Friday, 22nd November 2024

ಪ್ರೀತಿ ಬೆಳೆಯುವುದು ಹೇಗೆ?

 ರಾತ್ರಿಿ 11ರ ಬಳಿಕ ಆನ್‌ಲೈನ್‌ಗೆ ಬಂದ. ತಡರಾತ್ರಿಿ 1ರ ವರೆಗೂ ದೈನಂದಿನ ಚಟುವಟಿಕೆ, ಇಷ್ಟ-ಕಷ್ಟಗಳು.. ಇತ್ಯಾಾದಿ ಹರಟೆ ಮುಂದುವರಿದಿತ್ತು. ಆದರೆ ಇಬ್ಬರೂ ನಂಬರ್ ಅಥವಾ ವೀಡಿಯೋ ಕಾಲ್ ಮಾಡಿರಲಿಲ್ಲ. ಬರೀ ಹ್ಯಾಾಂಗೌಟ್‌ನಲ್ಲೇ ಹರಟೆ ಹೊಡೆಯುತ್ತಿಿದ್ದೆೆವು. ನಿಧಾನವಾಗಿ ಅವನೆಡೆಗೆ ಆಕರ್ಷಿತಳಾಗುತ್ತಿಿದ್ದೆೆ. ಇಂಟೆಲಿಜೆಂಟ್. ತೀರಾ ಸರಳವಾಗಿದ್ದ. ಇವನನ್ನು ಕೈ ಹಿಡಿದರೆ ಒಳ್ಳೆೆಯದಾಗುತ್ತದೆ ಅಂತ ಅನ್ನಿಿಸಲು ಪ್ರಾಾರಂಭವಾಗಿತ್ತು.

ಜೀವನವನ್ನು ಗಮನಿಸುತ್ತಾಾ ಹೋದರೆ, ಕುಟುಂಬ, ಪ್ರೀತಿ ಮೊದಲಾದವುಗಳ ಕುರಿತು ವಿಸ್ಮಯ, ಅಚ್ಚರಿ ಮತ್ತು ಸಂತಸ ಮೂಡುತ್ತದೆ. ಎರಡು ಮನಸುಗಳ ಮಧ್ಯೆೆ ಪ್ರೀತಿ ಮೂಡುವ ಪರಿಯೇ ವಿಶಿಷ್ಠ. ನಮ್ಮದು ಅರೇಂಜ್‌ಡ್‌ ಮ್ಯಾಾರೇಜ್. ಆಗ ನನಗೆ 24 ಮುಂಬೈನಲ್ಲಿ ಕೆಲಸ ಮಾಡುತ್ತಿಿದ್ದೆೆ. ಇತ್ತ ಮನೆಯಲ್ಲಿ ಮದುವೆಗೆ ಒಳ್ಳೆೆ ಹುಡುಗನನ್ನು ಹುಡುಕುತ್ತಿಿದ್ದರು. ಹಾಗಿದ್ದಾಾಗ ಮನೆಯಿಂದ ಫೋನ್ ಮಾಡಿ, ಭೋಪಾಲ್ ಮೂಲದ ಹುಡುಗನನ್ನು ಭೇಟಿ ಮಾಡು. ಇಬ್ಬರಿಗೂ ಒಪ್ಪಿಿಗೆಯಾದರೆ ಮುಂದಿನ ಮಾತುಕತೆ ನಡೆಸುತ್ತೇವೆ ಅಂತ ಹೇಳಿದರು. ನಾನು, ಅವನ ಫೋಟೋ ಹಾಗೂ ಬಯೋಡಾಟ ಕಳುಹಿಸುವಂತೆ ಕೇಳಿದ್ದಕ್ಕೆೆ, ಎರಡೇ ದಿನದಲ್ಲಿ ಅವನದೇ ಇ-ಮೇಲ್‌ನಿಂದ ಕಳುಹಿಸಿದ್ದ 2-3 ಭಾವಚಿತ್ರಗಳು ನನ್ನ ಕಂಪ್ಯೂೂಟರ್ ಪರದೆಯ ಮೇಲಿತ್ತು. ಅದಕ್ಕೆೆ ಪ್ರತಿಯಾಗಿ ಫೋಟೋಗಳನ್ನು ಸೆಂಡ್ ಮಾಡಿದ್ದೆೆ. ಬಳಿಕ ಮೆಚ್ಚಿಿಸಲು ಇವನನ್ನು ಮಾತನಾಡಿಸಲು ಒಪ್ಪಿಿಕೊಂಡಿದ್ದೆೆ. ಅದೂ ಎರಡು ತಿಂಗಳ ಬಳಿಕ.

ಹೀಗೆ ನಾವಿಬ್ಬರೂ ಫೋಟೋ ನೋಡಿ ಹದಿನೈದು ದಿನ ಕಳೆದಿತ್ತು. ಇದ್ದಕ್ಕಿಿದ್ದಂತೆ ಗೂಗಲ್ ಹ್ಯಾಾಂಗೌಟ್‌ನಲ್ಲಿ ಅವನಿಂದ ರಿಕ್ವೆೆಸ್‌ಟ್‌ ಬಂತು. ನಾನು ಅಕ್ಸೆೆಪ್‌ಟ್‌ ಮಾಡಿದ್ದೆೆ. ಬಳಿಕ ಅವನು ಚಾಟ್ ಮಾಡಿ ನಮ್ಮಿಿಬ್ಬರ ಮೀಟಿಂಗ್ ಬಗ್ಗೆೆ ಮಾತನಾಡುತ್ತಾಾನೆ ಅಂದುಕೊಂಡರೆ ಅದಾಗಲಿಲ್ಲ. ಇಡೀ ದಿನ ಆನ್‌ಲೈನ್‌ನಲ್ಲೇ ಇದ್ದರೂ ನನ್ನೊೊಂದಿಗೆ ಚಾಟ್ ಮಾಡಲಿಲ್ಲ. ನನಗೆ, ಅವನೆಂಥ ಹುಡುಗ, ಮಾತಾಡಲು ಏನೂ ಇಲ್ಲದಿದ್ದರೂ ಚಾಟ್ ರಿಕ್ವೆೆಸ್‌ಟ್‌ ಅನ್ನಿಿಸಿತು. ಇದಾಗಿ ಎರಡು ದಿನಗಳ ನಂತರ ಆಫೀಸ್‌ನಿಂದ ಹೊರಡುವ ಮೊದಲು ‘ಹಾಯ್’ ಅಂತ ಮೆಸೇಜ್ ಕಳಿಸಿದೆ.

ಅದಕ್ಕೆೆ ಅವನೂ ‘ಹಾಯ್’ ಅಂದ. ನಾನು, ‘ನಿನ್ನಿಿಂದ ಎರಡು ದಿನಗಳ ಹಿಂದೆ ಚಾಟಿಂಗ್ ರಿಕ್ವೆೆಸ್‌ಟ್‌ ಬಂತು. ನಿಮಗೇನಾದರೂ ಕೇಳಬೇಕಿದೆಯಾ?’ ಅಂತ ಕೇಳಿದೆ. ‘ಓಹ್, ಅದಾ.. ಮಿಸ್ಟೇಕ್ ಆಗಿ ನಿಮಗೆ ಬಂದಿದ್ದು. ಹ್ಯಾಾಂಗೌಟ್‌ನ ಇನ್‌ಸ್ಟಾಾಲ್ ಮಾಡಿದ್ದಕ್ಕೆೆ ನನ್ನೆೆಲ್ಲಾಾ ಕಾಂಟಾಕ್‌ಟ್‌‌ಗಳಿಗೂ ರಿಕ್ವೆೆಸ್‌ಟ್‌ ಹೋಗಿದೆ’ ಅಂತ ಸಮಜಾಯಿಶಿ ನೀಡಿದ. ‘ನಿಮಗೇನೋ ಚರ್ಚಿಸಬೇಕಿದೆ ಅಂತ ಹೀಗೆ ಮಾಡಿದ್ದು ಅದೇನಾದ್ರೂ ಮಿಸ್ಟೇಕ್ ಆಗಿದ್ದರೆ ನನ್ನನ್ನು ಲಿಸ್‌ಟ್‌‌ನಿಂದ ರಿಮೂವ್ ಮಾಡಿ’ ಎಂದೆ. ನಿನ್ನನ್ನು ಚಾಟಿಂಗ್ ಲೀಸ್‌ಟ್‌‌ನಲ್ಲಿ ಸೇರಿಸಿಕೊಂಡೆ ನನಗೇನೂ ತೊಂದರೆ ಇಲ್ಲ’. ‘ಸರಿ. ಹಾಗೇ ಆಗಲಿ’. ‘ನಾನೀಗ ಸ್ವಲ್ಪ ಬ್ಯುಸಿ ಇದ್ದೇನೆ. ರಾತ್ರಿಿ 10.30ರ ನಂತರ ಆನ್‌ಲೈನ್‌ಗೆ ಬರುತ್ತೇನೆ’ ಎಂದು ಅವನು ಮರೆಯಾದ. ನಾನು ಉತ್ತರಿಸುವ ಗೋಜಿಗೇ ಹೋಗಲಿಲ್ಲ.

ರಾತ್ರಿಿ 11ರ ಬಳಿಕ ಆನ್‌ಲೈನ್‌ಗೆ ಬಂದ. ತಡರಾತ್ರಿಿ 1ರ ವರೆಗೂ ದೈನಂದಿನ ಚಟುವಟಿಕೆ, ಇಷ್ಟ-ಕಷ್ಟಗಳು.. ಇತ್ಯಾಾದಿ ಹರಟೆ ಮುಂದುವರಿದಿತ್ತು. ಆದರೆ ಮೊಬೈಲ್ ನಂಬರ್ ಅಥವಾ ವೀಡಿಯೋ ಕಾಲ್ ಮಾಡಿರಲಿಲ್ಲ. ಬರೀ ಹ್ಯಾಾಂಗೌಟ್‌ನಲ್ಲೇ ಹರಟೆ ಹೊಡೆಯುತ್ತಿಿದ್ದೆೆವು. ನಿಧಾನವಾಗಿ ಅವನೆಡೆಗೆ ಆಕರ್ಷಿತಳಾಗುತ್ತಿಿದ್ದೆೆ. ಇಂಟೆಲಿಜೆಂಟ್. ತೀರಾ ಸರಳವಾಗಿದ್ದ. ಇವನನ್ನು ಕೈ ಹಿಡಿದರೆ ಒಳ್ಳೆೆಯದಾಗುತ್ತದೆ ಅಂತ ಅನ್ನಿಿಸಲು ಪ್ರಾಾರಂಭವಾಗಿತ್ತು.
ನಮ್ಮಿಿಬ್ಬರ ನಡುವೆ ಇಷ್ಟೆೆಲ್ಲ ಮಾತುಕತೆ ಆದರೂ ಮನೆಯವರಿಗೆ ತಿಳಿಸಿರಲಿಲ್ಲ. ಆದರೆ ಭೇಟಿಯಾದ ಬಳಿಕ ನನ್ನನ್ನು ತಿರಸ್ಕರಿಸಿದರೆ! ಅಂತ ಹೆದರಿಕೆ ಶುರುವಾಗಿತ್ತು.

ಮೊದಲ ಭೇಟಿ
ಹೀಗೇ ಎರಡು ತಿಂಗಳು ಕಳೆದು, ಇಬ್ಬರೂ ಮುಖತಃ ಭೇಟಿಯಾಗುವ ದಿನ ಬಂದಿತ್ತು. ಕುಟುಂಬಗಳು ಎದುರಾಗಿದ್ದವು. ನಾನು ಅವನೆದುರು ಮೊದಲ ಬಾರಿಗೆ ನಿಂತಿದ್ದೆೆ. ಗುಡ್ ಲುಕಿಂಗ್ ಗೈ! ನನ್ನ ಹೃದಯ ಬಡಿತ ಹೆಚ್ಚಾಾಗುತ್ತಿಿತ್ತು. ತಲೆಯಲ್ಲಿ ನೂರಾರು ಆಲೋಚನೆಗಳು ಓಡುತ್ತಿಿದ್ದವು. ಅವನ ನಿರ್ಧಾರಗಳೇನು ಅಂತ ನನಗೆ ತಿಳಿಯುತ್ತಿಿರಲಿಲ್ಲ. ಮೊದಲ ಬಾರಿಗೆ ಇಬ್ಬರೂ ಕಣ್ಣಲ್ಲಿ ಕಣ್ಣಿಿಟ್ಟು ನೋಡಿಕೊಂಡೆವು.

ಅವನು: ನೀವು ಯಾವ ಟೆಕ್ನಾಾಲಜಿಯಲ್ಲಿ ಕೆಲಸ ಮಾಡುತ್ತಿಿರುವುದು..?
ನಾನು: ಆ್ಯಂಡ್ರಾಾಯ್‌ಡ್‌. (ತುಂಬಾ ಕಷ್ಟಪಡುತ್ತಾಾ ನಗುವನ್ನು ತಡೆದುಕೊಳ್ಳುತ್ತಿಿದ್ದೆೆ. ಇಬ್ಬರಿಗೂ ತಿಳಿದಿದ್ದರೂ ಈಗ ಎಲ್ಲರೆದುರು ಹೀಗೆ ಕೇಳುತ್ತಿಿದ್ದಾಾನೆ ಅಂತ ಗೊತ್ತಾಾಗುತ್ತಿಿತ್ತು.)
ಸರಿ.

ಅದನ್ನು ಹೊರತುಪಡಿಸಿ ಒಂದು ಶಬ್ದವನ್ನೂ ಅವನು ಮಾತನಾಡಲಿಲ್ಲ. ಪೋಷಕರು ಮತ್ತೇನಾದರೂ ಕೇಳುವುದಿದ್ದರೆ ಕೇಳು ಎಂದು ಒತ್ತಾಾಯಿಸುತ್ತಿಿದ್ದರು. ಹೀಗೆ ನಮ್ಮ ಮೊದಲ ಭೇಟಿ ಮುಗಿದಿತ್ತು.
ಮಾರನೇ ದಿನ, ‘ನನ್ನ ಕುಟುಂಬದವರಿಗೆ ನೀನು ಇಷ್ಟವಾಗಿದ್ದೀಯ. ನಿಮ್ಮ ಕುಟುಂಬದ ಕಥೆ ಏನು?’ ಅಂತ ಮೆಸೇಜ್ ಮಾಡಿದ. ಅದಾದ ಎರಡೇ ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಿದ್ದೆೆವು.

ಹೀಗೆ ನಮ್ಮಿಿಬ್ಬರ ‘ಹ್ಯಾಾಂಗೌಟ್ ಲವ್ ಸ್ಟೋೋರಿ’ ಹಿರಿಯರೆದುರು ನಿಶ್ಚಯವಾದ ಮದುವೆಯಲ್ಲಿ ಅಂತ್ಯವಾಯಿತು. ವಿಶೇಷ ಎಂದರೆ ಮದುವೆಯ ಒಂದು ದಿನ ನಾನೇ ಕೇಳಿದೆ, ‘ನಿಮ್ಮಿಿಂದ ಅದು ಹೇಗೆ ಮಿಸ್ಟೇಕ್ ಚಾಟ್ ರಿಕ್ವೆೆಸ್‌ಟ್‌ ಬಂದಿದ್ದು?’ ಎಂದೆ. ಅದಕ್ಕೆೆ, ‘ಮಿಸ್ಟೇಕ್ ಆಗಿ ಬಂದಿಲ್ಲ. ನಿನ್ನ ಫೋಟೋ ನೋಡುತ್ತಿಿದ್ದಂತೆಯೇ ಇಷ್ಟವಾಗಿತ್ತು. ಮಾತನಾಡಲು ಮನಸ್ಸಿಿತ್ತು. ಆದರೆ ಚಾಟಿಂಗ್ ಆರಂಭಿಸಲು ಹಿಂಜರಿಕೆಯಾಗಿ ಸುಮ್ಮನಿದ್ದೆೆ. ನೀನು ಮಾತನಾಡಲು ಪ್ರಾಾರಂಭಿಸದಿದ್ದರೆ ನಾನು ಎಂದಿಗೂ ಚಾಟಿಂಗ್ ಮಾಡುತ್ತಿಿರಲಿಲ್ಲ’ ಎಂದು ತಮ್ಮ ಮನಸ್ಸಿಿನಲ್ಲಿದ್ದದ್ದನ್ನು ಬಿಡಿಸಿಟ್ಟರು. ಆಗ ನಾನೇ ಅವರಿಗಿಂತ ಗಟ್ಟಿಿಗಿತ್ತಿಿ ಅನ್ನಿಿಸಿತು.