*ವಿ.ವಿಜಯೇಂದ್ರ ರಾವ್
ಕುಮಟಾದಿಂದ ಹನ್ನೆೆರಡು ಕಿಮೀ ದೂರದಲ್ಲಿರುವ ಮಿರ್ಜಾನ್ ಕೋಟೆ ನೋಡಿದ ತಕ್ಷಣ ಇಡೀ ಕೋಟೆಯೇ ಹಸಿರು ಸೀರೆಯನ್ನುಟ್ಟುಕೊಂಡು ನಮ್ಮನ್ನು ಸ್ವಾಾಗತಿಸಿದಂತೆ ಭಾಸವಾಯಿತು. ಇದನ್ನು ಬಿಜಾಪುರ ಆದಿಲ್ ಶಾಹಿ ಸುಲ್ತಾಾನರ ಆಧೀನದಲ್ಲಿದ್ದ ಪೊಂಡಾದ ಸಾಮಂತನಾದ ಶರೀಫ್ ಉಲ್ ಮುಲ್ಕ್ (1608-1640)ನು ಕಟ್ಟಿಿಸಿದನೆಂದು ತಿಳಿದು ಬರುತ್ತದೆ.
ಸುಮಾರು 12ಎಕರೆ ವಿಸ್ತಾಾರ ಹೊಂದಿರುವ ಈ ಕೋಟೆಯು ಅಷ್ಟ ಕೋನಾಕೃತಿಯ ರಚನೆಯಲ್ಲಿ ಎತ್ತರವಾದ ದಿಬ್ಬದ ಮೇಲೆ ಕಟ್ಟಲ್ಪಟ್ಟಿಿದೆ. ಒಟ್ಟು ನಾಲ್ಕು ಪ್ರವೇಶ ದ್ವಾಾರವನ್ನು ಒಳಗೊಂಡಿರುವ ಈ ಕೋಟೆಯ ಉತ್ತರ ದ್ವಾಾರವು ವಿಶಾಲವಾಗಿದ್ದು ಪ್ರಮುಖ ದ್ವಾಾರವು ಆಗಿದೆ. ಸುತ್ತಲೂ ಆಳವಾದ ಕಂದಕವಿದ್ದೂ ಇದಕ್ಕೆೆ ಸಮೀಪದ ಕುದುರೆಹಳ್ಳದಿಂದ ನೀರು ಹರಿದು ಬಂದು ಸದಾ ಕಾಲ ತುಂಬಿರುವಂತೆ ವ್ಯವಸ್ಥಿಿತವಾಗಿ ಜೋಡಿಸಲಾಗಿದೆ.
ಅಘನಾಶಿನಿ ನದಿಯ ಹತ್ತಿಿರದಲ್ಲಿದ್ದೂ ಕೋಟೆ ಗೋಡೆಯು ದೊಡ್ಡ ಲ್ಯಾಾಟರೈಟ್ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿಿದ್ದು, ವೃತ್ತಾಾಕಾರದ ಹನ್ನೊೊಂದು ಇಳಿಜಾರಾದ ಬುರುಜುಗಳನ್ನು ಸುತ್ತಲೂ ಕಟ್ಟಲಾಗಿದೆ. ಕಮಾನುಗಳನ್ನು ಗೋಡೆಯ ಸುತ್ತಲೂ ಕಟ್ಟಿಿ ಮಧ್ಯದಲ್ಲಿ ರಂಧ್ರಗಳನ್ನು ಮಾಡಲಾಗಿದೆ. ಕೋಟೆ ಗೋಡೆಯ ಮೇಲೆ ಒಬ್ಬ ಮನುಷ್ಯ ನಡೆದಾಡುವಷ್ಟು ಸ್ಥಳಾವಕಾಶವನ್ನು ಕಲ್ಪಿಿಸಲಾಗಿದೆ. ಮುಖ್ಯ ದ್ವಾಾರದ ಎದುರಿಗೆ ಕಂದಕ ಹಾಗೂ ಸೇತು ಮಾರ್ಗದ ಅವಶೇಷಗಳನ್ನು ಕಾಣಬಹುದು.
ಈ ಕೋಟೆಯು ಮಧ್ಯಕಾಲೀನ ಸಾಗರೋತ್ತರ ವ್ಯಾಾಪಾರ ಮತ್ತು ವಾಣಿಜ್ಯ ವ್ಯವಹಾರಗಳ ಕುರಿತಂತೆ ಪ್ರಮುಖ ಪಾತ್ರ ವಹಿಸಿತ್ತೆೆಂದು ಸಮಕಾಲೀನ ಬರಹಗಳಿಂದ ತಿಳಿಯಬಹುದು. ಈ ಕೋಟೆಯು ವಿಜಯನಗರ ಅರಸೊತ್ತಿಿನ ಕಾಲಾವಧಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ವಿಜಯನಗರದ ಪತನಾನಂತರ ಈ ಕೋಟೆಯು ಬಹುಮನಿ ಸುಲ್ತಾಾನರ, ಬಿಜಾಪುರದ ಆದಿಲ್ ಶಾಹಿ, ಉತ್ತರ ಕನ್ನಡದ ಚಿಕ್ಕ ಅರಸು ಮನೆತನಗಳ, ಪೋರ್ಚುಗೀಸರ,ಹೈದರಾಲಿ ಮತ್ತು ಟಿಪ್ಪುುವಿನ ಆಳ್ವಿಿಕೆಗೆ ಒಳಪಟ್ಟಿಿತ್ತು. ಟಿಪ್ಪುುವಿನ ಮರಣದ ನಂತರ ಈ ಕೋಟೆಯು ಬ್ರಿಿಟಿಷರ ವಶವಾಯಿತು.
ಇಂದು ಇದು ವಾರಾಂತ್ಯದ ದಿನಗಳಲ್ಲಿ ಪ್ರವಾಸಕ್ಕೆೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಹಸಿರು ಹುಲ್ಲು ಹಾಸು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಸಾಕಷ್ಟು ಸುಸ್ಥಿಿತಿಯಲ್ಲಿರುವ ಕೋಟೆಯ ಗೋಡೆಗಳು, ಬುರುಜುಗಳು, ಮೆಟ್ಟಿಿಲುಗಳು, ಕೋಟೆಯಲ್ಲಿರುವ ಬಾವಿ, ವಿವಿಧ ಕಟ್ಟಡಗಳ ರಚನೆಗಳು ಅದ್ಭುತ ಎನಿಸುತ್ತವೆ. ಕೋಟೆಯ ಮೇಲಿನಿಂದ ಕಾಣಸಿಗುವ ನೋಟ ಮನಮೋಹಕ. ಮಕ್ಕಳು, ಹಿರಿಯರು ಸಂತೋಷದಿಂದ ಕೆಲವು ಘಂಟೆಗಳು ದಿನನಿತ್ಯದ ಜಂಜಾಟದಿಂದ ದೂರವಿದ್ದು ನಲಿಯಲು ಹೇಳಿ ಮಾಡಿಸಿದ ತಾಣ. ಇಲ್ಲಿ ಯಾವುದೇ ಪ್ರವೇಶ ಶುಲ್ಕವು ಸಹ ಇಲ್ಲ….!