Thursday, 5th December 2024

ಹಸಿರು ಗಾಜಿನ ಬಳೆಗಳೇ

* ಕ್ಷಿತಿಜ್ ಬೀದರ್
——-
ನಮ್ಮ ದೇಶದ ಮಹಿಳೆಯರ ಕೈಯಲ್ಲಿ ಅಲಂಕಾರ ರೂಪದಲ್ಲಿ ಮೆರೆಯುವ ಬಳೆಗಳಿಗೆ ಅವುಗಳದ್ದೇ ಆದ ಪಾವಿತ್ರ್ಯತೆ ಇದೆ; ಪ್ರಾಾಮುಖ್ಯತೆಯೂ ಇದೆ. ಮದುವೆ ಮನೆಯಲ್ಲಿ ಬಳೆ ತೊಡಿಸುವ ಸಂಪ್ರದಾಯ ಪವಿತ್ರ ಮತ್ತು ಅರ್ಥಪೂರ್ಣ.

16 ಶೃಂಗಾರದಲ್ಲಿ (ಸೋಲಾ ಸಿಂಗಾರ್) ಬಳೆ ತೊಡಿಸುವುದು ಒಂದು ಪ್ರಾಚೀನ ಸಂಪ್ರದಾಯ. ಬಳೆಗಳಿಲ್ಲದಿದ್ದರೆ ಹೆಣ್ಣಿಿನ ಅಲಂಕಾರವೇ ಅಪೂರ್ಣ. ಅಪೂರ್ವ ಸೌಂದರ್ಯ ರಾಶಿಗೆ ಬಣ್ಣದ ಬಳೆಗಳು ವಿಶಿಷ್ಟ ಮೆರಗು ನೀಡುತ್ತವೆ . ಸೌಭಾಗ್ಯದ ಬಳೆಗಳು ಸ್ತ್ರೀತನದ ಸಂಕೇತ. ಅವು ಆಭರಣಗಳಷ್ಟೇ ಅಲ್ಲ , ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬಳೆಗಳು ವೈಜ್ಞಾನಿಕವಾಗಿಯೂ ಅದ್ಭುತ ಮಹತ್ವ ಪಡೆದಿವೆ. ಇತ್ತೀಚಿನ ಬಹಳಷ್ಟು ಯುವತಿಯರಿಗೆ ವೈಜ್ಞಾನಿಕವಾಗಿ ಅದರ ಅರ್ಥ ತಿಳಿದಿಲ್ಲ. ಕೀಳರಿಮೆ, ಅಸಡ್ಡೆೆತನವೆ? ಒಂದೆಳೆಯ ಚಿಕ್ಕ ಗಡಿಯಾರ ಮಾತ್ರ ಮುಂಗೈಯಲ್ಲಿರುತ್ತದೆ. ವಿವಿಧ ಆಕಾರದ ಬಣ್ಣದ ಬಳೆಗಳು ಫ್ಯಾಾಷನ್ ಎನಿಸಿದರೂ ಸಂಪ್ರದಾಯದ ಹೆಸರಿನಲ್ಲಿ ಮೈಲಿಗೆಯಾಗಿಯೇ ಕಾಣಲಾಗುತ್ತಿದೆ. ಆದರೆ ವಾಸ್ತವದಲ್ಲಿ ಬಳೆಗಳನ್ನು ಶೃಂಗಾರಕ್ಕಾಾಗಿ ಧರಿಸಿ ಮೆರೆಯಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೌದು. ಪ್ರಾಾಚೀನ ಕಾಲದಿಂದಲೂ ಸ್ತ್ರೀಯರು ಲೋಹದ ಬಳೆಗಳನ್ನು ಧರಿಸುವುದನ್ನು ಕಾಣುತ್ತೇವಲ್ಲಾ. ಪ್ರಾಾಚೀನ ಆಯುರ್ವೇದ ಗ್ರಂಥದಲ್ಲಿಯೂ ಸ್ತ್ರೀಯರ ಮೂಳೆಗಳು ಗಂಡಸರಿಗಿಂತ ಮೃದುವಾಗಿರುವ ಬಗ್ಗೆೆ ಉಲ್ಲೇಖವಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯವೇ. ಮನೆಯ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಪ್ರಮುಖ ಆಧಾರ ‘ಕೈ’ ಅಂಗವಲ್ಲವೇ…? ಅದನ್ನು ಬಲಪಡಿಸಲು ಸಾಂಪ್ರದಾಯಿಕವಾಗಿ ಬಳೆಗಳನ್ನು ತೊಡಿಸುವ ಪದ್ಧತಿ ಜಾರಿಯಲ್ಲಿ ಬಂದಿದೆ.

ಮುಂಗೈಗೆ ಧರಿಸುವ ಬೆಳ್ಳಿಿ ಬಂಗಾರದ ಬಳೆಗಳಿಂದ ಸ್ತ್ರೀಯರಿಗೆ ಹಲವಾರು ಲಾಭಗಳಿವೆ. ಪ್ರಥಮವಾಗಿ ಕೈಗಳಿಗೆ ಅಧಿಕ ಶಕ್ತಿಿಯ ಪೊರೈಕೆಯಾಗುತ್ತದೆ. ಕೈಯಾಡಿಸಲು ಬಲ ಬಂದಂಥ ಅನುಭವವಾಗುತ್ತದೆ. ವಾತಾವರಣದ ಶಕ್ತಿಿಯನ್ನು ಹೀರಿಕೊಳ್ಳುವ ಗುಣ ಲೋಹದಲ್ಲಿರುವುದರಿಂದ ಶರೀರದ ಕಾರ್ಯ ಚಟುವಟಿಕೆಗೆ ಅಗತ್ಯವಿರುವ ಶಕ್ತಿಿಯನ್ನು ಬಳೆಗಳು ಒದಗಿಸುತ್ತವೆ. ಸತತವಾದ ಘರ್ಷಣೆಯಿಂದ ಶರೀರದಲ್ಲಿ ರಕ್ತ ಪರಿಚಲನೆಯು ಸುಗಮಗೊಳ್ಳುತ್ತದೆ. ಋತು ಚಕ್ರವು ಸುಧಾರಿಸುತ್ತದೆ. ಗರ್ಭಕೋಶಕ್ಕೆೆ ರಭಸವಾದ ರಕ್ತ ಪರಿಚಲನೆ ಸಾಧ್ಯವಾಗುವುದರಿಂದ ಅಂಡಾಣು ಸಮಸ್ಯೆೆಯೂ ಬಗೆಹರಿಯುತ್ತದೆ. ನಾಡಿ ಮಿಡಿತವು ನಿಯಮಿತಗೊಳ್ಳುತ್ತದೆ. ಶರೀರದ ಚರ್ಮದಿಂದ ಬಿಡುಗಡೆಯಾಗುವ ಶಾಖವನ್ನು ಈ ಲೋಹದ ಬಳೆಗಳು ಹೀರಿಕೊಂಡು ದೇಹದ ಉಷ್ಣಾಾಂಶವನ್ನು ಕಾಪಾಡುತ್ತವೆ. ನೋಡುವವರ ಕೆಟ್ಟ ದೃಷ್ಟಿಿಯನ್ನು ಬದಲಿಸುತ್ತದೆ. ಋಣಾತ್ಮಕ ಶಕ್ತಿಿಯನ್ನು ತೆಗೆದುಹಾಕುತ್ತದೆ. ಶರೀರದಲ್ಲಿ ನಕರಾತ್ಮಕ ಶಕ್ತಿಿ ಅಧಿಕಗೊಂಡರೆ ಗಾಜಿನ ಬಳೆಗಳು ತಾನಾಗಿಯೇ ಒಡೆದುಹೋಗುವ ಮೂಲಕ ಸೂಚಕದಂತೆ ಎಚ್ಚರಿಕೆ ನೀಡುತ್ತವೆ. ಅದನ್ನು ಅಪಶಕುನವೆಂದು ಭಾವಿಸಬೇಕಾಗಿಲ್ಲ.

ಮುಂಗೈ ನರಗಳಿಗೆ ಅಕ್ಯು ಪ್ರೆೆಶರ್ ಬೀಳುವುರಿಂದ ಮೆದುಳಿಗೆ ಪ್ರಚೋದನೆಯೂ ಸಿಗುತ್ತದೆ. ಬಳೆಗಳ ಕಿಣಿ ಕಿಣಿ ಸದ್ದು ಮಾನಸಿಕವಾಗಿಯೂ ಅಹ್ಲಾಾದಕರ ಭಾವ ಮೂಡಿಸುತ್ತದೆ. ಇದರ ಇನ್ನೊೊಂದು ಮುಖ್ಯ ಲಾಭವೇನಂದರೆ ಸ್ತ್ರೀಯರಿಗೆ ಆಯಾಸ ಆಗದಿರುವುದು. ಬೆಳ್ಳಿಿ ಬಂಗಾರದ ಬಳೆಗಳ ಘರ್ಷಣೆಯಲ್ಲಿ ಶಕ್ತಿಿ ಉತ್ಪತ್ತಿಿಯಾಗುವುದರಿಂದ ಸ್ತ್ರೀ ನಿರೋಗಿಯಾಗಿ ತೋರುತ್ತಾಾಳೆ. ಅಗೋಚರ ಶಕ್ತಿಿ ಅವಳಲ್ಲಿ ಅವಿರ್ಭವಿಸುವಂತಾಗುತ್ತದೆ. ಬಳೆ ತುಂಬಾ ಸಡಿಲವಾಗಿ ಅಥವಾ ಬಿಗಿಯಾಗಿಯೂ ಇರಬಾರದು. ರಕ್ತನಾಳ ಮತ್ತು ನರಗಳಿಗೆ ಮೃದು ಸ್ಪರ್ಶ ನೀಡುವಂತಿರಬೇಕು. ಇದು ತಕ್ಷಣದಲ್ಲಿ ಕಾಣುವ ಫಲಿತಾಂಶವಲ್ಲ. ಸದಾ ಧರಿಸುವ ಬಳೆಗಳಿಂದ ನಿರಂತರವಾಗಿ ಬದುಕಿನಲ್ಲಿ ಹರಿದು ಬರುವ ಅಗೋಚರ ಚೈತನ್ಯವದು.

 

ಕೆಲ ಗಂಡಸರು ಕಡಗ ಧರಿಸುವುದನ್ನು ಕಾಣುತ್ತೇವಲ್ಲಾ… ಕೈಗೆ ಶಕ್ತಿಿ ಬರುವ ಆಟಗಳಲ್ಲಿ ಬಿಗಿ ಕವಚವನ್ನು ಧರಿಸುವ ಹಿನ್ನೆೆಲೆಯನ್ನು ಗುರುತಿಸಬಹುದಲ್ಲವೇ? ಧಾರ್ಮಿಕವಾಗಿ ಕಡಗ ಧರಿಸುವುದು ಸಿಖ್ಖರಿಗೆ ಕಡ್ಡಾಾಯವಾಗಿರುತ್ತದೆ. ಇದರಿಂದ ಚಂದ್ರ ದೋಷ ನಿವಾರಣೆಯಾಗುವುದಾಗಿ ನಂಬಲಾಗಿದೆ. ಬೆಳ್ಳಿಿ ರೋಗ ನಿವಾರಕ ಲೋಹವಾಗಿರುವುದರಿಂದ ಪುರುಷರು ಅಷ್ಟ ಧಾತುವಿನ ಬಳೆ ಧರಿಸುತ್ತಾಾರೆ. ಅದು ಆರೋಗ್ಯಕರವೇ.

ತಯಾರಿಕೆ
‘ಬಳೆಗಾರ ಚನ್ನಯ್ಯ ಬಂದಿಹನು ಬಾಗಿಲಿಗೆ…..’ ಎಂಬ ಹಾಡಿನೊಂದಿಗೆ ಒಳಗೆಬರಲಪ್ಪಣೆಯೇ…? ಎಂದು ಕೇಳುವ ಬಳೆಗಾರನ ಹಾಜರಾತಿಯ ಹಿಂದೆ ಸಾವಿರಾರು ಕಾರ್ಮಿಕರ ಶ್ರಮವು ಅಡಗಿದೆ ಎಂದರೆ ಅಚ್ಚರಿಯಾಗಬಹುದು! ಅವನಲ್ಲಿಗೆ ಬಳೆಗಳು ಬರುವುದು ಉತ್ತರ ಪ್ರದೇಶದ ಫರಿದಾಬಾದ್ ದಿಂದ! ಬಳೆಗಳಿಗೆ ಪ್ರಸಿದ್ಧವಾದ ಫರಿದಾಬಾದ್ ಇಡೀ ದೇಶಕ್ಕೆೆ ಬಳೆಗಳನ್ನು ಸರಬರಾಜು ಮಾಡುತ್ತದೆ. ಸಾಮಾನ್ಯವಾಗಿ ಮರಳಿನಿಂದ ಗಾಜು ತಯಾರಿಸುವ ಕ್ರಮವು ವೈಜ್ಞಾನಿಕವಾಗಿ ತಿಳಿದಿರುವ ವಿದ್ಯೆೆ. ದೊಡ್ಡ ದೊಡ್ಡ ಭಟ್ಟಿಿಗಳಲ್ಲಿ ಗಾಜಿನ ದ್ರವ ರೂಪದ ಪಾಕನ್ನು ತಯಾರಿಸುತ್ತಾಾರೆ . ಕೋಲುಗಳ ಸಹಾಯದಿಂದ ಗಾಜಿನ ರಸವನ್ನು ಅನುಕೂಲಕ್ಕೆೆ ತಕ್ಕಂತೆ ಭಟ್ಟಿಿಯಿಂದ ಸೆಳೆದು ಬಣ್ಣಗಳ ಲೇಪನ ನೀಡಿ ಬಳೆಗಳ ಆಕಾರದಲ್ಲಿ ಕೋಲುಗಳಿಗೆ ಸುತ್ತುತ್ತಾಾರೆ. ನಿಪುಣ ಕೆಲಸಗಾರರಿಂದ ಮಾತ್ರ ಇಂಥ ಕೆಲಸವು ಸಾಧ್ಯ. ನಿರ್ದಿಷ್ಟ ಆಕಾರದಲ್ಲಿ ವಜ್ರದಿಂದ ಬಳೆಯ ಲಡಿಗಳನ್ನು ಕತ್ತರಿಸಿ ಜೋಡಿಸುತ್ತಾಾರೆ. ಸಾವಿರಾರು ಕಾರ್ಮಿಕರ ಬೆವರು ಶ್ರಮದಿಂದ ಕೊನೆಗೂ ಬಣ್ಣ ತಳೆಯುವ ಗಾಜಿನ ಉದ್ಯಮವು ಹೆಂಗಳೆಯರ ಬಳೆಯ ಸಂಭ್ರಮಕ್ಕೆೆ ಕಾರಣವಾಗುತ್ತದೆಯಲ್ಲವೇ! ಸ್ತ್ರೀ ಆರೋಗ್ಯ ರಕ್ಷಣೆಯಲ್ಲಿ ಬಳೆಗಳು ಪ್ರಮುಖ ಪಾತ್ರವಹಿಸಿದರೂ, ಇಂದಿನ ಜನಾಂಗ ಬಳೆಗಳನ್ನು ಹೆಚ್ಚಿಿನ ಸಂಖ್ಯೆೆಯಲ್ಲಿ ಧರಿಸದೆ ನಿರ್ಲಕ್ಷಿಸುತ್ತಿಿರುವುದು ಮಾತ್ರ ಬೇಸರ ಹುಟ್ಟಿಿಸುತ್ತದೆ. ಬಳೆಗಳನ್ನು ಅವಗಣನೆ ಮಾಡುವುದರಿಂದ ನಮ್ಮ ಸಂಪ್ರದಾಯದ ಒಂದು ಅಂಗವನ್ನು ನಿರ್ಲಕ್ಷಿಿಸಿದಂತಾಗುತ್ತದೆ.

ಮದುವೆ ಮನೆಯಲ್ಲಿ ಬಳೆಗಾರ

ಗಾಜಿನ ಬಳೆಗಳು ಮಹಿಳೆಯರಿಗೆ ಶ್ರೇಷ್ಟ ಎನ್ನುವ ನಂಬಿಕೆ ಇದೆ. ನಮ್ಮ ನಾಡಿನಲ್ಲಿ ಗಾಜಿನ ಬಳೆಗಳ ಜತೆಗೆ, ಬೆಳ್ಳಿಿಯ ಬಳೆ, ಚಿನ್ನದ ಬಳೆಗಳನ್ನು ಧರಿಸುವ ಪದ್ದತಿ ಇದೆ. ಈಚಿನ ದಿನಗಳಲ್ಲಿ ಗಾಜಿನ ಬಳೆಗಳನ್ನು ಧರಿಸುವವರು ಕಡಿಮೆಯಾದರೂ, ಚಿನ್ನದ ಬಳೆಗಳನ್ನು ಧರಿಸುವವರ ಸಂಖ್ಯೆೆ ಹೆಚ್ಚಳಗೊಂಡಿದೆ. ವಿವಿಧ ವಿನ್ಯಾಾಸ ಚಿನ್ನದ ಬಳೆಗಳನ್ನು ಮಾಡಿಸಿಕೊಂಡು, ಮದುವೆ ಮುಂತಾದ ಶುಭ ಕಾರ್ಯಗಳಲ್ಲಿ ಧರಿಸಿ, ಸಡಗರದಿಂದ ಓಡಾಡುವ ಮಹಿಳೆಯರ ಸಂಖ್ಯೆೆಗೆ ಕೊರತೆ ಇಲ್ಲ. ನಮ್ಮ ದೇಶದ ಮದುವೆಯ ಸಮಾರಂಭಕ್ಕೆೆ ಮುನ್ನುಡಿಯಾಗಿ, ಹೆಂಗೆಳೆಯರು ಮತ್ತು ಹೆಣ್ಣುಮಕ್ಕಳು ಹೊಸ ಬಳೆಗಳನ್ನು ಇಡಿಸಿಕೊಳ್ಳುವ ಸಂಭ್ರಮ ಅಪರೂಪದ್ದು. ಮದುವೆ ನಿಗದಿಯಾಗಿರುವ ಮನೆಗಳಿಗೆ ಬಳೆಗಾರ ಬಂದು ‘ಬಳೆ ಇಡಿಸುವ ಶಾಸ್ತ್ರ’ ಮಾಡುವುದೂ ಉಂಟು; ವಿಶೇಷ ವಿನ್ಯಾಾಸದ ಬಳೆಗಳನ್ನು ದೂರದೂರಿಂದ ಹೊತ್ತು ತಂದು, ಮನೆಯ ಮಹಿಳೆಯರಿಗೆ ತೊಡಿಸುವ ಬಳೆಗಾರನ ಸೇವೆಯನ್ನು ಮನೆಯವರು ಬಹು ಗೌರವದಿಂದ ನೋಡುವ ಪದ್ಧತಿ ಸಹ ಇದೆ.