Sunday, 8th September 2024

ಕಿಚನ್ ಎಂಬ ದಾಂಪತ್ಯದ ರೆಫ್ರಿಜರೇಟರ್

*ಖುಷಿ

ನಾವು ವಾಸಿಸುವ ಗೃಹಗಳು ಕೇವಲ ವಾಸಸ್ಥಾಾನಗಳು ಮಾತ್ರವಾಗಿರುವುದಿಲ್ಲ. ಅವು ನಮಗೆ ನೆಮ್ಮದಿ ಒದಗಿಸುವ ಶಾಂತಿಯ ತಾಣಗಳು ಸಹ ಆಗಿರುತ್ತವೆ. ಅದೇ ರೀತಿ ದಾಂಪತ್ಯದಲ್ಲಿ ವಿರಸ ಮೂಡಿದಾಗ, ಅವುಗಳನ್ನು ಅಡುಗೆ ಕೋಣೆಗಳು ಮಹತ್ವದ
ಪಾತ್ರವಹಿಸುತ್ತವೆ.

ಇಂತಹ ಮಾತುಗಳನ್ನು ಕೇಳಿದಾಗ, ದಾಂಪತ್ಯಕ್ಕೂ ಅಡುಗೆ ಕೋಣೆಗೂ ಏನು ಸಂಬಂಧ? ಎನ್ನುವ ಪ್ರಶ್ನೆೆ ನಮ್ಮನ್ನು ಕಾಡುವುದು ಸಹಜ. ಆದರೂ ಖಂಡಿತವಾಗಿಯೂ ಸಂಬಂಧವಿದೆ. ದಂಪತಿಗಳ ನಡುವಿನ ಸರಸ-ಸಲ್ಲಾಾಪಕ್ಕೆೆ ಬೆಡ್ ರೂಂ ಮುಖ್ಯವಲ್ಲವೆ? ಎಂಬ ಪ್ರಶ್ನೆೆ ಪ್ರತಿಯೊಬ್ಬರನ್ನು ಕಾಡುವುದು ಸಹಜ. ಆದರೆ ತಜ್ಞರ ಪ್ರಕಾರ ಬೆಡ್ ರೂಂಗಿಂತಲೂ ಅಡುಗೆ ಕೋಣೆಗಳಲ್ಲಿಯೇ ದಂಪತಿಗಳು ಸಾಮರಸ್ಯ ಸಾಧಿಸಲು ಸಾಧ್ಯ ಎನ್ನುವ ಅಭಿಪ್ರಾಾಯವಿದೆ.

ಏಕೆಂದರೆ, ಅಡುಗೆ ಮಾಡುವ ಸಂದರ್ಭದಲ್ಲಿ ನಾವು ಸಾಮರ್ಥ್ಯ ಉತ್ತಮವಾಗಿರುತ್ತದೆಯಂತೆ. ಇಂತಹ ಸಂದರ್ಭದಲ್ಲಿ ನಡೆಯುವ ನಡೆಯುವ ಸಂವಹನ ಸಾಮರಸ್ಯಕ್ಕೆೆ ಸಹಕಾರಿ ಎಂಬುದು ಒಂದು ಕಾರಣ. ಮತ್ತೊೊಂದು ಕಾರಣವೆಂದರೆ, ಯಾವುದೇ ಪಾಸಿಟಿವ್ ಎನರ್ಜಿ ಇರುವಂತಹ ಮನೆಗಳಲ್ಲಿ ಆ ಕುಟುಂಬದ ಸದಸ್ಯರ ನಡುವೆ ಸಾಮರಸ್ಯ ಉತ್ತಮವಾಗಿರುತ್ತದೆ. ಅದೇರೀತಿ ಬಹುತೇಕ ಮನೆಗಳ ಅಡುಗೆಕೋಣೆಗಳಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ ಎಂಬುದು ಮತ್ತೊೊಂದು ಕಾರಣ.

ಅಲ್ಲದೆ ದಂಪತಿಗಳು ರಾತ್ರಿಿ ಮಲಗುವ ವೇಳೆಗೆ ಬಹಳಷ್ಟು ದಣಿದಿರುತ್ತಾಾರೆ. ಆದ್ದರಿಂದ ಇಂತಹ ಸಮಯದಲ್ಲಿ ಹೆಚ್ಚಿಿನ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಹೆಚ್ಚಿಿನ ಸಮಯವನ್ನು ಅಡುಗೆ ಕೋಣೆಯಲ್ಲಿಯೇ ವಿನಿಯೋಗಿಸುವುದರಿಂದ ಪತ್ನಿಿಯೊಂದಿಗೆ ಹೆಚ್ಚಿಿನ ವಿಚಾರಗಳನ್ನು ವಿನಿಮಯಮಾಡಿಕೊಳ್ಳಲು ಹಾಗೂ ಮುನಿಸುಗಳನ್ನು ಬಗೆಹರಿಸಿಕೊಳ್ಳಲು ಅಡುಗೆ ಕೋಣೆಯೇ ಸೂಕ್ತವಾದ ಸ್ಥಳ ಎನ್ನಲಾಗುತ್ತದೆ.

ದಾಂಪತ್ಯದ ಆರಂಭಿಕ ದಿನಗಳಲ್ಲಿ ದಂಪತಿಗಳು ಹೆಚ್ಚಿಿನ ಸಮಯವನ್ನು ಅಡುಗೆ ಕೋಣೆಯಲ್ಲಿಯೇ ಕಳೆಯುವುದನ್ನು ಕಾಣುತ್ತೇವೆ. ಕೆಲವು ವರ್ಷಗಳ ನಂತರ ಅಡುಗೆ ಕೋಣೆ ಕೇವಲ ಮಹಿಳೆಗೆ ಸೀಮಿತ ಎನ್ನುವಂತಾಗುತ್ತದೆ. ಇದರಿಂದ ಮಹಿಳೆಯರಲ್ಲಿ ಬೇಸರ ಮೂಡಿ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಅಡುಗೆ ಕೋಣೆ ಕೆಲಸಗಳಲ್ಲಿ ಪುರುಷರ ಸಹ ಇದ್ದಾಾಗ ಮಾತ್ರ ದಂಪತಿಗಳಲ್ಲಿ ಸಮಾನತೆ ಕಂಡುಬರಲು ಸಾಧ್ಯ. ಜತೆಗೆ ಬಾಂಧವ್ಯ ವೃದ್ಧಿಿಗೆ ಸಹಕಾರಿಯಾಗಿರುತ್ತದೆ. ಆದ್ದರಿಂದ ಕಿಚನ್ ಎಂಬುದು ಕೇವಲ ಪಾಕಶಾಲೆಯಲ್ಲ, ದಂಪತಿಗಳ ನಡುವಿನ ಬಾಂಧವ್ಯವನ್ನುಹಳಸದಂತೆ ಕಾಪಾಡುವ ರೆಫ್ರಿಿಜಯೇಟರ್ ಸಹ ಹೌದು.

ಗಂಡ ಹೆಂಡತಿ, ಸಂಸಾರ ಎಂದಾಗ ಒಮ್ಮೊೊಮ್ಮೆೆ ಮಾತುಗಳು ವ್ಯತ್ಯಾಾಸವಾಗಿ ಕಸಿವಿಸಿ ಉಂಟಾಗುತ್ತದೆ. ಅದೇ ವಿಷಯವನ್ನು ಹಿಡಿದು ಎಳೆದಾಡಬಾರದು. ಶಾಂತವಾಗಿರುವ ಸಮುದ್ರದಲ್ಲಿ ಆಗೊಮ್ಮೆೆ ಈಗೊಮ್ಮೆೆ ಬೃಹಾದಾಕಾರದ ಅಲೆ ಏಳುವಂತೆ ಸಂಸಾರದಲ್ಲೂ ಕೋಪ, ತಾಪ ಮನಸ್ತಾಾಪಗಳು ಸಾಮಾನ್ಯ ಆದರೆ, ಅಲ್ಲಿಯೇ ಬಿಟ್ಟು ಮುಂದಿನ ಜೀವನದ ಬಗ್ಗೆೆ ಗಮನ ಹರಿಸಬೇಕು ಇಲ್ಲವಾದರೆ ಸಂಸಾರ ಅವನತಿಗೆ ಸಾಗುತ್ತದೆ.

Leave a Reply

Your email address will not be published. Required fields are marked *

error: Content is protected !!