Saturday, 14th December 2024

ಹನಿಮೂನ್ ಸ್ಪಾಟ್

ಮುನ್ನಾರ್

ಕೇರಳದ ಇಡುಕ್ಕಿಿ ಜಿಲ್ಲೆೆಯಲ್ಲಿರುವ ಮುನ್ನಾಾರ್ ಸುತ್ತಲೂ ಹಸಿರಿನ ಸಿರಿ, ನೀರಿನ ಝರಿ. ಸುತ್ತಲೂ ಬೆಟ್ಟಗಳು, ಎಲ್ಲೆೆಲ್ಲೂ ಗಿಡ ಮರಗಳು, ಇಳಿಜಾರಿನಲ್ಲಿ ಸುಂದರವಾಗಿ ಕಾಣುವ ಟೀ ತೋಟ, ಕಾಫಿ ತೋಟ, ಏಲಕ್ಕಿಿ ತೋಟ ಎಲ್ಲವೂ ಹನಿಮೂನ್ ಜೋಡಿಗಳ ಮನಸ್ಸಿಿನಲ್ಲಿ ಹೊಸ ಹೊಸ ಕನಸುಗಳನ್ನು ಹುಟ್ಟುಹಾಕಲ್ಲದು. ಸಮುದ್ರಮಟ್ಟದಿಂದ 5200 ಅಡಿ ಎತ್ತರದಲ್ಲಿರುವ ಮುನ್ನಾಾರ್‌ನಲ್ಲಿ ಬೇಸಗೆಯು ತಂಪಾಗಿರುತ್ತದೆ. ದಕ್ಷಿಿಣ ಭಾರತದ ಕಾಶ್ಮೀರ ಎಂದೂ ಕರೆಯಲ್ಪಡುವ ಮುನ್ನಾಾರ್ ಸುತ್ತಲಿನ ಕಾಡಿನಲ್ಲಿ ನೀಲಗಿರಿ ಥಾರ್, ನೀಲಗಿರಿ ಲಾಂಗುರ್ ಮೊದಲಾದ ಪ್ರಾಾಣಿಗಳು ನೋಡಲು ಸಿಗುತ್ತವೆ. ಬಹುದೂರದ ತನಕ ಕಾಣುವ ಟೀ ತೋಟಗಳ ನೋಟ ಹನಿಮೂನ್ ಜೋಡಿಗಳಿಗೆ ಸುಂದರ ಅನುಭವ ನೀಡುತ್ತವೆ.