ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು ಪಾಂಡವಪುರ ಸನಿಹದ ಕಲ್ಲಹಳ್ಳಿಿಯಲ್ಲಿ. ಹೇಮಾವತಿ ನದಿ ದಂಡೆಯಲ್ಲಿರುವ ಕಲ್ಲಹಳ್ಳಿಿ ಎಂಬ ಚಿಕ್ಕ ಊರಿನಲ್ಲಿದೆ ವಿಶಿಷ್ಟವಾದ ಭೂವರಾಹಸ್ವಾಾಮಿ ದೇವಾಲಯ. ಇಲ್ಲಿ 18 ಅಡಿಗಳ ಎತ್ತರದ ವಿಷ್ಣುವಿನ ವರಾಹಾವತಾರದ ವಿಗ್ರಹ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟಿಿದೆ. ಇಷ್ಟು ದೊಡ್ಡ ಗಾತ್ರದ ದೇವತಾ ಮೂರ್ತಿಗಳು ವಿರಳ ಎಂದೆನ್ನಬಹುದು. ಕುಳಿತಿರುವ ಭಂಗಿಯಲ್ಲಿರುವ ವರಾಹಸ್ವಾಾಮಿಯ ಎಡತೊಡೆಯ ಮೇಲೆ ಮೂರುವರೆ ಎತ್ತರದ ಭೂದೇವಿಯ ಶಿಲ್ಪ ಆಸೀನವಾಗಿದೆ. . ಮೈಸೂರಿನಿಂದ 35 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆೆ ಕೂಡ ಇದೆ.