Sunday, 8th September 2024

ವೈಜ್ಞಾನಿಕ ಹಿನ್ನಲೆಯುಳ್ಳ ಮದುವೆ

* ತ್ರಿಪುರಾ ಗೌಡ

ಮಾನವನ ಜೀವನ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂಬ ಸಾರವನ್ನು ಹಿರಿಯರು ಸಾರುತ್ತಾಾ ಬಂದಿದ್ದಾಾರೆ. ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವ ಎಲ್ಲ ಕಾರ್ಯಗಳು ದೇವರ ಸಾಮೀಪ್ಯಕ್ಕೆೆ ಹೋಗಲು ಸಹಕರಿಸುತ್ತದೆ ಎಂದು ಎಲ್ಲಾಾ ಧರ್ಮಗಳು ಹೇಳುತ್ತವೆ. ಮಗು ಹುಟ್ಟಿಿನಿಂದ ಹಿಡಿದು ಸಾಯುವವರೆಗೂ ಮಾಡುವಂತಹ ಕೆಲಸಗಳು ವೈದೀಕ ಪದ್ಧತಿಯ ವಿಧಿ ವಿಧಾನಗಳನ್ನು ಸಂಸ್ಕಾಾರ ವೆಂದು ಕರೆಯಲಾಗುತ್ತದೆ. ಇಂತಹ ಸಂಸ್ಕಾಾರವು ವಿವಾಹದ ನಂತರ ರೀತಿಯಾದಂತಹ ರೂಪವನ್ನು ಪಡೆದು ಸುಖಮಯ ಜೀವನ ಸಾಗಿಸಲು ಸಹಾಯಕಾರಿಯಾಗುತ್ತದೆ

ಮದುವೆಯು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯಲ್ಲಿ ನಡೆಯುತ್ತದೆ ಎಂಬ ಮಾತಿದೆ. ಕೆಲವು ಘಟನಾವಳಿಯನ್ನು ಗಮನಿಸಿದರೆ ನಿಜವೆಂದು ಭಾಸವಾಗುತ್ತದೆ. ಸಾವಿರಾರು ವರ್ಷಗಳಿಂದ ಭಾರತೀಯ ಮದುವೆ ಶಾಸ್ತ್ರೋೋಕ್ತವಾಗಿ ನಡೆದುಕೊಂಡು ಬರುತ್ತಿಿದೆ. ಭಾರತೀಯ ಸಂಪ್ರದಾಯದ ಪ್ರತಿಯೊಂದು ಶಾಸ್ತ್ರಗಳು ವಧು ವರನನ್ನು ಹತ್ತಿಿರಕ್ಕೆೆ ತರುತ್ತದೆ ಮತ್ತು ಜೀವನವಿಡಿ ಜತೆಯಾಗಿರಬೇಕೆಂಬ ಪಾಠ ಕಲಿಸಿಕೊಡುತ್ತದೆ.

ಹಾಗೆಯೇ ಹಿಂದೂ ಮದುವೆಯು ವೈಜಾನಿಕವಾದಂತಹ ಹಿನ್ನಲೆಯನ್ನು ಹೊಂದಿದೆ. ಮದುವೆಯ ಶಾಸ್ತ್ರಗಳು ಆರಂಭವಾಗುವುದೇ ಮೆಹಂದಿಯ ಇದರಲ್ಲಿ ವಧು ಹಾಗೂ ವರ ಇಬ್ಬರ ಕೈಗಳಿಗೂ ಮದರಂಗಿಯನ್ನು ಬಿಡಿಸಲಾಗುತ್ತದೆ. ಇದರಲ್ಲಿ ಬ್ಯಾಾಕ್ಟೀರಿಯಾ ವಿರೋಧಿ ಗುಣಗಳು ಅಡಗಿವೆ. ಇದು ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮದುವೆಯ ಸಮಯದಲ್ಲಿ ವಧು ವರರಿಗೆ ಎದುರಾಗುವ ಒತ್ತಡವನ್ನು ನಿವಾರಿಸುತ್ತದೆ ಹಾಗೂ ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ.

ಮೆಹಂದಿಯ ಬಳಿಕ ನಡೆಯುವ ಕಾರ್ಯಕ್ರಮವೇ ಅರಿಶಿಣ ಶಾಸ್ತ್ರ. ಇದನ್ನು ವಧುವರರಿಗೆ ಹಚ್ಚುವುದರಿಂದ ದೇಹದ ಸೂಕ್ಷ್ಮ
ಜೀವಿಗಳಿಂದಾಗುವ ರೋಗಗಳನ್ನು ಗುಣಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಅರಿಶಿಣದ ಪೇಸ್‌ಟ್‌‌ಅನ್ನು ದೇಹಕ್ಕೆೆ ಲೇಪನಮಾಡಲಾಗುತ್ತದೆ.

ಮದುವೆಯ ಮೊದಲು ಮದುಮಗಳ ಕೈಗಳಿಗೆ ಬಳೆ ತೊಡಿಸುವುದು ಪ್ರಮುಖ ಶಾಸ್ತ್ರ. ಇದರಿಂದ ಚರ್ಮ ಮತ್ತು ಬಳೆಗಳ ನಡುವಿನ ತಿಕ್ಕಾಾಟವು ರಕ್ತ ಪರಿಚಲನೆಯನ್ನು ಉತ್ತಮಪಡಿಸುವುದು. ನಂತರ ಮದುಮಗಳ ಹಣೆಗೆ ಸಿಂಧೂರವನ್ನು ವಧು ವರ ಪತಿ ಪತ್ನಿಿಯಾದರು ಎನ್ನುವ ಅರ್ಥವಿದೆ. ಭಾರತೀಯ ಸಂಪ್ರದಾಯದಂತೆ ಮದುಮಗಳು ಕಾಲಿಗೆ ಬೆಳ್ಳಿಿಯ ಉಂಗುರವನ್ನು ಧರಿಸುತ್ತಾಾರೆ. ಇದರಿಂದ ಈ ಬೆರಳಿನ ನರಗಳು ನೇರವಾಗಿ ಗರ್ಭಕೋಶ ಮತ್ತು ಹೃದಯಕ್ಕೆೆ ಸಂಪರ್ಕವನ್ನು ಹೊಂದಿದೆ.

ಭಾರತೀಯ ಸಂಪ್ರದಾಯದಲ್ಲಿ ಅಗ್ನಿಿಯನ್ನು ಅಗ್ನಿಿಯ ಮುಂದೆ ವಧು ವರರು ಮದುವೆಯ ಶಾಸ್ತ್ರ ನಿರ್ವಹಿಸುತ್ತಾಾರೆ. ನಂತರ ಅಗ್ನಿಿಕುಂಡಕ್ಕೆೆ ಹಾಕುವ ಸಾಮಗ್ರಿಿಗಳು ಸುತ್ತಲು ಇರುವಂತಹ ನಕಾರತ್ಮಕ ಅಂಶಗಳನ್ನು ದೂರ ಮಾಡುತ್ತದೆ. ಹೀಗೆ ಹಿಂದೂ ಸಂಪ್ರದಾಯದ ಮದುವೆಯಲ್ಲಿ ವೈಜ್ಞಾಾನಿಕವಾದ ಹಿನ್ನಲೆ ಅಡಗಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!