*ನರೇಂದ್ರ ಎಸ್ ಗಂಗೊಳ್ಳಿ
ಏನು ಪಡೆದೆವು ಮಾತನಾಡದೆ
ಮೌನ ಸುಮ್ಮನೆ
ಯಾವ ಸಾಧನೆಗಾಗಿ ನಮ್ಮ
ಮುಖವು ಬೀಗಿದೆ ಬಿಮ್ಮನೆ
ಲಗ್ನವಾದ ಹೊಸ್ತಿಲಲ್ಲಿ
ಕೊಟ್ಟ ಮಾತು ಮರೆತೆವು.
ನಮ್ಮ ಹಮ್ಮು ನಮಗೆ ಹೆಚ್ಚು
ನಮ್ಮತನವ ತೊರೆದೆವು
ಬರಿದೆ ಬೆಳೆಯಿತು ಎರಡು ಮಾತು
ನನ್ನ ಜೊತೆಗೆ ನಿನ್ನ ಕೂಡ,
ಇರುತ್ತಿಿದ್ದರೆ ಹಳೆಯ ಪ್ರೀತಿ
ಯಾರಿಗಿತ್ತು ಈ ಪಾಡು ನೋಡ
ಏಕೆ ಬೇಕಿದೆ ಇಂತ ಬಾಳುವೆ!
ಕನಸು ಕಾಣದ ಮನಗಳು!
ಸಾಕು ಮಾಡುವ ಮೌನ ಮುರಿಯುವ,
ನಗಲಿ ಒಮ್ಮೆೆ ತುಟಿಗಳು
ಎಷ್ಟು ದಿನಗಳು
ಹಳೆಯ ರಾಗ ಮರಳಲು!
ಒಂದು ಮನಸು, ಒಂದೇ ಮಾತು
ಅಷ್ಟೇ ಸಾಕು ನಮ್ಮ ಪ್ರೀತಿ ಅರಳಲು