Saturday, 14th December 2024

ಸುಂದರ ಮಧ್ಯಕಾಲೀನ ನಗರ ಹಾರ್ಲೆಮ್

ಜಿ.ನಾಗೇಂದ್ರ ಕಾವೂರು

ವಿಂಡ್ ಮಿಲ್, ಕಾಲುವೆಗಳು, ಮ್ಯೂಸಿಯಂಗಳು ಐತಿಹಾಸಿಕ ಕಟ್ಟಡಗಳು ಮೊದಲಾದ ಆಕರ್ಷಣೆ ಹೊಂದಿರುವ ಈ ಊರಿನಲ್ಲಿ ಸುತ್ತಾಡುವುದೇ ಒಂದು ಅಪರೂಪದ ಅನುಭವ.

ಉತ್ತರ ಹಾಲೆಂಡ್‌ನ ಸುಂದರ ಮಧ್ಯಕಾಲೀನ ಐತಿಹಾಸಿಕ ನಗರ ಹಾರ್ಲೆಮ. ಒಂದು ತಿಂಗಳ ಯುರೋಪ್ ಪ್ರವಾಸದ ಸಮಯ ದಲ್ಲಿ ನಾನು ವೀಕ್ಷಿಸಿದ ಸುಂದರ ಪಟ್ಟಣ ಗಳಂದು. ಇಲ್ಲಿರುವ ಕೆನಾಲ್‌ಗಳು, ಅತ್ಯಾಕರ್ಷಕ ವಿಶಿಷ್ಟ ಡಚ್ ವಿನ್ಯಾಸದ ಮನೆಗಳು, ಸ್ಮಾರಕಗಳು ಮತ್ತು ಡಚ್ ಪರಂಪರೆಯ ಕುರುಹಾದ ವಿಂಡ್ ಮಿಲ್, ಚರ್ಚ್‌ಗಳು, ಮ್ಯೂಸಿಯಂಗಳು, ರೆಸ್ಟೋರೆಂಟ್‌ಗಳು, ಸುಂದರವಾದ ಮಾರುಕಟ್ಟೆ ಪ್ರದೇಶಗಳಲ್ಲದೆ ಇನ್ನೂ ಅನೇಕ ಆಕರ್ಷಣೆಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ಆಮ್‌ಸ್ಟರ್‌ಡ್ಯಾಂ ನಗರದಿಂದ ಸುಮಾರು 17 ಕಿ.ಮೀ. ದೂರದಲ್ಲಿರುವ ಹಾರ್ಲಿಮ್ ನಗರ ಸ್ಪಾರ್ನೆ ನದಿಯ ದಡದಲ್ಲಿದೆ. ಶತಮಾನಗಳಿಂದಲೂ ಟ್ಯೂಲಿಪ್ ಹೂವುಗಳನ್ನು ಬೆಳೆಯುತ್ತಿರುವ ಐತಿಹಾಸಿಕ ಕೇಂದ್ರವಾಗಿದ್ದು ‘ಹೂವುಗಳ ನಗರ’ ಎಂಬ ಅಡ್ಡ ಹೆಸರಿ ನಿಂದ ಖ್ಯಾತಿ ಪಡೆದಿದೆ. 1630 ರಿಂದ ಇಂದಿನವರೆಗೂ ಟ್ಯುಲಿಪ್ ಹೂಗಳ ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ.

ಸ್ಪ್ಯಾನಿಷ್ ಮುತ್ತಿಗೆ, ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಪ್ರಸಿದ್ಧ ಡಚ್ ವರ್ಣಚಿತ್ರಕಾರರಿಗೆ ಜನ್ಮ ನೀಡುವುದರ ಮೂಲಕ ಡಚ್ ಇತಿಹಾಸದಲ್ಲೂ ಪಾಲು ಪಡೆದುಕೊಂಡಿದೆ. ಸ್ಪ್ಯಾನಿಷ್ ಮುತ್ತಿಗೆಯ ಸಮಯದಲ್ಲಿ ಹಾರ್ಲೆಮ್ ನಗರದ ಸುತ್ತಲೂ ಇದ್ದ ಗೋಡೆ ಪ್ರಮುಖ ಪಾತ್ರ ವಹಿಸಿತು. ಗೋಡೆಯ ಮೇಲೆ ನಿಂತು ಕೊಂಡ ನಾಗರಿಕರು, ಸುಡುತ್ತಿದ್ದ ಎಣ್ಣೆ ಮತ್ತು ಉರಿಯುತ್ತಿರುವ ಒಣ ಹುಲ್ಲಿನ ಉಂಡೆಗಳನ್ನು ಎಸೆದು ಶತ್ರುಗಳನ್ನು ಹಿಮ್ಮೆಟ್ಟಿಸಿ ದರು.

ಎರಡನೆಯ ಮಹಾಯುದ್ಧದಲ್ಲಿ ಸಕ್ರಿಯವಾಗಿ ಹೋರಾಡಿ ಗಲ್ಲಿಗೇರಿಸಲ್ಪಟ್ಟ ‘ಹ್ಯಾನಿ ಶಾಫ್ಟ್ ’ನ ಕಥೆಯನ್ನು ಆಧರಿಸಿ ‘ಕೆಂಪು ಕೂದಲಿನ ಹುಡುಗಿ’ ಎಂಬ ಪುಸ್ತಕ ಮತ್ತು ಚಲನಚಿತ್ರ ಹೊರಬಂದಿವೆ. ಹ್ಯಾನಿ ಶಾಫ್ಟ್ ನ ಸ್ಮರಣಾರ್ಥ, ಆಕೆಯ ಪ್ರತಿಮೆಯನ್ನು ಕೆನೌ ಪಾರ್ಕ್ ನಲ್ಲಿ ಸ್ಥಾಪಿಸಲಾಗಿದೆ.

ಭವ್ಯ ಪ್ರವೇಶ ದ್ವಾರ: ಹಾರ್ಲೆಮ್ ನಗರವನ್ನು ಪ್ರವೇಶಿಸಲು ಏಳು ಪ್ರವೇಶ ದ್ವಾರಗಳಿದ್ದವಂತೆ. 1671ರಲ್ಲಿ ಕೈಗೊಂಡ ನಗರ ವಿಸ್ತರಣಾ ಕಾರ್ಯದಲ್ಲಿ ಕೇವಲ ಒಂದು ಪ್ರವೇಶ ದ್ವಾರವನ್ನು ಮಾತ್ರ ಉಳಿಸಿಕೊಳ್ಳಲಾಯಿತು. ಸುಂದರವಾದ ಪ್ರವೇಶ ದ್ವಾರ ‘ಆಮ್‌ಸ್ಟರ್‌ಡ್ಯಾಂ ಗೇಟ್’ ಶಿಥಿಲಗೊಂಡಿದ್ದ ಕಾರಣ 1986 ರಲ್ಲಿ ಪುನಃ ಸ್ಥಾಪಿಸಲಾಯಿತು. ಪ್ರಸ್ತುತ ಇದೊಂದು ಭವ್ಯ ವಾದ ವಿಶಿಷ್ಟ ವಿನ್ಯಾಸದ ಗೋಪುರಗಳನ್ನು ಹೊಂದಿರುವ ಅತ್ಯಂತ ಆಕರ್ಷಕ ದ್ವಾರವಾಗಿದ್ದು, ಪ್ರವಾಸಿಗರು ಈ ದ್ವಾರದ ಮೂಲಕ ಓಡಾಡುವಾಗ ಅನಿರ್ವಚನೀಯ ಆನಂದವನ್ನು ನೀಡುತ್ತದೆ.

ಐತಿಹಾಸಿಕ ಪ್ರಾಮುಖ್ಯತೆಯ ಗ್ರೋಟ್ ಮಾರ್ಕೆಟ್: ಎಲ್ಲಾ ಐರೋಪ್ಯ ರಾಷ್ಟ್ರಗಳಲ್ಲಿ ಇರುವ ಹಾಗೆ ಹಾರ್ಲೆಮ್‌ನಲ್ಲೂ ಸಹ ‘ಗ್ರೋಟ್ ಮಾರ್ಕೆಟ್’ ಹೆಸರಿನ ದೊಡ್ಡ ಚೌಕವಿದೆ. ಚೌಕದ ಹೃದಯ ಭಾಗದಲ್ಲಿರುವ ಸೇಂಟ್ ಬಾವೋ ಚರ್ಚ್ ಅತ್ಯಂತ ಆಕರ್ಷಕವಾಗಿದ್ದು 14 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. 140 ಮೀಟರ್ ಉದ್ದ ವಿರುವ ಚರ್ಚ್ ಕಟ್ಟಡ 40 ಮೀಟರ್ ಎತ್ತರದ ಗೋಪುರವನ್ನು ಹೊಂದಿದೆ. ಗ್ರೋಟ್ ಮಾರ್ಕೆಟ್ ಸುತ್ತಲೂ ಇರುವ ಸ್ಮಾರಕಗಳು ತಮ್ಮದೇ ಆದ ಇತಿಹಾಸವನ್ನು ಹೊಂದಿದ್ದು, ಪ್ರತಿಯೊಂದು ಸ್ಮಾರಕದ ವಾಸ್ತು ಶೈಲಿಯೂ ಆಕರ್ಷಕವಾಗಿದೆ. ವಾಣಿಜ್ಯ ಕೇಂದ್ರವಾದ ಈ ಪ್ರದೇಶದಲ್ಲಿ ಹಲವಾರು ವಾಣಿಜ್ಯ ಕಟ್ಟಡಗಳು, ಉಪಹಾರ ಮಂದಿರಗಳಿವೆ. ೧೪ನೇ ಶತಮಾನದಲ್ಲಿ ನಿರ್ಮಿಸಲಾದ ಭವ್ಯ ಕಟ್ಟಡ ಸಿಟಿ ಹಾಲ್ ಸಹ ಈ ಪ್ರದೇಶದಲ್ಲಿದ್ದು, ಗ್ರೋಟ್ ಮಾರ್ಕೆಟ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾಗಿದೆ.

ಸಾಂಪ್ರದಾಯಿಕ ವಿಂಡ್ ಮಿಲ್
ನೆದರ್ಲೆಂಡಿನ ಭೂ ಬಾಗವು ಸಮುದ್ರ ಮಟ್ಟಕ್ಕಿಂತಲೂ ಕೆಳಗಿರುವುದರಿಂದ, ಸಮುದ್ರದ ಏರಿಳಿತಗಳಿಂದ ಕೆನಾಲ್‌ಗಳ ನೀರಿನ ಮಟ್ಟದಲ್ಲೂ ಏರು ಪೇರಾಗುತ್ತದೆ. ವಿಂಡ್‌ಮಿಲ್ ಗಳ ಸಹಾಯದಿಂದ ಕೆನಾಲ್‌ಗಳಲ್ಲಿ ಹರಿಯುವ ನೀರನ್ನು ಸಮುದ್ರಕ್ಕೆ ಕಳುಹಿಸ ಲಾಗುತ್ತಿತ್ತು. ಸ್ಪಾರ್ನ್ ನದಿಯ ದಡದಲ್ಲಿರುವ ಅಡ್ರಿಯನ್ ಹೆಸರಿನ ಡಚ್ ಸಾಂಪ್ರ ದಾಯಿಕ ವಿಂಡ್‌ಮಿಲ್ ೧೮ ನೇ ಶತಮಾನದ ಪೂರ್ವಾರ್ಧದಲ್ಲಿ ನಿರ್ಮಿಸಲ್ಪಟ್ಟಿದ್ದು, ಪ್ರಸ್ತುತ ಧಾನ್ಯಗಳನ್ನು ಹುಡಿಮಾಡಲು ಉಪಯೋಗಿಸಲಾಗುತ್ತಿದೆ.

ಬಡವರು ಹಾಗೂ ಒಂಟಿ ಹಿರಿಯನಾಗರಿಕ ಮಹಿಳೆಯರಿಗಾಗಿಯೇ ನಿರ್ಮಿಸಲಾಗಿರುವ ಪುಟ್ಟ ಮನೆಗಳು ಮತ್ತು ಅವುಗಳ ಮುಂದಿರುವ ಅಂಗಳಗಳು ಹಾರ್ಲೆಮ್ ನ ಮತ್ತೊಂದು ಆಕರ್ಷಣೆ. ಶ್ರೀಮಂತ ಕುಟುಂಬಗಳು, ಚರ್ಚ್‌ಗಳು ಹಾಗೂ ಸಂಘಗಳ
ಇಂತಹ ಮನೆಗಳನ್ನು ನಿರ್ಮಿಸಿದ್ದು, ಪ್ರವಾಸಿಗರು ಈ ಮನೆಗಳನ್ನು ವೀಕ್ಷಿಸಲು ಮುಕ್ತವಾಗಿದ್ದು ಸುಂದರವಾದ ಅಂಗಳದಲ್ಲಿ ವಿಶ್ರಮಿಸಬಹುದಾಗಿದೆ.

ನಾಲ್ ಕ್ರೂಸ್: ಹಾರ್ಲೆಮ್‌ನಲ್ಲಿರುವ ಸುಂದರವಾದ ಬೋಟ್‌ಗಳಲ್ಲಿ ಕುಳಿತು ಕೆನಾಲ್‌ಗಳಲ್ಲಿ ಸಂಚರಿಸುತ್ತಾ ನಗರದ ಸೌಂದರ್ಯವನ್ನು ಸವಿಯ ಬಹುದು. ಕೆನಾಲ್‌ಗಳ ಇಕ್ಕೆಲಗಳಲ್ಲಿರುವ ಕಟ್ಟಡಗಳು, ನೇರವಾಗಿ ಬೆಳೆದ ಮರಗಳು ಮನಸ್ಸಿಗೆ ಮುದ
ನೀಡುತ್ತವೆ.

ಮ್ಯೂಸಿಯಂಗಳು
ಹಾರ್ಲಿಮ್‌ನಲ್ಲಿ ಹಲವಾರು ಮ್ಯೂಸಿಯಂಗಳಿದ್ದು, ಅತ್ಯಂತ ಹಳೆಯ ಮ್ಯೂಸಿಯಂ ಎನಿಸಿರುವ ‘ಟೇಲರ್ಸ್ ಮ್ಯೂಸಿಯಂ’ನಲ್ಲಿ ಕಲೆ, ವಿeನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ವಿದ್ದು, ಇಲ್ಲಿ ಮೈಕೆಲಾಂಜೆಲೋ, ರೆಂಬ್ರಾಂಟ್ ಮೊದಲಾದ ಪ್ರಮುಖರು ರಚಿಸಿದ ಕಲಾಕೃತಿಗಳ ಪ್ರದರ್ಶನವಿದೆ.

***

ಸಮಕಾಲೀನ ಕಲೆಗೆ ಸಂಬಂಧಿಸಿದ ಗ್ಯಾಲರಿ ಹಾಗೂ ಪುರಾತತ್ವಶಾಸ್ತ್ರದ ವಸ್ತು ಸಂಗ್ರಹಾಲಯಗಳು ಗ್ರೋಟ್ ಮಾರ್ಕೆಟ್‌ನಲ್ಲಿವೆ. 17ನೇ ಶತಮಾನದ ಪ್ರಸಿದ್ಧ ಡಚ್ ವರ್ಣ ಚಿತ್ರಕಾರ ಫ್ರಾನ್ಸ್ ಹಾಲ್ಸ್ ಇದೇ ನಗರದವನೆನ್ನುವುದು ಇಲ್ಲಿನವರಿಗೆ ಹೆವಯ ವಿಷಯ. ಆರ್ಥಿಕವಾಗಿ ದುರ್ಬಲನಾಗಿದ್ದ ಫ್ರಾನ್ಸ್ ಹಾಲ್ಸ್ ನ ಚಿತ್ರಗಳು ವಿಶಿಷ್ಟ ಹಾಗೂ ವರ್ಣರಂಜಿತ ವಾಗಿದ್ದು, ಈತ ಚಿತ್ರಿಸಿದ ಬಹಳಷ್ಟು ವರ್ಣಚಿತ್ರಗಳನ್ನು ಫ್ರಾನ್ಸ್ ಹಾಲ್ಸ್ ಮ್ಯೂಸಿಯಂನಲ್ಲಿ ನೋಡಬಹುದು.

ಹಾರ್ಲೀಮ್ ಹಾಗೂ ಸುತ್ತ ಮುತ್ತಲ ಪ್ರದೇಶಗಳ ಕಲಾಕಾರರು ರಚಿಸಿರುವ ಶಿಲ್ಪಗಳು, ಸೆರಾಮಿಕ್ ಹಾಗೂ ಗ್ರಾಫಿಕ್ ಕಲೆಯ ಸಮಕಾಲೀನ ಕಲಾಕೃತಿಗಳು ಸಹ ಇಲ್ಲಿವೆ. ಮ್ಯೂಸಿಯಂ ಬೀದಿಯಲ್ಲಿರುವ ವಿಶಿಷ್ಟವಾದ ಮನೆಗಳು ಹಾಗೂ ಮನೆಗಳ ಮುಂಭಾಗ ದಲ್ಲಿರುವ ಆಕರ್ಷಕ ಹೂವಿನ ಗಿಡಗಳು ಮನಸ್ಸಿಗೆ ಮುದನೀಡುತ್ತವೆ.

***

ವಾಕಿಂಗ್ ಟೂರ್
ಎರಡು ಗಂಟೆಗಳ ಅವಧಿಯ ಗೈಡೆಡ್ ವಾಕಿಂಗ್ ಟೂರ್‌ಗಳು ಈ ನಗರದಲ್ಲಿ ಲಭ್ಯ. 16 ಮತ್ತು 17 ಶತಮಾನಗಳಲ್ಲಿ ನಿರ್ಮಿಸ ಲಾದ ಮನೆಗಳು, ಮಧ್ಯಕಾಲೀನ ಕಾಬಲ್ ಸ್ಟೋನ್ ರಸ್ತೆಗಳು, ದಿ ಸೇಂಟ್ ಬಾವೋ ಚರ್ಚ್ ಮೊದಲಾದವುಗಳ ವಿಶೇಷತೆಗಳನ್ನು ಮಾರ್ಗದರ್ಶಿ ತಿಳಿಸುತ್ತಾರೆ.

***

ಬಿಯರ್ ತಯಾರಿಕಾ ಕೇಂದ್ರ
15 ನೇ ಶತಮಾನದಲ್ಲಿ ಬಿಯರ್ ತಯಾರಿಸಿದ ಡಚ್ ನಗರಗಳಲ್ಲಿ ಹಾರ್ಲೆಮ್ ಸಹ ಒಂದಾಗಿತ್ತು. ಇಲ್ಲಿ ತಯಾರಿಸಲಾದ ಬಹುಪಾಲು ಬಿಯರ್‌ನ್ನು ಉತ್ತರ ಹಾಲೆಂಡಿಗರು ಸೇವಿಸುತ್ತಿದ್ದರಂತೆ. ಸ್ಪ್ಯಾನಿಷ್ ಮುತ್ತಿಗೆ ಸಮಯದಲ್ಲಿ 50 ಬಿಯರ್ ತಯಾರಿಕಾ ಘಟಕಗಳಿದ್ದು 1620 ರ ಹೊತ್ತಿಗೆ ನಗರದಲ್ಲಿ ನೂರು ಬ್ರೂವರಿಗಳಿದ್ದವಂತೆ. ಸಾಂಪ್ರದಾಯಿಕ ವಿಧಾನಗಳಿಂದ ಉತ್ತಮ ಗುಣಮಟ್ಟದ ಗೋಧಿಯಿಂದ ತಯಾರಿಸಲಾದ ಅಡ್ರಿಯಾನ್ ಹಾಗೂ ಹಲವು ಬಗೆಯ ಡ್ರಾಫ್ಟ್ ಬಿಯರ್ ಸವಿಯಲು ಪ್ರವಾಸಿಗರು ‘ಜೋಪೆನ್ ಚರ್ಚ್’ಗೆ ಭೇಟಿ ನೀಡುತ್ತಾರೆ. ಈ ಸುಧಾರಿತ ಚರ್ಚ್ ಒಳಗೆ ಇರುವ ಬಿಯರ್ ಬ್ರೂವರಿಯನ್ನು
ಸಂಪೂರ್ಣವಾಗಿ ನವೀಕರಿಸಲಾಗಿದೆ.