Friday, 19th July 2024

ದಸರಾದಲ್ಲಿ ಕಂಡ ಮುಖ

ಅಪರ್ಣಾ.ಎ.ಎಸ್.

ಕಂಡಿದ್ದೆ ನಿನ್ನ ಬಾಲ್ಯದಲ್ಲಿ, ಆಗಾಗ ಸುಳಿದಾಡುವ ನಿನ್ನ ಮೋಡಿ, ಕೊನೆಗೂ ಮೊಳಕೆಯೊಡೆಯಿತು ಈಗ ಪ್ರೀತಿ ಯಲ್ಲಿ!

ರೂಮಿ ಕನ್ನಡಕ್ಕೆ : ನಿವೇದಿತಾ ಎಚ್. ನೀನು ಚಂದವಿದ್ದೀಯೆ ಎಂದು ನಾನುಸುರಿದಾಗ ನೀನೆನ್ನ ನಂಬಲೊ ಅಷ್ಟು ಸಖ್ಯ ನಿನಗೆ ನಿನ್ನ ಕುಂದುಕೊರತೆಗಳೊಂದಿಗೆ; ಆದರೆ ಅವೆಲ್ಲವೂ ಸಾಕ್ಷಿಗಳು ನಿನ್ನ ನೋವು ನರಳಾಟಗಳಿಗೆ ಮತ್ತೆ ನಿನ್ನಾತ್ಮ ಹೊಮ್ಮಿಸುವ ಸೌಂದರ್ಯದ ಕಿರಣಗಳವು ಹಸಿರು ಹುಲ್ಲಿನ ನಡುವೆ ಕೋರೈಸುವ ಪುಟ್ಟ ಬಿಳಿಯ ಹೂಗಳಂತೆ: ಮುಚ್ಚಿದ ಕಣ್ಣುಗಳಿಂದಲೂ ಕಾಣಬ ನಿನ್ನ ಚೆಲುವನ್ನಭಿ ಇದು ಸತ್ಯ ನೀ ನಂಬಬೇಕು ನೀನು ನಂಬಲೇಬೇಕು.

ಕಾವ್ಯ ಕಂಕಣ ಬಾಲ್ಯದಲ್ಲಿ ಮೊಳಕೆಯೊಡೆದ ಪ್ರೇಮ ಹೂವಾಗಿ ಅರಳಿತು. ಕನಸಿನಲ್ಲಿ ಕಂಡ ಸುಂದರಿ ನನಸಿಗೆ ಬಂದಾಗ ನಿಜಕ್ಕೂ ಮನದರಸಿಯಾದಾಗ ಅದ್ಯಾಕೋ ಸಂಪೂರ್ಣ ಜಗತ್ತೇ ನನ್ನ ಅಂಗೈಯೊಳಗೆ ಬಂಧಿಯಾಗಿ ಬಿಟ್ಟಿತೇನೋ ಅನ್ನಿಸುವಷ್ಟು ಸಂತಸ ನನ್ನದಾಗಿದೆ. ಮನಸಿಗೆ ತೃಪ್ತಿ ನೀಡಿದ ದಿನಗಳಿವು ಎಂದಿಗೂ ನನ್ನವೇ. ಬಾಳ ಪಯಣದಲ್ಲಿ ನಿನ್ನೊಂದಿಗೆ ಹೆಜ್ಜೆಯಿಡು ವಾಗ ಪ್ರತಿಯೊಂದು ವಿಸ್ಮಯಗಳಿಗೂ ನಿನ್ನದೇ ಹೆಸರಿಡುವ ಪ್ರಯತ್ನದಲ್ಲಿ ಮಗ್ನ ನಾನು.

ಕಾರಣವನ್ನೂ ಹುಡುಕಾಡುತ್ತೇನೆ. ಆದರೇನು ಬಂತು.. ಎಷ್ಟೆಲ್ಲಾ ಪ್ರೇಮಗಳ, ಪ್ರೇಮಿಗಳ ಕುರಿತು ತಿಳಿದಿದ್ದರೂ ನಿನ್ನದೊಂದು ಸಣ್ಣ ಸನಿಹಕ್ಕಿರುವ ಅ ಮತ್ತು ಮತ್ತೆಂದೂ ದೊರಕದು ನನ್ನೊಲವೇ.. ಅದ್ಯಾರೋ ಮಾಯಗಾರನ ಮಾಯೆಯನ್ನೂ ಮೀರಿದ ಸೋಜಿಗವೇ ಸರಿ ನೀನು. ಜಗತ್ತಿನ ಬೇರ‍್ಯಾವ ಪ್ರೇಮದಲ್ಲೂ ನಡೆಯುವು ದಿಲ್ಲ ಎಂಬುದನ್ನು ಅನುರಣಿಸುತ್ತಾ ಮತ್ತೆ ಮತ್ತೆ ನಿನ್ನ ಆ ಇಂಪಾದ ಪ್ರೇಮಕ್ಕೆ ಬೀಳುತ್ತೇನೆ ನಾನು.

ಮಧುರ ಯಾತನೆ
ಅದ್ಯಾವ ಮಾಯೆಯಲ್ಲಿ ಹೊಕ್ಕಿದೆಯೇ ನೀನನ್ನೆದೆಗೆ.. ಹಾ! ಅದೊಂಥರಾ ಮಧುರ ಯಾತನೆ. ಚಿತ್ತಾರದ ಅಂಗಿ ಹಾಕಿಕೊಳ್ಳುವ ವಯಸಿನಿಂದ ಪ್ರಬುದ್ಧಳಾಗಿ ದಾವಣಿ ಹಾಕಿ ಎರಡು ಜಡೆಯಿಂದ ನೀನು ನಾಗರದಂಥ ಉದ್ದನೆಯ ಜಡೆಗೆ ಪರಿವರ್ತನೆಯಾಗುವ ಕಾಲಕ್ಕೂ ನನ್ನವಳೇ ಆಗಿ ಉಳಿದುಹೋಗಿರುವೆ. ಅಂದು ಕಾಲೇಜಿಗೆ ನಾ ಹೋಗುವಾಗ ನೀನಿನ್ನು ಕೋಲುಮಿಠಾಯಿ ತಿನ್ನುತ್ತಾ ಆ ಮುಗ್ಧ ಮುಖ ತೋರುತ್ತಾ ಬಸ್‌ಗೆ ಕಾಯುತ್ತಿದ್ದೆ. ಒಂದೇ ಬಸ್ ಆ ಕೇರಿಯೊಳಗೆ ಹೋಗಲು.

ಅದೊಂದೇ ನನಗಿದ್ದ ರಹದಾರಿ. ಅಂದಿನಿಂದ ಆ ಮುದ್ದು ಮುಖ ಮರೆಯಲಾಗದಷ್ಟು ಹಚ್ಚೆಯಾಗಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ದಸರಾದಲ್ಲಿ ಕಂಡ ಮುಖ ಇನ್ನೂ ಸಣ್ಣ ಹುಡುಗಿ ಅಂತಂದುಕೊಂಡವಳು ಇಂದು ಲಂಗ ದಾವಣಿ ಹಾಕುವ ಯುವತಿ. ಅಂದು ಮೈಸೂರು ದಸರಾದ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ತಿಳಿನೀಲಿ ಬಣ್ಣದ ಶರ್ಟ್ ಧರಿಸಿ ಹಿಂದೆಂದಿ ಗಿಂತಲೂ ತುಸು ಹೆಚ್ಚೇ ಆಕರ್ಷಕವಾಗಿ ಸಿದ್ಧನಾಗಿ ಬಂದಿದ್ದೆ. ನನಗೂ ಅರಿವಿರಲಿಲ್ಲ.

ಮೂಲತಃ ಫೋಟೋ ಜರ್ನಲಿಸ್ಟ್ ಆಗಿದ್ದ ನನಗೆ ಇಂತಹ ಕಾರ್ಯಕ್ರಮಗಳು ಹೊಸದೇನೂ ಅಲ್ಲ. ಆದರೆ ಯಾವತ್ತಿಗೂ ಇಷ್ಟು ಅಕ್ಕರೆಯಿಂದ ಸಜ್ಜಾಗಿದ್ದವನೂ ಅಲ್ಲ ಇಂದು ಮಾತ್ರ ತುಸು ಹೆಚ್ಚೆ ಸಿಂಗರಿಸಿಕೊಂಡಿದ್ದೆ. ಪೆಸ್ಟಿವಲ್‌ಗೆ ಬಂದವನಿಗೆ ಅದ್ಯಾಕೋ ಕಾರ್ನರ್ ಶಾಪ್ ಕಡೆ ಬೇಡ ಎಂದರೂ ಮನ ಸೆಳೆಯುತ್ತಿತ್ತು. ಆದೇನೋ ಆಕರ್ಷಣೆ. ಸದಾ ಕೆಲಸದ ಕಡೆ ಗಮನ ಕೊಡುವ ಹೃದಯಕ್ಕೆ ಅದ್ಯಾಕೋ ಇಂದು ಕಾರ್ನರ್ ಶಾಪ್ ಕಡೆ ಓಡೋ ಹಂಬಲ. ಹಾಗೂಹೀಗೂ ಎಲ್ಲವನ್ನೂ ಮುಗಿಸಿಕೊಂಡು ಕಾರ್ನರ್ ಶಾಪ್ ಕಡೆ ಬಂದವನಿಗೆ ಅಲ್ಲಿ ಅತ್ತಿತ್ತ ಓಲಾಡೋ ಮುಂಗುರುಳ ಸರಿಪಡಿಸಿಕೊಂಡು, ಹಾರಾಡೋ ದುಪ್ಪಟ್ಟವನ್ನು ಕಷ್ಟಪಟ್ಟು ಸರಿಪಡಿಸಿಕೊಂಡು ಬಂದವರಿಗೆ ನಿನ್ನ ಶಾಪ್‌ನ ಆರ್ಟ್‌ವರ್ಕ್‌ನ್ನು ವಿವರಿಸುತ್ತಿದ್ದ ನೀನು ಕಂಡಿದ್ದೆ.

ಮರೆತು ಹೋಗಿದ್ದ ಮುಖ ಮತ್ತೆ ಎದುರಿಗೆ ಬಂದಿತ್ತು. ಅರೇ! ಚೋಟುದ್ದ ಜುಟ್ಟಿನ ವಳೀಗ ಮಾರುದ್ದ ಜಡೆಯವಳು ಅಂದು ಕೊಂಡು ರೆಪ್ಪೆಯಾಡಿಸದೇ ನಿಂತವನಿಗೆ ನೀನು ಚಿಟಿಕೆ ಹೊಡೆದು ಕರೆದಾಗಲೇ ಎಚ್ಚರ. ಅಷ್ಟು ಮೋಡಿ ಮಾಡಿ ಬಲಿ ಹಾಕಿದ್ದೆ ನನ್ನನು.

ಕಾತುರ
ಅಲ್ಲೇ ನಿನ್ನ ಕಲಾಕೃತಿಗಳ ಸಂಪೂರ್ಣ ಮಾಹಿತಿ ತೆಗೆದುಕೊಂಡು ನಮ್ಮ ಮ್ಯಾಗಝೀನ್‌ಗೆ ನಿಮ್ಮ ಕಲಾಕೃತಿಗಳ ಫೋಟೋ ಫೀಚರ್ ಮಾಡಿಸುತ್ತೇನೆ ಸ್ವಲ್ಪ ಮಾಹಿತಿ ಕೊಡಿ ಅಂದಿದ್ದಷ್ಟೇ. ಆ ಮಾಹಿತಿಯ ಜತೆಗೆ ನಿನ್ನ ನಂಬರ್ ಕೂಡಾ ಶೇರ್ ಆಗಿತ್ತು. ಅಂದಿನಿಂದ ಒಂದು ವಾರದವರೆಗೆ ಯಾವುದೇ ಮಾಹಿತಿ ಇಲ್ಲ, ಮಾತಿಲ್ಲ. ನೀನಾದರೋ ಇಂದು ನನ್ನ ಆರ್ಟ್‌ವರ್ಕ್‌ನ ಫೋಟೋ ಫೀಚರ್ ಬರಬಹುದೇನೋ ಎನ್ನುವ ಕುತೂಹಲದಿಂದ ದಿನ ಕಳೆದದ್ದೇ ಬಂತು. ಕಡೆಗೊಮ್ಮೆ ನನಗೆ ಕರೆ ಮಾಡಿ
ಅಲ್ಲಾ ನೀವು ನನ್ನ ಆರ್ಟ್ ವರ್ಕ್‌ನ ಫೋಟೋ ಫೀಚರ್ ಪಬ್ಲಿಷ್ ಮಾಡೋಕೆ ನನ್ನ ಇಂಟರ್ ವ್ಯೂ ಮಾಡಿರೋದಾ ಇಲ್ಲ ಸುಮ್ನೇ ಅಂದಿದ್ದಷ್ಟೇ… ಸುಮ್ಮನೆ ನಗೋದಷ್ಟೇ ನನ್ನ ಉತ್ತರವಾಗಿತ್ತು.

ಅಲ್ಲಿಯವರೆಗೂ ನೀನು ಕರೆ ಮಾಡಲಿ ಕರೆ ಮಾಡಿ ಮಾತಾಡಲಿ ಎನ್ನುವುದೊಂದೇ ಕಾರಣಕ್ಕೆ ಹೋಲ್ಡ್ ಮಾಡಿಸಿದ್ದ ನಿನ್ನ ಆರ್ಟ್ ವರ್ಕ್‌ನ ಫೀಚರ್ ನ್ನು ಅಂದು ಪಬ್ಲಿಷ್ ಮಾಡಿಸಿದೆ. ಒಂದು ವಾರದ ಅಂತರದಲ್ಲಿ ನಿನ್ನ ಮನದಲ್ಲೂ ಪ್ರೀತಿಯ ಬೀಜ ಮೊಳಕೆ ಯೊಡೆಯುವಂತೆ ಮಾಡುವಲ್ಲಿ ನನ್ನ ಪ್ರಯತ್ನ ಫಲ ನೀಡಿತ್ತು.

ಅಂದಿನಿಂದ ಮತ್ತೆ ಫೋನ್ ಕಾಲ್‌ಗಳು, ಆಗಾಗಿನ ಮೀಟಿಂಗ್‌ಗಳೊಂದಿಗೆ ಪ್ರೀತಿಯ ಪಯಣ ಮುಂದುವರಿದಿತ್ತು. ಅದ್ಹೇಗೋ ಈ ಪ್ರೀತಿ ಕಥೆ ನಮ್ಮ ತಂದೆಗೂ ತಿಳಿದಿತ್ತು. ಅಲ್ಲಿಗೆ ಪರಸ್ಪರ ಮನೆಯವರು ಮಾತುಕತೆಗೂ ಬಂದಿದ್ದರು. ಬಾಲ್ಯದಲ್ಲಿ ಮೊಳಕೆ ಯೊಡೆದ ಪ್ರೇಮ ಬದುಕಿನುದ್ದಕ್ಕೂ ಜತೆಯಾಗಿದೆ.
Read E-Paper click here

 

error: Content is protected !!