Thursday, 12th December 2024

ಮಗುವಿನ ಜನ್ಮ ತಾಯಿಗೆ ಮರುಜನ್ಮ

*ಸರಸ್ವತಿ ವಿಶ್ವನಾಥ್ ಪಾಟೀಲ್ ಕಾರಟಗಿ

ವಿವಾಹದ ನಂತರ ಹೆಣ್ಣು ಎದುರಿಸುವ ಹಲವು ಸವಾಲುಗಳಲ್ಲಿ, ಗರ್ಭ ತಾಳುವುದೂ ಒಂದು. ಪ್ರೀತಿ, ಪ್ರೇಮ, ಗರ್ಭ, ಮಕ್ಕಳಾಗುವುದು ಎಲ್ಲವೂ ಸಹಜವಾಗಿ ನಡೆಯುವ ಕ್ರಿಿಯೆ ಎನಿಸಿದರೂ, ಸಂತಾನೋತ್ಪತ್ತಿಿಯು ಹೆಣ್ಣಿಿನ ಜೀವನದ ಪ್ರಮುಖ ಘಟ್ಟ.

ಹುಟ್ಟುವ ಪ್ರತಿಯೊಂದು ಮಗುವಿನ ಬಾಯಿಂದ ಬರುವ ಮೊದಲ ಎರಡು ಅಕ್ಷರ ಅಮ್ಮ. ಈ ಎರಡು ಸಾಲುಗಳನ್ನು ಎಷ್ಟು ಕೇಳಿದರು ಮತ್ತೆೆ ಮತ್ತೆೆ ಕೇಳಬೇಕು ಅನ್ನಿಿಸೋದು ಸಹಜ. ಏಕೆಂದರೆ ಆ ಸಾಲುಗಳಲ್ಲಿರುವ ಅರ್ಥ, ಆಕರ್ಷಣೆಯೇ ಹಾಗಿದೆ. ಈ ಸಾಲುಗಳು ತಾಯಿಯ ಹಿರಿಮೆಯನ್ನ ಸಾರಿ ಸಾರಿ ಹೇಳುತ್ತಿಿವೆ.

ತನ್ನ ಗರ್ಭದಲ್ಲಿ ಕವಲೊಡೆದ ಪುಟ್ಟ ಜೀವವೊಂದನ್ನು 9 ತಿಂಗಳುಗಳು ಸಲಹಿ, ತನ್ನ ಜೀವದ ಹಂಗನ್ನ ತೊರೆದು ತಾಯಿ ತನ್ನ ಮಗುವಿಗೆ ಜೀವ ನೀಡುತ್ತಾಾಳೆ. ನಿಜ ಪ್ರಸವ ಎಂಬುದು ಪ್ರತಿಯೊಂದು ಹೆಣ್ಣಿಿಗೆ ಮರುಜನ್ಮ ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಆಕೆ ಅಸ್ಟೊೊಂದು ನೋವನ್ನು ಅನುಭವಿಸುತ್ತಾಾಳೆ. ಆದರೂ ಪ್ರತಿಯೊಬ್ಬ ಮಹಿಳೆ ತಾನು ತಾಯಿಯಾಗಬೇಕೆಂದು ಆಶಿಸುವಳು. ತಾಯ್ತನದ ಹಿರಿಮೆಯನ್ನ ಇದು ಸಾರಿ ಹೇಳುತ್ತದೆ.

ಮಗು ಜನಿಸಿದ ಕ್ಷಣದಿಂದ, ತನ್ನೆೆಲ್ಲ ಪ್ರೀತಿ ವಾತ್ಸಲ್ಯವನ್ನು ಆ ಮಗುವಿಗೆ ಧಾರೆ ಎರೆಯುತ್ತಾಾಳೆ. ತನ್ನ ಮಗು ಈ ಜಗದಲ್ಲಿ ಒಂದು ಉತ್ತಮ ಸ್ಥಾಾನವನ್ನು ಹೊಂದಬೇಕು ಎಂದು ಆ ಕ್ಷಣದಿಂದಲೇ ಆಶಿಸುತ್ತ ಅದನ್ನು ಸಾಕಾರಗೊಳಿಸುವ ಕಡೆಗೆ ತನ್ನೆೆಲ್ಲ ಜೀವನವನ್ನು ಮುಡಿಪಾಗಿಟ್ಟು ಅನುಕ್ಷಣವು ಆ ಮಗುವಿನ ಏಳಿಗೆಗಾಗಿ ಶ್ರುಮಿಸುವಳು.

ಗರ್ಭಾವಸ್ಥೆೆ ಎನ್ನುವುದು ಮಹಿಳೆಗೆ ಎಷ್ಟು ಸಂತೋಷದ ಸಂಗತಿಯೋ ಅಷ್ಟೇ ಭಯದ ಸಂಗತಿಯೂ ಹೌದು. ಗರ್ಭಾವಸ್ಥೆೆಯ ಒಂಬತ್ತು ತಿಂಗಳು ಸಹ ವಿಭಿನ್ನ ಅನುಭವ ಹಾಗೂ ವಿಭಿನ್ನ ಬದಲಾವಣೆಯಿಂದ ಕೂಡಿರುತ್ತವೆ. ನಿತ್ಯವೂ ಬದಲಾಗುವ ಹೊಸತನಕ್ಕೆೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧತೆಯನ್ನು ಹೊಂದಿರಬೇಕು.

ಮಗುವಿನ ಬೆಳವಣಿಗೆ ತಾಯಿಯ ದೇಹದೊಳಗೆ ಆಗುವುದರಿಂದ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಆಕೆಯ ನರನಾಡಿಯೊಂದಿಗೆ ಬ್ರೂಣದ ಜೀವ ಬೆಸೆದುಕೊಳ್ಳುವಾಗ ಈ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಮಗು ತಾಯಿಯ ಗರ್ಭದಲ್ಲಿ ನೆಲೆಯಾಗುವಾಗ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ಗರ್ಭಾವಸ್ಥೆೆ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜಿವನದಲ್ಲಿ ಒಂದು ಅದ್ಭುತ ಮತ್ತು ಒತ್ತಡದ ಸಮಯ. ಯಾವುದೇ ಅಸಾಮಾನ್ಯ ಭಾವನೆಗಳೂ ನಿಮ್ಮನ್ನು ಈ ಸಂದರ್ಭದಲ್ಲಿ ಒತ್ತಡಕ್ಕೆೆ ಸಿಲುಕಿಸುತ್ತದೆ. ಜೊತೆಗೆ ಈ ಸಮಯದಲ್ಲಿ ನಿವು ಸದಾ ನಿಮ್ಮ ಹುಟ್ಟುವ ಮಗುವಿನ ಸುರಕ್ಷತೆಯ ಬಗ್ಗೆೆಯೇ ಹೆಚ್ಚಿಿನ ಚಿಂತೆಯನ್ನು ಮಾಡುತ್ತಿಿರುತ್ತೀರಿ. ಆದರೆ ಗರ್ಭಧಾರಣೆಗೆ ಸಂಬಂಧಿಸಿದ ದೆಹಿಕ ಮತ್ತು ಮಾನಸಿಕ ಬದಲಾವಣೆಯನ್ನು ಅನುಭವಿಸುವುದು ಸಹಜ.

ಹುಟ್ಟುವ ಮಕ್ಕಳು ಆರೋಗ್ಯಯುತವಾಗಿ ದಷ್ಟಪುಷ್ಟವಾಗಿ ಬೆಳೆಯಲಿ ಎಂಬುದು ತಾಯಂದಿರ ಆಸೆ. ಅದಕ್ಕಾಾಗಿಯೇ ಗರ್ಭಿಣಿಯರಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ. ಗರ್ಭಾವಸ್ಥೆೆಯು ಮಹಿಳೆಯರ ಜೀವನದ ಪ್ರಮುಖ ಘಟ್ಟವಾಗಿದೆ. ಮಹಿಳೆಗೆ ಮಾತ್ರವಲ್ಲ, ಬೆಳವಣಿಗೆಯ ಹಂತದಲ್ಲಿರುವ ಭ್ರೂಣಕ್ಕೂ ಇದು ಪ್ರಮುಖವಾದದ್ದು. ಏಕೆಂದರೆ, ಭ್ರೂಣವು ಮಗುವಾಗಿ ಬೆಳೆಯುವ ಮತ್ತು ಹೆರಿಗೆಯ ನಂತರ ಹಂತಗಳಲ್ಲಿ ಕೆಲವು ಪರಿಣಾಮಗಳಿಗೆ ತಾಯಿಯ ಗರ್ಭಾವಸ್ಥೆೆಯು ಕಾರಣವಾಗಿರುತ್ತದೆ. ಆದ್ದರಿಂದ ಗರ್ಭಾವಸ್ಥೆೆಯ ಈ ಹಂತದಲ್ಲಿ ತಾಯಿಯ ಹಾಗೂ ಮಗುವಿನ ಮಾನಸಿಕ ಸ್ವಾಾಸ್ಥ್ಯವನ್ನು ಉತ್ತಮಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ.

ಮಾತ್ರೆೆ ಸೇವನೆ ಮಿತಿಯಲ್ಲಿರಲಿ
ವಾಂತಿ, ತಲೆ ನೋವು, ಊಟ-ತಿಂಡಿ ಬೇಡ ಎನಿಸುವುದು, ಹೊಟ್ಟೆೆ ನೋವು, ಬೆನ್ನು ನೋವು, ತಲೆ ನೋವು, ಆಯಾಸದ ಅನುಭವ ಹೀಗೆ ವಿವಿಧ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ತಾಯಿ ಸಹಿಸಿಕೊಳ್ಳಲೇ ಬೇಕು. ಅದಕ್ಕಾಾಗಿ ಯಾವುದೇ ಮಾತ್ರೆೆ ಅಥವಾ ಔಷಧಗಳನ್ನು ಪಡೆಯುವಂತಿರುವುದಿಲ್ಲ. ಹಾಗೊಮ್ಮೆೆ ಸೇವಿಸಿದರೆ ಅದು ಮಗುವಿನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವುದು. ಗರ್ಭಾವಸ್ಥೆೆಯಲ್ಲಿ ಉಂಟಾಗುವ ಬದಲಾವಣೆಗಳು ಅಥವಾ ಆರೋಗ್ಯದ ಸಮಸ್ಯೆೆಯು ಎಲ್ಲಾ ಗರ್ಭಿಣಿಯರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಭಿನ್ನತೆ ಇರುತ್ತದೆ.

ಗರ್ಭಧಾರಣೆಯ ಮೊದಲ ಕೆಲವು ವಾರಗಳು ಅತೀ ಮಹತ್ವದ್ದಾಗಿರುವುದು. ಯಾಕೆಂದರೆ ಈ ವೇಳೆ ನಿಮ್ಮ ಹೊಟ್ಟೆೆಯಲ್ಲಿ ಹೊಸ ಜೀವವೊಂದು ಬೆಳೆಯಲು ಆರಂಭ ಮಾಡುವುದು. ಹೀಗಾಗಿ ನೀವು ನಿಮ್ಮ ಹಾಗೂ ಮಗುವಿನ ಬಗ್ಗೆೆ ಕಾಳಜಿ ವಹಿಸಬೇಕಾಗಿರುವುದು ಅತೀ ಅಗತ್ಯವಾಗಿರುವುದು. ಗರ್ಭಧಾರಣೆಯ ಆರಂಭದ ಕೆಲವು ತಿಂಗಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಕೂಡ ಕೆಲವೊಂದು ಬದಲಾವಣೆ ಕಂಡು ಬರುವುದು. ಹಾರ್ಮೋನ್ ಗಳ ಬದಲಾವಣೆಯಿಂದಾಗಿ ದೇಹದಲ್ಲಿ ಬದಲಾವಣೆ ಆಗುವುದು. ಇದರಿಂದಾಗಿ ಗರ್ಭ ಧಾರಣೆಯ ಮೊದಲ ನಾಲ್ಕು ವಾರಗಳು ಪ್ರಾಾಮುಖ್ಯವಾಗಿರುವುದು.

ಹೆಚ್ಚು ಕಾಫಿ, ಟೀ, ತಂಪು ಪಾನೀಯ ಕುಡಿಯುವುದು, ಚಾಕೋಲೆಟ್ ತಿನ್ನುವುದು ಅಪಾಯಕಾರಿ. ಇವುಗಳಲ್ಲಿರುವ ಕೆಫಿನ್ ದೇಹಕ್ಕೆೆ ಅಗತ್ಯವಿರುವ ಕಬ್ಬಿಿಣಾಂಶವನ್ನು ತಡೆದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾಕಿಂಗ್, ವ್ಯಾಾಯಾಮ ಮಾಡುವರು ಅದನ್ನು ಅಡ್ಡಿಿಯಿಲ್ಲದೆ ಮುಂದುವರಿಸಬಹುದು. ಆದರೆ ಅತಿಯಾಗಿ ಮಾಡಬಾರದು. ದೂರದ ಪ್ರಯಾಣ, ಪ್ರವಾಸ ಅಷ್ಟೊೊಂದು ಒಳ್ಳೆೆಯದಲ್ಲ. ಆಸ್ಪತ್ರೆೆಗೆ ಸಮೀಪದಲ್ಲೇ ಇರುವುದು, ಆಗಾಗ್ಗೆೆ ವೈದ್ಯರ ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಒಳ್ಳೆೆಯದು. ತಂಬಾಕು ಅಗೆಯುವುದು ಅಥವಾ ಬಾಯಲ್ಲಿಟ್ಟುಕೊಳ್ಳುವುದು, ನಶ್ಯೆೆ ಸೇವಿಸುವುದು ಸಾಮಾನ್ಯವಾಗಿ ಗ್ರಾಾಮೀಣ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಮಾರಕವಾಗಿದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಇದನ್ನೆೆಲ್ಲ ತ್ಯಜಿಸಲೇ ಬೇಕಾಗುತ್ತದೆ. ಏಕೆಂದರೆ ಇದರಿಂದ ಮಗುವಿಗೆ ಅಪಾಯವಾಗುವುದಲ್ಲದೆ, ಗರ್ಭಪಾತ, ಅವಧಿಗೆ ಮೊದಲೇ ಹೆರಿಗೆ, ಮಗುವಿನ ತೂಕ ಕಡಿಮೆಯಾಗುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಚಿಕ್ಕ ಪುಟ್ಟ (ಶೀತ, ತಲೆನೋವು ಹೀಗೆ) ತೊಂದರೆ ಕಾಣಿಸಿಕೊಂಡಾಗ ಮಾತ್ರೆೆ ಸೇವಿಸುವುದನ್ನು ನಿಲ್ಲಿಸಬೇಕು. ಯಾವುದೇ ಮಾತ್ರೆೆ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯವಾಗಿ ಪಡೆಯಬೇಕು. ಇಲ್ಲದಿದ್ದರೆ ಸೇವಿಸುವ ತಾಯಿಗೂ ಹೊಟ್ಟೆೆಯಲ್ಲಿರುವ ಮಗುವಿಗೂ ಅಪಾಯ ತಂದೊಡ್ಡಬಹುದು.

ಭಾವೋದ್ವೇಗ ಸಲ್ಲದು
ಗರ್ಭಧಾರಣೆಯ ಶುರುವಿನಲ್ಲಿ ಆಗುವ ಹಾರ್ಮೋನ್ ಬದಲಾವಣೆಯ ನೀವು ಭಾವೋದ್ವೇಗಕ್ಕೆೆ ಒಳಗಾಗುವಂತೆ ಮಾಡುತ್ತದೆ. ಈ ಭಾವನೆಗಳು ಒಳ್ಳೆೆಯದ್ದು ಇರಬಹುದು ಅಥವಾ ಕೆಟ್ಟದ್ದು ಇರಬಹುದು. ಇವುಗಳನ್ನು ಹೇಗೋ ಸಂಭಾಳಿಸಿಕೊಂಡು ಮುಂದೆ ಹೋಗಿ. ಗರ್ಭಧಾರಣೆ ವೇಳೆ ಕೆಲವು ತಿನಿಸುಗಳ ಮೇಲೆ ಬಯಕೆ ಉಂಟು ಮಾಡಿದರೆ, ಇನ್ನು ಕೆಲವು ತಿನಿಸುಗಳು ಕಂಡರೆ ವಾಕರಿಕೆ ಬರುವಂತೆ ಮಾಡುತ್ತದೆ. ಮುಂಚೆ ಇಷ್ಟಪಟ್ಟು ತಿನ್ನುತ್ತಿಿದ್ದ ತಿನಿಸುಗಳು ಈಗ ನಿಮಗೆ ವಾಕರಿಕೆ ತರಿಸಬಹುದು. ಮುಂಚೆ ಇಷ್ಟಪಡದ ತಿನಿಸುಗಳ ಮೇಲೆ ನಿಮಗೆ ಈಗ ಬಯಕೆ ಉಂಟಾಗಬಹುದು.

ಈ ಸಮಯದಲ್ಲಿ, ನೀವು ಸುಲಭವಾಗಿ ಪದೇಪದೇ ಚಂಚಲತೆಯ ಭಾವೋದ್ರೇಕಕ್ಕೆ ಒಳಗಾಗುತ್ತೀರ. ಪ್ರತಿ ದಿನವೂ ಧ್ಯಾಾನಸ್ಥರಾದಾಗ, ಇದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಇದರಿಂದ ಇಬ್ಬರಲ್ಲೂ ಸಾಮರಸ್ಯ ಇಮ್ಮಡಿಸಿ, ನಿಮ್ಮ ಮನಸ್ಸು ಭಾವೋದ್ವೇಗದ ವೈಪರೀತ್ಯಕ್ಕೆೆ ಬಲಿಯಾಗುವದನ್ನು ತಪ್ಪಿಿಸುತ್ತದೆ. ನಿಮ್ಮ ಎಲ್ಲಾ ಭಾವನೆಯ ಸಂವೇದನೆ ಮಗುವಿಗೂ ಉಂಟಾಗುವುದರಿಂದ, ನೀವು ಸಂತೋಷ, ಆರಾಮ ಹಾಗೂ ಪ್ರಶಾಂತವಾಗಿರುವುದು ಅತಿ ಮುಖ್ಯ. ಸ್ವಯಂಚಾಲಿತವಾಗಿ ನಿಮ್ಮ ಒಂದೊಂದು ಸಂವೇದನೆ ಮಗುವಿನಲ್ಲೂ ಪ್ರತಿಫಲಿಸುತ್ತದೆ.

ತಾಯಿಯಾದವಳು ಮಾನಸಿಕ ಒತ್ತಡಕ್ಕೆೆ ಒಳಗಾಗಿದ್ದರೆ ಅಥವಾ ಅವಳಿಗೇನಾದರೂ ಮಾನಸಿಕ ಸಮಸ್ಯೆೆಗಳಿದ್ದರೆ ಅವಧಿಗೆ ಮುನ್ನ ಹೆರಿಗೆಯಾಗುವ ಸಾಧ್ಯತೆಗಳಿರುತ್ತವೆ. ಅಷ್ಟೇ ಅಲ್ಲ, ಜನಿಸಿದ ಮಗುವಿನ ತೂಕ ಕಡಿಮೆಯಾಗುವುದು, ಬೆಳವಣಿಗೆ ಚೆನ್ನಾಾಗಿ ಆಗದಿರುವುದೇ ಮೊದಲಾದ ಸಮಸ್ಯೆೆಗಳೂ ಕಾಣಿಸಿಕೊಳ್ಳಬಹುದು. ಶಿಶುವಿನ ತೂಕ ಕಡಿಮೆಯಾಗಿದೆ ಅಂದರೆ, ಅದು ಗರ್ಭದಲ್ಲಿರುವಾಗ ಸರಿಯಾಗಿ ಬೆಳವಣಿಗೆಯಾಗಿಲ್ಲ ಎಂದರ್ಥ. ಮತ್ತು ಅದರ ಪರಿಣಾಮ ಬಹಳ ಕಾಲದವರೆಗೂ ಮಗುವನ್ನು ಬಾಧಿಸುವುದು. ಆ ಶಿಶು ಮಧುಮೇಹಿಯಾಗಬಹುದು, ಅಧಿಕ ರಕ್ತದೊತ್ತಡದಿಂದ ಬಳಲಬಹುದು ಮತ್ತು ಮುಂದಿನ ವರ್ಷಗಳಲ್ಲಿ, ನಡುವಯಸ್ಸಿಿನಲ್ಲಿಯೇ ಹೃದಯಾಘಾತದಂತಹ ಸಮಸ್ಯೆೆಗಳೂ ಕಾಣಿಸಿಕೊಳ್ಳಬಹುದು. ಹಾಗೆಯೇ ಏಕಾಗ್ರತೆಯ ಕೊರತೆ, ಉದ್ವೇಗ, ಮಾನಸಿಕ ಸಮಸ್ಯೆೆಗಳು ಕಾಣಿಸಿಕೊಳ್ಳಬಹುದು. ಮತ್ತು ಮಗು ಬೆಳೆದಂತೆಲ್ಲಾ ಆ ಸಮಸ್ಯೆೆಗಳು ಅಧಿಕವಾಗಲೂಬಹುದು.

ಗರ್ಭಿಣಿಯಾಗಿರುವ ಸಮಯದಲ್ಲಿ ಮಹಿಳೆಯರು ತಮ್ಮ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ತಮ್ಮ ಜೀವನಶೈಲಿಯನ್ನು ಬದಲಿಸಕೊಳ್ಳಬೇಕು.