* ಶ್ರೀರಕ್ಷ ರಾವ್ ಪುನರೂರು
ನಿನ್ನ ನೋಡಿದ ಮೊದಲನೋಟದ ಕಾಟವೋ ಅಥವಾ ಹುಚ್ಚುಕೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಆದರೆ ನಿನ್ನನ್ನು ಮರೆಯುವ ನಿನ್ನನ್ನು ಮನಸ್ಸಿನಿಂದ ಅಳಿಸುವ ಸಾಹಸದಲ್ಲಿ ನಾನು ಪ್ರತಿಬಾರಿಯು ಸೋಲುತ್ತಿದ್ದೇನೆ.
ಏಯ್ ಸೋಲುತ್ತಿದ್ದೇನೆ ಎಂದಮಾತ್ರಕ್ಕೆ ನೀನು ಗೆದ್ದೆೆ ಎಂದೇನಲ್ಲ. ಆದರೂ ನನ್ನ ಮನದರಸನಿಗೆ ಈ ಪತ್ರವನ್ನು ಬರೆಯಬಾರದೆಂದು ನನ್ನ ಕೈ ಮನಸ್ಸನ್ನು ಅದೆಷ್ಟು ಹಿಡಿದಿಟ್ಟಷ್ಟು ಮನದ ಒದ್ದಾಟ ಈ ಪತ್ರವನ್ನು ಬರೆಸುತ್ತಿದೆ. ಇಲ್ಲಿಯವರೆಗೆ ನನ್ನಲ್ಲೇ ಬಚ್ಚಿಟ್ಟ ಪ್ರೇಮ ವಿರಹದ ನಿವೇದನೆಯನ್ನು ಇನ್ನಾಾದರು ಹೇಳಿಕೊಳ್ಳೋಣ ಎನ್ನುವ ಹುಚ್ಚು ಧೈರ್ಯವನ್ನು ಮಾಡುತ್ತಿದ್ದೇನೆ. ವಾವ್ ನಿನ್ನದು ಮೂರಕ್ಷರದ ಸುಂದರ ಹೆಸರು. ಆದರೂ ನಿನ್ನ ತುಂಟತನಕ್ಕೆೆ ನಾನು ನಿನ್ನನ್ನು ಪ್ರತಿಭಾರಿಯು ಬಾಬು ಅಂತ ಸಂಬೋಧಿಸುತ್ತಿದ್ದೆೆ. ನಿನ್ನ ಆ ಮೇಲಿರುವ ಚಿಗುರುಮೀಸೆ, ಮೇಕೆಗಡ್ಡದಲ್ಲಿ ಕೈಯಾಡಿಸುವ ಭಾಗ್ಯ ನನಗೆ ದೊರೆಕಿದ್ದರೆ? ದೊರೆಯಬಹುದೆಂಬ ಸಣ್ಣ ಆಶೆ ಈ ಪುಟ್ಟಮನದಲ್ಲಿ. ಬೆಳದಿಂಗಳಲ್ಲಿ ಮೂಡುವಂತಹ ಕೋಲ್ಮಿಿಂಚಿನಂತೆ ಪ್ರಖರವಾಗಿ ಹೊಳೆಯುವ ನಿನ್ನ ಕಣ್ಣೋೋಟ, ಸಂಪಿಗೆಯಂತಹ ನೀಳವಾದ ಮೂಗು, ಚಿಗುರುಮೀಸೆಯನ್ನು ತಿರುವುತ್ತಾಾ ತುಟಿಯಂಚಲ್ಲಿ ಮೂಡುವ ಆ ಕಿರು ನಗು. ನಿನ್ನ ಸನಿಹ, ನಿನ್ನ ಆ ಒರಟು ಸ್ಪರ್ಶ, ಬೆಚ್ಚನೆಯ ಗೆಳೆತನದ ಭಾವನೆ, ಇವೆಲ್ಲ ನಮ್ಮ ಪ್ರೀತಿಗೆ ಮುನ್ನುಡಿ ಬರೆದಿತ್ತು. ನಿನ್ನನ್ನು ನನ್ನ ಅಂಗೈ ಅಗಲದಷ್ಟು ಇರುವ ಪುಟ್ಟ ಬಚ್ಚಿಡುವ ಆಸೆ. ಆ ಆಸೆಗೆ ನಿನ್ನ ಸಮ್ಮತಿ ಯಾವಾಗ ಸಿಗುವುದೋ ತಿಳಿದಿಲ್ಲ.
ನಿನ್ನೊೊಡನೆ ಫೋನಿನಲ್ಲಿ ಮಾತಾಡುವಾಗ ಇರುವ ಧೈರ್ಯ ನಾವಿಬ್ಬರು ಎದುರಾಗುವಾಗ ಖಂಡಿತವಾಗಿಯು ಇರುವುದಿಲ್ಲ. ಆದರೆ ನಿನ್ನೊೊಡನೆ ಸೂರ್ಯಹುಟ್ಟಿ ಮುಳುಗೋವರೆಗೆ ಮಾತಾಡಲು ಈ ಮನ ಪ್ರತಿಬಾರಿಯು ಹಂಬಲಿಸುತ್ತಿರುತ್ತದೆ. ನೀನು ನನ್ನ ಮೇಲೆ ಪ್ರತೀಸಲ ಗದರುವಾಗ ಅದರಹಿಂದೆ ಇರುವುದು ಪ್ರೀತಿಯೋ, ಗೆಳೆತನವೋ, ಕಾಳಜಿಯೋ ಏನೋ ತಿಳಿಯದಷ್ಟು ಗೋಜಲು, ಗೋಜಲಾಗಿದೆ. ಬಾಬು ನನಗೊಂದು ಆಸೆ ನಿನ್ನ ಕಣ್ಣ ಆಲಿಯಲ್ಲಿ ಪ್ರತಿಬಾರಿ ನಾನೇ ನಿನ್ನ ತೋಳತೆಕ್ಕೆೆ ಕೇವಲನನಗಾಗಿ ಮಾತ್ರಇರಬೇಕು. ಈ ಆಸೆಯೆಂಬ ಮೂಟೆಯನ್ನು ಹೊತ್ತು ನಿನ್ನ ಜೊತೆ ಪ್ರತಿದಿನವು ಹೆಜ್ಜೆೆ ಹಾಕುತ್ತಿದ್ದೇನೆ. ಆಕಾಶದಲ್ಲಿ ಅನೇಕ ನಕ್ಷತ್ರಗಳಿದ್ದರು ನನಗಿಷ್ಟವಾಗಿದ್ದು ಆ ಹೊಳೆಯುವ ಚಂದ್ರನೊಬ್ಬನೆ ಆ ಹೊಳೆಯುವ ಚಂದ್ರ ನಿನಾಗುವೆಯ? ಇಷ್ಟೆೆಲ್ಲ ಹೇಳುತ್ತಿಿದ್ದೇನೆ ಎಂದರೆ ನಿನ್ನ ಅಗಲಿ ನಾನು ಮುಂದಿನ ಬಾಳನ್ನು ಹೇಗೆ ಊಹಿಸಿಕೊಳ್ಳಲಿ ಹೇಳು. ನಿನ್ನ ಒರಟುಕೈಗೆ ನನ್ನ ಮೃದು ಹಸ್ತವನ್ನು ಸೇರಿಸಿ ಇಳಿಸಂಜೆಯಲ್ಲಿ ಸಮುದ್ರದಡದಲ್ಲಿ ನಿನ್ರ್ನೆೆಂದಿಗೆ ಹೆಜ್ಜೆಹಾಕಬೇಕೆಂಬ ಹುಚ್ಚು ಆಸೆ. ಎಲ್ಲರೂ ನಮ್ಮ ಎಂಥಾ ಮುದ್ದಾಾದ ಜೋಡಿ ಎಂದು ಹೇಳಬೇಕು. ಬಾಬು ಪ್ರೀತಿಯಲ್ಲಿ ಬೀಳುವ ಮನಸ್ಸು ಚಂಚಲ, ಆತುರವಾಗಿರುತ್ತದೆ ಹಾಗಾಗಿ ನಾನು ಕಾಯುವ ತಾಳ್ಮೆೆ ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಮತ್ತು ಈ ಪತ್ರದ ಸಾರಾಂಶ ಏನೆಂದರೆ ನಾನು ನಿನ್ನನ್ನು ಮನಸಾರೆ ಒಪ್ಪಿದ್ದೇನೆ. ನೀನು ನನ್ನನ್ನು ಒಪ್ಪಿ ಅಪ್ಪಿಕೊಳ್ಳುವೆ ಎನ್ನುವ ಹವಣಿಕೆಯಲ್ಲಿ ಕಾಯುತ್ತಿದ್ದೇನೆ. ಆದಷ್ಟು ಬೇಗ ನನ್ನನ್ನು ಒಪ್ಪಿ ಅಪ್ಪಿಕೊ ಬಾಬು.