Sunday, 15th December 2024

ಭಾರತದ ಅತ್ಯಂತ ಪರಿಶುದ್ಧ ನದಿ ಉಂಗಟ್

*ಮಂಜುನಾಥ. ಡಿ.ಎಸ್.

ಭಾರತ-ಬಾಂಗ್ಲಾಾ ನಡುವಿನ ಗಡಿಯ ರೀತಿ ಹರಿಯುವ ಉಂಗಟ್ ಅಥವಾ ಡೌಕಿ ನದಿಯು, ವಿಶ್ವದಲ್ಲೇ ಅತಿ ಪರಿಶುದ್ಧ ನದಿಗಳಲ್ಲಿ ಒಂದು ಎಂದು ಹೆಸರಾಗಿದೆ. ತಿಳಿಯಾದ ನೀರು, ಸುತ್ತಲೂ ಕಾಡು, ನದಿಯ ನುಣುಪಾದ ದುಂಡುಗಲ್ಲುಗಳ ನೋಟ – ಎಲ್ಲವೂ ಸೇರಿ ಉಂಗಟ್ ನದಿಯ ಪ್ರವಾಸವನ್ನು ಸ್ಮರಣೀಯವನ್ನಾಾಗಿಸುತ್ತವೆ.

ಹಚ್ಚ ಹಸಿರು ವೃಕ್ಷಗಳಿಂದ ತುಂಬಿದ ಬೆಟ್ಟಗಳು, ಕಣ್ತಣಿಸುವ ಕಣಿವೆಗಳು, ಜಲಪಾತಗಳು, ಮೇಘಗಳಿಂದ ಕೂಡಿದ ಆಗಸ. ಇಂತಹ ಪ್ರಕೃತಿ ಸೌಂದರ್ಯ ಹೊಂದಿರುವ ನಯನಮನೋಹರ ನಾಡು ಮೇಘಾಲಯ. ಪೂರ್ವದ ಸ್ಕಾಾಟ್ಲೆೆಂಡ್ ಎನಿಸಿಕೊಂಡಿದೆ ಈ ಈಶಾನ್ಯ ರಾಜ್ಯ. ರಾಜಧಾನಿ ಷಿಲ್ಲಾಂಗ್‌ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಡೌಕಿ ಬಾಂಗ್ಲಾಾದೇಶದ ಗಡಿಗೆ ಸನಿಹದಲ್ಲಿದೆ. ಪಶ್ಚಿಿಮ ಜೈಂಟಿಯಾ ಬೆಟ್ಟಗಳ ತಪ್ಪಲಿನಲ್ಲಿರುವ ಈ ಪಟ್ಟಣದಲ್ಲಿ ಮನಮೋಹಕ ಉಂಗಟ್ ನದಿ ಹರಿಯುತ್ತದೆ. ಇದು ಭಾರತದಲ್ಲಿನ ಶುಭ್ರವಾದ ನದಿಗಳಲ್ಲಿ ಒಂದು. ಸ್ಥಳೀಯರು ಇದನ್ನು ಡೌಕಿ ನದಿ ಎಂದೂ ಕರೆಯುವುದುಂಟು.

6ನದಿಯ ಸ್ಪಟಿಕಸದೃಶ ಜಲ, ಮೋಹಕ ಪರಿಸರ, ಬೆಳ್ಳಿಿಯ ತೊರೆಗಳು, ನೀರಿನ ಹರಿವಿನಿಂದ ಸವೆದು ನಯವಾದ ಶಿಲೆಗಳು, ಇತ್ಯಾಾದಿಗಳಿಂದಾಗಿ ಈ ಸ್ಥಳ ಮೇಘಾಲಯದ ಜನಪ್ರಿಿಯ ಪ್ರವಾಸಿ ತಾಣಗಳ ಪಟ್ಟಿಿಯಲ್ಲಿ ಸ್ಥಾಾನ ಪಡೆದಿದೆ. ಇಲ್ಲಿ ದೋಣಿ ವಿಹಾರಕ್ಕೂ ಅವಕಾಶವಿದೆ. ಕಣಿವೆಯಲ್ಲಿ ಹರಿಯುವ ತರಂಗಿಣಿಯಲ್ಲಿ ದೋಣಿಯಲ್ಲಿ ಪಯಣಿಸಿ, ಸುತ್ತಲಿನ ಸೌಂದರ್ಯ ಸವಿದು, ನಡುಗಡ್ಡೆೆಯಲ್ಲಿ ವಿಹರಿಸಿ, ಅಲ್ಲಿನ ವಿವಿಧ ಆಕಾರ ಮತ್ತು ಬಣ್ಣಗಳ ಮೊಟ್ಟೆೆಯಾಕಾರದ ಅಸಂಖ್ಯಾಾತ ನುಣುಪು ಕಲ್ಲುಗಳ ಸೌಂದರ್ಯಕ್ಕೆೆ ಮಾರುಹೋದ ಪ್ರವಾಸಿಗರು ಈ ವಿಹಾರ ಕಿನ್ನರ ಲೋಕದ ಅನುಭವ ನೀಡಿತು ಎಂದು ಪ್ರತಿಕ್ರಿಿಯಿಸಿದ್ದಾರೆ.

ಪ್ರತಿ ವರ್ಷ ವಸಂತ ಋತುವಿನಲ್ಲಿ ನಡೆಯುವ ದೋಣಿ ಸ್ಪರ್ಧೆ ಇಲ್ಲಿನ ಇನ್ನೊೊಂದು ಪ್ರಮುಖ ಅಕರ್ಷಣೆ.
ಈ ನದಿಯನ್ನು ದಾಟಲು ಬ್ರಿಿಟಿಷರು 1932ರಲ್ಲಿ ನಿರ್ಮಿಸಿದ ಕಿರು ತೂಗು ಸೇತುವೆ ಈಗಲೂ ಬಳಕೆಯಲ್ಲಿದೆ. ಈ ಪುರಾತನ ಮತ್ತು ಪಾರಂಪರಿಕ ಮೌಲ್ಯ ಹೊಂದಿರುವ ತೂಗುಸೇತುವೆಯ ರಕ್ಷಣೆಯ ಹೊಣೆ ಸೇನಾಪಡೆಯದ್ದು. ಭಾರತ-ಬಾಂಗ್ಲಾಾ ನಡುವಿನ ವಾಣಿಜ್ಯ ವ್ಯವಹಾರದಲ್ಲಿ ಈ ಸೇತುವೆ ಈಗಲೂ ಪ್ರಮುಖ ಪಾತ್ರ ವಹಿಸುತ್ತಿಿದೆ. ಕಲ್ಲಿದ್ದಲು, ಸುಣ್ಣಕಲ್ಲು, ಕಿತ್ತಳೆ, ಅನಾನಸ್, ತರಕಾರಿ, ಇತ್ಯಾಾದಿಗಳು ಡೌಕಿಯಿಂದ ನೆರೆ ರಾಷ್ಟ್ರವನ್ನು ತಲುಪುವುದು ಈ ಸೇತುವೆಯ ಮೂಲಕವೇ. ಜೊತೆಗೆ ಪ್ರವಾಸಿಗರ ದಂಡು! ಹಾಗಾಗಿ ಇಲ್ಲಿ ವಾಹನ ದಟ್ಟಣೆ ಅಧಿಕ. ಇದರ ಪರಿಣಾಮವಾಗಿ ಎರಡು ಕಿಲೋಮೀಟರ್ ದೂರದಲ್ಲಿರುವ ಗಡಿ ತಲುಪಲು ಬಹಳಷ್ಟು ಸಮಯ ಬೇಕಾಗುತ್ತದೆ. ಚಲಿಸದೆ ನಿಂತ ವಾಹನಗಳ ಸಾಲು ಭೂಪ್ರದೇಶದ ಬಾಂಗ್ಲಾಾ ಗಡಿಯನ್ನು ನೋಡುವ ಆಸೆಗೆ ಅಡ್ಡಿಿಯುಂಟುಮಾಡಿತು. ಪರ್ಯಾಯವಾಗಿ, ನದಿಯ ನಡುವಿನ ನುಣುಪು ಕಲ್ಲುಗಳ ಮೇಲೆ ಫಲಕವೊಂದನ್ನಿಿಟ್ಟು ಗುರ್ತಿಸಿದ್ದ ಗಡಿಯನ್ನು ವೀಕ್ಷಿಿಸಿ ತೃಪ್ತಿಿ ಪಟ್ಟುಕೊಂಡಿದ್ದಾಯಿತು!

ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಸಂಜೆ ನಾಲ್ಕು ಗಂಟೆಗೆಲ್ಲ ಕತ್ತಲಾಗಿಬಿಡುತ್ತದೆ. ಅಷ್ಟೇನೂ ದೂರ ಅನಿಸದಿದ್ದರೂ, ಬೆಟ್ಟಗುಡ್ಡಗಳ ತಿರುವು ಹಾದಿಯಿಂದಾಗಿ ಷಿಲ್ಲಾಂಗ್‌ನಿಂದ ಡೌಕಿ ತಲುಪಲು ಮೂರು ನಾಲ್ಕು ತಾಸು ಹಿಡಿಯುತ್ತದೆ. ಹಾಗಾಗಿ, ಪರಿಪೂರ್ಣ ಸೌಂದರ್ಯೋಪಾಸನೆ ಸಾಧ್ಯವಾಗಬೇಕೆಂದರೆ ಮಧ್ಯಾಾಹ್ನದೊಳಗೆ ಡೌಕಿಯನ್ನು ತಲುಪುವುದು ವಿಹಿತ.

ಮೀನಿನ ಶ್ರೀಮಂತ ಖಜಾನೆ
ಭಾರತದ ಅತಿ ಪರಿಶುದ್ಧ ನದಿಗಳಲ್ಲಿ ಉಂಗಟ್ ಒಂದು. ನದಿಯಲ್ಲಿ ಸಂಚರಿಸುವಾಗ, ಹಲವು ಭಾಗಗಳಲ್ಲಿ ತಳದ ನೆಲ ಕಾಣಿಸುವಷ್ಟು ತಿಳಿಯಾಗಿದ ಇದರ ನೀರು. ಪರಿಶುದ್ಧ ಮತ್ತು ಉತ್ತಮ ಗುಣಮಟ್ಟದ ನೀರಿನಿಂದಾಗಿ ಇಲ್ಲಿ ಹಲವು ಪ್ರಬೇಧದ ಮೀನುಗಳಿವೆ; ಸ್ಥಳೀಯರು ಇಲ್ಲಿ ಮೀನು ಹಿಡಿಯುವುದನ್ನು ಕಾಣಬಹುದು. ಪ್ರವಾಸಿಗರು ನದಿಯಲ್ಲಿ ಸಂಚರಿಸುವಾಗ, ಮೀನು ಹಿಡಿಯುವ ದೋಣಿಗಳ ನಡುವೆ ದಾರಿ ಮಾಡಿಕೊಂಡು ಹೋಗಬೇಕು! ಮಳೆ ಬಂದಾಗ ನದಿಯ ನೀರು ತುಸು ಮಬ್ಬಾಾಗುತ್ತದೆ; ಜನವರಿ-ಫೆಬ್ರವರಿಯಲ್ಲಿ ಸ್ಫಟಿಕ ಶುದ್ಧ ನೀರನ್ನು ಕಾಣಬಹುದು. ಈ ನದಿಯು ಭಾರತ ಮತ್ತು ಬಾಂಗ್ಲಾಾದ ಗಡಿಯಾಗಿರುವುದರಿಂದಾಗಿ, ಬಾಂಗ್ಲಾಾದ ಮೀನುಗಾರರು ಭಾರತಕ್ಕೆೆ ಬಂದು ಮೀನು ಹಿಡಿದು ತಮ್ಮ ದೇಶಕ್ಕೆೆ ವಾಪಸಾಗುತ್ತಾಾರೆ.

ಎಲ್ಲಿದೆ
ಮೇಘಾಲಯ ರಾಜ್ಯದ ಷಿಲ್ಲಾಾಂಗ್‌ನಿಂದ 80 ಕಿಮೀ ದೂರದಲ್ಲಿದೆ. ಸುಗಮ ಪ್ರಯಾಣಕ್ಕೆೆ ಟ್ಯಾಾಕ್ಸಿಿ ಉತ್ತಮ. ಅತಿ ಹತ್ತಿಿರದ ರೈಲು ನಿಲ್ದಾಾಣವೆಂದರೆ ಗುವಾಹಟಿ. (180 ಕಿಮೀ)