Thursday, 12th December 2024

ಮದುವೆ ವೆಚ್ಚ ಬೇಕು ನಿಯಂತ್ರಣ

ಮದುವೆ ಖರ್ಚಿನ ವಿಚಾರ ಎಂಬುದು ಗೊತ್ತಿಿರುವ ವಿಚಾರವೇ ಸರಿ. ಆದರೆ ಈಗೊಂದಿಷ್ಟು ವರ್ಷಗಳಿಂದೀಚೆಗೆ ಮದುವೆ ಮಾಡುವುದು ಅಂದರೆ ಪೋಷಕರಿಗೆ ತಲೆ ನೋವಿನ ಸಂಗತಿ. ಯಾಕೆ ಹೀಗೆ ಅಂತ ನೋಡಿದರೆ, ಅನಗತ್ಯವಾದ ಖರ್ಚು! ಅಕ್ಕಪಕ್ಕದ ಮನೆಯವರು ಅದ್ಧೂರಿಯಾಗಿ ಮದುವೆಯಾದರು ಅಂತ ನಾವು ಅವರನ್ನೇ ಅನುಕರಿಸುವುದು, ಅವರಿಗಿಂತ ಹೆಚ್ಚಿಿಗೆ ಹಣ ಖರ್ಚು ಮಾಡಿ ಮಕ್ಕಳ ಮದುವೆ ಮಾಡಿ ನಮ್ಮ ಅಂತಸ್ತು ತೋರಿಸುವ ಹಪಾಹಪಿಗೆ ಕುಟುಂಬಗಳು ಬಳಲಿ ಬೆಂಡಾಗಬೇಕಾಗುತ್ತದೆ.

ಅದರಲ್ಲೂ ಹಸೆಮಣೆ ಏರುವವರಿಗೆ ತಮ್ಮ ಸಂದರ್ಭಗಳು ಹೀಗೇ ಇರಬೇಕೆಂಬ ಕನಸೂ ಇರುತ್ತದೆ. ಅದ್ಧೂರಿ ವೇದಿಕೆ, ಮಂಟಪ, ನೃತ್ಯ ಸಮಾರಂಭ, ಝಗಮಗಿಸುವ ಬೆಳಕಿನ ವ್ಯವಸ್ಥೆೆ, ಊಟೋಪಚಾರ ಹೊತ್ತೊೊತ್ತಿಿಗೂ ಪ್ರತ್ಯೇಕ, ರಾತ್ರಿಿ ನಡೆಯುವ ಪಾನೀಯ ಸೇವೆ, ಹೀಗೆ ಪಟ್ಟಿಿಗಳೂ ಬೆಳೆಯುತ್ತದೆ. ಇದೂ ಸಹ ಒಂದಿಲ್ಲೊೊಂದು ರೀತಿ ಖರ್ಚಿನ ಬಾಬತ್ತು ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ಹೆಚ್ಚಿಿನವರು ಅನಗತ್ಯವಾಗಿ ಮಾಡುವ ಖರ್ಚಿಗೆ ಕಡಿವಾಣ ಹಾಕಿಕೊಂಡರೆ ಮದುವೆಯನ್ನೂ ಮಿತವ್ಯಯದಲ್ಲೇ ಮಾಡಿ ಮುಗಿಸಬಹುದು.

ಹೆಚ್ಚಿಿನ ಮದುವೆಯ ದಲ್ಲಾಾಳಿಗಳು (ಮಹಾನಗರಗಳಲ್ಲಿ ವೆಡ್ಡಿಿಂಗ್ ಪ್ಲಾಾನ್ ಮಾಡಿಕೊಡುವವರು) ಮದುವೆಯ ಆಯವ್ಯಯವೆಷ್ಟು ಎಂದು ಕೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾಾರೆ. ಅವರ ವೈಯಕ್ತಿಿಕ ಆದ್ಯತೆಗಳಿಗನುಸಾರವಾಗಿ ವಿವಾಹದ ಪಟ್ಟಿಿ ತಯಾರಿಸುತ್ತಾಾರೆ. ಅಂತಿಮವಾಗಿ ಯಾವೆಲ್ಲ ವೆಚ್ಚ ತಗ್ಗಿಿಸಬಹುದೆಂದು ತಿಳಿಸುತ್ತಾಾರೆ. ಅನಗತ್ಯ ಖರ್ಚುಗಳಿಗೆ ಹಣ ವಿನಿಯೋಗಿಸಬೇಡಿ ಎಂದೇ ಹೇಳುತ್ತಾಾರೆ. ಅಂಥ ಅನಗತ್ಯ ಖರ್ಚು, ವೆಚ್ಚಗಳಾವುದು? ಅದನ್ನು ತಡೆಯುವುದು ಹೇಗೆ ಎಂಬುದಕ್ಕೆೆ ಸರಳ ಉಪಾಯಗಳು ಇಲ್ಲಿವೆ.

* ಲೆಕ್ಕಾಚಾರ
ಮದುವೆಯ ದಿನಾಂಕ ನಿಗದಿಯಾದ ಮೇಲೆ ಒಮ್ಮೆೆ ಕುಳಿತು ಒಟ್ಟು ಎಷ್ಟು ಖರ್ಚಾಗಬಹುದೆಂದು ನಿರ್ಧರಿಸಿ. ಬಳಿಕ ಅನಗತ್ಯ ಎನ್ನಿಿಸುವುದನ್ನು ಕೈ ಬಿಡಬಹುದು. ಜತೆಯಲ್ಲಿ ಸಮಾರಂಭಕ್ಕೆೆ ಎಷ್ಟು ಜನ ಬರುತ್ತಾಾರೆನ್ನುವುದರ ಮೇಲೆ ಊಟೋಪಚಾರಕ್ಕೆೆ ತಯಾರಿ ಮಾಡಬಹುದು. ಮನೆಯಿಂದ ಮದುವೆ ಛತ್ರಕ್ಕಿಿರುವ ದೂರ, ಹೋಗುವ ವ್ಯವಸ್ಥೆೆ, ಧಾರ್ಮಿಕ ಸಂಪ್ರದಾಯಗಳು, ಇತ್ಯಾಾದಿಗಳಲ್ಲಿ ಕಡಿತ ಮಾಡುವ ಸಾಧ್ಯತೆಗಳಿದ್ದಲ್ಲಿ ಅವುಗಳನ್ನು ಕಾರ್ಯರೂಪಕ್ಕೆೆ ತನ್ನಿಿ.

* ಬೇಡ ಅನವಶ್ಯಕ ವೆಚ್ಚ
ಇತ್ತೀಚಿನ ಮದುವೆಗಳಲ್ಲಿ ಸಂಗೀತ- ವಾದ್ಯಗೋಷ್ಟಿಿ, ನೃತ್ಯ-ಪಾನೀಯ ಸೇವನೆ ಖಾಯಂ ಆಗಿದೆ. ಇದಕ್ಕೆೆಂದು ಸಂಗೀತಗಾರರನ್ನು, ಸಿನಿಮಾ ತಾರೆಯರನ್ನು ಕರೆಸುವ ಪದ್ಧತಿಯೂ ಬೆಳೆಯುತ್ತಿಿದೆ. ಮತ್ತೆೆ ಕೆಲವರು ಕಾಕ್‌ಟೇಲ್ ಪಾರ್ಟಿ ಕುಣಿದು ಕುಪ್ಪಳಿಸುತ್ತಾಾರೆ. ಇವೆಲ್ಲ ಅಧಿಕ ಖರ್ಚಿನ ಆಯೋಜನೆಗಳು. ಸಮಾರಂಭಗಳಲ್ಲಿ ಮನರಂಜನೆಗೆ ಅವಕಾಶಗಳಿದ್ದರೆ ಎಲ್ಲರೂ ಎಂಜಾಯ್ ಮಾಡಬಹುದು.

* ಆತಿಥ್ಯ
ಈಗೆಲ್ಲ ಹೆಚ್ಚಿಿನ ಮದುವೆ ಮನೆಗಳಲ್ಲಿ ಬೆಳಗಿನ ಉಪಹಾರಕ್ಕೆೆ ನಾಲ್ಕೈದು ಬಗೆ, ಮಧ್ಯಾಾಹ್ನದ ಊಟಕ್ಕೆೆ ಹತ್ತೆೆಂಟು ಖಾದ್ಯಗಳು, ರಾತ್ರಿಿಯ ವೇಳೆ ಮತ್ತೊೊಂದಷ್ಟು ವೆರೈಟಿಯಾಗಿ ಆಹಾರದ ಪಟ್ಟಿಿ ತಯಾರಿಸುವುದು ಫ್ಯಾಾಷನ್ ಆಗಿದೆ. ಆದರೆ ಎಷ್ಟು ಜನರಿಗೆ ಮದುವೆಯ ಮನೆಯಲ್ಲಿ ತಯಾರಿಸಿದ ಅಷ್ಟನ್ನೂ ತಿಂದು ಅರಗಿಸಿಕೊಳ್ಳಲು ಸಾಧ್ಯವಿದೆ? ಆರೋಗ್ಯದ ಸಮಸ್ಯೆೆ, ಡಯೆಟ್, ಇತ್ಯಾಾದಿಗಳಿಂದ ರುಚಿಗೆ ವಿರಾಮವಿಡುವವರೇ ಹೆಚ್ಚು. ಇವೆಲ್ಲದರಿಂದ ತಯಾರಿಸಿದ ಅಡುಗೆ ಅನಗತ್ಯವಾಗಿ ಪೋಲಾಗುವ ಸಂಭವವಿರುತ್ತದೆ. ಇದನ್ನು ತಪ್ಪಿಿಸುವುದು ಯಜಮಾನರ ಕೈಲಿರುತ್ತದೆ. ಜತೆಯಲ್ಲಿ ಸಂಜೆಯ ಪಾರ್ಟಿಗಳಿಗೆ ತಯಾರಾದ ವೆರೈಟಿ ಫುಡ್‌ಗಳ ಬಗ್ಗೆೆಯೂ ಒಂದಷ್ಟು ಗಮನವಿರಲಿ.

*ಆಮಂತ್ರಣ ಪತ್ರಿಕೆ
ನಮಗಿರುವ ಸ್ನೇಹಿತರು, ಬಾಂಧವರು, ಕುಟುಂಬದವರೆಲ್ಲರ ಮನೆಗೆ ಹೋಗಿ ಆಮಂತ್ರಣ ಪತ್ರಿಿಕೆ ಕೊಟ್ಟು ಬರುವ ಪರಿಪಾಠ ನಿಧಾನವಾಗಿ ಕಡಿಮೆಯಾಗುತ್ತಿಿದೆ. ಕಾಗದದ ಆಮಂತ್ರಣ ಪತ್ರಿಿಕೆ ತಯಾರಿಸಲು ವೆಚ್ಚ ಅಧಿಕ. ಹೀಗಾಗಿ ಈಗ ಬರುತ್ತಿಿರುವ ‘ಪೇಪರ್‌ಲೆಸ್ ಇ-ವೈಟ್‌ಸ್‌’, ಹಳೆಯ ಹೊಂದಾಣಿಕೆಯಾಗದಿದ್ದರೂ, ಬಜೆಟ್‌ಗೆ ಸರಿದೂಗುತ್ತದೆ. ಬದಲಾದ ಕಾಲದೊಂದಿಗೆ ಹೊಂದಿಕೊಳ್ಳಲು ಹೊಸ ತಂತ್ರಜ್ಞಾಾನಕ್ಕೆೆ ನಾವೂ ಅಪ್‌ಡೇಟ್ ಆದರೆ ಒಳ್ಳೆೆಯದು.

ಇದೆಲ್ಲಕ್ಕಿಿಂತ ಮುಖ್ಯವಾಗಿ ಒಮ್ಮೆೆ ಆಮಂತ್ರಣ ಪತ್ರಿಿಕೆ ಕೊಟ್ಟು ಬಂದರೆ ಅದರ ಕುರಿತು ಹೆಚ್ಚಿಿನವರು ತಲೆ ಕೂಡ ಕೆಡಿಸಿಕೊಳ್ಳುವುದಿಲ್ಲ. ನೀವು ಹತ್ತು ರು.ಗಳ ಪತ್ರಿಿಕೆ ಮಾಡಿಸಿದ್ದೀರೋ ಹತ್ತು ಲಕ್ಷದ್ದು ಮಾಡಿಸಿದ್ದೀರೋ ಎಂಬುದರ ಕುರಿತು ಯಾರೂ ಚಿಂತಿಸುವುದಿಲ್ಲ. ಚಿಕ್ಕ ಕಾಗದದಲ್ಲಿ ದೂರವಾಣಿ ಸಂಖ್ಯೆೆಯೊಂದಿಗೆ ಮದುವೆಯ ದಿನಾಂಕ, ವಿವರ ಬರೆದು ಕೊಟ್ಟುಬಂದರೂ ನಿಮ್ಮೊೊಂದಿಗೆ ಒಳ್ಳೆೆಯ ಸಂಬಂಧ ಬಂದೇ ಬರುತ್ತಾಾರೆ.

ಇಂದಿನ ದಿನಗಳಲ್ಲಿ ಎಲ್ಲಕ್ಕೂ ತಂತ್ರಜ್ಞಾಾನದ ಬಳಕೆ ನಡೆಯುತ್ತಿಿದೆ. ವಾಟ್ಸಪ್, ಫೇಸ್‌ಬುಕ್ ಇಂದಿನ ದಿನಚರಿಯ ಅನಿವಾರ್ಯ ಅಂಗ ಎನಿಸಿದೆ. ಹಾಗಿದ್ದಾಾಗ, ಮದುವೆಯ ಆಮಂತ್ರಣಕ್ಕೂ ವಾಟ್ಸಪ್ ಏಕೆ ಉಪಯೋಗಿಸಬಾರದು? ಡಿಜಿಟಲ್ ತಂತ್ರಜ್ಞಾಾನಕ್ಕೆೆ ಬದಲಾಗುವುದು ಈಗಿನ ಕಾಲಕ್ಕೆೆ ಒಳ್ಳೆೆಯ ಬೆಳವಣಿಗೆ. ಇದರಿಂದಾಗಿ ಕಾಗದದ ಬಳಕೆಯಿಂದಾಗುವ ಪರಿಸರ ಹಾನಿಯೂ ತಪ್ಪುುತ್ತದೆ, ವೆಚ್ಚವೂ ಕಡಿಮೆಯಾಗುತ್ತದೆ.