Friday, 22nd November 2024

ಮರೆಯಾಗುತ್ತಿರುವ ಬೆಳ್ಳ ಕಾಲ್ಗೆೆಜ್ಜೆ

* ಧೃತಿ ಅಂಚನ್

ಹೆಣ್ಣಿಿನ ಆಭರಣದಲ್ಲಿ ಕಾಲಿನ ಗೆಜ್ಜೆೆಗೆ ಮಹತ್ತರ ಸ್ಥಾಾನ ಇದೆ. ಚಿಕ್ಕ ಮಕ್ಕಳಂತೂ ಗೆಜ್ಜೆೆ ಹಾಕಿಕೊಂಡು ಮನೆ ತುಂಬಾ ಓಡಾಡುತ್ತಿಿದ್ದರೆ ನೋಡಲು ಎರಡು ಕಣ್ಣುಗಳು ಕೂಡ ಕಮ್ಮಿಿಯೇ. ಹಿಂದೆಲ್ಲ ಹೆಣ್ಣು ಮಕ್ಕಳು ಇದ್ದ ಮನೆಯಲ್ಲಿ ಕಾಲಗೆಜ್ಜೆೆಗಳು ಝಲ್ ಝಲ್ ಎನ್ನುತ್ತಿಿದ್ದಾಾಗ ಸಾಕ್ಷಾತ್ ದೇವರುಗಳೇ ನಡೆಯುತ್ತಿಿದ್ದಾಾರೇನೋ ಎಂಬ ಭಾವನೆ ಮೂಡುತ್ತಿಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಕಾಲಿನಲ್ಲಿ ಬೆಳ್ಳಿಿ ಮಾಯಾವಾಗುತ್ತಾಾ ಬಂದಿದೆ. ಸಾಂಪ್ರದಾಯಿಕ ಗೆಜ್ಜೆೆ ತನ್ನ ಅಸ್ತಿಿತ್ವವನ್ನು ಕಳೆಯುತ್ತಾಾ ಬಂದಿದೆ.

ಚಿನ್ನ, ಬೆಳ್ಳಿಿ ಗೆಜ್ಜೆೆಗಳ ಬದಲು ಕೃತಕ ಗೆಜ್ಜೆೆಗಳು ಹೆಂಗೆಳೆಯರ ಮನಸ್ಸಿಿಗೆ ಲಗ್ಗೆೆ ಇಟ್ಟಿಿದೆ. ಮಕ್ಕಳು ಮಹಿಳೆಯರು ತಮ್ಮ ಉಡುಗೆ ತೊಡುಗೆಗಳಿಗೆ ಅನುಗುಣವಾಗಿ ಕಾಲಿನ ಗೆಜ್ಜೆೆಯನ್ನು ಹಾಕಿಕೊಳ್ಳುತ್ತಾಾರೆ.ಹಿಂದೆ ಎರಡು ಕಾಲಿಗೂ ಅಲಂಕಾರಕ್ಕಾಾಗಿ ಹಾಕುತ್ತಿಿದ್ದ ಗೆಜ್ಜೆೆ ಈಗ ಫ್ಯಾಾಷನ್ ಹೆಸರಿನಲ್ಲಿ ಒಂದು ಕಾಲಿಗೆ ಮಾತ್ರ ಹಾಕುವಂತಾಗಿದೆ.

ಗೆಜ್ಜೆೆ ಹಾಕುವುದರಿಂದ ಶಾಸ್ತ್ರದ ಪ್ರಕಾರ ಹಾಗೂ ವೈಜ್ಞಾಾನಿಕವಾಗಿ ಉಪಯೋಗಗಳು ಇದೆ. ಬೆಳ್ಳಿಿಯನ್ನು ಅಲಂಕಾರಿಕ ವಸ್ತುವನ್ನಾಾಗಿ ತಿಳಿದಿರುವ ಹಲವರಿಗೆ ಇವುಗಳಲ್ಲಿ ಹಲವು ಔಷಧೀಯ ಗುಣಗಳಿರುವುದು ತಿಳಿದಿಲ್ಲ. ಇವು ದೇಹದಲ್ಲಿರುವ ಉಷ್ಣವನ್ನು ಹೀರಿಕೊಳ್ಳುವುದರ ಜೊತೆಗೆ ಶರೀರವನ್ನು ಸುಕ್ಕುಗಟ್ಟಲು ಬಿಡುವುದಿಲ್ಲ. ಹುಟ್ಟಿಿದ ಮಗು ಹೆಣ್ಣಿಿರಲಿ ಗಂಡಿರಲಿ ಆ ಮಗುವಿನ ಕಾಲಿಗೆ ಗೆಜ್ಜೆೆಯನ್ನು ಹಾಕುತ್ತಾಾರೆ, ಏಕೆಂದರೆ ಮಗುವಿನ ಕಾಲಿನ ಚಲನೆ ಹಾಗೂ ಮೂಳೆಗಳು ಸದೃಢವಾಗಿ ಬೆಳವಣಿಗೆ ಹೊಂದಲು ಗೆಜ್ಜೆೆ ಸಹಾಯಕವಾಗುತ್ತದೆ ಎಂಬ ನಂಬಿಕೆ.

ಮನೆಯ ಹೆಣ್ಣು ಮಕ್ಕಳು ಕಾಲ ಗೆಜ್ಜೆೆ ಧರಿಸುವುದರಿಂದ ಮನೆಯಲ್ಲಿ ಲಕ್ಷ್ಮೀಯ ಆಗಮನವಾಗುತ್ತದೆ ಎಂದು ಹೇಳುತ್ತದೆ. ಇದೇ ಕಾರಣಕ್ಕೆೆ ನಮ್ಮ ಪೂರ್ವಿಕರು ಹಿಂದಿನ ಕಾಲದಿಂದ ಹೆಣ್ಣು ಮಕ್ಕಳಿಗೆ ಗೆಜ್ಜೆೆಯನ್ನು ತೊಡಿಸುತ್ತಾಾ ಬಂದಿದ್ದಾಾರೆ. ಕಾಲ್ಗೆೆಜ್ಜೆೆಯ ಸಪ್ಪಳದಿಂದ ಧನಾತ್ಮಕ ಕಂಪನಗಳು ಹೊರಹೊಮ್ಮಿಿ ನಕಾರಾತ್ಮಕ ಅಂಶಗಳನ್ನು ದೂರಗೊಳಿಸುತ್ತವೆ. ಬೆಳ್ಳಿಿಯ ಕಾಲ್ಗೆೆಜ್ಜೆೆಗಳನ್ನು ಧರಿಸುವುದರಿಂದ ಕಾಲನೋವು ಕಡಿಮೆಯಾಗುತ್ತದೆ. ಶರೀರ ದೌರ್ಬಲ್ಯಕ್ಕೂ ಇದು ಮದ್ದು. ಅದೇನೆ ಇರಲಿ ಫ್ಯಾಾಷನ್ ಹೆಸರಿನಲ್ಲಿ ನಮ್ಮ ಸಾಂಪ್ರದಾಯಿಕ ಆಭರಣಗಳು ಮೂಲೆ ಸೇರುತ್ತಿಿರುವುದಂತು ನಿಜ.