*ಬೇಲೂರು ರಾಮಮೂರ್ತಿ
ಬಹುದಿನಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರೂ ಸಫಲವಾಗದಿದ್ದಾಾಗ, ಮನೆಯ ಸನಿಹವೇ ಪರಸ್ಪರ ಮೆಚ್ಚುಗೆಯಾದ ಹುಡುಗಿ ದೊರೆತದ್ದು ಹೇಗೆ?
ಪ್ರೀತಿ ಹೇಗೆ ಬೇಕಾದರೂ ಹುಟ್ಟುತ್ತದೆ
ಎರಡು ಹೃದಯಗಳನ್ನು
ಹತ್ತಿಿರ ಅದು ಕಾಯುತ್ತದೆ
ಹೌದು ಪ್ರೀತಿ ಹೇಗೆ ಬೇಕಾದರೂ ಹುಟ್ಟಬಹುದು. ಅದನ್ನು ಹುಡುಕಿಕೊಂಡು ಹೋದವರನ್ನು ಅದು ಕಾಡಿಸಬಹುದು. ಗೊತ್ತೇ ಇಲ್ಲದಂತಿರುವವರ ಎದುರಿಗೆ ಅದು ಧುತ್ತೆೆಂದು ಬಂದು ನಿಲ್ಲಬಹುದು. ಅಂದ ಮೇಲೆ ಪ್ರೀತಿಯಾಗುವುದು ಒಂದು ದೈವ ಸಂಕೇತ ಎನ್ನಬಹುದೇ, ಯೋಗಾಯೋಗ ಎನ್ನಬಹುದೇ. ಇದಕ್ಕೊೊಂದು ನಿದರ್ಶನವೆನ್ನುವಂತಿದೆ ಹಿಂದೆ ನಡೆದಿರುವ ಈ ಘಟನೆ.
ಸುಮ (ಹೆಸರು ಬದಲಾಯಿಸಲಾಗಿದೆ) ಒಂದು ಹಳ್ಳಿಿಯಲ್ಲಿ ಬೆಳೆದ ಹುಡುಗಿ. ಆಗಿನ ಕಾಲದಲ್ಲಿ ಟಿವಿ ಮೊಬೈಲ್ ಮುಂತಾದುವುಗಳೆಲ್ಲ ಇಲ್ಲದಿದ್ದುದರಿಂದ ಪ್ರೇಮಿಗಳ ಕಲ್ಪನೆ ನೋಡುತ್ತಿಿದ್ದ ಸಿನಿಮಾ, ಓದುತ್ತಿಿದ್ದ ಕಾದಂಬರಿಯ ಪಾತ್ರಗಳು ಇವುಗಳಿಗೆ ಸೀಮಿತವಾಗುತ್ತಿಿತ್ತು.
ಹದಿನೆಂಟು ತುಂಬಿದ ಸುಮಳಿಗೆ ಒಳಗೊಳಗೇ ಇದೇನು ಆಗುತ್ತಿಿದೆ ಎನ್ನುವುದರ ಅರಿವು ಆಗಿರಲಿಲ್ಲ. ಬೆಳಗೆದ್ದರೆ ಏನೋ ಉಲ್ಲಾಾಸ, ದಿನಗಳೆಯುತ್ತಿಿದ್ದಂತೆ ಏನೋ ತಳಮಳ, ಒಮ್ಮೆೆ ಆತಂಕ, ಒಮ್ಮೆೆ ಆನಂದ, ಏನನ್ನೋೋ ನೋಡಿದರೆ ಸಂತಸ, ಇನ್ನೇನನ್ನೋೋ ನೋಡಿದರೆ ಗಲಿಬಿಲಿ ಹೀಗೆ. ಇಂಥಾ ಪರಿಸ್ಥಿಿತಿಗಳನ್ನು ಅವಳ ಓರಗೆಯವರ ಬಳಿ ಮಾತ್ರ ಹೇಳಿಕೊಳ್ಳಬಹುದು.
ಇದರ ಜೊತೆಗೆ ಈಚೆಗೆ ಅವಳು ದೇವಸ್ಥಾಾನದ ಸಿಹಿನೀರಿನ ಭಾವಿಗೆ ಹೋಗಿ ಒಂದೆರಡು ನೀರು ಸೇದಿಕೊಂಡು ಬರುವಾಗ ಅವಳ ಮೇಲೆ ಬೀಳುತ್ತಿಿದ್ ಹುಡುಗರ ನೋಟ ಅವಳಿಗೆ ತಲ್ಲಣ ಮೂಡಿಸುತ್ತಿಿತ್ತು. ಅವರ ನೋಟ ಒಂದು ರೀತಿ ಹಿತ ತಂದುಕೊಟ್ಟರೂ ಮರುಕ್ಷಣವೇ ಭಯ ಉಂಟುಮಾಡುತ್ತಿಿತ್ತು. ಅವಳೇ ಒಂದೊಂದು ಬಾರಿ ಅಂಗಡಿಗೆ ಹೋಗಿ ಮನೆಗೆ ಬೇಕಾದ ಸಣ್ಣಪಟ್ಟ ಪದಾರ್ಥಗಳನ್ನು ತರುವುದಿತ್ತು. ಆಗ ಅಂಗಡಿಯವನು ಕೈ ಮುಟ್ಟಿಿ ಚಿಲ್ಲರೆ ಕೊಡುತ್ತಿಿದ್ದ. ಪಕ್ಕದಲ್ಲಿ ನಿಲ್ಲುತ್ತಿಿದ್ದವರು ಅವಳಿಗೆ ಮೈ ತಾಕಿಸುತ್ತಿಿದ್ದರು. ಇವೆಲ್ಲಾಾ ಅವಳಿಗೆ ಹೊಸ ಅನುಭವ. ಇಷ್ಟು ದಿನ ಮಾತಾಡಿಸದೇ ಇದ್ದವರೂ ಏನೋ ವಿಚಾರ ತೆಗೆದು ಮಾತಾಡಿಸುತ್ತಿಿದ್ದರು. ಏನು ಏನು ಏನು ಅಂತ ನೂರು ಪ್ರೆೆಶ್ನೆೆಗಳನ್ನು ಅವಳಲ್ಲಿಯೇ ಕೇಳಿಕೊಳ್ಳುತ್ತಿಿದ್ದಳು. ತನ್ನ ಓರಗೆಯ ಹುಡುಗಿಯರ ಬಳಿ ಕೇಳಿದರೆ ಅವರು ಏನೆಂದುಕೊಳ್ಳುತ್ತಾಾರೋ ಎನ್ನುವ ಸಂಕೋಚ. ಅಮ್ಮನಲ್ಲಂತೂ ಕೇಳುವ ಹಾಗೇ ಇಲ್ಲ. ಅಮ್ಮ ಬೇರೆ ಈಚೀಚೆಗೆ ಸುಮ್ಮಸುಮ್ಮನೆ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿಿರುತ್ತಾಾಳೆ.
ಇಂಥಾ ಸಂದರ್ಭದ ಒಂದು ದಿನ ಪಕ್ಕದ ಮನೆಗೆ ಬಂದ ಬೆಂಗಳೂರಿನ ಹುಡುಗಿ ನಯನ ಪರಿಚಯವಾಯಿತು. ನಗರದ ಬದುಕಿಗೂ ಹಳ್ಳಿಿಯ ಬದುಕಿಗೂ ಅಜಗಜಾಂತರ. ನಯನ ನಗರದ ಸಮಾಚಾರಗಳನ್ನು ಕೇಳಿ ಸುಮ ಮತ್ತವರ ಗೆಳತಿಯರು ಕಣ್ಣರಳಿಸುತ್ತಿಿದ್ದಳು. ನಯನ ಮಾತಾಡುತ್ತಾಾ ನನಗೆ ಸಿಂಚನ ಜೊತೆ ಕ್ರಷ್ ಆಗದೆ ಅಂದಳು. ಸುಮಗೆ ಹಾಗೆಂದರೇನೆಂದೇ ಗೊತ್ತಾಾಗಲಿಲ್ಲ. ನಂತರ ನಯನ ಬಿಡಿಸಿ ಹೇಳಬೇಕಾಯಿತು.
ಕ್ರಷ್ ಹೇಗಾಗುತ್ತೆೆ, ಅದಕ್ಕೆೆ ತಯಾರಿ ಏನು ಇತ್ಯಾಾದಿ ತಿಳಿದಿರಲಿಲ್ಲ. ‘ನೋಡ್ರೇ ಯಾವುದಾದರೂ ಹುಡುಗ ನೋಡುವ ನೋಟಕ್ಕೆೆ ನಿಮ್ಮ ಕಣ್ಣಲ್ಲ, ಹೃದಯ ಪ್ರತಿಕ್ರಿಿಯೆ ನೀಡಿದರೆ ಕ್ರಷ್ ಆಗಿದೆ ಅಂದಳು. ಒಂದೇ ನೋಟದಲ್ಲಿ ಪ್ರೀತಿ ಹುಟ್ಟಿಿಬಿಡುತ್ತೆೆ ಕಣ್ರೇ. ನಾನು ಅವನನ್ನು ಇರಲಿಲ್ಲ. ಒಂದು ದಿನ ನಮ್ಮ ಮನೆಗೆ ಬಂದು ನಮ್ಮ ತಂದೆ ಹತ್ರ ಮಾತಾಡ್ತಾಾ ಕೂತಿದ್ದ. ನಮ್ಮ ದೂರದ ಬಂಧುವಂತೆ. ನಾನು ಕಾಫಿ ಕೊಟ್ಟಾಾಗ ನನ್ನನ್ನು ನೋಡಿದ. ನಾನೂ ನೋಡಿದೆ. ಅಷ್ಟೆೆ. ಅದೇ ಕ್ರಷ್. ಆಮೇಲೆ ಕಾಫಿ ಚನ್ನಾಾಗಿ ಮಾಡಿದ್ರಿಿ. ನೀವೇ ಮಾಡಿದ್ದಾಾ. ನಿಮ್ಮ ಜಡೆ ಚನ್ನಾಾಗಿದೆ ಅಲ್ಲೊೊಂದು ಹೂವು ಇದ್ದರೆ ಇನ್ನೂ ಚನ್ನಾಾಗಿರುತ್ತೆೆ ಅಂದ ಕಣ್ರೇ ಅದೇ ಕ್ರಷ್. ಇನ್ನೊೊಂದು ತಮಾಷೆ ಗೊತ್ತಾಾ ನನ್ನ ಹೃದಯ ಅವನ ಹೃದಯ ಒಂದಾಗೋ ತೀರ್ಮಾನ ಮಾಡಿಬಿಟ್ಟು ನಮ್ಮನ್ನು ನಿಯಂತ್ರಿಿಸುತ್ತಿಿದ್ದವು. ಅವನು ಹೊರಡುವಾಗ ಕಾಫಿ ಚೆನ್ನಾಾಗಿತ್ತು ಅಂತ ಕೈ ನೀಡಿದಾಗ ನಾನೂ ಕೈ ನೀಡೇಬಿಟ್ಟೆೆ. ಇದೇ ಕಣ್ರೇ ಕ್ರಷ್.’
ನಯನ ಇನ್ನೂ ಏನೇನು ಹೇಳ್ತಾಾ ಇದ್ದಳೋ, ಆದರೆ ಅಮ್ಮನ ಧ್ವನಿ ಕೇಳಿ ಸುಮ ಮನೆಗೋಡಿಬಂದಳು. ಆದರೆ ಮುಂದಿನ ಒಂದು ವಾರ ಅವಳ ವಿಹಾರ ಕಲ್ಪನಾ ಲೋಕದಲ್ಲಿ. ಒಳಗೊಳಗೇ ಬಯಕೆ ನನಗೂ ಅಂಥಾ ಒಂದು ಅನುಭವ ಅಗಬಾರದೇ ಅಂತ. ಅಂದಿನಿಂದ ಸುಮ ಪ್ರಪಂಚವನ್ನು ನೋಡುವ ಬೇರೆಯಾದರೆ ಪ್ರಪಂಚವೂ ಅವಳನ್ನು ನೋಡುವ ದೃಷ್ಟಿಿ ಬೇರೆಯಾಯಿತು.
ಅಪ್ಪ ಎಂದಿನಂತೆ ಜಮೀನಿನ ಬಳಿ ಹೋಗಿದ್ದರು. ಸುಮಗೆ ದಿನಾಗಲೂ ಸಾಕಷ್ಟು ಮನೆಗೆಲಸಗಳು ಇರುತ್ತವೆ. ಅವಳು ಏನೇ ಕೆಲಸ ಮಾಡುತ್ತಿಿದ್ದರೂ ಮನದ ಚಿಂತೆ ಕ್ರಷ್ ಬಗ್ಗೆೆ. ಅಮ್ಮ ‘ಒಂದರ್ಧ ಗಂಟೆ ದೇವಸ್ಥಾಾನಕ್ಕೆೆ ಹೋಗಿಬರ್ತೀನಿ, ನಿಮ್ಮಪ್ಪ ಬರೋದರೊಳಗೆ ಅಡಿಗೆ ಆಗಿರಲಿ’ ಅಂದು ಹೋದರು. ಸುಮಗೆ ಕೈ ತುಂಬಾ ಕೆಲಸ. ಆದರೂ ಇತ್ತೀಚಿನ ದಿನಗಳಲ್ಲಿ ಅವಳ ಮನದಲ್ಲಿ ಮೂಡಿರುವ ಭಾವನೆಗಳಿಂದ ಜೀವನ ಸೊಗಸಾಗಿತ್ತು.
ಮನೆಯೊಳಗೆ
ಯಾರದೋ ಧ್ವನಿ ‘ಯಾರ್ರೀ ಒಳಗೆ, ಗೌರಮ್ನೋೋರೇ ಏನ್ ಮಾಡ್ತಿಿದೀರ’ ಅಂದುಕೊಂಡು ಒಬ್ಬ ಯುವಕ ಮನೆಯೊಳಗೆ ಬಂದ. ‘ಓ ಸುಮ ನೀನಾದ್ರೂ ಇದೀಯಲ್ಲ ಒಂದು ಕಪ್ ಬಿಸಿಬಿಸಿ ಕಾಫಿ ಕೊಡು ತಲೆ ನೋಯ್ತಿಿದೆ’ ಅಂದ. ಸುಮ ಹೊರಗೆ ಬಂದು ನೋಡಿದರೆ ಪುಟ್ಟ. ‘ಏನೋ ನಮ್ಮನೆಗೆ ಬಂದು ಒಂದು ವರ್ಷ ಆಗಿತ್ತೇನೋ ಇರು ಕಾಫಿ ತಂದುಕೊಡ್ತೀನಿ’ ಅಂದು ಅಡಿಗೆ ಮನೆಗೆ ಹೋದಳು. ಪುಟ್ಟ ಹಿಂದೆಯೇ ಬಂದು ನಿಂತಿದ್ದು ಅವಳಿಗೆ ಗೊತ್ತಾಾಗಲಿಲ್ಲ. ಕಾಫಿ ಸರಕ್ಕನೆ ತಿರುಗಿದಾಗ ಪುಟ್ಟ ಹಿಂದೆಯೇ ನಿಂತಿದ್ದು ಅವಳಿಗೆ ಗಾಬರಿಯಾಗದಿದ್ದರೂ ಅಚ್ಚರಿಯಾಯಿತು. ಇದೇನೋ ಇಲ್ಲಿ ಬಂದು ನಿಂತಿದೀಯ ಅಂದಳು. ‘ನಾನು ಬರಲಿಲ್ಲ ಕಣೆ ನನ್ನ ಮನಸ್ಸು ಕರ್ಕೊೊಂಡು ಬಂತು’ ಅಂದ. ಕಾಫಿ ಲೋಟದೊಂದಿಗೆ ಅವಳ ಕೈ ಕೂಡಾ ತಾಕಿತು. ಅವನು ಸವರಲಿಲ್ಲ. ಇಬ್ಬರೂ ಅದೂ ಇದೂ ಹರಟಿದರು. ನಡುನಡುವೆ ನಕ್ಕರು. ‘ಇನ್ನೇನು ಅಮ್ಮ ಬರ್ತಾಾಳೆ ಇರು’ ಅಂದು ಅಡಿಗೆ ಮನೆ ಕಡೆ ಹೊರಟಳು. ‘ಇಲ್ಲಿ ಒಬ್ಬನೇ ಬೇಜಾರು, ನನಗೂ ಏನಾದರೂ ಕೊಡು, ನಾನೂ ಅಡಿಗೆ ಮನೆಯಲ್ಲಿ ಇರ್ತೀನಿ’ ಅಂದು ಹಿಂದೆ ಹೊರಟ. ‘ಇದೇನೇ, ನಿನ್ನ ಜಡೆ ಇಷ್ಟುದ್ದ ಇದೆ. ಚೌರಿ ಹಾಕ್ಕೊೊಂಡಿದೀಯ’ ಅಂತ ಕೇಳಿದ. ನಕ್ಕಳು. ‘ನಾನು ಚೌರಿ ಹೇಗೆ ಬೇಕಾದರೂ ಹಾಕ್ಕೊೊಳ್ತೀನಿ, ಅದನ್ನು ಕಟ್ಕೊೊಂಡು ನಿನಗೇನೋ ಅಂದು’ ಹುಸಿಮುನಿಸು ತೋರಿದಳು. ಪುಟ್ಟ ಅವಳ ಜಡೆ ಹಿಡಿದು ‘ಇನ್ನು ಮುಂದೆ ನಿನ್ನನ್ನು ಕಟ್ಕೊೊಂಡು ನನಗೆ ಎಲ್ಲ ಆಗಬೇಕಾಗಿದೆ’ ಅಂದ. ‘ಅಂದ್ರೆೆ ನೀನು ನನ್ನ ಮದುವೆ ಮಾಡ್ಕೊೊತೀಯಾ’ ಅಂದು ಹುಬ್ಬು ಕುಣಿಸಿದಳು
ಮನೆಯವರಿಗೆ ಈ ವಿಚಾರ ತಿಳಿದಾಗ ಎರಡೂ ಮನೆಯವರು ನಿಟ್ಟುಸಿರುಬಿಟ್ಟರು. ನಮ್ಮ ಪುಟ್ಟನಿಗೆ ಹುಡುಗಿ ತೋರಿಸಿ ತೋರಿಸಿ ಸಾಕಾಗಿತ್ತು. ಕಡೆಗೆ ಅವನೇ ಒಂದು ಹುಡುಗಿ ಒಪ್ಪೊೊಂಡ್ನಲ್ಲ ಅದೇ ಸಮಾಧಾನ ಅಂದರು. ಸುಮನ ಮನೆಯವರು ಅವಳು ನೋಡಿದ ಮೊದಲ ಹುಡುಗನನ್ನೇ ಮೆಚ್ಚಿಿದ್ಲಲ್ಲ ಇದನ್ನೇ ಋಣಾನುಬಂಧ ಅನ್ನಬಹುದು. ಹಿರಿಯರೊಬ್ಬರು ಇವರಿಬ್ಬರೂ ಪ್ರೀತಿ ತೋಡಿಕೊಂಡಿದ್ದು ಅಡಿಗೆ ಮನೆಯಲ್ಲಾಾದ್ದರಿಂದ ಇದನ್ನು ಅಡಿಗೆ ಮನೆ ಲವ್ ಎನ್ನಬಹುದೇ ಅಂದಾಗ ಎಲ್ಲರೂ ನಕ್ಕರು. ಪ್ರೀತಿಯೂ ನಕ್ಕು ‘ನಾನು ಯಾವಾಗ ಹೊಕ್ಕು ಯಾರನ್ನು ಯಾರ ತೆಕ್ಕೆೆಗೆ ಬೀಳಿಸುತ್ತೀನಿ ಅನ್ನೋೋದು ನನಗೆ ಮಾತ್ರ ಗೊತ್ತು. ಎಲ್ಲರೂ ನನಗೆ ಅಧೀನ’ ಎಂದದ್ದು ಮಾತ್ರ ಯಾರಿಗೂ ಕೇಳಿಸಲಿಲ್ಲ.