Saturday, 23rd November 2024

ಕೋಟೆ ಕೊತ್ತಲದ ತಾಣ ಗಡಾಯಿಕಲ್ಲು ಎಂಬ ಹೆಬ್ಬಂಡೆ

* ಚೈತ್ರಾ, ಪುತ್ತೂರು

 ಕರ್ನಾಟಕದ ಪ್ರವಾಸಿ ನಕ್ಷೆೆಯಲ್ಲಿದ್ದರೂ, ಜನರ ಗಮನವನ್ನು ಅಷ್ಟಾಾಗಿ ಸೆಳೆಯದೇ ಇರುವ ಸುಂದರ ಸ್ಥಳವೇ ಗಡಾಯಿಕಲ್ಲು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರ ಇರುವ ಈ ತಾಣದಲ್ಲಿ ಕೋಟೆ, ಕಾಡು, ಐತಿಹಾಸಿಕ ರಚನೆ, ಪಶ್ಚಿಿಮ ಘಟ್ಟಗಳ ಸುಂದರ ನೋಟ, ತಂಗಾಳಿ ಎಲ್ಲವೂ ಲಭ್ಯ.

ಅದೊಂದು ಮರೆಯಲಾಗದ ದಿನ. ಆ ದಿನ ಮುಂಜಾನೆ ಬೇಗನೆ ಎದ್ದು ಪ್ರವಾಸಕ್ಕೆೆ ತೆರಳುವುದು ಎಂದಾಗ ಎನೋ ಖುಷಿ. ಐದುಗಂಟೆಯ ಬೆಳಗಿನ ಜಾವ. ಸುತ್ತಲು ಕತ್ತಲಿನ ವಾತವರಣ. ಹಕ್ಕಿಿಗಳ ಚಿಲಿಪಿಲಿ ಆಗತಾನೆ ಆರಂಭವಾಗಿತ್ತು. ಮೈಕೊರೆಯುವ ಚಳಿ. ಅದೇನೂ ಆದರೂ ಸಮಯ ಪಾಲನೆಯಿಂದ ಶಿಕ್ಷಕರು ಹೇಳಿದ ಮಾತಿಗೆ ಗೌರವಕೊಟ್ಟು ಕಾಲೇಜಿಗೆ ಬೇಗನೆ ಬಂದು ಬಿಟ್ಟೆೆವು. ಎನೋ ಸಂತೋಷ , ಗಲಿ-ಬಿಲಿ, ನೂಕು -ನುಗ್ಗಲು ಬಸ್ಸಿಿನ ಸೀಟಿಗಾಗಿ, ಆರಂಭವಾಗಿಯೇ ಬಿಟ್ಟಿಿತು. ನಮ್ಮ ಪ್ರವಾಸದ ಪ್ರಯಾಣ ಗಡಾಯಿಕಲ್ಲಿಗೆ. ಸಂತೋಷ ಮುಗಿಲು ಮುಟ್ಟಿಿತು. ಮುಂಜಾನೆಯ ಪ್ರಯಾಣ. ನಿಧಾನವಾಗಿ ಭಕ್ತಿಿಗೀತೆಗಳ ಹಾಡಿನ ಜೊತೆಗೆ ಅಕ್ಕ ಪಕ್ಕದ ನಿಸರ್ಗದ ಚೆಲುವು ಸವಿಯುತ್ತ ಪ್ರಯಾಣ ಸಾಗತೊಡಗಿತು. ಹುಡುಗರ ತುಂಟ ಮಾತುಗಳು ಆಗಾಗ ಕಚಗುಳಿ ಇಡುತ್ತಿಿದ್ದವು. ಅಂದು ನಮ್ಮ ಶಿಕ್ಷಕರು ಕೂಡ ನಮ್ಮ ಗೆಳೆಯರಾಗಿ ಬಿಟ್ಟರು. ಸಾಗುತ್ತ ಹೋದಂತೆ ಹಸಿರು ಕಾಡಿನ ಮಧ್ಯೆೆ ನಮ್ಮ ಬಸ್ಸು ಪಯಣಿಸಿತು.

ಸ್ವಲ್ಪ ದೂರದಲ್ಲಿ ನಾವು ತಲುಪಬೇಕಾದ ಸ್ಧಳ ಕಾಣಿಸಿತ್ತು. ನಮ್ಮಲ್ಲಿ ಇದನ್ನು ನೋಡುವ ತುಡಿತ ಇನ್ನೂ ಹೆಚ್ಚಾಾಯಿತು. ನೆಲದಿಂದ ಮುಗಿಲಿನ ತನಕ ಮೇಲೆದ್ದಂತೆ ಕಾಣುತ್ತಿಿರುವ ಬೃಹತ್ ಬಂಡೆ ತನ್ನ ನಿಗೂಢ ನಿಲುವಿನಿಂದ ನಿಬ್ಬೆೆರಗಾಗಿಸಿತು. ಕೆಳಗಿನ ಕಾಡಿನ ಭಾಗದಿಂದ, ಒಮ್ಮೆೆಗೇ ನೇರವಾಗಿ ಆಗಸದತ್ತ ಮೇಲೆದ್ದಿರುವ ಕಪ್ಪುು ಬಂಡೆಯ ಎತ್ತರ ಅಚ್ಚರಿ ತಂದಿತು. ಈ ಜಗತ್ತಿಿನಲ್ಲಿ ಎಂತೆಂತಹ ಅದ್ಭುತ ತಾಣಗಳಿವೆ ಎಂಬ ವಿಸ್ಮಯ ಸಹ ಇದನ್ನು ಕಂಡಾಗ ಮನದಲ್ಲಿ ಮೂಡಿತು. ನಾವು ಚಾರಣ ಮಾಡಬೇಕಾದ ಸ್ಥಳ ಬೆಳ್ತಂಗಡಿಯ ತಾಲೂಕಿನ ಹಡಾಯಿಕಲ್ಲು. ಇದನ್ನು ಜಮಾಲಾಬಾದ್ ಮತ್ತು ನರಸಿಂಹಘಡ ಎಂದೂ ಕರೆಯುವುದುಂಟು.

ಸುತ್ತಲು ಹಚ್ಚ ಹಸಿರಾಗಿರುವ ಬೆಟ್ಟ ಗುಡ್ಡಗಳು, ಎತ್ತರಕ್ಕೆೆ ನಿಂತಿರುವ ಮರಗಳು, ದೂರದಲ್ಲಿ ವಿಸ್ತಾಾರವಾದ ಪಶ್ಚಿಿಮಘಟ್ಟಗಳ ಪರ್ವತ ಶ್ರೇಣಿ. ಅವುಗಳ ನಡುವೆ ಎದ್ದು ನಿಂತಿರುವ ಗಡಾಯಿಕಲ್ಲು. ಬೆಳಗಿನ ಬಿಸಿಲಿನಲ್ಲಿ ಇದನ್ನು ನೋಡುವುದೇ ಕಣ್ಣಿಿಗೊಂದು ಹಬ್ಬ. ಬೆಟ್ಟದ ಕಡೆ ಕಣ್ಣು ಹಾಯಿಸಿದಾಗ ಆಗಾಧವಾಗಿರುವ ಕಲ್ಲು ಬಂಡೆಗಳಿಂದ ಈಡೀ ಬೆಟ್ಟವೆ ಕಂಗೋಳಿಸುತ್ತಿಿತ್ತು. ಮೈ ರೋಮಾಂಚಗೊಂಡಿತು. ಗಡಾಯಿಕಲ್ಲನ್ನು ಹತ್ತುವ ಕಾತುರ ಮತ್ತಷ್ಟು ಹೆಚ್ಚಾಾಯಿತು.

ನಮ್ಮ ಪ್ರಯಾಣವನ್ನು ಬೆಟ್ಟದಕಡೆಗೆ ಆರಂಭಿಸಿಯೇ ಬಿಟ್ಟೆೆವು. ಆರಂಭದಲ್ಲಿ ತುಂಬಾ ಜೋಶಿನಿಂದ ಕಲ್ಲು -ಬಂಡೆಗಳನ್ನು ತುಳೀಯುತ್ತಾಾ, ಬೇಗ ಬೇಗನೆ ಹೆಜ್ಜೆೆಯನ್ನು ಹಾಕುತ್ತಾಾ, ಬೆಟ್ಟದ ಕಡೆ ಸಾಗಿದ್ದೆೆವು. ಸ್ನೇಹಿತರ ಸಂಕೋಲೆ ಬಹಳಷ್ಟು ವಿಸ್ತಾಾರವಾಗಿಸಿಕೊಂಡಿದ್ದೆೆವು. ನಾವೆಲ್ಲರು ಬೆಟ್ಟವನ್ನು ಹತ್ತುವಾಗ ಹಾಡುತ್ತಾಾ, ಚಪ್ಪಾಾಳೆ ತಟ್ಟುತ್ತಾಾ ಖುಷಿಯಿಂದಲೆ ಮುಂದೆ ಸಾಗಿದೆವು . ಗಡಾಯಿಕಲ್ಲಿನ ಪ್ರವೇಶದ ಆರಂಭದಲ್ಲಿ ಸಣ್ಣ ಸಣ್ಣ ಅಂಗಡಿಗಳಿದ್ದವು ಅಲ್ಲಿ ತಿನಿಸುಗಳ ದರ ಗಗನಕ್ಕೇರಿತು ,ದಾರಿ ಮಧ್ಯೇ ವಿಶ್ರಾಾಮಿಸುತ್ತಾಾ ಹಸಿವಾದಾಗ ತಿಂಡಿ ತಿನಿಸುಗಳನ್ನು ತಿನ್ನುತ್ತಾಾ ಮುಂದೆ ಸಾಗಿದೆವು. ವಿದ್ಯಾಾರ್ಥಿಗಳು ಎಲ್ಲರೂ ಮುಂದೆ ನಡೆದೆವು. ಕೆಲವರ ಪೇಚಾಟ ನೋಡುವಾಗ ಅಯ್ಯೋ ಅನಿಸುತ್ತಿಿತ್ತು. ಚಪ್ಪಲಿನೋ, ಷೂನೋ ಧರಿಸಿ ನಡೆಯಲು ಕಷ್ಟಪಡುತ್ತಿಿರುವ ಅವರು ನಮ್ಮೆೆಲ್ಲರ ಹಾಸ್ಯಕ್ಕೆೆ ಆಹಾರವಾದರು. ಆದರೆ ನಾವು ಹಠ ಇಟ್ಟುಕೊಂಡು ಈ ಚಾರಣಕ್ಕೆೆ ಬಂದಿರುವುದು. ಗಡಾಯಿಕಲ್ಲಿನ ತುತ್ತ ತುದಿಯನ್ನು ತಲುಪುಬೇಕು ಎಂಬ ಆಸೆ ನಮ್ಮದು.

ಆರಂಭದಲ್ಲೇ ಕಲ್ಲಿನಿಂದ ಮಾಡಿದ ಬೃಹತ್ ಪ್ರವೇಶದ್ವಾಾರ ಮತ್ತು ಕೋಟೆಯ ಒಂದು ಸುತ್ತು ಕಾಣಿಸಿತು. ಕಲ್ಲಿನ ದ್ವಾಾರದ ನಡುವೆ ಸಾಗಿ, ಮೇಲೇರಲು ಕಾಡುದಾರಿ. ಕೆಲವು ಕಡೆ ಸಣ್ಣಸಣ್ಣ ಮೆಟ್ಟಿಿಲುಗಳು. ವಿದ್ಯಾಾರ್ಥಿಗಳು ವೈವಿಧ್ಯಮಯವಾದ ಬಣ್ಣದ ಉಡುಗೆತೊಡುಗೆಗಳನ್ನು ತೊಟ್ಟು, ತಲೆಯಲ್ಲೊೊಂದು ಟೋಪಿ, ಕೈಯಲೊಂದು ನೀರಿನ ಬಾಟಲಿ, ಬೆನ್ನಿಿನಲೊಂದು ಬ್ಯಾಾಗ್ ಹಾಕಿಕೊಂಡು ಗಢಾಯಿಕಲ್ಲಿನ ತುತ್ತ ತುದಿಯನ್ನು ಹತ್ತಿಿದ್ದೇವು. ನಮ್ಮಲ್ಲಿ ಒಂದೇ ಬಾರಿ ಬೆಟ್ಟ ಹತ್ತಲು ಸಾದ್ಯವಾಗಲಿಲ್ಲ . ಗಟ್ಟಿಿಗರು ಬೆಟ್ಟವನ್ನು ಏರಿದರೆ ನಿಶಕ್ತರು ವಿಶ್ರಾಾಂತಿ ತೆಗೆದುಕೊಂಡು ಕುಳಿತು ಬಿಟ್ಟರು.

ದಾರಿ ಮಧ್ಯೆೆ ಕಡಿದಾದ ಕಲ್ಲುಗಳು , ಕಣಿವೆ, ಪೊದೆ, ಗಿಡ, ಬಳ್ಳಿಿಗಳು ನಮ್ಮನ್ನು ಎದುರಾಗುತ್ತವೆ. ಹಾದಿ ಮಧ್ಯೆೆಯಲ್ಲಿ ಲೆಕ್ಕ ಸಿಗದಷ್ಟು ಚಿಕ್ಕಪುಟ್ಟ ತೊರೆಗಳು ಕಾಣಸಿಗುತ್ತದೆ. ಸ್ವಲ್ಪ ಮೇಲಕ್ಕೆೆ ಏರಿದಂತೆ, ಕಡಿದಾದ ಬಂಡೆಯ ದಾರಿ; ಆ ದಾರಿಯುದ್ದಕ್ಕೂ ಕಲ್ಲನ್ನು ಕತ್ತರಿಸಿ ಮೆಟ್ಟಿಿಲುಗಳನ್ನು ಮಾಡಿದ್ದರು. ಅದೂ ಒಂದರಡಲ್ಲ, ಸಾವಿರಾರು ಮೆಟ್ಟಿಿಲುಗಳು ಮೇಲೇರಲು ನಮ್ಮನ್ನು ಆಹ್ವಾಾನಿಸಿತು. ನಡು ನಡುವೆ ಬಂಡೆಯ ಮೇಲೂ ಸಾಗಬೇಕು; ಒಂದು ಕಡೆ ಕಡಿದಾದ ಬಂಡೆ, ಇನ್ನೊೊಂದು ಕಡೆ, ಕಡಿದಾದ ಆಳವಾದ ಪ್ರಪಾತ. ನಡುವೆ ಮೆಟ್ಟಿಿಲುಗಳ ದಾರಿ. ಕಪ್ಪನೆಯ ಬಂಡೆಯ ನಡುವಿನ ಆ ದಾರಿಯ ಗುಂಟ ಸಾಗುವ ಅನುಭವವೇ ಅನನ್ಯ. ಅಲ್ಲಲ್ಲಿ ಮರಗಿಡಗಳು, ಕುರುಚಲು ಕಾಡು ಸಿಗುತ್ತಿಿತ್ತು. ಒಮ್ಮೊೊಮ್ಮೆೆ ಬುರುಜು ಮತ್ತು ಗಾರೆ ಕಲ್ಲಿನ ಐತಿಹಾಸಿಕ ಪುಟ್ಟ ರಚನೆಗಳೂ ಕಂಡವು.

ಅಂತೂ ಇಂತೂ ನಾವು ಗಡಾಯಿಕಲ್ಲಿನ ತುದಿಯ ಭಾಗಕ್ಕೆೆ ಬಂದೆವು. ಆ ಸಮಯದಲ್ಲಿ ಸೂರ್ಯನು ತಲೆಯ ಮೇಲೆ ಬಂದೆ ಬಿಟ್ಟಿಿದ್ದ. ಆ ಸ್ಥಳವನ್ನು ತಲುಪಿ ಅಲ್ಲಿನ ದೃಶ್ಯವನ್ನು ನೋಡಿದ ಕಣ್ಮನ ತಂಬಿಕೊಂಡೆವು. ಆಯಾಸವೆಲ್ಲವೂ ಕ್ಷಣಮಾತ್ರದಲ್ಲಿ ಕಣ್ಮರೆಯಾಯಿತು. ಇವೆಲ್ಲವನ್ನು ಕಣ್ಣು ತುಂಬಿಕೊಳ್ಳುವುದು ಕಣ್ಣಿಿಗೊಂದು ಹಬ್ಬ . ಅಲ್ಲಿ ಸಣ್ಣ ಪುಟ್ಟ ಕಟ್ಟಡಗಳೂ ಇವೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಕಟ್ಟಿಿದ ಇಟ್ಟಿಿಗೆಯ ಕಟ್ಟಡಗಳು ಅವು – ಸೈನಿಕರು ತಂಗಲು ಮಾಡಿದ ವ್ಯವಸ್ಥೆೆ ಇರಬಹುದು. ನೀರು ತುಂಬಿರುವ ಕಲ್ಲಿನ ಬಾವಿಯಂತಹ ರಚನೆ, ಅರ್ಧಂಬರ್ಧ ನಾಶಗೊಂಡಿರುವ ಇಟ್ಟಿಿಗೆಯಿಂದ ಮಾಡಿದ ಬುರುಜಿನ ಗೋಡೆಗಳು ಎಲ್ಲವೂ ಮನದಲ್ಲಿ ಕುತೂಹಲ ಮೂಡಿಸಿದವು.

ಹಿಂದೆ ಇದ್ದ ಕೋಟೆಯನ್ನು ಟಿಪ್ಪುುಸುಲ್ತಾಾನನು ಅಭಿವೃದ್ಧಿಿಪಡಿಸಿದನು ಎನ್ನುತ್ತದೆ ಸ್ಥಳದ ಇತಿಹಾಸ. ಗಡಾಯಿ ಕಲ್ಲಿನ ತುದಿಯಲ್ಲಿ ನಿಂತು ಪೂರ್ವಕ್ಕೆೆ ದೃಷ್ಟಿಿ ಹಾಯಿಸಿದರೆ ಕುದುರೆಮುಖ ಪರ್ವತ ಶ್ರೇಣಿ ಮತ್ತು ಎತ್ತರವಾದ ಪಶ್ಚಿಿಮಘಟ್ಟಗಳ ಪರ್ವತಗಳು ಕಾಣುತ್ತಿಿದ್ದವು. ಆ ಬೃಹತ್ ಪರ್ವತ ಸಾಲು, ಸುಂದರ ನೋಟವನ್ನು ನೀಡದ್ದವು. ಕೆಳಗಿನ ಬಯಲು, ಊರು, ಹೊಳೆ, ಕೆರೆ, ಗದ್ದೆೆಗಳು, ಪುಟಾಣಿ ಮನೆಗಳು, ರಸ್ತೆೆಗಳು ಸುಂದರವಾದ ಭೂದೃಶ್ಯವನ್ನು ನೀಡಿದ್ದವು. ಗಡಾಯಿಕಲ್ಲಿನ ತುದಿಯಲ್ಲಿ ನಿಂತರೆ, ರಪರಪನೆ ತಂಗಾಳಿ ಬೀಸುತ್ತದೆ, ಬಿಸಿಲಿನ ಸೆಕೆಯನ್ನು ಕಡಿಮೆ ಮಾಡುತ್ತದೆ.

ಗಡಾಯಿಕಲ್ಲಿನ ಬಗ್ಗೆೆ ಅಲ್ಲಿನ ಮಾರ್ಗದರ್ಶಕರು ತುಂಬಾ ಚೆನ್ನಾಾಗಿಯೇ ವಿವರಿಸಿದರು. ನಮ್ಮ ಕಾರ್ಯ ಸಾಹಸವೆಂದು ಭಾವಿಸಿದಾಗ ಸೆಲ್ಪಿಿ ತೆಗೆಯುವುದು ಯುವಜನತೆಯ ಹೊಸ ಶೈಲಿಯ. ಆ ಸೆಲ್ಪಿಿಯು ಗಡಾಯಿಕಲ್ಲಿನ ವಿಕ್ಷಣೆಗೆ ಸಾಕ್ಷಿಯಾಯಿತು. ಅಲ್ಲಿನ ಇತಿಹಾಸವನ್ನು ತಿಳಿದುಕೊಂಡು ಹಿಂತಿರುಗಿದೆವು. ಹಿಂದಕ್ಕೆೆ ಬರುವಾಗ ಅದೇ ದಾರಿಯಲ್ಲಿ ಪುನಃ ಪ್ರಕೃತಿ ಸೌಂದರ್ಯವನ್ನು ಅಸ್ವಾಾದಿಸುತ್ತಾಾ ಮರಳಿ ಬಂದೆವು. ಮೆಟ್ಟಿಿಲುಗಳನ್ನು ಇಳಿಯುವಾಗ ನಮ್ಮಲ್ಲಿ ಬಹಳ ಜನರಿಗೆ ಕಾಲುನೋವು ಬಂದದ್ದಂತೂ ನಿಜ. ಒಂದೇ ಸಮನೆ ಕಲ್ಲಿನ ಮೆಟ್ಟಿಿಲುಗಳನ್ನು ಇಳಿದು, ಮೀನಖಂಡಗಳು ಮಾತನಾಡುತ್ತಿಿದ್ದವು.
ಗಡಾಯಿಕಲ್ಲನು ಏರಿದ ಸಂತೋಷ ಇದ್ದರೂ, ಮನಸ್ಸಿಿಗೆ ತುಸು ಬೇಸರ ಕವಿಯಿತು. ಏಕೆಂದರೆ ನಮ್ಮ ಪ್ರವಾಸಕ್ಕೆೆ ಪೂರ್ಣ ವಿರಾಮ ನೀಡುವ ಸಮಯದ ಹತ್ತಿಿರ ಬಂದಿತು. ಒಲ್ಲದ ಮನಸ್ಸಿಿನಿಂದ ಬಸ್ಸು ಹತ್ತಿಿ ಕುಳಿತೆವು. ತಿರುಗಾಡಿ ಸುಸ್ತಾಾಗಿದ್ದರಿಂದ ಕೆಲವರ ಕಣ್ಣಿಿಗೆ ನಿದ್ರಾಾದೇವಿ ಆವರಿಸಿದ್ದಳು.

ಎಲ್ಲಿದೆ : ಧರ್ಮಸ್ಥಳದಿಂದ 17 ಕಿಮೀ, ಮಂಗಳೂರಿನಿಂದ ಸುಮಾರು 65 ಕಿಮೀ ದೂರದಲ್ಲಿದೆ. ಈ ಕೋಟೆಯು ಸಮುದ್ರಮಟ್ಟದಿಂದ 1700 ಅಡಿ ಎತ್ತರದಲ್ಲಿದೆ.