Friday, 22nd November 2024

ಸಪ್ತಪದಿಯೆಂಬ ಅನುಬಂಧ

ನಮ್ಮ ದೇಶದ ಮದುವೆಗಳಲ್ಲಿ ಸಪ್ತಪದಿ ಕೇಂದ್ರಬಿಂದು. ಇದು ನಡೆಯದೆ ಹಿಂದೂ ವಿವಾಹ ಪೂರ್ಣವಾದಂತಲ್ಲ. ಪುರಾತನ ಕಾಲದಿಂದ ನಡೆದುಬಂದ ಸಂಪ್ರದಾಯದಂತೆ, ಸಪ್ತಪದಿಯು ವಿವಾಹದ ಅವಿಭಾಜ್ಯ ಅಂಗವಾಗಿದೆ. ಅದಕ್ಕೆೆ ಮಹತ್ವವೂ ಅಪಾರ. ಕಾನೂನಿನಂತೆಯೂ ಇದನ್ನು ಮಾನ್ಯ ಮಾಡಲಾಗಿದೆ. ವಿವಾಹದ ಸಾರ ಸಪ್ತಪದಿ. ದಂಪತಿಗಳು ಅರ್ಥವನರಿತು ಈ ಹಾದಿಯನ್ನು ಕ್ರಮಿಸಿದರೆ ಈ ಭುವಿಯೇ ಸ್ವರ್ಗವಾಗುವುದು.
ಏಳು ಹೆಜ್ಜೆೆ ಅಥವಾ ಸಪ್ತಪದಿಯ ಕುರಿತು ನಾನಾ ರೀತಿಯ ವ್ಯಾಾಖ್ಯಾಾನಗಳಿವೆ. ವಿವಿಧ ಪೌರಾಣಿಕ ಮತ್ತು ಧಾರ್ಮಿಕ ಆಚರಣೆಗಳ ಹಿನ್ನೆೆಯಲ್ಲಿ ಅದನ್ನುವ್ಯಾಾಖ್ಯಾಾನ ಮಾಡುತ್ತಾಾರೆ. ಸಪ್ತಪದಿಯ ಸಾಮಾನ್ಯ ವಿವರಗಳನ್ನು ನೋಡಿದರೆ, ಹಲವು ವಿಚಾರಗಳು ಅದರಲ್ಲಿ ಅಡಕಗೊಂಡಿರುವುದು ಕಾಣುತ್ತದೆ.

ಮೊದಲ ಹೆಜ್ಜೆೆ: ‘ಇಷ ಏಕಪದೀ ಭವ’
ಅನ್ನ ಮತ್ತು ಇಚ್ಛೆೆ. ಮನುಷ್ಯನ ಮೂಲಭೂತ ಅವಶ್ಯಕತೆ ಅನ್ನ. ತನ್ನ ಕುಟುಂಬಕ್ಕಾಾಗಿ ಮಾತ್ರ ಅನ್ನವನ್ನು ಗಳಿಸಿದರೆ ಸಾಲದು. ಗೃಹಸ್ಥನ ಕರ್ತವ್ಯ -ವಿದ್ಯಾಾರ್ಥಿಗಳು, ಅವರಿಗೆ ವಿದ್ಯಾಾದಾನ ಮಾಡುವ ಗುರುಗಳು, ಸಮಾಜದ ಅಶಕ್ತರು ಮತ್ತು ಸನ್ಯಾಾಸಿಗಳು ಇಷ್ಟು ಜನರ ಅನ್ನವು ಗೃಹಸ್ಥನಿಂದಲೇ ಬರಬೇಕು. ದಾನ ಮಾಡಲು ಇಚ್ಛಾಾಶಕ್ತಿಿ ಬೇಕು. ಇದೇ ಅನ್ನ ದಾಸೋಹ. ಪ್ರತೀ ಕುಟುಂಬದ ಕರ್ತವ್ಯ.

ಎರಡನೇ ಹೆಜ್ಜೆೆ: ‘ಊರ್ಜೇ ದ್ವಿಿಪದೀ ಭವ’ – ಬಲ.
‘ಬಲಮುಪಾಸ್ವ’ -ಬಲವನ್ನು ಗಳಿಸೋಣ. ಇದು ವೇದದ ಆದೇಶ. ಬಲಹೀನನಿಗೆ ಎಲ್ಲೂ ಮರ್ಯಾದೆ ಇಲ್ಲ. ಬರೀ ತೋಳ್ಬಲ ಒಂದೇ ಅಲ್ಲ. ಶಾರೀರಿಕ, ಮಾನಸಿಕ, ಬೌದ್ಧಿಿಕ, ಸಾಮಾಜಿಕ, ಕಡೆಯದಾಗಿ ಅಧ್ಯಾಾತ್ಮಿಿಕ. ಈ ಎಲ್ಲಾಾ ಸ್ತರಗಳಲ್ಲೂ ಬಲವನ್ನು ಗಳಿಸೋಣ. ಅದನ್ನು ಒಳ್ಳೆೆಯದಕ್ಕೆೆ ಬಳಸೋಣ. ಸಮಾಜಕ್ಕಾಾಗಿ ಬಳಸಲು ಬಲವಿರಲು ಆರೋಗ್ಯವಾಗಿರಬೇಕು. ಅದನ್ನು ತಿಳಿದು ಪ್ರಯತ್ನಿಿಸೋಣ.

ಮೂರನೇ ಹೆಜ್ಜೆೆ: ‘ರಾಯಸ್ಪೋೋಷಾಯ ತ್ರಿಿಪದೀ ಭವ’ – ಸಂಪತ್ತಿಿಗಾಗಿ
ಸಂಪತ್ತನ್ನು ಗಳಿಸಬೇಕಾದ ಕರ್ತವ್ಯ ಗೃಹಸ್ಥನಿಗಿದೆ. ಸನ್ಯಾಾಸಿಗಳಾಗಲಿ, ವಾನಪ್ರಸ್ಥನಿಗಾಗಲಿ ಈ ಅಧಿಕಾರ ಇಲ್ಲ. ಒಳ್ಳೆೆಯ ಮಾರ್ಗದಲ್ಲಿ ದುಡಿದು ಸಂಪತ್ತನ್ನು ಗಳಿಸಬೇಕು. ನಾಲ್ಕು ಕೈಯಿಂದ ದುಡಿದು ಹತ್ತು ಹಸ್ತಗಳಿಂದ ದಾನ ಮಾಡಬೇಕು. ಇಂದು ಸಂಪತ್ತಿಿನದೇ ರಾಜ್ಯಭಾರ. ನಿಜವಾದ ಸಂಪತ್ತು ಅರಿತು ಅದನ್ನು ಗಳಿಸಲು ಪ್ರಯತ್ನಿಿಸೋಣ.

ನಾಲ್ಕನೆಯ ಹೆಜ್ಜೆೆ: ಮಯೋಭವ್ಯಾಾಯ ಚತುಷ್ಪದೀ ಭವ’ ಸುಖ- ಸಂತೋಷಕ್ಕಾಾಗಿ.
ಸುಖ- ಪಾಪವಲ್ಲ. ಇದು ವೇದಕಾಲೀನ ಋಷಿಗಳ ಸಂದೇಶ. ಭಗವಂತನು ಆನಂದಮಯ. ಭೂಮಿಯಲ್ಲಿ ಅದನ್ನು ಹರಡಿ, ಹಂಚಿಬಿಟ್ಟಿಿದ್ದಾಾನೆ. ಅದನ್ನು ಆಯ್ದುಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಎಲ್ಲಾಾ ಕ್ರಿಿಯೆಗಳಲ್ಲೂ ಸಂತೋಷವಿದೆ. ಮಖ್ಯವಾಗಿ ದಾಂಪತ್ಯ ನಿಂತಿರುವುದೇ ಸಂತೋಷದ ಮೇಲೆ. ಅದನ್ನು ಹಾಳು ಮಾಡಿಕೊಂಡಲ್ಲಿ ನಮ್ಮಂತಹ ದಡ್ಡರಿಲ್ಲ. ಅದಕ್ಕೆೆ ಇಚ್ಛಾಾಶಕ್ತಿಿ ಬೇಕು. ಅದನ್ನು ಗಳಿಸಲು ನಾವಿಬ್ಬರೂ ದುಡಿಯಬೇಕು.

ಐದನೆಯ ಹೆಜ್ಜೆೆ:ಪ್ರಜಾಭ್ಯಃ ಪಂಚಪದೀ ಭವ’ – ಸಂತಾನಕ್ಕಾಾಗಿ
ಸತ್ಸಂತಾನಕ್ಕಾಾಗಿ. ನಿಸರ್ಗದ ಆಸೆಯೇ ಸಂತಾನವಲ್ಲವೇ? ಸತ್ಸಂತಾನ ಬೇಕಾದರೆ ಅದಕ್ಕೊೊಂದು ನಿಯಮ ಬೇಕು. ಏಕ ಪತಿ/ಪತ್ನಿಿ ಈ ರೀತಿಯ ಸಂತಾನಕ್ಕೆೆ ಸಹಾಯ. ಅದೇ ವಿವಾಹದ ಮುಖ್ಯ ಉದ್ದೇಶ. ಆದ್ದರಿಂದ ಐದನೆಯ ಹೆಜ್ಜೆೆ ಆ ನಿಟ್ಟಿಿನೆಡೆಗೆ.

ಆರನೆಯ ಹೆಜ್ಜೆೆ: ‘ಋತುಭ್ಯಃ ಷಟ್ಪದೀ ಭವ’
ಋತುಗಳನ್ನು ಅನುಸರಿಸಿ ನಮ್ಮ ಜೀವನವನ್ನು ರೂಪಿಸಿಕೊಳ್ಳೋೋಣ. ನಾವು ನಿಸರ್ಗವನ್ನು ಕೆಡಿಸುವ ಮುಂಚೆ ಋತುಗಳು ಕರಾರುವಾಕ್ಕಾಾಗಿ ನಡೆಯುತ್ತಿಿದ್ದವು. ಅದಕ್ಕೆೆ ಹೊಂದಿಕೊಂಡಂತೆ ನಮ್ಮ ವೇಳಾಪಟ್ಟಿಿಯನ್ನು ಹಾಕಿಕೊಳ್ಳಬಹುದಿತ್ತು.‘ಋತ’ವೆಂದರೆ ‘ಶಾಶ್ವತ ವಿಶ್ವನಿಯಮ’. ಎಲ್ಲವೂ ಇದಕ್ಕೆೆ ಒಳಪಟ್ಟಿಿದೆ. ಇದು ವಿಶ್ವ ಕಾನೂನು. ನಾವು ಮಾಡುವ ಎಲ್ಲ ಕಾರ್ಯವನ್ನೂ ಈ ಕಾನೂನಿಗೆ ಅನುಗುಣವಾಗಿಯೇ ಎಂದು ಒರೆ ಹಚ್ಚಿಿ ಅದರಂತೆ ನಾವಿಬ್ಬರೂ ನಡೆಯೋಣ. ಸಾಂಸಾರಿಕ ಜೀವನವು ಋತಬಂಧಕ್ಕೊೊಳಪಟ್ಟಿಿದೆ. ಅಥರ್ವ ವೇದದಲ್ಲಿ ಮದುವೆಯಾದ ದಂಪತಿಗಳಿಗೆ ಆಶೀರ್ವಾದ ಮಾಡುವಾಗ, ‘ನೀವಿಬ್ಬರೂ ಶಾಶ್ವತ ನಿಯಮದ ಮೂಲಕ ಸಂತೋಷಪಡಿ, ಅಭಿವೃದ್ಧಿಿ ಹೊಂದಿ, ಒಳ್ಳೆೆಯ ಅದೃಷ್ಟವನ್ನು ಪಡೆಯಿರಿ’ ಎಂದು ತಿಳಿಸಲಾಗುತ್ತದೆ.

ಏಳನೆಯ ಹೆಜ್ಜೆೆ: ‘ಸಖೇ ಸಪ್ತಪದೀ ಭವ’
ಇದು ದಾಂಪತ್ಯ ಜೀವನದ ಕಡೆಯ ಘಟ್ಟ. ನಾವು ಬೇರೆ ಯಾರಲ್ಲೂ ಹಂಚಿಕೊಳ್ಳದ ಗುಟ್ಟನ್ನು ಗಂಡ-ಹೆಂಡತಿಯರಲ್ಲಿ ಹಂಚಿಕೊಳ್ಳುತ್ತೇವೆ. ಹಾಗೆಯೇ ಗಂಡ-ಹೆಂಡತಿಯರಲ್ಲೂ ಹಂಚಿಕೊಳ್ಳಲಾಗದ ಗುಟ್ಟನ್ನು ಗೆಳೆಯ/ಗೆಳತಿಯರಲ್ಲಿ ಹಂಚಿಕೊಳ್ಳುತ್ತೇವೆ. ಸಲಹೆ ಕೇಳುತ್ತೇವೆ. ಗಂಡ-ಹೆಂಡತಿಯರೇ ಸ್ನೇಹಿತರಾದರೆ! ಇದು ಋಷಿಗಳ ಚಿಂತನೆಯ ಜಾಣ್ಮೆೆ.

ಸಪ್ತಪದಿಯ ಆಚರಣೆ ಮುಗಿದ ನಂತರ, ವರನು ವಧುವನ್ನು ಕುರಿತು ಹೇಳುತ್ತಾಾನೆ ‘ನನ್ನೊೊಡನೆ ಏಳು ಹೆಜ್ಜೆೆಗಳನ್ನಿಿಟ್ಟಿಿರುವ ನೀನು ನನ್ನ ಗೆಳತಿಯಾಗು. ನಾವಿಬ್ಬರೂ ಪರಸ್ಪರ ಮಿತ್ರರಾಗೋಣ. ನಿನ್ನ ಮೈತ್ರಿಿಯನ್ನು ನಾನು ಹೊಂದುತ್ತೇನೆ. ಜತೆಗೂಡಿ ಎಲ್ಲಾಾ ಕೆಲಸವನ್ನೂ ಮಾಡುವ ಸಂಕಲ್ಪ ಮಾಡೋಣ. ಪರಸ್ಪರ ಪ್ರೀತಿವಂತರಾಗಿಯೂ, ಪ್ರಕಾಶಮಾನರಾಗಿಯೂ, ಒಳ್ಳೆೆಯ ಮನಸ್ಸುಳ್ಳವರಾಗಿಯೂ ಬಾಳೋಣ. ಅನ್ನವನ್ನೂ, ಬಲವನ್ನೂ ಜತೆಗೂಡಿ ಅನುಭವಿಸೋಣ. ನಮ್ಮಿಿಬ್ಬರ ಮನಸ್ಸುಗಳು ಕರ್ಮಗಳು, ಬಾಹ್ಯ -ಅಂತರಿಂದ್ರೀಯಗಳೂ ಕೂಡಿರಲಿ. ನಾನು ಅಂತರಿಕ್ಷ- ನೀನು ಭೂಮಿ; ನಾನು ರೇತಸ್ಸು- ನೀನು ಧರಿಸುವವಳು; ನಾನು ಮನಸ್ಸು- ನೀನು ವಾಕ್ಕು, ನೀನು ಸಂಪತ್ತಿಿಗೂ ಸಂತಾನಕ್ಕೂ ಅನುವರ್ತಿಯಾಗು. ಒಳ್ಳೆೆಯ ಮಾತುಳ್ಳವಳೇ! ನನ್ನ ಜತೆ ಬಾ’.
ಸಪ್ತಪದಿಯಲ್ಲಿ ವಿವಾಹದ ಗುರಿ, ಅದನ್ನು ತಲುಪುವ ಮಾರ್ಗ, ಅದಕ್ಕಾಾಗಿ ಮಾಡಬೇಕಾದ ಪ್ರಯತ್ನ, ಅದನ್ನು ನೆರವೇರಿಸಲು ಪರಮಾತ್ಮನ ಪ್ರಾಾರ್ಥನೆ, ಎಲ್ಲವೂ ಒಗ್ಗೂಡಿದೆ.