Sunday, 15th December 2024

ಮಂಗಳಾರತಿ ಮಾಡಿಸಿದ ಚಪ್ಪಲಿ

ಅಂದು ಯಜಮಾನರ ಸಹೋದ್ಯೋೋಗಿಯ ಮಗಳ ಮದುವೆ ಹುಬ್ಬಳ್ಳಿಯಲ್ಲಿತ್ತು. ವಧು-ವರ ಇಬ್ಬರೂ ವೈದ್ಯರು. ಎರಡೂ ಕಡೆ ಶ್ರೀಮಂತ ಕುಟುಂಬ. ಸರಿ ಆಹ್ವಾಾನಿತರೆಲ್ಲಾ ದೊಡ್ಡ ದೊಡ್ಡ ಮಂದಿಯೇ ಇರುತ್ತಾಾರೆಂದು ಗೊತ್ತಾಾಯಿತು. ಜೋಪಾನವಾಗಿ ತೆಗೆದಿರಿಸಿದ್ದ ಹೊಸ ಕಾಂಜೀವರಂ ಸೀರೆಯುಟ್ಟು, ಅದಕ್ಕೆೆ ತಕ್ಕ ಒಡವೆ ತೊಟ್ಟು ಚಂದಾಗಿ ಅಲಂಕರಿಸಿಕೊಳ್ಳುವ ಹೊತ್ತಿಿಗೆ ಹೊರಗೆ ಯಜಮಾನರು ಲೇಟಾಗಿದ್ದಕ್ಕೆೆ ಅಸಹನೆಯಿಂದ ಕಾರ್ ಹಾರನ್ ಮಾಡುತ್ತಿಿದ್ದರು. ಸರಸರನೆ ಮನೆಬೀಗ ಹಾಕಿ ಹೋಗಿ ಹತ್ತಿ ಕುಳಿತೆ.

ಹುಬ್ಬಳ್ಳಿ ಹತ್ತಿರ ಬರುತ್ತಿದ್ದಂತೆ ಯಾಕೋ ಕಾಲಿನ ಕಡೆ ಗಮನ ಹೋಯಿತು. ಹೌಹಾರಿದೆ. ಯಜಮಾನರು ಅವಸರಿಸಿದ್ದಕ್ಕೆೆ, ಮನೆಯೊಳಗೆ ಹಾಕಿಕೊಂಡು ಹಳೆಯ ಹವಾಯಿ ಚಪ್ಪಲಿಗಳನ್ನು ಹಾಗೇ ಹಾಕಿಕೊಂಡು ಕಾರು ಹತ್ತಿ ಕುಳಿತುಬಿಟ್ಟಿದ್ದೆೆ. ಮೇಲಿನಿಂದ ಕೆಳಗೆ ಬೆಲೆಬಾಳುವ ಅಲಂಕಾರಕ್ಕೆ ಕಾಲಿನ ಹಳೆಯ ಹವಾಯಿ ಚಪ್ಪಲಿ ಹೊಂದದೆ ಅಣಗಿಸುವಂತೆ ಕಾಣುತ್ತಿದ್ದವು. ನಿಧಾನವಾಗಿ ಏನ್ರೀ ಅಂತಾ ಯಜಮಾನರಿಗೆ ವಿಷಯ ತಿಳಿಸಿ, ಯಾವುದಾದರೂ ಚಪ್ಪಲಿ ಅಂಗಡಿಯ ಮುಂದೆ ನಿಲ್ಲಿಸಿ ಎಂದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮೊದಲೇ ಲೇಟಾಗಿದ್ದಕ್ಕೆ ಬೈಯ್ಯತ್ತಾ, ಜೊತೆಗೆ ಇದನ್ನೂ ಸೇರಿಸಿ ಅರ್ಚನೆ ಮಾಡುತ್ತಾಾ ಚಪ್ಪಲಿ ಅಂಗಡಿಯನ್ನು ಹುಡುಕಿಕೊಂಡು ಹೋಗಿ ಮುಂದೆ ನಿಲ್ಲಿಸಿದರು. ಹೋಗಿ ಸೀರೆಗೆ ಮ್ಯಾಾಚ್ ಆಗುವ ಚಪ್ಪಲಿ ಹುಡುಕಿ ಬಿಲ್ ಕೊಟ್ಟು ಹೊರಬಂದು ನಿಟ್ಟುಸಿರುಬಿಟ್ಟೆೆ.

ಆ ಕಲ್ಯಾಾಣ ಮಂಟಪದ ಕಡೆ ಹೋಗುವ ದಾರಿ ಬೇರೆ ನಮ್ಮ ಗ್ರಹಚಾರಕ್ಕೆೆ ಬಂದ್ ಆಗಿರಬೇಕೆ. ಬೇರೆ ದಾರಿ ಸುತ್ತಿಿ ಹೋಗುವಷ್ಟರಲ್ಲಿ ಮಧ್ಯಾಾಹ್ನ ಮೂರುಗಂಟೆ ಸಮೀಪಿಸಿತ್ತು. ಬಂದ ಅತಿಥಿಗಳೆಲ್ಲರೂ ಹೆಚ್ಚು ಕಡಿಮೆ ಖಾಲಿಯಾಗಿ, ಕುಟುಂಬದವರ ಫೋಟೋ ಸೆಷನ್ ನಡೆಯುತ್ತಿಿತ್ತು. ಮುಗಿಯುವ ತನಕ ಕಾದು, ಅದರ ನಡುವೆ ಇವರ ಉರಿಗಣ್ಣು ತಪ್ಪಿಿಸಿ ನಗುತ್ತಾಾ ಉಡುಗೊರೆ ಕೊಟ್ಟು ಹಾರೈಸಿ, ಕಡೆ ಹೋದೆವು. ಅಲ್ಲಿಯೂ ಸಹ ಬಫೆಯ ಹತ್ತಿಿರ ಒಂದು ಇದ್ದರೆ ಮತ್ತೊೊಂದು ಖಾಲಿ. ಅಲ್ಲಿ ಚಪ್ಪಲಿ ಹಾಕಿಕೊಂಡು ಹೋಗದಿದ್ದರೂ ನಡೆಯುತ್ತಿಿತ್ತು ಎನ್ನುವ ಹಾಗಾಗಿತ್ತು. ಎಲ್ಲಾಾ ನಿನ್ನ ಚಪ್ಪಲಿಯ ಕಾರಣದಿಂದ ಎಂದು ಯಜಮಾನರು ಸಿಡಿಸಿಡಿ ಮಾಡುತ್ತಾಾ ಇಬ್ಬರೂ ಊಟ ಮಾಡಿ ಹೊರಬಂದಿದ್ದಾಾಯಿತು. ಮನೆ ತಲುಪುವ ತನಕ ಮಂಗಳಾರತಿಯೇ ಗತಿಯಾಗಿತ್ತು.

ಅಂದಿನಿಂದ ಮತ್ತೆೆ ಯಾವುದೇ ಮದುವೆಗೆ ಹೋಗಬೇಕಾದ ಸಂದರ್ಭ ಬಂದರೂ ಯಜಮಾನರು ಮೊದಲು ಕೇಳುವುದು, ಚಪ್ಪಲಿ ಸರಿಯಾಗಿ ಹಾಕಿಕೊಂಡಿದ್ದೀಯಾ?
* ನಳಿನಿ. ಭೀಮಪ್ಪ, ಧಾರವಾಡ