Friday, 22nd November 2024

ಮನಸುಗಳ ಮಾತು ಮಧುರ

*ಪ್ರೀತಿ ಶೆಟ್ಟಿಗಾರ್

ಎಲ್ಲಾ ಬಂಧಗಳನ್ನು ಮೀರಿದ ಬಂಧ ಈ ವಿವಾಹ. ಮೂರು ಗಂಟಿನಲ್ಲಿ ಜಂಟಿಯಾಗುವ ಈ ಮನಸುಗಳು ಸಾವಿನವರೆಗೆ ಜತೆಗೆ ಇರುವೆವು ಎನ್ನುವುದು ಪೂರ್ವಜರ ಮಾತು. ಆದರೆ ಈಗೀಗ ಮದುವೆ ಪದಕ್ಕೆೆ ನೂರು ಅರ್ಥಗಳುಂಟು, ನೂರು ಅನರ್ಥಗಳುಂಟು, ಮದುವೆ ಎಂದರೆ ಖುಷಿ ಪಡುವವರು ಉಂಟು, ಭಯ ಪಡುವವರು ಉಂಟು ಎಲ್ಲಾಾದಕ್ಕೂ ಅವರವರ ಭಾವನೆ ಮುಖ್ಯ ಎನಿಸಿಕೊಳ್ಳುತ್ತದೆ. ಎರಡು ಮೂರು ಮದುವೆಯಾಗುವ ಈಗಿನ ಕಾಲಕ್ಕೆೆ ಡೈವರ್ರ್‌ಸ್‌ ಒಂದು ಪರವಾನಿಗೆ ಪತ್ರ. ಹೀಗಿರುವಾಗ ಪುರಾಣಗಳಲ್ಲಿ ಇರುವ ಮದುವೆ ಸಂಬಂಧಕ್ಕೆೆ ಈಗ ಬೆಲೆ ಇಲ್ಲವೇ ಎನ್ನೂವುದು ಹಲವರ ಗೊಂದಲ, ಆದರೆ ಈಗಲೂ ವಿವಾಹಕ್ಕೆೆ ಅದರದ್ದೆೆ ಆದ ಗೌರವ ಪ್ರತಿಷ್ಠೆೆ ಇದೆ ಎನ್ನುವುದೂ ಮಾತ್ರ ಸತ್ಯ.

ವಯಸ್ಸು ಬಂದ ತಕ್ಷಣ ಹಿರಿಯರು ತಮ್ಮ ಮಕ್ಕಳ ಬಾಳ ಸಂಗಾತಿಯನ್ನು ಹುಡುಕಲು ಶುರು ಮಾಡುತ್ತಾಾರೆ. ಜಾತಕ ಸರಿಹೊಂದುತದೆಯೋ, ಗಣಗಳು ಕೂಡಿ ಬರುತ್ತದೆಯೋ ಎಂದು ಯೋಚಿಸಿ ಒಬ್ಬರನ್ನೂ ಆಯ್ಕೆೆ ಮಾಡುತ್ತಾಾರೆ. ಅವರ ಆಯ್ಕೆೆಯಂತೆ ಹುಡುಗ-ಹುಡುಗಿಯನ್ನು, ಹುಡುಗಿ-ಹುಡುಗನ್ನು ನೋಡಿ ಸುಮ್ಮನಾಗುತ್ತಾಾರೆ. ಮನೆಯವರ ನಿರ್ಧಾರವೇ ಅಂತಿಮ ಎನಿಸಿಕೊಳ್ಳುತ್ತದೆ. ಬಾಳ ಸಂಗಾತಿಯ ಬಗ್ಗೆೆ ನೂರು ಆಸೆಗಳನ್ನು ಹೊತ್ತುಕೊಂಡ ಆ ಮುಗ್ಧ ಮನಸುಗಳು ಮನೆಯವರ ಆಯ್ಕೆೆಯೇ ಅಂತಿಮ ಎಂದು ಮದುವೆಯಾದರು ಅದಾದ ನಂತರವಷ್ಟೆೆ ಮದುವೆ ಎಂದರೇನು ಪ್ರಶ್ನೆೆಗೆ ಉತ್ತರ ಸಿಗುವುದು.

ಅಷ್ಟೋೋತ್ತಿಿಗಾಗಲೇ ಸಮಯ ಮೀರಿರುತ್ತದೆ ಒಬ್ಬರು ಮತ್ತೊೊಬ್ಬರನ್ನು ಅರ್ಥ ಮಾಡಿಕೊಳ್ಳುವ ದಾರಿ ಯಾವುದು ಎಂದು ಹುಡುಕುವ ಹಾಗೆ ಆಗಿರುತ್ತದೆ. ಇದಕ್ಕೆೆ ಉತ್ತರ ಎನ್ನುವಂತೆ ಒಂದು ಮಗು ಆದರೆ ಇಬ್ಬರೂ ಮತ್ತಷ್ಟು ಹತ್ತಿಿರ ಆಗಬಹುದು ಎನ್ನುವ ಮತ್ತದೆ ಹಿರಿಯರ ಮಾತಿಗೆ ಕಟ್ಟುಬಿದ್ದು ಮಗುವು ಮಾಡಿಕೊಳ್ಳುತ್ತಾಾರೆ. ಅಷ್ಟೆೆ ಇನ್ನೆೆಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಇರಲು ಸಾಧ್ಯ. ಹಾಗೆಂದು ಎಲ್ಲರೂ ಹೀಗೆ ಇರುತ್ತಾಾರೆ ಎನ್ನುವುದು ಸುಳ್ಳು ಮದುವೆ ಆದ ಮೇಲೂ ಪ್ರೀತಿ ಆದರೆ ಇದು ನೂರಕ್ಕೆೆ ಹತ್ತರಷ್ಟು ಮಾತ್ರ.

ಮನೆಯವರ ಒತ್ತಾಾಯಕ್ಕೆೆ ಮಣಿದು ಮದುವೆಯಾಗಿ ಮುಂದೆ ಪಶ್ಚಾಾತ್ತಾಾಪ ಪಡುವುದಕ್ಕಿಿಂತ ಮುಂಚೆಯೇ ಈ ಬಗ್ಗೆೆ ಗಮನಹರಿಸುವುದು ಉತ್ತಮ. ದಾಂಪತ್ಯಕ್ಕೆೆ ಕಾಲಿಡುವ ಮೊದಲು ಮನೆಯವರ ಆಯ್ಕೆೆಯ ಜೊತೆಗೆ, ಒಂದಷ್ಟು ಮಾತು ಮದುವೆ ಆಗುವವರೊಂದಿಗೆ ಇದ್ದರೆ ಅವರ ಕಷ್ಟ ಸುಖವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಬಹುಷಃ ನಂತರದ ದಿನಗಳಲ್ಲಿ ಭಿನ್ನಾಾಭಿಪ್ರಾಾಯದ ಕಿಡಿ ಜೀವನದ ಸಹಬಾಳ್ವೆೆಯಲ್ಲಿ ಇರುವುದಿಲ್ಲ. ಪ್ರೀತಿಸಿ ವಿವಾಹವಾದರೆ ಒಳ್ಳೆೆಯದು ಎನ್ನುವುದು ಈ ಕಾರಣಕ್ಕೆೆ ಕನಿಷ್ಟ ನನ್ನ ಇದೇ ವಿಷಯಕ್ಕೆೆ ಕೋಪ ಮಾಡಿಕೊಳ್ಳುತ್ತಾಾರೆ, ಇದು ಅವರಿಗೆ ಇಷ್ಟ ಇಲ್ಲ ಎನ್ನುವ ಮಾಹಿತಿ ನಮ್ಮಲ್ಲಿ ಇರುತ್ತದೆ. ಕನಿಷ್ಟ ಪಕ್ಷ ಒಬ್ಬರಿಗೆ ಮತ್ತೊೊಬ್ಬರ ಮೇಲೆ ನಂಬಿಕೆ ಇರುತ್ತದೆ. ಜೀವನದಲ್ಲಿ ನಂಬಿಕೆ ಬಹಳ ಮುಖ್ಯ.

ಮದುವೆ ಅಂದರೆ ಏನು ಎನ್ನುವ ಪ್ರಶ್ನೆೆಗೆ ಉತ್ತರವನ್ನು ಮದುವೆಯಾದ ನಂತರದಲ್ಲಿ ಹುಡುಕುವುದಕ್ಕಿಿಂತ ಮುಂಚೆಯೆ ತಿಳಿಯುವುದು ಉತ್ತಮ. ಆಗ ಅದು ಎರಡು ಮನಸುಗಳ ನಡುವಿನ ದಾಂಪತ್ಯ ಎನಿಸಿಕೊಳ್ಳುತ್ತದೆ.