ಮೋಹನ್.ಎಂ
ಬೇಸಿಗೆ ಬಂತೆಂದರೆ ಗಿರಿಧಾಮಗಳ ಕಡೆ ಹೊರಡುವ ಆಸೆ ಹುಟ್ಟುತ್ತದೆ. ಕೋವಿಡ್ -19 ಕಾರಣದಿಂದ ಎರಡು ವರುಷ ಎಲ್ಲೂ ಪ್ರವಾಸ ಹೋಗದೇ ಇದ್ದುದರಿಂದ, ಬಹುದಿನಗಳ ನಂತರದ ಎರ್ಕಾಡ್ ಪ್ರವಾಸ ಬಹು ಆಪ್ತ ಎನಿಸಿತು!
ಎರ್ಕಾಡು ಗಿರಿಧಾಮವನ್ನು ಬಡವರ ಊಟಿ ಎಂತಲೂ ಕರೆಯುತ್ತಾರೆ. ಇಲ್ಲಿ ಜೀವನ ವೆಚ್ಚ ಕಡಿಮೆ. ಹಿಂದೆ ಸೇಲಂವರೆಗೂ ಕನ್ನಡನಾಡಿನ ಆಡಳಿತಗಾರರ ಅಧಿಕಾರವಿತ್ತು. ಹಾಗಾಗಿ ಸೇಲಂಗೆ ಹೋಗುವ ದಾರಿಯಲಿ , ಹಳ್ಳಿಯಿಂದ ಕೊನೆಗೊಳ್ಳುವ (ಮೂಕಂದನಹಳ್ಳಿ, ಕುರುಬರಹಳ್ಳಿ, ಪೆರಿಯನಹಳ್ಳಿ ಇತ್ಯಾದಿ) ಊರುಗಳ ಹೆಸರಿವೆ, ಗಿರಿಯಿಂದ ಕೊನೆಗೊಳ್ಳುವ ಪಟ್ಟಣಗಳಿವೆ, (ಕೃಷ ಗಿರಿ, ಶೂಲಗಿರಿ) ಊರು ಗಳಿಂದ ಕೊನೆಗೊಳ್ಳುವ ಪ್ರದೇಶಗಳಿವೆ (ಹೊಸೂರು, ತಗಡೂರು). ಹಾಗೆ ನೋಡಿದರೆ, ಎರ್ಕಾಡು ಸ್ಥಳದ ಹೆಸರು ಕೂಡ ಕನ್ನಡದ್ದೇ – ಏರಿ ಅಂದರೆ ಸರೋವರ (ಲೇಕ್), ಕಾಡು ಮರಗಿಡಗಳ ಪ್ರದೇಶ.
ಬೆಟ್ಟದ ತುದಿಯಲ್ಲಿರುವ ಕೆರೆಯೇ ಈ ಹೆಸರಿನ ಮೂಲ. ಕಾಡಿನ ಮಧ್ಯೆ ಎತ್ತರವಾರ ಪ್ರದೇಶ ದಲ್ಲಿರುವ ಈ ಸರೋವರ 4970 ಅಡಿ (1600 ಮೀಟರ್) ಎತ್ತರದಲ್ಲಿದೆ. ಬೆಂಗಳೂರಿ ನಿಂದ ಕಾರಿನಲ್ಲಿ ಹೊರಟ ನಾವು, ಮಧ್ಯಾಹ್ನ 2 ಗಂಟೆಗೆ ಎರ್ಕಾಡು ಸರೋವರದ ಪಕ್ಕದಲ್ಲೆ ಇದ್ದ, ಮೊದಲೇ ಆನ್ ಲೈನ್‌ನಲಿ ಕಾದಿರಿಸಿದ ರೆಸಾರ್ಟ್‌ಗೆ ಬಂದು ಸೇರಿದವು. ಸುಮಾರು ೫ ಗಂಟೆಯ ಪ್ರಯಾಣ. ಹೊಸೂರು, ಕೃಷ ಗಿರಿ, ಧರ್ಮಪುರಿ ದಾಟಿ, ಹೈವೆ ಯಿಂದ ಎಡಕ್ಕೆ ತಿರುಗಿ, ಕಾಡಿನ ದಾರಿಯಲಿ (27 ಕಿ.ಮೀ) ಬೊಮ್ಮಿಡಿ ರಸ್ತೆ, ಕನವೈಪು ದೂರುಗಳನ್ನು ಹಾದು ಎರ್ಕಾಡನ್ನು ಸೇರಿದೆವು. ಇದು ಬೆಂಗಳೂರಿನಿಂದ ಎರ್ಕಾಡುವಿಗೆ ಹತ್ತಿರದ ದಾರಿ. (218 ಕಿ.ಮೀ.)
ಲೇಡೀಸ್ ಸೀಟ್!
ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಪಗೋಡ ವ್ಯೂ ಪಾಯಿಂಟ್‌ಗೆ ಬಂದೆವು. ಈ ಸ್ಥಳದಿಂದ ಕೆಳಗೆ ದೂರದಲಿ ಕಾಣುವ ಸೇಲಂ ಮತ್ತು ಒಮಲೂರು ಪಟ್ಟಣ ಗಳನ್ನು ವೀಕ್ಷಿಸಿದೆವು. ನಂತರ ಲೇಡಿಸ್ ಸೀಟ್ ಎಂಬ ವೀಕ್ಷಣಾ ತಾಣವನ್ನು ತಲುಪಿದೆವು. ಕುತೂಹಲಕಾರಿ ಹೆಸರು ಎನಿಸಿತು! ಇಲ್ಲಿ ಬೈನಾಕೂಲರ್ ಸೌಲಭ್ಯವಿದೆ, ಒಮ್ಮೆ ವೀಕ್ಷಿಸಲು ಒಬ್ಬರಿಗೆ ರೂಪಾಯಿ ಐದು. ಕಾಡು ಆವರಿಸಿ ರುವ ಬೆಟ ಗಳ ಸಾಲುಗಳನ್ನು ನೋಡಿ ಆನಂದಿಸಿದೆವು.
ಹತ್ತಿರದಲ್ಲೇ ಇದ್ದ ಜೆಂಟ್ಸ್ ಸೀಟ್ (ವೀಕ್ಷಣಾ ತಾಣ), ಬೋಟಾನಿಕಲ್ ಗಾರ್ಡನ್, ರೋಸ್ ಗಾರ್ಡನ್, ಸಿಲ್ಕ್ ವಲ್ಡ್ (ಮ್ಯೂಸಿಯಂ) ಮತ್ತು ಮಕ್ಕಳ ಆಟದ ಪ್ರದೇಶ ಗಳನ್ನು ಸುತ್ತಿ ರೆಸಾರ್ಟ್‌ಗೆ ಬಂದೆವು. ಇವೆಲ್ಲವೂ ನಮ್ಮ ವಾಸ್ತವ್ಯದಿಂದ 10 ಕೀಮಿಟರ್ ಒಳಗೆ ಇದ್ದವು. ರಾತ್ರಿ ರೆಸಾರ್ಟ್ ಆವರಣ ದಲ್ಲಿ ಎರ್ಪಡಿಸಿದ್ದ ಶಿಬಿರಾಗ್ನಿಯ ಮುಂದೆ ವಿರಮಿಸಿ ಪ್ರಯಾಣದ / ಊರು ಸುತ್ತಿದ ದಣಿ ವನ್ನು ಮರೆತೆವು.
ಅತಿ ಎತ್ತರದಲ್ಲಿ ದೇಗುಲ
ಮರುದಿನ ನಮ್ಮ ಮೊದಲ ವೀಕ್ಷಣೆ ರಾಜರಾಜೇಶ್ವರಿ ದೇವಸ್ಥಾನ. ಇಲಿ ರಾಜೇಶ್ವರಿಯು ಒಂದೇ ಕಲಿ ನಲಿ ಕೆತ್ತಿದ, ಕುಳಿತ ಭಂಗಿಯಲ್ಲಿದ್ದು, ವಿಗ್ರಹದ ಸುತ್ತಲೂ ರುದ್ರ, ವಿಷು , ಲಕ್ಷ್ಮಿ, ಬ್ರಹ್ಮ ಹಾಗೂ ಸರಸ್ವತಿಯನ್ನು ಚಿಕ್ಕದಾಗಿ ಕೆತ್ತಿರುತ್ತಾರೆ. ಇಲ್ಲಿಂದ 7 ಕಿ.ಮೀ. ದೂರದಲ್ಲಿದ್ದ ಸರ್ವರಾಯನ್ ದೇವಸ್ಥಾನಕ್ಕೆ ಬಂದೆವು. ಇದು ಎರ್ಕಾಡಿನಲ್ಲೇ ಅತಿ ಎತ್ತರವಾದ ಜಾಗ (5326 ಅಡಿ ಎತ್ತರ). ಈ ದೇವಸ್ಥಾನದ ಒಳಗಿನ ಗುಹೆಯಲಿ ಚಿಕ್ಕದಾದ ತಾಯಿ ಕಾವೇರಿ ಮತ್ತು ಸರ್ವರಾಯನ ವಿಗ್ರಹವಿದೆ.
ಯುದ್ಧದಲ್ಲಿ ಸೋಲುವ ಸಮಯದಲ್ಲಿಟಿಪ್ಪುವು ಈ ಗುಹೆಯಲ್ಲಿ ಅಡಗಿರುತ್ತಿದ್ದ ನೆಂದು ಇಲ್ಲಿಯವರು ಹೇಳುತ್ತಾರೆ. ನಂತರ ಶ್ರೀ ಚಕ್ರ ಮಹಾಮೇರು ದೇವ ಸ್ಥಾನಕ್ಕೆ ಬಂದೆವು. ಇದು ತುಸು ದೊಡ್ಡದು. ಇಲ್ಲಿನ ಮುಖ್ಯ ದೇವತೆ ಲಲಿತ ತ್ರಿಪುರ ಸುಂದರಿ. ಸನಿಹದಲ್ಲೆ ಸುಂದರವಾಗಿ ಕೆತ್ತಲ್ಪಟ್ಟ ದಕ್ಷಿಣಾಮೂರ್ತಿ ವಿಗ್ರಹವೂ ಇದೆ. ಈ ವಿಗ್ರಹದಲ್ಲಿ ಶಿವಲಿಂಗನನ್ನೂ ಲಿಂಗದ ಮೇಲೆ ವಿಷ್ಣುವನ್ನು ಕೆತ್ತಿದ್ದಾರೆ.
ಕರಡಿ ವ್ಯೂ ಪಾಯಿಂಟ್
ಮುಂದಿನ ವೀಕ್ಷಣೆ ಕರಡಿಯೂರ್ ವ್ಯೂ ಪಾಯಿಂಟ್. ಮುಖ್ಯ ರಸ್ತೆಯಿಂದ 3 ಕಿ.ಮೀ. ಮಣ್ಣಿನ ರಸ್ತೆಯಲಿ ಹೋಗಬೇಕು. ಮುಖ್ಯದ್ವಾರದ ಕಮಾನಿನ ಮೇಲೆ ಎರಡು ಕಡೆ ಕರಡಿಯ ಗೊಂಬೆಗಳನ್ನು ಇಡಲಾಗಿದೆ. ಎರ್ಕಾಡಿನಲ್ಲಿರುವ ವೀಕ್ಷಣ ತಾಣಗಳಲ್ಲೇ ಇದು ಅತಿ ಸುಂದರ.
ಮಧ್ಯಾಹ್ನದ ಕೊನೆಯ ಕಾರ್ಯಕ್ರಮ ಕಿಳಿಯೂರು ಫಾಲ್ಸ್. ಇಲ್ಲಿ ಸುಮಾರು ೨೦೦ ಮೆಟ್ಟಿಲುಗಳನ್ನು ಇಳಿಯಬೇಕಾಗುತ್ತದೆ. ಬೇಸಗೆಯಾದ್ದರಿಂದ ಸಣ ಪ್ರಮಾಣದಲಿ ನೀರು ಬಂಡೆಯಿಂದ ಕೆಳಗಿಳಿಯುತ್ತಿತ್ತು. ಊಟ ಮುಗಿಸಿಕೊಂಡು, ವಿರಮಿಸಿ, ದಿನದ ಕೊನೆಯ ವೀಕ್ಷಣೆಗೆ ಅಣ್ಣಾ ಪಾರ್ಕ್‌ಗೆ ಬಂದೆವು. ಇದು ಮುಖ್ಯ ಸರೋವರದ ಪಕ್ಕದಲ್ಲೇ ಇದೆ. ಮರುದಿನ ಬೆಳಿಗ್ಗೆ ಸೇಲಂ ದಾರಿಯಿಂದ 32 ಕಿ.ಮೀ. ಲೂಪ್ ರೋಡ್‌ನಲ್ಲಿ ಬೆಟ್ಟವನ್ನು 20 ಹೇರ್ ಪಿನ್ / ಬೆಂಡ್ಸ್ ನಲಿ ಇಳಿಯುತ್ತಾ, ಹೊರಟೆವು.
ಮೇಲೆ ಹೇಳಿದ ವಿಕ್ಷಣಾ ತಾಣಗಳಲ್ಲಿ ಬೆಲೂನ್, ಬಿಲ್ಲು ಬಾಣ ಹೂಡುವ ಆಟಗಳು ಸಾಮಾನ್ಯ. ಒಂದು ಕಡೆ (ಲೇಡಿಸ್ ಸೀಟ್)
ಕುದುರೆ ಸವಾರಿಯ ಸೌಲಭ್ಯವೂ ಇತ್ತು. ಇಲ್ಲಿನ ಕೆಲವು ಸ್ಥಳಗಳಲ್ಲಿ ಟ್ರಕಿಂಗ್‌ಗೂ ಅವಕಾಶವಿದೆ.