Sunday, 24th November 2024

ಅತ್ತೆ ಅಮ್ಮನಾಗಬೇಕು ಸೊಸೆ ಮಗಳಾಗಬೇಕು

*ಸಾಯಿನಂದಾ ಚಿಟ್ಪಾಡಿ

ಒಂದು ಹೆಣ್ಣಿಿಗೆ ಮದುವೆ ಎಂದರೆ ಹಲವು ಸ್ಥಿಿತ್ಯಂತರಗಳ ಕಾಲ. ಪತಿಯೊಂದಿಗೆ ಹೊಸ ಮನೆ ಸೇರಿದ ತಕ್ಷಣ, ಆ ಮನೆಯ ಸದಸ್ಯರೊಂದಿಗೆ ಹೊಂದಿಕೊಂಡು ಬಾಳಬೇಕಾದ ಅನಿವಾರ್ಯತೆ. ಅತ್ತೆೆ-ಸೊಸೆ ನಡುವೆ ಅರ್ಥಪೂರ್ಣ ಬಾಂಧವ್ಯ ಏರ್ಪಟ್ಟಾಾಗ ಬಾಳು ಹಸನಾಗುತ್ತದೆ, ಮನೆಯಲ್ಲಿ ಸಂತಸ ತುಂಬುತ್ತದೆ.

ಮಾಂಗಲ್ಯ ಎಂಬುದು ಕಳಚಿಡುವ ಸರವಲ್ಲ. ಆ ಪವಿತ್ರ ಮೂರು ಗಂಟಲಿ ಏಳು ನಂಟಿದೆ. ಈ ಮದುವೆ ಎಂಬ ಬಂಧನದಲ್ಲಿ ಯಾರು ಯಾರಿಗೂ ಗುಲಾಮರಲ್ಲ. ಹೊಸತಾಗಿ ಮದುವೆಯಾಗಿ ಬರುವ ಹೆಣ್ಣು ಮಗಳೊಬ್ಬಳ ಬದುಕಿನ ಹೊಸ ಅಧ್ಯಾಾಯ ಜೊತೆಗ ಬದುಕಲ್ಲೊೊಂದು ಹೊಸ ಬಂಧಗಳ ಜೋಡಣೆ.
ಮದುವೆ ಎಂಬ ಪದದಲ್ಲಿ ಹೆಣ್ಣಿಿನ ಬದುಕಿಗೆ ಹೊಸ ಅರ್ಥ ಬರುವುದು ನಿಜ. ಎಲ್ಲೋೋ ಹುಟ್ಟಿಿ ಬೆಳೆದ ಮಗಳು, ಇನ್ನೆೆಲ್ಲೋೋ ಸೇರಿ, ಪತಿಯ ಜತೆ ಬಾಳುವುದು ಅವಳ ಬದುಕಿನ ಪ್ರಮುಖ ತಿರುವು. ವಿವಿಧ ಸಂಪ್ರದಾಯ, ವಿಭಿನ್ನ ಆಚರಣೆ ಮತ್ತು ಹೊಸದೊಂದು ನಡುವೆ ಹೊಂದಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಹುಟ್ಟಿಿ ಬೆಳೆದ ಮನೆಯ ರೀತಿ ರಿವಾಜು ಬೇರೆಯೇ, ಆದರೆ ಬದುಕಿ ಬಾಳುವ ಮನೆಯ ಆಚರಣೆಯು ಹಲವು ಬಾರಿ ವಿಭಿನ್ನವಾಗಿರುತ್ತದೆ. ಹೊಸ ಊರು, ಹೊಸ ಜನ, ಹೊಸ ಮನೆ, ಹೊಸ ವಾತಾವರಣ, ಹೊಸ ಸಂಸ್ಕೃತಿ – ಹೀಗಿರುವಾಗ ಹೊಸತಾಗಿ ಮದುವೆಯಾಗಿ ಬಂದ ಹೆಣ್ಣನ್ನು ಪತಿಯ ಪೋಷಕರು ತಮ್ಮ ಮಗಳಾಗಿ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕೆಲವೊಮ್ಮೆೆ ತಪ್ಪನ್ನು ತಿದ್ದಿ ತೀಡಿ, ಅತ್ತೆೆಯೂ ಕೂಡ, ಅಮ್ಮನ ನಿಲ್ಲುವುದು ಅನಿವಾರ್ಯವಾಗಿರುತ್ತದೆ.

ಮದುವೆಯಾಗಿ ತಮ್ಮ ಮನೆಗೆ ಬಂದ ಸೊಸೆಯು ತನ್ನ ಮಗನನ್ನು ದೂರ ಮಾಡುತ್ತಾಾಳೆ ಎಂದು ಭಾವಿಸಿ, ಸೊಸೆಯನ್ನು ಬೇರೆಯವಳು ಎಂದು ಕಡೆಗಣಿಸಿದರೆ, ಅಲ್ಲಿಂದಲೇ ಸಂಬಂಧಗಳ ಒಂದು ಗಾಲಿ ಮುರಿಯಲು ಮುನ್ನುಡಿ ಹಾಕಿದಂತಾಗುತ್ತದೆ. ಈ ಮನೋಭಾವ ಕ್ಷಣಿಕ ಎನಿಸಿದರೆ ಪರವಾಗಿಲ್ಲ, ಆದರೆ ಅದೇ ಸಣ್ಣದಾಗಿ ಬೆಳೆದು ಕ್ರಮೇಣ ದೊಡ್ಡ ಮರವಾಗಿ ನಿಂತರೆ, ಬದುಕೆಂಬ ಬಂಡಿ ವಿರುದ್ಧ ದಿಕ್ಕಿಿನಲ್ಲಿ ಸಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಬಾರದು, ಮದುವೆಯಾಗಿ ಬಂದ ಸೊಸೆಯನ್ನು ಸಹಾನುಭೂತಿಯಿಂದ, ತಮ್ಮ ಮಗಳಂತೆ ನೋಡಿಕೊಳ್ಳಬೇಕು, ಅಲ್ಲಿ ಮಮತೆ ಪ್ರೀತಿ ತುಂಬಿದ ಬಾಂಧವ್ಯವೂ ಬೇಕು. ಅತ್ತೆೆಯು ಸೊಸೆಯ ನಡವಳಿಕೆಯನ್ನು ತಿದ್ದಬೇಕು, ಓರೆಕೋರೆಗಳನ್ನು ತಾಳ್ಮೆೆಯಿಂದ ಸಹಿಸಿಕೊಂಡು, ಸಂಸಾರದಲ್ಲಿ ಸುಮಧುರ ಬಾಂಧವ್ಯ ಬೆಳೆಸಲು ಯತ್ನಿಿಸಬೇಕು. ಇದೇ ರೀತಿ, ಹೊಸದಾಗಿ ಮದುವೆಯಾಗಿ ಬಂದ ಸೊಸೆಯಾದವಳೂ ಅತ್ತೆೆಯನ್ನು ತಾಯಿಯಂತೆ ನೋಡಿಕೊಳ್ಳುವ ಸಹೃದಯಿ ಆಗಿರಬೇಕು. ಅತ್ತೆೆಯ ಮನೋಭಾವ, ವರ್ತನೆ ಮೊದ ಮೊದಲಿಗೆ ತುಸು ಹಿಂಜರಿಕೆ ತರುವ ಸಾಧ್ಯತೆ ಇದೆ. ಮನುಜ ಸಹಜ ಗುಣವಾಗಿದ್ದರಿಂದ, ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ; ಅರಿತು ಅತ್ತೆೆಯ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರಲ್ಲಿ ವಿಶ್ವಾಾಸ ತೋರಿಸಬೇಕು. ಹೀಗಿದ್ದಾಾಗ ಮಾತ್ರ ಸಂಬಂಧಗಳು ಸುಮಧರವಾಗಿರಲು ಸಾಧ್ಯ.

ಮಗ ಮದುವೆಯಾದ ಕೂಡಲೇ ನನ್ನಿಿಂದ ದೂರವಾದ ಎಂದು ತಾಯಿ ಭಾವಿಸುವುದು ತಪ್ಪುು. ಒಬ್ಬ ತಾಯಿಯಾಗಿ ಮತ್ತೊೊಂದೆಡೆಯಾಗಿ ಅತ್ತೆೆಯಾಗಿ ಎರಡು ಪಾತ್ರವನ್ನು ಚೆನ್ನಾಾಗಿ ನಿಭಾಯಿಸುವ ನಿಪುಣತೆಯೂ ಇರಬೇಕು. ಸೊಸೆಯಾಗಿ ಬಂದವಳು ಎಲ್ಲವನ್ನೂ ಕಿತ್ತುಕೊಳ್ಳುತ್ತಾಾಳೆಂದು ಭಾವಿಸಿದರೆ, ಆಕೆಯು ಮಾಡುವ ಒಳ್ಳೆೆಯ ಕೆಲಸವೂ ತಪ್ಪಾಾಗಿ ಕಾಣಿಸುತ್ತದೆ. ಅಲ್ಲಿ ಪ್ರೀತಿ ಮಮತೆಗೆ ಬೆಲೆ ಇರುವುದಿಲ್ಲ, ಬದಲಾಗಿ ಬೆಳಗಾದರೆ ತಪ್ಪನ್ನು ಹುಡುಕುತ ಸಂಬಂಧಗಳ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಾಗಾಗದೇ, ಪ್ರೀತಿ, ವಿಶ್ವಾಾಸ, ಕರುಣೆ ಮತ್ತು ವಾತ್ಸಲ್ಯ ಮನೆಮಾಡುವಂತಹ ವಾತಾವಣವನ್ನು ಸೃಷ್ಟಿಿಸಬೇಕು – ಇದಕ್ಕೆೆ ಅತ್ತೆೆ, ಸೊಸೆ ಮತ್ತು ಮನೆಯ ಎಲ್ಲರೂ ಸಹಕರಿಸಬೇಕು. ಇತರರ ಬೇಸರವನ್ನು, ದುಗುಡವನ್ನು ತಾಳ್ಮೆೆಯಿಂದ ಅರ್ಥಮಾಡಿಕೊಂಡು, ಅದಕ್ಕೆೆ ಹೊಂದಿಕೊಂಡು, ವಾತಾವರಣವನ್ನು ತಿಳಿಗೊಳಿಸಲು ಎಲ್ಲರೂ ಪ್ರಯತ್ನಿಿಸಬೇಕು. ಆಕಸ್ಮಿಿಕವಾಗಿ ಕಂಡುಬರುವ ಮನಸ್ತಾಾಪ ಮತ್ತು ಕೋಪಗಳನ್ನು ತಣಿಸಿ, ಪರಿಸ್ಥಿಿತಿಯನ್ನು ಅರ್ಥ ಮಾಡಿಕೊಂಡು, ವಿಶ್ವಾಾಸವನ್ನು ಬೆಳೆಸಲು ಪ್ರಯತ್ನ ಮಾಡಬೇಕು. ಆಗಲೇ ಸಂಸಾರದಲ್ಲಿ ಪ್ರೀತಿ ಮತ್ತು ವಿಶ್ವಾಾಸಗಳು ಬೆಳೆಯುತ್ತವೆ.

ಇನ್ನು ಸೊಸೆಯಾಗಿ ಮನೆ ಬೆಳಕಾದವಳು, ಅತ್ತೆೆಯನ್ನು ತಾಯಿಯೆಂದು ಭಾವಿಸಿದರೆ ಅಲ್ಲಿ ಸಂಬಂಧಗಳು ಮುರಿದು ಬೀಳಲು ಸಾಧ್ಯವಿಲ್ಲ. ಅರಿತು ಬೆರೆತು ಬಾಳುವ ಮನಸ್ಸು ಅತ್ತೆೆ – ಸೊಸೆ ಇಬ್ಬರಿಗೂ ಇರಬೇಕು. ಹೀಗಿದ್ದಾಾಗ ಮಾತ್ರ ಬಂಧಗಳು ಬಂಧನವಾಗುವುದಿಲ್ಲ. ಮದುವೆ ಕೇವಲ ಗಂಡು ಹೆಣ್ಣಿಿನ ನಡುವೆ ಬೆಸೆಯುವ ಸಂಬಂಧ ಮಾತ್ರವಲ್ಲ. ಇಲ್ಲಿ ಅತ್ತೆೆ ಮಾವ, ನಾದಿನಿ, ಮೈದುನ ಹೀಗೆ ಅನೇಕ ಸಂಬಂಧಗಳು ಗೊತ್ತಿಿಲ್ಲದೇ ಹುಟ್ಟಿಿಕೊಂಡಿರುತ್ತದೆ. ಹೊಸದಾಗಿ ಮದುವೆಯಾದ ಬೇಕಾಗಿರುವುದು ತಪ್ಪನ್ನು ತಿದ್ದಿ ತೀಡುವ ಅತ್ತೆೆ, ತಂದೆಯ ಪ್ರೀತಿಯನ್ನು ನೀಡುವ ಮಾವ, ಮನೆಗೆ ಬಂದ ಹೆಣ್ಣು ನಮ್ಮವರೆಂದು ಭಾವಿಸುವ ಮನೆಯ ಸದಸ್ಯರು. ಹೀಗಿದ್ದಾಾಗ ಮಾತ್ರ ಮನೆಯೆಂಬುದು ಜೇನಿನ ಗೂಡಂತೆ ಇರಲು ಸಾಧ್ಯ. ಅವಳ ಬದುಕಿನ ಹೊಸ ಅಧ್ಯಾಾಯದಲ್ಲಿ ಅತ್ತೆೆ ಅಮ್ಮನಾಗಬೇಕು. ಅದೇ ರೀತಿ ಸೊಸೆ ಮಗಳಾಗಬೇಕು. ಆಗ ಸಂಸಾರದ ಬಂಡಿ ಸಂತಸದಿಂದ ಯಶಸ್ವಿಿಯಾಗಿ ಮುಂದುವರಿಯತ್ತದೆ, ಬಾಳು ಹಸನಾಗುತ್ತದೆ.