* ಸುಮಾ ಎಸ್ ರಾವ್
ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು ಮತ್ತೊೊಂದೆಡೆ ನಿಸರ್ಗದ ಅಚ್ಚರಿಗಳು. ಚಾರ್ ಧಾಮ್ ಯಾತ್ರೆೆ ಒಂದು ವಿಶಿಷ್ಟ ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. ಈ ಕುರಿತು ಓದಿ, ಕೇಳಿ ತಿಳಿಯುವುದಕ್ಕಿಿಂತಲೂ ಕಣ್ಣಾಾರೆ ಕಂಡು ಅದರ ಸ್ವಾಾದವನ್ನು ಸವಿಯಬೇಕು.
ಗಂಗೋತ್ರಿಿ, ಯಮುನೋತ್ರಿಿ, ಬದರಿ ಮತ್ತು ಕೇದಾರಗಳು ಶಕ್ತಿಿ ಪೀಠಗಳೂ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಈ ನಾಲ್ಕು ಧಾಮಗಳ ಯಾತ್ರೆೆಯನ್ನು ಚಾರ್ ಧಾಮ್ ಯಾತ್ರೆೆ ಎಂದು ಹೋಗಿಬರುವವರು ಅನೇಕರಿದ್ದಾಾರೆ. ಈ ಸ್ಥಳಗಳಲ್ಲಿನ ಹವಾಮಾನ ಮತ್ತು ಭೌಗೋಳಿಕ ಕಾರಣಗಳಿಂದ ನಿಗದಿತ ಸಮಯದಲ್ಲೇ ಚಾರ್‌ಧಾಮ್ ಯಾತ್ರೆೆಗೆ ಹೋಗಬೇಕು. ನಮ್ಮ ಈ ಯಾತ್ರೆೆ ಬೆಂಗಳೂರಿನಿಂದ ಡೆಹ್ರಾಾಡೂನ್‌ಗೆ ಹೊರಟು ಅಲ್ಲಿಂದ ಪ್ರಾಾರಂಭವಾಯಿತು.
ಉತ್ತರಾಖಂಡ್‌ದ ಚಾರ್ ಧಾಮ್ ಯಾತ್ರೆೆ ಕೇವಲ ದೈವಿಕ ಶಕ್ತಿಿ ಹೊಂದಿರುವ ಸ್ಥಳಗಳು ಎಂಬ ಪೂಜ್ಯ ಭಾವನೆಯ ಜತೆ ಪ್ರಕೃತಿಯ ಸೊಬಗನ್ನು ಸವಿಯಲು ಉತ್ತಮ ಸ್ಥಳಗಳಾಗಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ಕೇವಲ ಮಾತು ಮತ್ತು ಬರಹದಿಂದ ವರ್ಣಿಸಲು ಆಗುವುದಿಲ್ಲ. ಭೇಟಿ ನೀಡಿಯೇ ಸವಿಯುವಂತದ್ದು. ಕಣ್ಣಿಿಗೆ ಹಾಯಿಸಿದಷ್ಟು ದೂರಕ್ಕೂ ಕಾಣುವ ಪರ್ವತಗಳು, ಇಡೀ ಮೈಯನ್ನೇ ಮರಗಟ್ಟಿಿಸುವಂತಹ ಕೊರೆಯುವ ಚಳಿ, ನಿತ್ಯ ನಿರಂತರವಾಗಿ ಹರಿಯುವ ನದಿಗಳು ಇವೆಲ್ಲವನ್ನು ಖುದ್ದಾಾಗಿ ಭೇಟಿ ನೀಡಿಯೇ ಕಾಣಬೇಕು.
ಪ್ರಯಾಣದಲ್ಲಿ ಹರಿದ್ವಾಾರದಿಂದ ಪ್ರಾಾರಂಭಾವಗುವ ಚಾರ್‌ಧಾಮ್ ಯಾತ್ರೆೆ ಮುಖ್ಯವಾದ ಶಕ್ತಿಿ ಪೀಠವೆಂದು ಗುರುತಿಸಲ್ಪಟ್ಟಿಿದೆ. ಗಂಗಾ ನದಿಯ ತಟದಲ್ಲಿರುವ ಈ ಸ್ಥಳ, ಹಿಂದೂ ಧರ್ಮದ ಜನತೆಗೆ ಪವಿತ್ರ ಸ್ಥಳವೂ ಹೌದು. ಇಲ್ಲಿ ನೋಡಲು ಅನೇಕ ಸ್ಥಳಗಳಿವೆ. ಮಾನಸ ದೇವಿ, ಮಾಯಾ ದೇವಿ, ಚಂಡಿ ದೇವಿ ಮತ್ತು ದಕ್ಷ ಮಹಾದೇವ ದೇವಾಲಯಗಳು ಜತೆಗೆ ಸಪ್ತ ಋಷಿಗಳ ಆಶ್ರಮ ಮತ್ತು ಸರೋವರಗಳನ್ನು ಕಾಣಬಹುದು. ಇದಾದ ನಂತರವೇ ಹೃಷೀಕೇಶ ಇದನ್ನು ಋಷಿಮುನಿಗಳ ವಾಸಸ್ಥಾಾನ ಎಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶಿವಾಲಿಕ್ ಪರ್ವತಗಳ ಮಧ್ಯೆೆ ಇರುವ ಹೃಷಿಕೇಶ ತನ್ನಲ್ಲಿ ಅನೇಕ ಆಶ್ಚರ್ಯಕರವಾದ ಸಂಗತಿಗಳನ್ನು ಹೊಂದಿದೆ. ಈ ಸ್ಥಳದ ಉಲ್ಲೇಖ ರಾಮಾಯಣದಲ್ಲೂ ಇದೆ. ಇದು ಧ್ಯಾಾನ ಮಾಡಲು ಬಹಳ ಸೂಕ್ತವಾದ ಸ್ಥಳ ನಾವು ಇಲ್ಲಿನ ಯೋಗಾಶ್ರಮಗಳನ್ನು ನೋಡಿ ನಾವೂ ಒಂದಿಷ್ಟು ಯೋಗಾಸನ ಮಾಡಿದೆವು.
ಹೃಷೀಕೇಶದಲ್ಲೇ ನೋಡುವ ಸ್ಥಳಗಳು ಸಾಕಷ್ಟಿಿವೆ. ತ್ರಿಿವೇಣಿ ಘಾಟ್, ಋಷಿ ಕುಂಡ, ಕೈಲಾಶ್ ನಿಕೇತನ, ಶತ್ರುಘ್ನ, ನೀಲಕಂಠ ದೇವಾಲಯಗಳು ನೋಡಲೇಬೇಕಾದ ಸ್ಥಳಗಳು. ಇದರ ಜತೆ ಇಲ್ಲಿನ ಮುಖ್ಯ ಕೇಂದ್ರಬಿಂದು ಲಕ್ಷ್ಮಣ್ ಜೂಲಾ. ಜೂಲಾ ಎಂದರೆ ಹಿಂದಿಯಲ್ಲಿ ಸೇತುವೆ ಎಂದರ್ಥ. 450 ಅಡಿಗಳ ಎತ್ತರದಲ್ಲಿ ಗಂಗಾ ನದಿಗೆ ಕಟ್ಟಿಿರುವ ಈ ಸೇತುವೆ 5 ಕಿಲೋಮೀಟರ್‌ನಷ್ಟಿಿದೆ. ಇದರ ಮೇಲೆ ನಡೆಯುವ ಅನುಭವವೇ ವಿಶೇಷವಾದದ್ದು.
ಯಮುನೋತ್ರಿ
ನಮ್ಮ ಚಾರ್‌ಧಾಮ್ ಯಾತ್ರೆೆ ಕ್ರಮವಾಗಿ ಪ್ರಾಾರಂಭವಾಗಿದ್ದೇ ಇಲ್ಲಿಂದ. ಸಮುದ್ರ ಮಟ್ಟದಿಂದ 3,235 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಓಡಾಡುವುದಿರಲಿ ಉಸಿರಾಡುವದೂ ಆಯಾಸಕಾರವಾಗುತ್ತದೆ. ಹಾಗೆಂದೂ ಚಿಂತೆ ಬೇಡ. ಅಲ್ಲಿ ಆಕ್ಸಿಿಜನ್ ಸಿಲಿಂಡರ್‌ಗಳು ಮಾರಾಟಕ್ಕಿಿರುತ್ತವೆ. ಕುದುರೆ, ಡೋಲಿ ಅಥವಾ ಹೆಲಿಕಾಪ್ಟರ್ ಮೂಲಕವೂ ದೇವಾಲಯ ತಲುಪಬಹುದು. ಇಲ್ಲಿ ಯಮುನೆಯನ್ನು ದೇವತೆಯಾಗಿ ಪೂಜಿಸಲಾಗುವುದು. ಇಲ್ಲಿ ಸೂರ್ಯ ಕುಂಡ, ಹನುಮಾನ್ ಚಟ್ಟಿಿ, ಜಾನಕಿಚಟ್ಟಿಿ ಮತ್ತು ಸಪ್ತಷಿ ಕುಂಡಗಳು ನೋಡಬಹುದಾದ ಸ್ಥಳಗಳು.
ಗಂಗೋತ್ರಿಿ
ಹಿಂದೂಗಳ ಪವಿತ್ರ ಯಾತ್ರಾಾಸ್ಥಳ ಎನ್ನುವ ಗಂಗೋತ್ರಿಿ ಚಾರ್ ಧಾಮ್ ಯಾತ್ರೆೆಯ ಪಟ್ಟಿಿಯಲ್ಲಿ ಎರಡನೇ ಸ್ಥಾಾನದಲ್ಲಿದೆ. ಇಲ್ಲಿಯೇ ಗಂಗೆ ಎಂದು ಹರಿಯುವ ಭಾಗೀರಥಿ ಉದ್ಭವವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಂದ ಹರಿಯಲು ಪ್ರಾಾರಂಭಿಸುವ ಗಂಗೆಯು ದೇವಪ್ರಯಾಗದಲ್ಲಿ ಅಲಕಾನಂದ ನದಿಯನ್ನು ಸೇರುತ್ತಾಾಳೆ. ಸಮುದ್ರ ಮಟ್ಟದಿಂದ 3048 ಮೀಟರ್ ಎತ್ತರದಲ್ಲಿರುವ ಗಂಗೋತ್ರಿಿಯ ಕುರಿತು ಮಹಾಭಾರತದಲ್ಲಿ ಉಲ್ಲೇಖಗಳಿವೆ. ಪಾಂಡವರು ಇದೇ ಸ್ಥಳದಲ್ಲಿ ದೇವ ಯಜ್ಞವನ್ನು ನೆರವೇರಿಸಿದ್ದರು ಎಂಬ ಪ್ರತೀತಿ ಗಂಗೋತ್ರಿಿಗಿದೆ.
ಇಲ್ಲಿ ಸಮೀಪದಲ್ಲೇ ಮತ್ತಷ್ಟು ಪ್ರವಾಸಿ ತಾಣಗಳಿವೆ ಆದರೆ ಚಾರ್‌ಧಾಮ್ ಯಾತ್ರೆೆಯಲ್ಲಿ ಒಂದು ಸ್ಥಳದಿಂದ ಇನ್ನೊೊಂದು ಸ್ಥಳಕ್ಕೆೆ ಭೇಟಿ ನೀಡುವುದು ಅಷ್ಟು ಸುಲಭವಲ್ಲ. ಸ್ವಲ್ಪ ಪ್ರಯಾಸಕರ ಆದರೆ ಅದನ್ನು ಖುಷಿಯಿಂದ ಅನುಭವಿಸುವ ಮನಸ್ಥಿಿತಿಯಿದ್ದರೆ ಯಾತ್ರೆೆ ಸಾರ್ಥಕವಾಗುತ್ತದೆ. ಗಂಗೋತ್ರಿಿಯ ಸಮೀಪದಲ್ಲೇ ಗೌಮುಖ್, ಕೇದಾರ್‌ತಲ್, ಭೈರೋನ್‌ಘಾಟಿ, ನಂದನ್‌ವನ್- ತಪೋವನ್ ಮತ್ತು ಉತ್ತರಕಾಶಿಗಳನ್ನು ನೋಡಿಕೊಂಡು ಬರಬಹುದು.
ಕೇದಾರನಾಥ
3584 ಮೀಟರ್ ಮೇಲಿರುವ ಕೇದಾರನಾಥದ ವರ್ಣನೆ ಕೇವಲ ಬಾಯಿಯಲ್ಲಿ ಹೇಳಿ ಅಥವಾ ಕೈಯಿಂದ ಬರೆದು ತಿಳಿಸುವಂತದ್ದಲ್ಲ. ಕೇದಾರನಾಥ ಮಂದಾಕಿನಿ ನದಿಯ ಉಗಮ ಸ್ಥಾಾನವೆಂಬ ಇತಿಹಾಸವಿದೆ. ಯಾತ್ರಾಾರ್ಥಿಗಳು ಗಂಗೋತ್ರಿಿ ಮತ್ತು
ಯಮುನೋತ್ರಿಿಗಳ ಪವಿತ್ರ ತೀರ್ಥದಲ್ಲಿ ಮಿಂದು ದೇಹ ಮತ್ತು ಆತ್ಮವನ್ನು ಶುದ್ಧವಾಗಿಸಿ ತದನಂತರ ಕೇದಾರನಾಥದಲ್ಲಿ ಈಶ್ವರನ ದರ್ಶನ ಪಡೆಯುತ್ತಾಾರೆ.
ಶಂಕರಾಚಾರ್ಯರ ಸಮಾಧಿ
ಕೇದಾರನಾಥ ದೇವಾಲಯದ ಬಳಿಯಲ್ಲೇ ಆದಿ ಶಂಕರಾಚಾರ್ಯರ ಸಮಾಧಿಯೂ ಕೂಡ ಇದೆ. ದೇಶದಲ್ಲಿ ಅವರು ಸ್ಥಾಾಪಿಸಿರುವ ನಾಲ್ಕು ಶಕ್ತಿಿ ಪೀಠಗಳ ಸತ್ವವನ್ನು ಸಾರುವ ಸಂಕೇತವಾಗಿ ಇಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಾಾಪಿಸಲಾಗಿದೆ.
ಕೇದಾರನಾಥದ ವಿಶೇಷತೆ ಎಂದರೆ ಇಲ್ಲಿರುವ ಕುಂಡಗಳು. ಶಿವಕುಂಡ, ಹಂಸಕುಂಡ ಸೇರಿದಂತೆ ಇಲ್ಲಿ ಅಸಂಖ್ಯ ಕುಂಡಗಳಿವೆ.
ಇವುಗಳ ನೀರನ್ನು ಯಾತ್ರಾಾರ್ಥಿಗಳು ಪವಿತ್ರ ಜಲವೆಂದೂ ತೆಗೆದುಕೊಂಡು ಹೋಗುತ್ತಾಾರೆ. ಕೇದಾರನಾಥದ ಪ್ರಮುಖ ಆಕರ್ಷಣೆ ಎಂದರೆ ಭೈರೋನಾಥ ದೇವಾಲಯ ಇದನ್ನು ಕೇದಾರನಾಥದ ಭಕ್ತ ಭೈರೋನಾಥ್‌ಜೀ ಸ್ಮರಣಿಕೆಯಾಗಿ ನಿರ್ಮಿಸಲಾಗಿದೆ. ಇಲ್ಲಿ ಕೇದಾರನಾಥ ದೇವಾಲಯ ತೆರೆಯುವ ಮತ್ತು ಮುಚ್ಚುವ ಮುನ್ನ ಭೈರೋನಾಥ್‌ಜೀ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಗೌರಿಕುಂಡ, ಗುಪ್ತ ಕಾಶಿ, ತ್ರಿಿಯುಗ್ನಿಿನಾರಾಯಣ, ಕಾಳಿಮಠ, ಚೋಪ್ಟಾಾ ಮುಂತಾದ ಸ್ಥಳಗಳನ್ನು ಕೇದಾರನಾಥಕ್ಕೆೆ ಭೇಟಿ ನೀಡಿದಾಗ ನೋಡಬಹುದು.
ಬದ್ರಿಿನಾಥ
ಚಾರ್ ಧಾಮ್ ಯಾತ್ರೆೆ ಪೂರ್ಣವಾಗುವುದೇ ಬದ್ರಿಿ ನಾರಾಯಣನ ದರ್ಶನ ವಾದ ಬಳಿಕ. 3, 133 ಮೀಟರ್ ಮೇಲಿರುವ ಬದ್ರಿಿನಾಥ ಹಿಂದೂ ಅದರಲ್ಲೂ ವಿಶೇಷವಾಗಿ ವೈಷ್ಣವರ ಪವಿತ್ರ ಯಾತ್ರಾಾಸ್ಥಳವಾಗಿದೆ. ಇದರ ಜತೆಗೆ ಆದಿ ಶಂಕರಾಚಾರ್ಯರು ಸ್ಥಾಾಪಿಸಿದ ಶಕ್ತಿಿ ಪೀಠಗಳಲ್ಲಿ ಬದ್ರಿಿಯೂ ಕೂಡ ಒಂದು. ವಾರಗಟ್ಟಲೆ ಪ್ರಯಾಣ, ಒಮ್ಮೆೆ ಚಳಿ, ಒಮ್ಮೆೆ ಸೆಕೆ, ದಕ್ಷಿಿಣ ಭಾರತದವರಾದ ನಮಗೆ ಅಲ್ಲಿನ ಆಹಾರ ಶೈಲಿ ಒಂದೆರಡು ದಿನಕ್ಕೆೆ ಬೇಸರ ತಂದಿತು. ಆದರೆ ಸ್ಥಳಗಳನ್ನು ತಲುಪಿದಾಗ , ಪಕೃತಿಯನ್ನು ಕಂಡಾಗ ಸುಸ್ತು ನೀರಡಿಕೆಗಳೆಲ್ಲಾಾ ಮಂಗಮಾಯವಾದವು.
ಚಾರ್‌ಧಾಮ್ ಯಾತ್ರೆೆಯಲ್ಲಿ ಮತ್ತೊೊಂದು ವಿಶೇಷವೆಂದರೆ ಪಂಚಪ್ರಯಾಗಗಳು. ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣು ಪ್ರಯಾಗಗಳು.