Sunday, 24th November 2024

ಬೆರಗುಗೊಳಿಸುವ ಬಾಲ್ಬೋವ ಉದ್ಯಾನ

ಅಮೆರಿಕದ ಸ್ಯಾನ್‌ಡಿಯೇಗೋ ನಗರದಲ್ಲಿ 1868ರಲ್ಲಿ ಸ್ಥಾಪನೆಗೊಂದ ಈ ಉದ್ಯಾನವನ್ನು ನೋಡುವು ದೆಂದರೆ, ಜ್ಞಾನಕೋಶವನ್ನೇ ಕಣ್ತುಂಬಿಕೊಂಡಂತೆ.

ಕೆಲವು ವರ್ಷಗಳ ಹಿಂದಿನ ಮಾತು. ಅಮೆರಿಕದ ಸ್ಯಾನ್ ಡಿಯೇಗೊ ನಗರಲ್ಲಿ ನೆಲೆಸಿದ್ದ ಮಗನ  ಮನೆಯಲ್ಲಿ ತಂಗಿದ್ದಾಗ, ಅಲ್ಲಿನ ಬಾಲ್ಬೋವ ಪಾರ್ಕ್‌ಗೆ ಹೋಗೋಣವೆಂದಾಗ ಮನದಲ್ಲಿ ಮೂಡಿದ್ದು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಚಿತ್ರಗಳು. ಬೆಂಗಳೂರಿನ ಈ ಪ್ರಸಿದ್ಧ ಪಾರ್ಕ್‌ಗಳನ್ನು ಕಲ್ಪಿಸಿಕೊಂಡು, ಸರಿ ಹೋಗೋಣ ಎಂದು ಎಲ್ಲರೂ ಹೊರಟೆವು. ಆದರೆ ಅಲ್ಲಿ ಹೋಗಿ ನೋಡಿದಾಗ ದೊರೆತ ಅನುಭವವೇ ವಿಭಿನ್ನ, ವಿಶಿಷ್ಟ. ಬಾಲ್ಬೋವ ಪಾರ್ಕ್ ಕೇವಲ ಉದ್ಯಾನವನವಾಗಿರದೆ ಪ್ರಕೃತಿ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ವಿಜ್ಞಾನ, ಇತ್ಯಾದಿಗಳ ಅಪೂರ್ವ ಸಂಗಮವಾಗಿದ್ದು ಬೆರಗುಗೊಳಿಸಿತು.

ಪುಟ್ಟ ಸೇತುವೆಯೊಂದನ್ನು ದಾಟಿ, ಸಾಲು ಮರಗಳ ವಿಶಾಲ ಪಥದಲ್ಲಿ ಸಾಗಿದಂತೆ ಎಡಭಾಗದಲ್ಲಿದ್ದ ಆಕರ್ಷಕ ಭವನ ಗಮನ ಸೆಳೆಯಿತು. ಸ್ಪಾನಿಷ್ ವಾಸ್ತುಶೈಲಿಯ ಈ ಕಟ್ಟಡದ ಮುಂಭಾಗ ಹಾಗು ಗೋಪುರ ನಾನಾ ರೀತಿಯ ಕಲಾಕೃತಿ ಗಳಿಂದ ಅಲಂಕೃತಗೊಂಡಿದ್ದವು. ಮೊದಲು ಇಲ್ಲಿನ ಮುಖ್ಯ ದ್ವಾರದ ಮುಂದೆ ಮ್ಯೂಸಿಯಂ ಆಫ್ ದಿ ಮ್ಯಾನ್ ಎಂಬ ನಾಮಫಲಕವಿತ್ತು. ಈಗ ಇದು ಮ್ಯೂಸಿಯಂ ಆಫ್ ಅಸ್ (ನಮ್ಮ ಮ್ಯೂಸಿಯಂ) ಎಂದು ಮರುನಾಮಕರಣ ಗೊಂಡಿದೆ.

? ಹೌಸ್ ಆಫ್ ಚಾರ್ಮ್

ಸ್ವಲ್ಪ ಮುಂದೆ ನಡೆದಂತೆ ಬಲಗಡೆ ಕಂಡದ್ದು ಹೌಸ್ ಆಫ್ ಚಾರ್ಮ್. ಅನ್ವರ್ಥನಾಮವೆಂಬಂತೆ ಇದು ಲಾವ
ಣ್ಯಮಯವಾಗಿದ್ದು ಕಲಾ ಶಾಲೆಯನ್ನು ಒಳಗೊಂಡಿತ್ತು. ಎಡಗಡೆಗೆ ಸ್ಯಾನ್ ಡಿಯೇಗೊ ಮೂಸಿಯಂ ಆಫ್ ಆರ್ಟ್‌ಸ್‌ ಇತ್ತು. ಮುಂದೆ ನಾನು ನೋಡಿದ್ದು ಟಿಮ್ಕೆನ್ ಮೂಸಿಯಂ ಆಫ್ ಆರ್ಟ್‌ಸ್‌. 1965ರಲ್ಲಿ ಸ್ಥಾಪನೆ ಗೊಂಡ ಈ ಕಲಾಸಂಗ್ರಹಾಲಯವನ್ನು ಅಕ್ಕರೆಯಿಂದ ಲಲಿತ ಕಲೆಗಳ ಕರಂಡಿಕೆ ಎಂದು ಗುರ್ತಿಸುತ್ತಾರೆ. ಇದರ ಸರಳ ವಿನ್ಯಾಸ ಇದನ್ನು ಅನನ್ಯವಾಗಿಸಿದೆ.

ಈ ಸಂಗ್ರಹಾಲಯಕ್ಕೆ ಪ್ರವೇಶ ಉಚಿತ. ಇದರ ಸನಿಹದಲ್ಲಿಯೇ ಇದ್ದ ವಿಶಾಲವಾದ ಲಿಲ್ಲಿ ಪಾಂಡ್ ಕಡೆಗೆ ಮುನ್ನಡೆದೆವು. ದಬ್ಬೆೆಗಳಿಂದ ರಚಿತವಾದ, ವಿನೂತನ ವಿನ್ಯಾಸದ, ಬಟಾನಿಕಲ್ ಬಿಲ್ಡಿಿಂಗ್ ಇಲ್ಲಿನ ಪುಷ್ಕರಿ
ಣಿಯಲ್ಲಿ ಪ್ರತಿಫಲಿಸಿತ್ತು. ಅದೊಂದು ಸುಂದರ ನೋಟ.  1915ರಲ್ಲಿ ನಿರ್ಮಾಣಗೊಂಡ ಸಸ್ಯೋದ್ಯಾನ ಕಟ್ಟಡ ವಿಶ್ವದಲ್ಲಿಯೇ ಈ ಮಾದರಿಯ ಅತಿ ದೊಡ್ಡ ರಚನೆ ಎಂಬ ಅಗ್ಗಳಿಕೆಗೆ ಪಾತ್ರವಾಗಿತ್ತು. ಇದರಲ್ಲಿ ನಾನಾ ಪ್ರಭೇದಗಳ ತಾಳೆ ಗಿಡಗಳನ್ನು ಬೆಳೆಸಿದ್ದರು.

? ಆಸ್ಟ್ರೇಲಿಯದ ಆಲದ ಮರ
ಮುಂದೆ ಹೋದಂತೆ ಎದುರಾದದ್ದು ಮೋರೆಟನ್ ಬೇ ಅಂಜೂರದ ಮರ. ಇದನ್ನು ಆಸ್ಟ್ರೇಲಿಯದ ಆಲ ಎಂದೂ ಕರೆಯುತ್ತಾರೆ. 1915ರ ಪನಾಮ- ಕ್ಯಾಲಿಫೋರ್ನಿಯ ಪ್ರದರ್ಶನ ಸಂದರ್ಭದಲ್ಲಿ ನೆಟ್ಟ ಸಸಿ ಈಗ ಹೆಮ್ಮರವಾಗಿ ಬೆಳೆದು ಬಾಲ್ಬೋೋವ ಉದ್ಯಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ನಂತರ ಭೇಟಿಯಿತ್ತಿದ್ದು ಪಕ್ಕದಲ್ಲಿಯೇ ಇದ್ದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗೆ. ಸಂಗ್ರಹಾಲಯದಿಂದ ಹೊರಬಂದು, ಎದುರಿನಲ್ಲಿಯೇ ಇದ್ದ ಕಸ್ಸಾದೆಲ್ ಪ್ರಾಡೋ ಭವನದ ಅಂದ ಸವಿದೆ. ಸ್ಯಾನ್ ಡಿಯೇಗೊ
ಯೂತ್ ಸಿಂಫೊನಿ ಸೇರಿದಂತೆ ಅನೇಕ ಸಂಸ್ಥೆಗಳು ಈ ಮಹಲಿನಲ್ಲಿವೆ. ಇದರ ಬಳಿಯೇ ಇರುವ ಮತ್ತೊೊಂದು ಮನಮೋಹಕ ಮಹಲ್, ಕಸ್ಸಾ ದೆ ಬಾಲ್ಬೋವ. ಇದು ಅನೇಕ ಸಂಗ್ರಹಾಲುಗ ಸಂಕೀರ್ಣ ವಾಗಿದೆ.

ಇದರ ಬದಿಯಲ್ಲಿದ್ದುದು ಹೌಸ್ ಆಫ್ ಹಾಸ್ಪಿಟಾಲಿಟಿ ಭವನ. ಪ್ರಖ್ಯಾತ ದ ಪ್ರಾಡೋ ಉಪಾಹಾರ ಗೃಹವಿರುವುದು ಈ ಭವನದಲ್ಲಿಯೇ. ಒಂದು ದಿನದಲ್ಲಿ ಇವಿಷ್ಟನ್ನು ಮಾತ್ರ ನೋಡಲು ಸಾಧ್ಯವಾಯಿತು. ಈ ನಡೆದಾಟದುದ್ದಕ್ಕೂ ಎದ್ದು ಕಾಣುತ್ತಿದ್ದದ್ದು 1946ರಲ್ಲಿ ಸೇರ್ಪಡೆಯಾದ ಕ್ಯಾಲಿಫೋರ್ನಿಯ ಟವರ್. ಕಣ್ಸೆಳೆದ ಈ ಸುಂದರ ಗೋಪುರದ ಸಂಪೂರ್ಣ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ನನ್ನ ಆಸೆ ಕಡೆಗೂ ಈಡೇರಲಿಲ್ಲ.

ಅಷ್ಟು ವಿಶಾಲವಾಗಿದೆ, ದೊಡ್ಡದಾಗಿದೆ ಈ ಗೋಪುರ. 1200 ಎಕರೆ ವಿಸ್ತಾರದ ಬಾಲ್ಬೋವ ಉದ್ಯಾನ ದಲ್ಲಿರುವ ಹದಿನಾರಕ್ಕೂ ಹೆಚ್ಚು ಸಂಗ್ರಹಾಲಯಗಳು, ನಾನಾ ಶೈಲಿಯ ಪ್ರದರ್ಶನ ಕಲೆಗಳಿಗೆ ಮೀಸಲಾದ ವೇದಿಕೆಗಳು, ಅನೇಕ ಚೆಲುವಿನ ಉದ್ಯಾನಗಳು, ಮನರಂಜನಾ ಕೇಂದ್ರಗಳು, ಹಾಗು ವಿಖ್ಯಾತ ಮೃಗಾಲಯ ಇವೆಲ್ಲವೂ ಇದೆ. ಇವೆಲ್ಲವನ್ನೂ ವಿವರವಾಗಿ ವೀಕ್ಷಿಸುವುದು ಎಂದರೆ ನಾಲ್ಕಾರು ದಿನಗಳ ವಿಹಾರ.

ಪ್ರತಿಯೊಂದನ್ನೂ ನಾಲ್ಕಾರು ಗಂಟೆಗಳ ಕಾಲ ನೋಡುತ್ತಾ ಹೋಗಬಹುದು, ನೋಡಿ ನೋಡಿ ಆಯಾಸ  ಎನಿಸಿದರೆ, ಇಲ್ಲೇ ವಿರಮಿಸಬಹುದು. ಇಲ್ಲಿ ಹಲವು ಗಿಫ್‌ಟ್‌ ಶಾಪ್‌ಗಳು, ರೆಸ್ಟಾರೆಂಟ್‌ಗಳೂ ಇವೆ.
ಜಗತ್ಪ್ರಸಿದ್ಧ ಮೃಗಾಲಯ ಈ ಪಾರ್ಕ್‌ನ ವ್ಯಾಪ್ತಿಯಲ್ಲಿರುವ ಸ್ಯಾನ್ ಡಿಯೇಗೋ ಮೃಗಾಲಯವು ವಿಶ್ವಪ್ರಸಿದ್ಧ. ಪ್ರತಿ ವರ್ಷ ಸುಮಾರು ನಲ್ವತ್ತು ಲಕ್ಷ ಜನರು ಈ ಮೃಗಾಲಯಕ್ಕೆೆ ಭೇಟಿ ನೀಡುತ್ತಾರೆ.

ಅಮೆರಿಕದಲ್ಲಿರುವ ಮೃಗಾಲಯಗಳ ಪೈಕಿ ಅತಿ ಹೆಚ್ಚು ಜನ ಭೇಟಿ ನೀಡುವ ಮೃಗಾಲಯವಿದು. ಇದನ್ನು ನಡೆಸುವ ಸ್ಯಾನ್ ಡಿಯೇಗೊ ಜೂ ಗ್ಲೋಬಲ್ ಒಂದು ಸಂಸ್ಥೆ ಎನಿಸಿದ್ದು, ಇದಕ್ಕೆ 250000 ಸದಸ್ಯರಿದ್ದಾರೆ. ಜತೆಗೆ 130000 ಮಕ್ಕಳು ಸದಸ್ಯತ್ವ ಪಡೆದಿದ್ದಾರೆ. ಅಪರೂಪದ ಪ್ರಾಣಿ ಎನಿಸಿರುವ ಜಯಂಟ್ ಪಾಂಡಾದ ಸಂತಾನೋತ್ಪತ್ತಿ ಈ ಮೃಗಾಲಯದಲ್ಲಿ ನಡೆದದ್ದು ಒಂದು ಸಾಧನೆ. 1915ರಲ್ಲಿ ಆರಂಭಗೊಂಡ ಈ
ಮೃಗಾಲಯವು, ಹಲವು ಪ್ರಾಣಿಗಳನ್ನು ತಮ್ಮ ಮೂಲ ಪ್ರಾಕೃತಿಕ ವಾಸಸ್ಥಾನವನ್ನು ಹೋಲುವ ಜಾಗದಲ್ಲಿ ಇರಲು ಬಿಟ್ಟಿದೆ. ಪಾಂಡಾಗಳಿಗೆ ಅಗತ್ಯವಿರುವ ನಲವತ್ತು ಬಿದಿರು ಪ್ರಬೇಧ, ಕೊಆಲಗಳ ಆಹಾರವಾಗಿರುವ 18 ಪ್ರಬೇಧದ ನೀಲಗಿರಿ ಮರಗಳನ್ನು ಇಲ್ಲಿ ಬೆಳೆಸಲಾಗಿದೆ. ಈ ಮೃಗಾಲಯವು ಹಲವು ಪ್ರಶಸ್ತಿಗೆ ಭಾಜನ ವಾಗಿದೆ.