಿಕ್ಕಿಿಗೆ ಗಡಿಯಾರವನ್ನು ಅಳವಡಿಸಲಾಗಿದೆ. 16 ಕಂಬಗಳನ್ನು ಹೊಂದಿದ ಸೋಲಾ ಖಂಬಾ ಮಸ್ಜಿಿದ್ ಇವೇ ಮೊದಲಾದ ವಿವಿಧ ಸ್ಮಾಾರಕಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಕೋಟೆಯ ಶಿಥಿಲಗೊಂಡಿದ್ದ ಲೋಹದ ಬಾಗಿಲನ್ನು ದುರಸ್ತಿಿ ಮಾಡಿ ಶಾರ್ಜಾ ದರ್ವಾಜಾಕ್ಕೆೆ ಅಳವಡಿಸುವ ಮೂಲಕ ಸ್ಮಾಾರಕದ ಮೆರುಗನ್ನು ಹೆಚ್ಚಿಿಸಿದೆ. ಸಾಗುವಾನಿ ಮರ, ಸೀಸ, ಲೋಹದ ಪಟ್ಟಿಿಗಳನ್ನು ಬಳಸಿ 20 ಅಡಿ ಎತ್ತರದ ದ್ವಾಾರವನ್ನು ನಿರ್ಮಿಸಲಾಗಿದ್ದು ದ್ವಾಾರದ ಹಿಂಬದಿಯ ಚಿಲಕ ಹಾಗೂ ಸರಪಳಿಗಳು ಇಂದಿಗೂ ಬಲಿಷ್ಠವಾಗಿವೆ. 600 ವರ್ಷಗಳ ಹಿಂದಿನ ಈ ಬಾಗಿಲು ಸುಮಾರು 600 ಟನ್ ಭಾರವಿದ್ದು, ತುಕ್ಕು ಹಿಡಿದ ಜಾಗವನ್ನು ಸೂಕ್ಷ್ಮವಾಗಿ ಜೋಡಿಸಲಾಗಿದೆ. ಆದಿಲ್ ಶಾಹಿ ಸೇನಾಧಿಪತಿ ಸಿದ್ದಿ ಮರ್ಜಾನಾ ಆಡಳಿತ ನಡೆಸುತ್ತಿಿದ್ದಾಾಗ ಔರಂಗಜೇಬ್ ತನ್ನ ಬಲಿಷ್ಠ ಸೈನ್ಯದೊಂದಿಗೆ ನಲವತ್ತು ದಿನಗಳ ಕಾಲ ಬೀದರ್ ಕೋಟೆಗೆ ಮುತ್ತಿಿಗೆ ಹಾಕಿದರೂ ಸೈನಿಕರಿಗೆ ಕೋಟೆಯ ಬಾಗಿಲನ್ನು ಮುರಿಯಲು ಸಾಧ್ಯವಾಗಿರಲಿಲ್ಲ ಎಂದು ಇತಿಹಾಸ ತಜ್ಞರು ಹೇಳುತ್ತಾಾರೆ. ಕಾಲಾನಂತರದಲ್ಲಿ ನಿಜಾಮರು ಬೀದರ್ ಕೋಟೆಯನ್ನು ತಮ್ಮ ಸ್ವಾಾಧೀನಕ್ಕೆೆ ತೆಗೆದುಕೊಂಡು ಕೆಲವು ಬದಲಾವಣೆಗಳನ್ನು ಮಾಡಿದರು

ಈ ಕೋಟೆ ಹಾಗೂ ಬಹುಮನಿ ಸುಲ್ತಾಾನರಿಗೆ ಸಂಬಂಧಿಸಿದ ಪ್ರಾಾಚೀನ ವಸ್ತುಗಳನ್ನು ಸಂಗ್ರಹಿಸಿಟ್ಟಿಿರುವ ವಿಭಿನ್ನವಾದ ವಸ್ತುಸಂಗ್ರಹಾಲಯವನ್ನು ಕೋಟೆಯ ಆವರಣದೊಳಗೆ ಇದೆ. ಖೈದಿಗಳನ್ನು ಬಂಧಿಸಿಡಲು ನಿರ್ಮಿಸಲಾಗಿದ್ದ ವಿಶಾಲವಾದ ಹಾಗೂ ಸುಸಜ್ಜಿಿತವಾದ ಕಾರಾಗ್ರಹವೂ ಪ್ರವಾಸಿಗರ ಗಮನವನ್ನು ಸೆಳೆಯುತ್ತಿಿದೆ.

ತಲುಪುವುದು ಹೇಗೆ?
ಬೀದರ್‌ಗೆ ರಸ್ತೆೆ, ರೈಲು ಮತ್ತು ವಾಯು ಸಾರಿಗೆ ವ್ಯವಸ್ಥೆೆಗಳಿದ್ದು, ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 740 ಕಿ.ಮೀ ಗುಲ್ಬರ್ಗದಿಂದ 130 ಕಿ.ಮೀ ದೂರದಲ್ಲಿದೆ. ಕೋಟೆ ಪ್ರವೇಶಿಸಲು ಯಾವುದೆ ಶುಲ್ಕವಿಲ್ಲ. ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆೆ 6 ಗಂಟೆಯಿಂದ ರಾತ್ರಿಿ 9 ಗಂಟೆಯವರೆಗೆ ಕೋಟೆ ಪ್ರವಾಸಿಗರಿಗೆ ತೆರೆದಿರುತ್ತದೆ.

ಪುರಾತನ ನೀರಿನ ಕಾಲುವೆಗಳು
ಬೀದರ್‌ನಲ್ಲಿ ಕಂಡುಬರುವ ಐತಿಹಾಸಿಕ ರಚನೆಗಳಲ್ಲಿ ಕಾರೆಜ್ ನೀರಿನ ಕಾಲುವೆಗಳು ಅಥವಾ ಸುರಂಗಗಳು ಕುತೂಹಲ ಮೂಡಿಸುತ್ತವೆ. 15ನೆಯ ಶತಮಾನದಲ್ಲಿ ಬಹಮನಿ ಸುಲ್ತಾಾನರು ನಿರ್ಮಿಸಿದ ಈ ನೀರಿನ ಕಾಲುವೆಗಳು, ನೆಲದಾಳದಲ್ಲಿ ಸಂಚರಿಸುವ ಜಲವ್ಯೂೆಹ. ಈ ನೀರಿನ ಸುರಂಗಗಳು ನೆಲದಾಳದಲ್ಲಿ ಸಂಚರಿಸುತ್ತಾಾ, ಅಲ್ಲಲ್ಲಿ ಹುದುಗಿರುವ ನೀರಿನ ಬುಗ್ಗೆೆಗಳಿಂದ ನೀರನ್ನು ಬಹುದೂರ ಸಾಗಿಸುತ್ತವೆ. ನಗರದ ಹೊರಭಾಗದಿಂದ ಆರಂಭವಾಗುವ ಈ ಸುರಂಗಗಳು, ಬೀದರ್ ಕೋಟೆಗೆ ನೀರನ್ನು ಸರಬರಾಜು ಮಾಡುತ್ತಿಿದ್ದವು. ಬೀದರಿನಲ್ಲಿ 2 ಕಿಮೀ ಉದ್ದ ಇರುವ ಈ ಜಲಸುರಂಗಗಳಿಗೆ 21 ಷಾಫ್‌ಟ್‌‌ಗಳನ್ನು ನಿರ್ಮಿಸಲಾಗಿದ್ದು, ಈಗ 17 ಮಾತ್ರ ಉಳಿದಿವೆ.