Friday, 22nd November 2024

ಮುರಿದು ಬಿದ್ದ ದುಬಾರಿ ಮದುವೆ

ವಿಶ್ವದ ಅತ್ಯಂತ ದುಬಾರಿ ಮದುವೆಗಳೆಂದು ಕೆಲವು ವಿವಾಹಗಳು ಹೆಸರು ಮಾಡುತ್ತವೆ. ಮಾಧ್ಯಮಗಳಲ್ಲಿ ಆ ಮದುವೆಯ ವೈಭವೋಪೇತ ದೃಶ್ಯಗಳು ಬಿತ್ತರಗೊಂಡು, ಮುಗ್ಧ ಜನರ ಗಮನ ಸೆಳೆಯುತ್ತವೆ. ಆದರೆ ಅಂತಹ ಮದುವೆಗಳು ಎಲ್ಲವೂ ಯಶಸ್ವಿಿಯಾಗಬೇಕೆಂದಿಲ್ಲ. 2005ರಲ್ಲಿ ನಡೆದ ಈ ಮದುವೆಗೆ ಆದ ವೆಚ್ಚ ಸುಮಾರು 2.2 ಮಿಲಿಯ ಡಾಲರ್. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಕ್ರಿಿಸ್ಟೀನಾ ಅಗುಲೆರಾ ಮತ್ತು ಜಾರ್ಡನ್ ಬ್ರಾಾಟ್‌ಮನ್ ನಡುವೆ ನಡೆದ ಈ ಮದುವೆಯು, ನಾಪಾ ವ್ಯಾಾಲಿಯ ನಡುವೆ ನಿರ್ಮಿಸಿದ ಮದುವೆ ಛತ್ರದಲ್ಲಿ ನಡೆಯಿತು. ಅತ್ಯಂತ ದುಬಾರಿ ಮದುವೆಗಳಲ್ಲಿ ಈ ಮದುವೆಯೂ ಒಂದು ಎಂದು ಹೆಸರು ಮಾಡಿತು. ಆದರೆ, ಐದೇ ವರ್ಷದಲ್ಲಿ ಅವರ ನಡುವೆ ಭಿನ್ನಾಾಭಿಪ್ರಾಾಯ ತಲೆದೋರಿತು. ಅವರಿಗೆ ಜನಿಸಿದ ಮಗನನ್ನು ಗಮನದಲ್ಲಿಟ್ಟುಕೊಂಡು, ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಿಸಿದರು. ಆದರೆ, 2010ರಲ್ಲಿ ಅನಿವಾರ್ಯವಾಗಿ ವಿಚ್ಛೇದನ ಮಾಡಿಕೊಳ್ಳಬೇಕಾಯಿತು. ವೈಭವದ ಮದುವೆಗೂ, ದಾಂಪತ್ಯ ಹೊಂದಾಣಿಕೆಗೂ ಸಂಬಂಧ ಇರಬೇಕಿಲ್ಲ ಎಂಬುದನ್ನು ಈ ದುಬಾರಿ ಮದುವೆ ತೋರಿಸಿಕೊಟ್ಟಿಿತು.