Sunday, 15th December 2024

ಪ್ರೀತಿಯ ಬಣ್ಣದ ಚಿತ್ತಾರ

ಶರಣ್ಯ ಕೋಲ್ಚಾರ್

ಪಾರ್ಕ್, ಸಿನಿಮಾ ಥಿಯೇಟರುಗಳಲ್ಲಿ ಪ್ರೀತಿಯ ದಶಾವತಾರ ಕಾಣಸಿಗುತ್ತದೆ!

ಪ್ರೀತಿ ಪದ ಏಕೆ ಇಷ್ಟು ಚೆಂದ! ಪ್ರೀತಿಯ ಒಡನಾಟಗಳು ಏಕೆ ಮತ್ತಷ್ಟು ಚೆಂದ? ಬದುಕಿನುದ್ದಕ್ಕೂ ನನಗೆ ಯಾರು ಮೇಲು ಪ್ರೀತಿ ಆಗಿಲ್ಲ ಅಂದ್ರೆ ನಾನಂತೂ ನಂಬೊದಿಲ್ಲ. ಯಾಕಂದ್ರೆ ಪ್ರತಿಯೊಬ್ಬರಿಗೂ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಮಗೆ ಸರಿ ಹೊಂದಬಲ್ಲ ಒಬ್ಬ ಗೆಳೆಯ/ಗೆಳತಿ ಇz ಇರ್ತಾರೆ. ಅವರೊಂದಿಗೆ ನಗು, ಅಳು, ನೋವು, ಕೋಪ, ನಾಟಕ ಎಲ್ಲಾ ಆಡಿ ಬಿಡ್ತೇವೆ.

ದಿನಾ ಮಾತಾಡ್ತಾ ಮಾತಾಡ್ತಾ ತುಂಬಾ ವಿಚಾರಗಳನ್ನು ಹಂಚಿಕೊಳ್ತೇವೆ. ಅವರ ಸಾಂತ್ವನ, ಅವರ ಧೈರ್ಯ ತುಂಬುವ ಮಾತುಗಳು, ನಗು ಹರಟೆ ಹೀಗೆ ನಿತ್ಯ ಒಡನಾಟದಿಂದ ಮನಸ್ಸು ಹಗುರವಾಗುತ್ತದೆ.

ಬಸ್ಸಿನ ಸೀಟಿನಲ್ಲಿ ಪ್ರೀತಿ!
ಪ್ರೀತಿಯೇ ಹಾಗೆ. ಯಾವ ಕ್ಷಣದಲ್ಲಿಯೂ ಯಾವ ಆಕಾರವನ್ನು ಪಡೆದು ಹೇಗೆ ಬೇಕಾದರೂ ಸೆಳೆಯಬಹುದು. ಜನ ತುಂಬಿದ ಬಸ್ನಲ್ಲಿ ಒಂಟಿ ಕಾಲಿನ ಮೇಲೆ ಭಾರ ಹಾಕಿ ಅಡ್ಡ ಕಂಬಿಯಲ್ಲಿ ನೇತಾಡುವಾಗಲೂ ಕಣ್ಣು ಒಮ್ಮೆ ಸೀಟಿನಲ್ಲಿ ಕುಳಿತವರ ಮೇಲೆ ಓಡಾಡುತ್ತದೆ. ಚೆಂದದ ಹುಡುಗಿ ಅಥವಾ ಹುಡುಗ ಇzನೋ ಅಂತ. ಇದ್ದರೆ ನಮ್ಮ ನಿಲ್ದಾಣ ಬರುವವರೆಗೂ ನಮ್ಮ ಕಣ್ಣು ಪದೇ ಪದೇ ಆ ವ್ಯಕ್ತಿಯ ಮೇಲೆ ಬಿದ್ದಿರುತ್ತದೆ. ನೋಟ ನಿರ್ಲಿಪ್ತವಾಗಿ ಸುಮ್ಮನೆ ಇಳಿದು ಹೋಗುವುದುಂಟು. ಆಗೆಲ್ಲ ಸುಮ್ಮನೆ ಆಕರ್ಷಣೆಗಳಿರುತ್ತದೆ. ದಿನ ನಿತ್ಯ ಭೇಟಿಯಾದರೆ ಆಕರ್ಷಣೆ ನಗುವಾಗಿ, ನೋಟ ಅತಿಯಾಗಿ, ಉಕ್ಕುವ ಪ್ರೀತಿ ನದಿಯಾಗಿ ಬಸ್ಸಿನ ಸೀಟು ಪ್ರೇಮಿಗಳಿಗೆ ಪರ್ಮನೆಂಟ್ ಆಗುವುದುಂಟು.

ಕಾಲೇಜ್ ಬಸ್‌ನಲ್ಲಿ!
ಕಾಲೇಜು ಎದುರು ಹಾದು ಹೋಗುವ ಬಸ್‌ಗಳಲ್ಲಿ ಇದು ಹೆಚ್ಚಾಗಿರುವಂತದ್ದು. ಅವರ ಸರಸ ಸಲ್ಲಾಪ ಬಸ್ಸಿನ ಜನರಿಗೆ ಕಿರಿಕಿರಿ ಆದರೂ ಕಣ್ಣಿಗೆ ಹಬ್ಬವಾಗುತ್ತಿತ್ತು. ಪಾರ್ಕ್, ಸಿನಿಮಾ ಬಿಡಿ. ಅಲ್ಲಿ ಪ್ರೀತಿಯ ದಶಾವತಾರಗಳು ಕಾಣಸಿಗುತ್ತದೆ. ಪ್ರೀತಿಯೇ ಹಾಗೆ ಒಮ್ಮೊಮ್ಮೆ ಸಿಹಿ ಒಮ್ಮೊಮ್ಮೆ ಕಹಿ, ನಗು ನೋವು ನಲಿವು ಮುನಿಸುಗಳ ಸಮ್ಮಿಶ್ರಣ. ಅಂದಿನ ಪ್ರೀತಿ ನೂರಾರು ಜನುಮದವರೆಗೆ ಹಸಿರು. ನೀನೇ ನನ್ನ ಉಸಿರು ಅನ್ನುತ್ತಿದ್ರು.

ಕಬ್ಬನ್ ಪಾರ್ಕ್‌ನಲ್ಲಿ! 
ಆದ್ರೆ ಇಂದು ಬದಲಾಗಿದೆ ಅಲ್ವಾ.. ಬೆಳಗ್ಗೆ ಶುರುವಾದ ಪ್ರೀತಿ ಸಂಜೆಯಾಗೋ ತನಕ ಹಸಿರು. ಮಾರನೇ ದಿನದಿಂದ ಕೆಸರು. ಮೊನ್ನೆ ನಾನು ನನ್ನ ಫ್ರೆಂಡ್
ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದೇವು. ಕಬ್ಬನ್ ಪಾರ್ಕ್‌ನ ನಡುವೆ ಸಾಕಷ್ಟು ಪ್ರೇಮಿಗಳು ಹಲವಾರು ಭಂಗಿಗಳಲ್ಲಿ ಸಪ ಮಾಡ್ತಾ ಇದ್ರು.
ನಡೆದಾಡುವವರ ಕಣ್ಣಿಗೆ ಹಬ್ಬ. ದಾರಿ ತಪ್ಪಿತ್ತು ಅಂತ ಕಬ್ಬನ್ ಪಾರ್ಕ್‌ನ ಅಡ್ಡ ರಸ್ತೆಯಲ್ಲಿ ಸಾಗಿದಾಗ ಪ್ರೇಮಿಗಳು ಕುಳಿತು ಮಾತನಾಡುತ್ತಿದ್ದರು. ಸ್ವಲ್ಪ
ಹೊತ್ತಲ್ಲಿ ಎರಡನೇ ಬಾರಿ ಆ ರಸ್ತೆಯಲ್ಲಿ ಬಂದಾಗ ಹುಡುಗಿ ಹುಡುಗನ ಮಡಿಲಲ್ಲಿ ಅರ್ಧ ಮಲಗಿದ್ದಳು!

ವಸ್ತು ಸಂಗ್ರಹಾಲಯ ವೀಕ್ಷಿಸಿ ಬರುವಾಗ ಆ ಪ್ರೇಮಿಗಳು ಮರದ ಬುಡದಲ್ಲಿ ಮಲಗಿ ಸಂಭಾಷಣೆ ಮಾಡುತ್ತಿದ್ದರು. ನಮ್ಮ ಕಣ್ಣುಗಳು ಪಾವನವಾಯ್ತು!
ಪ್ರೀತಿನ ಹಾದಿ ಬೀದಿಲಿ ನೋಡುಗರಿಗೆ ಈ ರೀತಿ ಹಂಚುವುದೇ! ಕಸ ಗುಡಿಸುವ ಅಮ್ಮಂದಿರು, ಕಸವನ್ನು ಗುಡಿಸಿ ಅವರಿದ್ದ ಜಾಗಕ್ಕೆ ಗುಡ್ಡೆ ಹಾಕಿ ಏನು
ನೋಡಿಲ್ಲವೆಂಬಂತೆ ಸಾಗಿದ್ದು ಮತ್ತೂ ವಿಶೇಷವಾಗಿತ್ತು. ಪಾಪ….ಅವರುಗಳು ಎಷ್ಟು ಅಂತಾ ನೋಡ್ತಾರೆ, ದಿನ ನಿತ್ಯದ ಇಂತಹ ಹಲವು ಸರಸ ಸಲ್ಲಾಪಗಳನ್ನು!

ಈಗಂತೂ ಪ್ರೇಮಿಗಳು ಗೆಳೆಯ ಗೆಳತಿಯರು ಜೋಡಿಯಾಗಿ ಎಂದರಲ್ಲೂ ಕಾಣಿಸುತ್ತಾರೆ. ನಮ್ಮ ಪ್ರೀತಿ ಪಾತ್ರರೊಂದಿಗೆ ಹೀಗೆ ಜೊತೆಯಾಗಿರೋದು
ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳೊದು ಕೂಡ ಒಂದು ರೀತಿಯ ಸುಂದರ ಅನುಭವ ಕಣ್ರೀ.