Sunday, 22nd September 2024

ಆಡುವುದೊಂದು ಮಾಡುವುದೊಂದು

*ಸುಷ್ಮಾಾ ಸದಾಶಿವ್

ಮದುವೆ ಹೆಣ್ಣಿಿನ ಜೀವನದಕ್ಕೆೆ ಹೊಸ ಅಧ್ಯಾಾಯವನ್ನು ಬರೆಯುವ ಮುನ್ನುಡಿ. ಜೀವನದುದ್ದಕ್ಕೂ ಅದೆಷ್ಟೇ ನೋವು- ನಲಿವುಗಳು ಎದುರಾದರೂ ಎಲ್ಲವನ್ನು ಸಹಿಸಿಕೊಂಡು ಬಾಳಬೇಕಾದ ಅನಿವಾರ್ಯ. ಹಣೆಯ ಮೇಲಿನ ಸಿಂಧೂರ, ಕೊರಳಿನ ಮಾಂಗಲ್ಯ, ಕೈಯಲ್ಲಿರುವ ಬಳೆಗಳು, ಕಾಲುಂಗರ ಮತ್ತು ಗಜದಳತೆಯ ಸೀರೆ ಇವೆಲ್ಲವೂ ಹೆಣ್ಣಿಿನ ಮೇಲೆ ಆದರದ ಭಾವನೆ ಮೂಡಿಸುತ್ತದೆ. ತನ್ನ ತಾಯಿ ಮನೆಯ ಸಂಬಂಧಗಳನ್ನು ಕಟ್ಟಿಿಕೊಂಡು ಇನ್ನೊೊಂದು ಮನೆಯ ನಂದಾದೀಪವಾಗಿ ಬೆಳೆಗುವ ಹೆಣ್ಣು ಮದುವೆ ಎಂಬ ಸಂಬಂಧದಲ್ಲಿ ಬೆಸೆಯುವ ನೂತನ ಸಂಬಂಧಗಳಿಗೆ ಕೊಂಡಿಯಾಗಿ ಬೆಸೆಯುತ್ತಾಾಳೆ. ಹೀಗೆ ಇತರ ಸಂಬಂಧಗಳನ್ನು ತಂದುಕೊಟ್ಟು ಸಂಸಾರ ನಿರ್ವಹಣೆಗೆ ಅನುಕೂಲವಾಗಿ ಸ್ತ್ರೀಯನ್ನು ಮಾತೆಯ ರೂಪದಲ್ಲಿ ಕಾಣುವ ಮೂಲಕ ಸಾಮಾಜಿಕ ವ್ಯವಸ್ಥೆೆಯ ಸ್ವಾಾಸ್ಥವಾಗಿರಲು ಆಕೆ ಪೂರಕ. ಇಂತಹ ಹಲವಾರು ಮಾತುಗಳು ಹೆಣ್ಣಿಿನ ಸ್ಥಾಾನಮಾನವನ್ನು, ಪ್ರಾಾಮುಖ್ಯತೆಯನ್ನು ಗುಣಗಾನ ಮಾಡುತ್ತದೆ.

ಗಂಡನೇ ಸರ್ವಸ್ವ ಎಂದು ಜೀವನ ಸಾಗಿಸುವ ಭಾರತೀಯ ನಾರಿಯರು, ಆತನ ಮನೆಯೇ ತಮ್ಮ ಬದುಕು, ತಮ್ಮ ಜೀವನದ ಜೀವಾಳ ಎಂದು ಬದುಕುತ್ತಾಾರೆ. ಅದೆಷ್ಟೇ ನೋವಾದರೂ ಎಲ್ಲವನ್ನೂ ತನ್ನ ಹೊಟ್ಟೆೆಗೆ ಹಾಕಿಕೊಂಡು, ಪಾಲಿಗೆ ಬಂದದನ್ನು ಸ್ವೀಕರಿಸಿ ಜೀವನ ಸಾಗಿಸುತ್ತಾಾಳೆ. ತನ್ನ ಜೀವನದಲ್ಲಿ ಪತಿಯನ್ನು ಕಳೆದುಕೊಂಡರು ತನ್ನ ಮಕ್ಕಳ ಸುಖಕ್ಕಾಾಗಿ ಅವರ ಜೀವನಕ್ಕಾಾಗಿ ಮರುಮದುವೆಯಾಗದೇ ಮಕ್ಕಳ ಸುಖದಲ್ಲೇ ಎಲ್ಲಾಾ ನೋವನ್ನು ಮರೆಯುತ್ತಾಾ, ಜೀವನದ ಏರು-ಪೇರುಗಳನ್ನು ನಿಭಾಯಿಸಬಲ್ಲ ಸಹಾನುಭೂತಿ ಹೆಣ್ಣು. ಇಷ್ಟೆೆಲ್ಲಾಾ ಸವಾಲುಗಳನ್ನು ಅವಳು ಎದುರಿಸುತ್ತಾಾ ಮುನ್ನುಗ್ಗಿಿದ್ದರೂ ಸಮಾಜ ಅವಳನ್ನು ಕಾಣುವುದು ವಕ್ರ ದೃಷ್ಟಿಿಯಿಂದಲೇ.

ಒಂದು ಹೆಣ್ಣು ತನ್ನ ಗಂಡನ ಸಾವಿನ ನಂತರವೂ ತನ್ನ ಮಕ್ಕಳ ಸಂತೋಷಕ್ಕಾಾಗಿ ಎರಡನೇ ಮದುವೆಯಾಗದೇ ಜೀವನ ನಿರ್ವಹಿಸಲ್ಲಳು. ಆದರೆ ಗಂಡು? ತನ್ನ ಹೆಂಡತಿಯ ಅಗಲಿಕೆಯ ಒಂದು ತಿಂಗಳೊಳಗೆ ಇನ್ನೊೊಂದು ಮದುವೆ! ಎಂತಹ ದುರಂತ ಅಲ್ವಾಾ. ಒಂದು ಹೆಣ್ಣಿಿನ ಮಗು ಹಸುಕೂಸಾಗಿದ್ದರೂ ಅವಳನ್ನು ಮರು ಮದುವೆಯಾಗುವಾಗ ಸಾವಿರಾರು ಬಾರಿ ಚಿಂತಿಸುವ ಈ ಸೋ ಕಾಲ್‌ಡ್‌ ಜನರಿಗೆ, ಗಂಡಸಿನ ಮಗಳು ಮದುವೆ ಪ್ರಾಾಯಕ್ಕೆೆ ಬಂದರೂ ಆತ ಎರಡನೇ ಮದುವೆಯಾಗುವುದರಲ್ಲಿ ಯಾವುದೇ ತಪ್ಪಿಿಲ್ಲವೆಂದೆನಿಸುತ್ತದೆ. ಗಂಡಿಗೆ ಇವರು ಬದುಕು ಹೆಣ್ಣಿಿಗೆ ಯಾಕಿಲ್ಲ? ಹೆಣ್ಣು ತನ್ನ ರಕ್ಷಣೆಯಾಗಿ, ಜೀವನಕ್ಕಾಾಗಿ ಮರುಮದುವೆಯಾದರೆ ಸಾವಿರಾರು ಕೊಂಕು ಮಾತುಗಳು ಅವಹೇಳನಗಳು.

ಆದರೆ ಗಂಡಿಗೆ ಅದಾವುದೂ ಅನ್ವಯಿಸುವುದೇ ಇಲ್ಲ. ಎಂತಹ ಸಮಾಜದಲ್ಲಿ ನವಿಂದೂ ಜೀವಿಸುತ್ತಿಿದ್ದೇವೆ? ಗಂಡಿಗೊಂದು ನ್ಯಾಾಯ, ಹೆಣ್ಣಿಿಗೊಂದು ನ್ಯಾಾಯ. ಇದು ಎಲ್ಲರಿಗೂ ಅನ್ವಹಿಸದೇ ಇದ್ದರೂ ನೂರರಲ್ಲಿ ತೊಂಬತ್ತು ಶೇಕಡ ಜೀವನ ಹೀಗೇ ಇದೆ. ಅದೆಷ್ಟೇ ಆಧುನೀಕರಣವಾದರೂ, ಜೀವನಶೈಲಿಗಳು ಬದಲಾರದೂ ನಮ್ಮ ನೆಲೆದಲ್ಲಿ ಸಮಾನತೆ ಇಂದಿಗೂ ಸರಿಯಾಗಿಲ್ಲ.
ತನ್ನ ತಾಯಿಯ ಸ್ಥಾಾನದಲ್ಲಿ ಇನ್ನೊೊಂದು ಹೆಣ್ಣನ್ನು ಕಲ್ಪಿಿಸಲೂ ಆಗದ ಒಂದು ಮಗು ತನ್ನ ತಂದೆಯ ಎರಡನೇ ಹೆಂಡತಿಯನ್ನು ಅಮ್ಮ ಎಂದು ಕರೆಯಲು ಎಷ್ಟು ತವಕಿಸಬಹುದು. ಅಪ್ಪ ಅದೆಷ್ಟೇ ಪ್ರೀತಿ, ಐಶ್ವರ್ಯ, ಸುಖ-ಸುಪತ್ತು ನೀಡಿದರೂ ಅಮ್ಮನ ಸ್ಥಾಾನವನ್ನು ಬೇರೊಬ್ಬಳಿಂದ ತುಂಬಲು ಸಾಧ್ಯವಿಲ್ಲ. ಅಮ್ಮ ಯಾವತ್ತಿಿದ್ದರೂ ಅಮ್ಮನೇ. ಸಮಾನತೆ ಎನ್ನುವುದು ಇಂದು ಬಾಯಿ ಮಾತಿಗೆ ಸೀಮಿತವಾಗಿದೆ. ನಿಜ ಸ್ವರೂಪದಲ್ಲಿ ಆದಾವುದಕ್ಕೂ ಬೆಲೆನೂ ಇಲ್ಲ. ಇಂತಹ ಪದ್ಧತಿಯನ್ನು ಯಾವುದೇ ಸರ್ಕಾರವಾಗಿಲಿ, ನೀತಿ-ನಿಯಮಗಳಾಗಲಿ ಬದಲಿಸಲಾರದು. ಸಮಾಜ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು, ನಮ್ಮ ಚಿಂತನೆಗಳು, ವಿಚಾರಧಾರೆಗಳು ಬದಲಾಗಬೇಕು.