Sunday, 8th September 2024

ಸಂಸಾರ ದಲ್ಲಿ ಪ್ರೀತಿ ಸಮನಾಗಿರಲಿ

* ಸರಸ್ವತಿ ವಿಶ್ವನಾಥ ಪಾಟೀಲ್

ಸಂಬಂಧಗಳ ಅಡಿಪಾಯ ಪ್ರೀತಿ. ಅದರಲ್ಲಿ ಭೇದ ಇರಬಾರದು. ಮಗಳ ಮೇಲಿನ ಕೊಂಚ ಮಮತೆ ಸೊಸೆಯ ಮೇಲು ಇರಲಿ. ಅವಳ ತ್ಯಾಾಗ ,ಕಷ್ಟಗಳಿಗೊಂದು ಮೆಚ್ಚುಗೆ ಇರಲಿ. ಅವಳ ತಿದ್ದಿ ಹೇಳುವ ಗುಣ ಇರಲಿ ಹೊರತು ಅವಳ ಹಿಂದೆ ಆಡಿಕೊಳ್ಳುವ ಸಣ್ಣತನ ಇರದಿರಲಿ. ಒಂದು ಹೆಣ್ಣು ಮದುವೆಯಾದಮೇಲೆ ತನ್ನ ಇಷ್ಟದ ನ ತವರನ್ನು ಬಿಟ್ಟು ಬರುತ್ತಾಾಳೆ. ಇದೆಲ್ಲದರ ಬದಲಾಗಿ ಅವಳು ಬಯಸುವುದು ಕೊಂಚ ಪ್ರೀತಿ ಮಾತ್ರ.

ಮಗಳೊಬ್ಬಳೇ ಅಡಿಗೆ ಮನೇಲಿ ಕೆಲಸ ಮಾಡಿದರೆ ಅದೆಷ್ಟು ಬೇಗ ಹೋಗಿ ಸಹಾಯ ಮಾಡುವಾಗ ಇದ್ದ ಕಾಳಜಿ ,ಸೊಸೆಯ ಮೇಲೂ ಇರಲಿ. ಅವಳು ಕೆಲಸಕ್ಕೆೆ ಹೋಗುವುದು ತಿಳಿದಿದ್ದರೂ ಒಂದೇ ಒಂದು ಚಿಕ್ಕ ಮಾಡಬೇಕು ಎನ್ನುವ ಮನಸ್ಥಿಿತಿ ಅತ್ತೆೆಯಲ್ಲಿ ಮೂಡಬೇಕು. ಬೇಕು ಅನಿಸಿದಾಗ ಅವರನ್ನು ನೋಡಲಾಗದ ಅಸಹಾಯಕತೆ. ದಿನವೂ ಮಲಗುವಾಗ ಅವರಿಗಾಗಿ ಒಂದು ಪ್ರಾಾರ್ಥನೆ ಮಾಡುವಾಗ ಅವರನ್ನು ನೆನೆದು ಕಣ್ಣೀರಿಡುವುದು. ಆಗ ಅವಳ ಕಣ್ಣೊೊರೆಸುವುದು ಮಾತ್ರ ಅವಳ ಆಪ್ತ ಗೆಳತಿ ಅವಳ ತಲೆದಿಂಬು. ನಿಜ ಇಂತಹ ಅದೆಷ್ಟೊೊ ಕಥೆಗಳು ಈ ತಲೆದಿಂಬಿನ ಅಡಿಯಲ್ಲಿ ಹೂತು ಹೋಗಿವೆಯೋ?

ಮನೆಯಲ್ಲಿ ಅಮ್ಮ ಅಡಿಗೆ ಕಲಿಯದಿದ್ದರೆ ಮಗಳಿಗೆ ಕ್ಲಾಾಸ್ ತೆಗೆದುಕೊಳ್ಳುತ್ತಾಾಳೆ. ನಾಳೆ ಮದುವೆಯಾದ ಮೇಲೆ ನೀ ಯಾವ ಮಾಡಿದರು ಮನೆಯ ಅಡಿಗೆ ಮಾಡಲೇಬೇಕು ನೀನೆನು ಆದರೂ ಗಂಡನೊಂದಿಗೆ ಹೆಂಡತಿಯಾಗಿರಲೇಬೇಕು ಎಂಬ ಸತ್ಯ ಅಮ್ಮ ಆಗಾಗ ನೆನಪಿಸುತ್ತಾಾ ಇರುತ್ತಾಾಳೆ. ಗಂಡ ಏನೇ ಮಾಡಿದರೂ ಸಹಿಸಿಕೋ, ನಾನೂ ಹಾಗೇ ಬಾಳಿದವಳು. ಗಂಡ, ಹೆಂಡತಿಗೆ ಹೊಡೆಯದೆ ಹೆಂಡತಿ ಗಂಡನಿಗೆ ಹೊಡೆಯಕ್ಕಾಾಗುತ್ತಾಾ? ತಾಯಿ ಮದುವೆ ಮಾಡಿ ಕೊಡುವಾಗ ಮಗಳಿಗೆ ಹೇಳುವ ಮಾತುಗಳು ಇವು. ಅಪ್ಪನು ನನ್ನ ಮಗಳು ಮಗಳಲ್ಲಾ ಮಗ ಎಂದು ಜಂಬದಿಂದ ಹೇಳಿದರು ಮಗನಿಗೆ ನೀಡಿದ ಸ್ವಾಾತಂತ್ರ್ಯ ಮಾತ್ರ ಕೊಡುವುದಿಲ್ಲ ಇಂದಿಗೂ ಆಸ್ತಿಿಯಲ್ಲಿ ಪಾಲು ಇಲ್ಲ ಎಂಬ ಸತ್ಯ ಮರೆಯುವಂತಿಲ್ಲ. ಯಾವ ತಂದೆ ತಾನೆ ತನ್ನ ಮಗನಿಗೆ ನೀಡಿದಷ್ಟು ಮಹತ್ವ ಮಗಳಿಗೆ ನೀಡಿದ್ದಾರೆ ಹೇಳಿ, ಮಹತ್ವ ಕೊಟ್ಟರು ಮದುವೆಯಾಗುವರೆಗೂ ಮಾತ್ರ ಕೊಡುತ್ತಾಾರೆ. ಮದುವೆಯಾದಮೇಲೆ ಮತ್ತೆೆ ಅದೇ ಹಳೆ ಗಾದೆ ಮಾತು ಹೇಳಿ ಮರೆಯಾಗುತ್ತಾಾರೆ. ಕೊಟ್ಟ ಹೆಣ್ಣು ಕುಲಕ್ಕೆೆ ಹೊರಗು ಅಲ್ಲವಾ?

ಕಿವಿಮಾತು

:ಮಗ-ಸೊಸೆ ಹೊರಗೆ ಸುತ್ತಾಾಡಲು ಹೊರಟಾಗ ಕೊಂಕು ನುಡಿಯಬೇಡಿ. ಅವರಿಗೂ ಏಕಾಂತ ಬೇಕು. ನಿಮ್ಮ ಮನೆಯ ಹೊಸ್ತಿಿಲು ತುಳಿದ ಸೊಸೆ ಎಂಬುದು ನೆನಪಿರಲಿ. ಆರಂಭದಲ್ಲೇ ನಿಮ್ಮ ರೀತಿ ರಿವಾಜುಗಳನ್ನೆೆಲ್ಲ ಅವಳ ಮೇಲೆ ಹೇರಲು ಹೋಗಬೇಡಿ. ಅವಳಾಗಿಯೇ ಕಲಿಯಲಿ. ಅವಳೇನಾದರೂ ಅಡುಗೆ ಮಾಡುತ್ತೇನೆಂದರೆ ಸಂತೋಷದಿಂದ ಒಪ್ಪಿಿಕೊಳ್ಳಿಿ. ಅವಳು ಮಾಡಿದ ಅಡುಗೆಯ ರುಚಿಯಲ್ಲೇನಾದರೂ ವ್ಯತ್ಯಾಾಸವಾಗಿದ್ದರೆ ಅದನ್ನು ನಿಧಾನವಾಗಿ ಹೇಳಿ. ವ್ಯಂಗ್ಯ ಬೇಡ. ಮದುವೆಯಾದ ನಂತರ ನಿಮ್ಮ ಮಗ ಇನ್ನೊೊಬ್ಬಳ ಗಂಡನಾಗಿರುತ್ತಾಾನೆ. ಮೊದಲೆಲ್ಲ ಅಮ್ಮ ಎನ್ನುತ್ತ ಬರುವ ಮಗ ಈಗ ಹೆಂಡತಿಗಾಗಿ ಹುಡುಕುತ್ತಾಾನೆ. ಅದನ್ನೇ ತಪ್ಪಾಾಗಿ ಅರ್ಥೈಸಿಕೊಳ್ಳಬೇಡಿ. ಅದು ಸಹಜ ನಿಯಮ.

ಮಗ-ಸೊಸೆ ಒಟ್ಟಾಾಗಿ ಕುಳಿತು ಮಾತಾಡುತ್ತಿಿದ್ದರೆ ತಪ್ಪುು ತಿಳಿಯಬೇಡಿ. ಅವರಿಬ್ಬರು ಅವರದ್ದೇ ಆದ ವೈಯಕ್ತಿಿಕ ವಿಚಾರ, ಸಮಸ್ಯೆೆಗಳ ಬಗ್ಗೆೆ ಮಾತಾಡುತ್ತಿಿರಬಹುದು. ನಿಮ್ಮ ಮನೆಯಲ್ಲಿ ನಿಮ್ಮ ಮಾತೇ ನಡೆಯಬೇಕೆಂಬ ದಾರ್ಷ್ಟ್ಯತನ ಬೇಡ. ನಿಮ್ಮ ಸೊಸೆ ಈ ಮನೆಯ ಸದಸ್ಯಳು, ಮುಂದೆ ನಿಮ್ಮ ಮನೆಯ ಯಜಮಾನಿಯಾಗುವವಳು. ಅವಳ ಅಭಿಪ್ರಾಾಯವನ್ನು ಕೇಳಿ ತಿಳಿಯಿರಿ. ಅಕ್ಕ ಪಕ್ಕದವರ ಬಳಿ ಅಥವಾ ನಿಮ್ಮ ಮಗಳ ಹತ್ತಿಿರವಾಗಲಿ ಸೊಸೆಯ ಬಗ್ಗೆೆ ದೂರು ಹೇಳದಿರಿ. ಮಗನಿಗೆ ಕೆಟ್ಟ ಹವ್ಯಾಾಸವಿದ್ದರೆ ಸೊಸೆ ಸರಿಪಡಿಸಬೇಕು. ಅದು ಕರ್ತವ್ಯ ಎಂದು ದೂರಬೇಡಿ. ಹೊತ್ತು ಹೆತ್ತು ಸಾಕಿದ ನಿಮಗೆ ಆತನನ್ನು ತಿದ್ದಲು ಸಾಧ್ಯವಾಗಲಿಲ್ಲವೆಂದ ಮೇಲೆ ನಿಮ್ಮ ಸೊಸೆಗೆ ಹೇಗೆ ಸಾಧ್ಯ? ಅವಳು ಪವಾಡ ಮಾಡುತ್ತಾಾಳೆಯೆ? ಮದುವೆಯಾದ ನಂತರ ತನ್ನ ಮಗ ತನ್ನ ಮಾತು ಕೇಳುತ್ತಿಿಲ್ಲ, ಸೊಸೆ ಮರುಳು ಮಾಡಿದ್ದಾಳೆ ಎಂದು ಭಾವಿಸಬೇಡಿ. ಮದುವೆಗೆ ಮೊದಲು ಮಗ ನಿಮ್ಮ ಮಾತನ್ನು ಎಷ್ಟು ಕೇಳುತ್ತಿಿದ್ದ ಎನ್ನುವುದು ನಿಮ್ಮ ಅಂತರಾತ್ಮಕ್ಕೆೆ ಚೆನ್ನಾಾಗಿ ಗೊತ್ತಿಿರುತ್ತದೆ.

ತಾರತಮ್ಯ ಬೇಡ
ಸುಮಾರು 30 ವರ್ಷಕಾಲ ನಿಮ್ಮ ನೆರಳಲ್ಲೇ ಮಗ ಇದೀಗ ಪತ್ನಿಿಯ ಸೆರಗು ಹಿಡಿದು ಓಡಾಡುತ್ತಾಾನೆ ಅಂದರೆ ಅತ್ತೆೆಗೆ ಹಾಗೆ ಅನ್ನಿಿಸುವುದು ತಪ್ಪುು ಅಂತಲ್ಲ. ಆದರೆ ನೀವು ಸೊಸೆಯಾಗಿ ಬಂದವರು. ನಿಮ್ಮ ಮಗಳು ಇನ್ಯಾಾರದ್ದೋ ಮನೆಗೆ ಸೊಸೆಯಾಗಿ ಹೋದವಳು. ಸೊಸೆ ಅನ್ನುವ ಸಂಬಂಧವೇ ಹಾಗೆ. ಅದನ್ನು ಕದಡಿ ರಾಡಿಯೆಬ್ಬಿಿಸುವ ಬದಲು ನಿಮ್ಮ ಸ್ಥಾಾನ ಉಳಿಸಿಕೊಳ್ಳುವುದಷ್ಟೆೆ ಅಲ್ಲ, ಮಗ-ಸೊಸೆಗೆ ನಿಮ್ಮ ಅನಿವಾರ್ಯ ಅರ್ಥ ಮಾಡಿಸಿ. ಸೊಸೆ ನಿಮ್ಮಲ್ಲಿ ಅವಳಮ್ಮಳನ್ನು ಕಾಣುತ್ತಾಾಳೆ ಅಂದರೆ ನೀವು ನಿಮ್ಮ ಸ್ಥಾಾನ ನಿಭಾಯಿಸುವಲ್ಲಿ ಯಶಸ್ವಿಿಯಾಗಿದ್ದೀರಿ

ಭಾವಿ ಅತ್ತೆೆಯಂದಿರು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಹೆಣ್ಣು ಮಗು ಹುಟ್ಟಿಿದ ಕೂಡಲೇ ಎಷ್ಟಾಾದರೂ ಮದುವೆಯಾಗಿ ಬೇರೆಯವರ ಮನೆಗೆ ಹೋಗುವವಳು ಎನ್ನುವ ಭಾವದಲ್ಲಿ ಬೆಳೆಸಬೇಡಿ. ಗಂಡು ಮಕ್ಕಳನ್ನು ಕೂಡ ಬೇರೆಯವರಿಗೆ ಸೇರಿದವನು ಅನ್ನುವಂತೆ ಬೆಳಸಿದರೆ ಮುಂದೆ ಕೊರಗು ಇರುವುದಿಲ್ಲ. ಸೊಸೆ ಮೇಲೆ ಕಿಡಿ ಕಾರಬೇಕು ಅಂದೆನಿಸುವುದಿಲ್ಲ. ಅಂದರೆ ನೀವು ನಿಮ್ಮ ಸ್ಥಾಾನ ನಿಭಾಯಿಸುವಲ್ಲಿ ಯಶಸ್ವಿಿಯಾಗಿದ್ದೀರಿ ಅಂತರ್ಥ. ಭಾವಿ ಅತ್ತೆೆಯಂದಿರು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಹೆಣ್ಣು ಮಗು ಹುಟ್ಟಿಿದ ಕೂಡಲೇ ಎಷ್ಟಾಾದರೂ ಬೇರೆಯವರ ಮನೆಗೆ ಹೋಗುವವಳು ಎನ್ನುವ ಭಾವದಲ್ಲಿ ಬೆಳೆಸಬೇಡಿ. ಗಂಡು ಮಕ್ಕಳನ್ನು ಕೂಡ ಬೇರೆಯವರಿಗೆ ಸೇರಿದವನು ಅನ್ನುವಂತೆ ಬೆಳಸಿದರೆ ಮುಂದೆ ಕೊರಗು ಇರುವುದಿಲ್ಲ. ಸೊಸೆ ಮೇಲೆ ಕಿಡಿ ಕಾರಬೇಕು ಅಂದೆನಿಸುವುದಿಲ್ಲ.

ಪ್ರತಿ ಅತ್ತೆೆಯು ಮಗಳಾಗಿದ್ದು,ಮತ್ತೊೊಂದು ಮನೆಯ ಸೊಸೆಯಾಗಿ,ನಂತರ ಅತ್ತೆೆಯ ಪದವಿಗೆ ಏರಿರುತ್ತಾಾಳೆ. ಅವಳು ಕೂಡಾ ಈ ಎಲ್ಲ ನೋವುಗಳನ್ನು ಅನುಭವಿಸಿಯೇ ಇರುತ್ತಾಾಳೆ. ಆದರೂ ಅದೆಲ್ಲವನ್ನು ಮರೆತು ಸೊಸೆಯಮೇಲೆ ದರ್ಬಾರು ಮಾಡಬಾರದು. ಮನೆಯ ಬಂದ ಸೊಸೆಯೊಂದಿಗೆ ಪ್ರೀತಿ ವಿಶ್ವಾಾಸಗಳಿಂದ ನಡೆದುಕೊಳ್ಳಬೇಕು. ವೃದ್ಧಾಾಪ್ಯದಲ್ಲಿ ಮಗ, ಮಗಳು, ಅಕ್ಕ, ತಂಗಿ ಎಲ್ಲರಿಗಿಂತ ಸೊಸೆಯ ಅವಶ್ಯಕತೆಯೇ ಹೆಚ್ಚಾಾಗುತ್ತದೆ ಎಂಬುದನ್ನು ಮರೆಯಬಾರದು. ಅಅದರಂತೆಯೇ ಸೊಸೆಯೂ ಅತ್ತೆೆಯೊಂದಿಗೆ ಉತ್ತಮ ನಡವಳಿಕೆ ಇಟ್ಟುಕೊಳ್ಳಬೇಕು. ಅತ್ತೆೆ ಸೊಸೆ ಇಬ್ಬರ ಬಾಂಧವ್ಯ ಮನೆಯ ವಾತಾವರಣವನ್ನು ಕಾಪಾಡುತ್ತದೆ.

Leave a Reply

Your email address will not be published. Required fields are marked *

error: Content is protected !!