*ಡಾ ಉಮಾಮಹೇಶ್ವರಿ. ಎನ್
ವಿಶಾಲವಾದ ಪ್ರಾಾಂಗಣ, ಸುತ್ತುಪೌಳಿ, ವಿಜಯನಗರ ಕಾಲದ ವ್ಯಾಾಳಿಗಳನ್ನೊೊಳಗೊಂಡ ನೂರಾರು ಶಿಲ್ಪಕೆತ್ತನೆಗಳು, ಹಸಿರು ತುಂಬಿದ ವಾತಾವರಣ -ಎಲ್ಲವೂ ಸೇರಿ ನಂದಿ ಬೆಟ್ಟದ ಬಳಿ ಇರುವ ಭೋಗನಂದೀಶ್ವರ ದೇಗುಲವನ್ನು ಒಂದು ಅದ್ಭುತ ಎನಿಸುವ ಪಾರಂಪರಿಕ ತಾಣವನ್ನಾಾಗಿ ರೂಪಿಸಿವೆ. ಬೆಂಗಳೂರಿನಿಂದ ಒಂದು ದಿನದ ಭೇಟಿಗೆ ಸೂಕ್ತ ಎನಿಸುವ ವಾಸ್ತುರತ್ನ ಇದು.
ಬೆಂಗಳೂರಿನ ಉತ್ತರ ದಿಕ್ಕಿಿನಲ್ಲಿ ಇರುವ ನಂದಿಬೆಟ್ಟದ ಬುಡದಲ್ಲಿದೆ ನಂದಿಗ್ರಾಾಮ. ಈ ಗ್ರಾಾಮದಲ್ಲಿರುವ ಪುರಾತನ ದೇವಾಲಯವೇ ಭೋಗನಂದೀಶ್ವರ. ಬೆಂಗಳೂರಿನಿಂದ ಸುಮಾರು ಅರುವತ್ತು ಕಿ. ಮೀ. ದೂರದಲ್ಲಿದೆ. ಕ್ರಿಿ. ಶ. 8-9 ನೇ ಶತಮಾನದಲ್ಲಿ ಸ್ಥಾಾಪನೆಯಾದ ಈ ದೇವಾಲಯವು ಚೋಳ, ಗಂಗ, ಹೊಯ್ಸಳ ಹಾಗೂ ವಿಜಯನಗರದ ರಾಜರ ಅಧಿಪತ್ಯದಲ್ಲಿ ಹಂತಹಂತವಾಗಿ ಅಭಿವೃದ್ಧಿಿ ಹೊಂದಿತು. ವಿಜಯನಗರ ಅರಸರು ಮತ್ತು ಮೈಸೂರು ಅರಸರು ಇದನ್ನು ಸಾಕಷ್ಟು ಅಬಿವೃದ್ಧಿಿ ಪಡಿಸಿ, ಉತ್ತಮ ದರ್ಜೆಯ ವಾಸ್ತು ರಚನೆಗಳನ್ನು ಸ್ಥಾಾಪಿಸಿದರು. ಉತ್ತರದಲ್ಲಿ ಭೋಗನಂದೀಶ್ವರ, ದಕ್ಷಿಣದಲ್ಲಿ ಅರುಣಾಚಲೇಶ್ವರ ಅವಳಿ ಶಿವಲಿಂಗಗಳಿರುವ ದೇವಾಲಯವಿದು. 370 ಅಡಿ ಉದ್ದ, 250 ಅಡಿ ಅಗಲವಿರುವ ದೇವಾಲಯವು ಬೃಹದಾಕಾರವಾಗಿ ದ್ರಾಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶತಮಾನಗಳ ಅಂತರದಲ್ಲಿ ನಿರ್ಮಾಣವು ವಿವಿಧ ಹಂತಗಳಲ್ಲಿ ನಡೆದಿದ್ದರೂ ದೇವಾಲಯವನ್ನು ವೀಕ್ಷಿಸಿದಾಗ ಇದನ್ನು ಊಹಿಸುವುದು ಕಷ್ಟ. ಅಷ್ಟೊೊಂದು ಚಾಕಚಕ್ಯತೆ, ನಯನಾಜೂಕಿನಿಂದ ನಿರ್ಮಾಣವನ್ನು ಕೈಗೊಂಡಿದ್ದಾರೆ. ಮೊತ್ತಮೊದಲು ಭೋಗನಂದೀಶ್ವರ, ಆ ನಂತರ ಅರುಣಾಚಲೇಶ್ವರ ( ಸುಮಾರು ನೂರು ವರ್ಷಗಳ ನಂತರ) ನಿರ್ಮಿತವಾದವು.
ಉತ್ತರ ದಿಕ್ಕಿಿನ ದ್ವಾಾರ ಒಂದರ ಮೂಲಕ ಒಳಹೊಕ್ಕಾಾಗ ವಿಶಾಲವಾದ ಹುಲ್ಲು ಹಾಸು ಮತ್ತು ಬೃಹದಾಕಾರದ ಮರಗಳಿರುವ ಜಾಗವನ್ನು ಪ್ರವೇಶಿಸಿದೆವು. ಸುತ್ತಲಿನ ಕೈಸಾಲೆ ಶಿಥಿಲಾವಸ್ಥೆೆಯಲ್ಲಿದ್ದದ್ದನ್ನು ಕಂಡು ನಮಗೆ ದೊರೆತ ಮಾಹಿತಿ ನಿಜವೇ ಎಂಬ ಸಂದೇಹ ಮನದಲ್ಲಿ ಸುಳಿಯಿತು. ಸ್ವಲ್ಪ ಮುಂದುವರಿದಾಗ ಬಲಭಾಗದಲ್ಲಿ ಮುಖ್ಯದೇವಳದ ಮಹಾದ್ವಾಾರ ಗೋಚರಿಸಿತು. ಮಹಾದ್ವಾಾರವನ್ನು ದಾಟಿ ಮುನ್ನಡೆದಾಗ ಸುಂದರ, ವಿಶಾಲವಾದ ಮುಖಮಂಟಪವನ್ನು ತಲುಪಿದೆವು. ಮುಖಮಂಟಪದ ಕಂಬಗಳು ಸುಂದರವಾದ ಶಿಲ್ಪಕಲಾಕೃತಿಗಳ ಭಂಡಾರವಾಗಿವೆ. ಮೊದಲ ನೋಟಕ್ಕೆೆ ಒಂದೇ ದೇವಾಲಯವೆನಿಸಿದರೂ, ಆಮೇಲೆ ತಿಳಿಯುತ್ತದೆ ಅಲ್ಲಿ ಅವಳಿ ಗರ್ಭಗೃಹಗಳಿವೆ ಎಂದು, ಅವೆರಡರ ನಡುವೆ ಕಾಲಾನಂತರ ಸ್ಥಾಾಪನೆಗೊಂಡ ಉಮಾಮಹೇಶ್ವರ ಗುಡಿಯೂ ಇದೆ ಎಂದು. ಎರಡು ಮುಖ್ಯ ಗುಡಿಗಳೆದುರು ನಂದಿ ಮಂಟಪಗಳಿವೆ. ಅರುಣಾಚಲೇಶ್ವರನ ಎದುರು ಗ್ರಾಾನೈಟಿನ, ಭೋಗನಂದೀಶ್ವರನ ಎದುರು ಕರಿಕಲ್ಲಿನ ಸುಂದರ ನಂದಿವಿಗ್ರಹಗಳಿವೆ.
ಭೋಗನಂದೀಶ್ವರನ ಗುಡಿಯಲ್ಲಿ ಶಿವಲಿಂಗವಲ್ಲದೆ ವಿಷ್ಣು, ಶಕ್ತಿಿ, ಭೈರವನ ವಿಗ್ರಹಗಳಿವೆ. ಗುಡಿಯ ಒಳಗಿನ ನಾಲ್ಕು ಕಂಬಗಳ ಸುತ್ತಲೂ ಅತಿಸೂಕ್ಷ್ಮವಾದ ಉಬ್ಬುಶಿಲ್ಪಗಳಿವೆ. ಕಂಬಗಳ ಮೇಲ್ಛಾಾವಣಿಯ ಮಧ್ಯೆೆ ಶಿವಪಾರ್ವತಿ ಹಾಗೂ ಅಷ್ಟದಿಕ್ಪಾಾಲಕರ ಕೆತ್ತನೆಗಳಿವೆ. ಅರುಣಾಚಲೇಶ್ವರನ ಗುಡಿಯಲ್ಲಿ ಶಿವಲಿಂಗವಲ್ಲದೆ 3 ಅಡಿ ಎತ್ತರದ ಸಿಂಹಮುಖದ ಸಣ್ಣಸೊಂಡಿಲ ಗಣಪತಿಯ ವಿಶೇಷ ವಿಗ್ರಹವಿದೆ. ಇಲ್ಲಿನ ಕಂಬಗಳು ಮಾತ್ರ ಸರಳವಾಗಿವೆ.
ಜೋಡಿ ದೇವಾಲಯಗಳ ಮಧ್ಯೆೆ ಪುಟ್ಟ ಉಮಾಮಹೇಶ್ವರ ಗುಡಿ ಇದೆ. ಇದರ ಸುತ್ತಲೂ ಪ್ರದಕ್ಷಿಣೆ ಬರಲು ಅನುಕೂಲವಾಗುವಂತೆ ಎರಡು ಅಡಿ ಸ್ಥಳವನ್ನು ಬಿಟ್ಟಿಿದ್ದಾರೆ.ಗುಡಿಯಲ್ಲಿ ಲೋಹದ ಶಿವಪಾರ್ವತಿಯರ ವಿಗ್ರಹವಿದೆ. ಹೊರಗೋಡೆಯ ಮೇಲೆ ಎರಡು ಅಡಿ ಅಗಲದ ಚಿತ್ರ ಪಟ್ಟಿಿಕೆಯಲ್ಲಿ ಶಿವಪಾರ್ವತಿಯರ ವಿವಾಹವನ್ನು ಬಿಂಬಿಸುವ ಶಿಲ್ಪಗಳಿವೆ. ಗುಡಿಯ ಹಿಂಭಾಗದಲ್ಲಿ ಸುಂದರವಾದ ಶಿಲಾಗೋಡೆ ಇದೆ. ಗುಡಿಯ ಮುಂಭಾಗದಲ್ಲಿ ಕರಿಕಲ್ಲಿನ ನಾಲ್ಕು ಕಂಬಗಳಿರುವ ಕಲ್ಯಾಾಣಮಂಟಪವಿದೆ. ಕಂಬಗಳು ಅಡಿಯಿಂದ ಮುಡಿವರೆಗೂ ಆಕರ್ಷಕ, ಸೂಕ್ಷ್ಮ ಕೆತ್ತನೆಗಳಿಂದ ಕಂಗೊಳಿಸುತ್ತವೆ. ಇದರ ಮುಂದಿರುವ ಮುಖಮಂಟಪದಲ್ಲಿರುವ 12 ಕರಿಕಲ್ಲುಗಳ ಕಂಬಗಳಲ್ಲೂ ವಿವಿಧ ಶಿಲ್ಪ ಕಲಾಕೃತಿಗಳಿವೆ.
ಕಲ್ಲಿನ ಕೊಡೆ
ಮುಖಮಂಟಪದ ಮೆಟ್ಟಿಿಲುಗಳ ಪಕ್ಕ ಹತ್ತು ಅಡಿ ಎತ್ತರ, ಒಂದೂಕಾಲು ಅಡಿ ಅಗಲದ ಹಿಡಿಕೆಯ ಮೇಲೆ ಹೊಂದಿಸಿರುವ ಐದು ಅಡಿ ವ್ಯಾಾಸವಿರುವ ಶಿಲಾಛತ್ರಿಿ ಕಂಗೊಳಿಸುತ್ತದೆ. ಎರಡೂ ದೇವಾಲಯಗಳ ಹೊರಗೋಡೆಗಳ ಮೇಲೆ ಕರಿಕಲ್ಲಿನಿಂದ ರಚಿಸಿರುವ ಸಣ್ಣ ಗೋಪುರಗಳ ವಿನ್ಯಾಾಸಗಳು, ಸುಂದರ ವಿಗ್ರಹಗಳಿಂದ ಆಕರ್ಷಕವಾಗಿವೆ. ದೇವಾಲಯದೊಳಗರ ಗಾಳಿ ಬೆಳಕಿನ ಪ್ರವೇಶಕ್ಕಾಾಗಿ ಹೊಂದಿಸಿರುವ ಕಿಟಕಿ (ಜಾಲಂಧ್ರ)ಗಳು ವಿಶಿಷ್ಟವಾಗಿವೆ. ಈ ಜಾಧ್ರಗಳಲ್ಲಿ ಹೊರಮುಖವಾಗಿ ಹೊಂದಿಸಿರುವ ಶಿಲ್ಪಗಳು ಗಮನ ಸೆಳೆಯುತ್ತವೆ.
ಪ್ರಾಾಕಾರದ ಒಳಾಂಗಣದ ಸುತ್ತಲಿರುವ ವರಾಂಡಗಳಲ್ಲಿಯೂ ಅಲಂಕೃತ ಕಂಬಗಳಿವೆ. ದೇವಾಲಯದ ಹೊರ ಪ್ರಾಾಕಾರದಲ್ಲಿ ಪ್ರಸನ್ನ ಪಾರ್ವತಿ ಹಾಗೂ ಅಪಿತಕುಚಾಂಬಾದೇವಿಯ ಗುಡಿಗಳಿವೆ. ಉತ್ತರ ಪ್ರಾಾಕಾರದ ದ್ವಾಾರದಿಂದ ಹೊರ ಹೋದರೆ 16 ಕಂಬಗಳಿರುವ ವಸಂತಮಂಟಪವೂ, ಅದರೆದುರಿಗೆ ಇರುವ ತುಲಾಭಾರ ಮಂಟಪವೂ ಕಾಣಿಸುತ್ತವೆ. ಇಲ್ಲಿ ಇನ್ನೊೊಂದು ದ್ವಾಾರವನ್ನು ದಾಟಿದರೆ ಶೃಂಗಿತೀರ್ಥವೆಂಬ ಕಲ್ಯಾಾಣಿ ಕಾಣಿಸುತ್ತದೆ. ನಂದಿಯು ತನ್ನ ಕೊಂಬಿನಿಂದ ನೆಲವನ್ನು ಬಗೆದು ಗಂಗೆಯನ್ನು ಚಿಮ್ಮಿಿಸಿ ಅದರ ನೀರಿನಲ್ಲಿ ಸ್ನಾಾನ ಮಾಡುತ್ತಿಿದ್ದನೆಂದು ಪ್ರತೀತಿ. ಕಲ್ಯಾಾಣಿಯ ಸುತ್ತಲೂ ಆಕರ್ಷಕ ಕಂಬಗಳಿಂದೊಡಗೂಡಿದ ಮೊಗಸಾಲೆ ಇದ್ದು ಇದರ ಒಂದೆಡೆ ಶೃಂಗೀಶ್ವರನ ಪುಟ್ಟ ಗುಡಿ ಇದೆ. ಈ ಗುಡಿಗಳಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಹಾಗೂ ಶಿವರಾತ್ರಿಿಯಂದು ನಡೆಯುವ ವಿಶೇಷ ಪೂಜೆಗಳು ವಿಶೇಷ ಎನಿಸುತ್ತವೆ.
ಪುರಾತನ ವಾಸ್ತು ಪರಂಪರೆ
ನಂದಿ ಬೆಟ್ಟದ ಬುಡದಲ್ಲಿರುವ ಭೋಗನಂದೀಶ್ವರ ದೇಗುಲದಲ್ಲಿ ಪೂಜೆ, ಪುನಸ್ಕಾಾರ, ಸ್ಥಳೀಯರ ಮದುವೆಗಳು ನಿರಂತರವಾಗಿ ನಡೆಯುತ್ತವೆ. ಆದರೆ, ಈ ದೇಗುಲವನ್ನು ಪೂಜೆ ದೃಷ್ಟಿಿಯಿಂದ ನೋಡುವುದಕ್ಕಿಿಂತಲೂ, ಪ್ರವಾಸೀ ತಾಣವಾಗಿ ನೋಡಿದಾಗಿ ವಿಭಿನ್ನ ಅನುಭವ ದೊರೆಯುತ್ತದೆ. ಇಲ್ಲಿನ ವಾಸ್ತು, ವಿಶಾಲವಾದ ಪ್ರಾಾಂಗಣ, ಹುಲ್ಲು ಹಾಸು, ವಿಜಯನಗರ ಕಾಲದ ಶಿಲಾ ಕೆತ್ತನೆಗಳು, ಬಹಳ ಉದ್ದವಿರುವ ಆಕರ್ಷಕ ಪೌಳಿ, ದೇಗುಲಕ್ಕೆೆ ಹೊಂದಿಕೊಂಡಿರುವ ಕಲ್ಯಾಾಣಿಯ ನೋಟ, ಇಲ್ಲಿಂದ ಕಾಣುವ ನಂದಿ ಬೆಟ್ಟದ ಸುಂದರ ದೃಶ್ಯ – ಎಲ್ಲವೂ ಇದನ್ನು ಒಂದು ದಿನದ ವಿಹಾರಕ್ಕೆೆ ಹೇಳಿ ಮಾಡಿಸಿದಂತಿವೆ. ಹಂಪೆಯು ಸುಸ್ಥಿಿತಿಯಲ್ಲಿದ್ದಾಾಗ, ಇಲ್ಲಿನ ಶಿಲ್ಪಕಲೆಯನ್ನು ಹೋಲುತ್ತಿಿತ್ತೇನೋ ಎನಿಸುವಷ್ಟು ಶ್ರೀಮಂತ ವಾಸ್ತು ಈ ಆವರಣದಲ್ಲಿದೆ. ಇಲ್ಲಿನ ವಾಸ್ತುಶಿಲ್ಪದ ಶ್ರೀಮಂತಿಕೆ, ಕಳೆದ ಒಂದು ಸಾವಿರ ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿಿಹೊಂದಿದ ಶಿಲ್ಪಕಲೆ ಮತ್ತು ಪುರಾತನ ಪರಂಪರೆಯನ್ನು ಗಮನಿಸಿದರೆ, ಇದು ವಿಶ್ವಪರಂಪರೆ ತಾಣವಾಗಿಯೂ ಗುರುತಿಸಲ್ಪಡುವ ಅರ್ಹತೆ ಹೊಂದಿದೆ ಎನ್ನಬಹುದು.