Sunday, 15th December 2024

ಕಡಲ ಕಿನಾರೆ ಇಷ್ಟಪಡುವ ಆನಂದ್

‘ಭೂತಕಾಲ’ ಚಿತ್ರದ ಮೂಲಕ ಚಂದನವನಕ್ಕೆೆ ಎಂಟ್ರಿ ಕೊಟ್ಟ ಆನಂದ್ ಗಣೇಶ್ ಸ್ಯಾಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿ ಹಾಕಿದ ನಟ. ಸದ್ಯ ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿ ಈ ನಡುವೆ ‘ವಿಶ್ವವಾಣಿ’ ಜತೆ ಮಾತನಾಡಿದ ಆನಂದ್, ಪ್ರವಾಸ ಬಗೆಗೆ ನಮ್ಮೊೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

*ಚಿತ್ರೀಕರಣದ ನಡುವೆ ಬಿಡುವಾದಾಗ ಯಾವ ತಾಣಕ್ಕೆೆ ಪ್ರವಾಸಕ್ಕೆೆ ತೆರಳಲು ಬಯಸುತ್ತೀರ?

ಆನಂದ್ : ನನಗೆ ಕರಾವಳಿ ತೀರ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಮಂಗಳೂರಿನ ಕಡಲ ಕಿನಾರೆ ನನ್ನ ಫೆವರೀಟ್. ಅಲ್ಲಿನ ಸಮುದ್ರದ ಭೋರ್ಗರೆತ, ಅಲೆಗಳ ಅಬ್ಬರ – ವಾವ್ ನೋಡಲು ಮನಸಿಗೆ ಮುದ ನೀಡುತ್ತದೆ. ಒತ್ತಡದ ಕೆಲಸದ ಜಂಜಾಟದ ನಡುವೆ ತುಸು ರಿಲ್ಯಾಾಕ್‌ಸ್‌ ಅನ್ನಿಿಸುತ್ತದೆ. ಸಮುದ್ರ ತೀರದಲ್ಲಿ ನಿಂತು ನಮ್ಮ ಮುಂದೆ ಬರುವ ಅಲೆಗಳನ್ನು ನೋಡುತ್ತಿಿದ್ದರೆ, ಒಂದು ಕ್ಷಣ ಎಲ್ಲವನ್ನೂ ಮರೆತು ಬಿಡುತ್ತೇವೆ.

* ಕರಾವಳಿಯಲ್ಲಿ ಸಿಗುವ ಯಾವ ಆಹಾರ ಪದಾರ್ಥ ನಿಮಗಿಷ್ಟ?

ಆನಂದ್ : ನಾನು ಮಾಂಸಾಹಾರಿ ಪ್ರಿಿಯ. ಕಡಲ ಕಿನಾರೆಯಲ್ಲಿ ಸಿಗುವ ಮೀನು, ಸೀಗಡಿಯ ಖಾದ್ಯ ಸವಿಯಲು ಬಲು ರುಚಿ. ಸಮುದ್ರದಲ್ಲಿ ಆಗ ತಾನೇ ಸಿಕ್ಕ ಮೀನುಗಳನ್ನು ಹಿಡಿದು ಅಲ್ಲಿಯೇ ತಿನ್ನಲು ರೆಡಿ ಮಾಡಿಕೊಡುತ್ತಾಾರೆ. ಹಾಗಾಗಿ ಅದು ಬಲು ರುಚಿಕಟ್ಟಾಾಗಿರುತ್ತದೆ.

* ಕಡಲ ಕಿನಾರೆಯಲ್ಲ ಯಾರೊಂದಿಗೆ ಕಳೆಯಲು ಬಯಸುತ್ತೀರ?

ಆನಂದ್ : ನಾನು ಎಲ್ಲೇ ಹೋದರೂ ಸ್ನೇಹಿತರೊಂದಿಗೆ ಹೋಗುತ್ತೇನೆ. ಸ್ನೇಹಿತರೊಂದಿಗೆ ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ಕಡಲು ಮೈದೊಳೆಯುವ ಹೊಂಬಣ್ಣವನ್ನು ನೋಡಯವುದೇ ಬಲು ಹಿತ

* ಯಾವ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡುವುದು ಸೂಕ್ತ ?

ಬೇಸಿಗೆ ಹೊರತುಪಡಿಸಿ ಬೇರೆ ಎಲ್ಲಾ ಸಮಯದಲ್ಲೂ ಮಂಗಳೂರಿಗೆ ಭೇಟಿ ನೀಡಲು ಸೂಕ್ತ ಸಮಯ. ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚಾಾಗಿರುತ್ತದೆ .

* ಪ್ರವಾಸಿಗರಿಗೆ ಯಾವ ಸಲಹೆ ಕೊಡಲು ಬಯಸುತ್ತೀರ ?

ನಿಜವಾಗಿಯೂ ಪ್ರವಾಸ ನಮಗೆ ಹಲವು ವಿಚಾರಗಳನ್ನು ತಿಳಿಸಿಕೊಡುತ್ತದೆ. ನಾವು ಭೇಟಿ ನೀಡುವ ಪ್ರದೇಶದ ಆಚಾರ – ವಿಚಾರ, ಸಂಸ್ಕೃತಿ ಎಲ್ಲವನ್ನೂ ತಿಳಿಯಬಹುದಾಗಿದೆ.