Thursday, 21st November 2024

ಏನಾದರೂ ಆಗು ಮೊದಲು ಕೇಳುಗನಾಗು

* ಸರಸ್ವತಿ ವಿಶ್ವನಾಥ್ ಪಾಟೀಲ್

ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾಾರೆ. ಮತ್ತೊೊಂದಿಷ್ಟು ಜನರಿಗೆ ಭಾಷಣ ಮಾಡುವ ಧೈರ್ಯ ಇರುತ್ತದೆ. ಆದರೆ ಮಾತಿಗೆ ನಿಂತ ಕೂಡಲೇ ಎಲ್ಲವೂ ಮರೆತು ಹೋಗುತ್ತವೆ. ಸ್ಟೇಜ್ ಫಿಯರ್ ಅನೇಕ ಜನರನ್ನು ಕಾಡುತ್ತದೆ. ಅದರಿಂದಾಗಿಯೇ ಅನೇಕರು ಸ್ಟೇಜ್ ಏರಲು ಸದಾ ಹೆದರುತ್ತಾಾರೆ. ಅತ್ಯುತ್ತಮವಾಗಿ ಮಾತನಾಡುವವರು ನೀವಾಗಬೇಕಾದರೆ ಮೂದಲು ಉತ್ತಮ ಕೇಳುಗ ನೀವಾಗಬೇಕು. ಎದುರಿನಲ್ಲಿರುವ ವ್ಯಕ್ತಿಿ ಏನು ಹೇಳುತ್ತಾಾರೆ ಎಂದು ಗಮನವಿಟ್ಟು ಕೇಳಿ. ಎಡೆಯಲ್ಲಿ ಬಾಯಿ ದುರಭ್ಯಾಾಸ ಬೇಡ. ಕೆಲವರು ಮಾತನಾಡುವುದನ್ನು ಕೇಳುವುದು ಚಂದ. ಇನ್ನು ಕೆಲವರ ಮಾತು ಕರ್ಣಕಠೋರ. ನಿಮ್ಮ ಮಾತಿನ ಮೂಲಕವೇ ಸಂದರ್ಶಕರನ್ನು ಸೆಳೆಯಬಹುದು.

ಭಾಷಣವನ್ನು ಪರಿಣಾಮಕಾರಿ ಆಗುವಂತೆ ಮಾಡುವುದು ಸಹ ಒಂದು ದೊಡ್ಡ ಕಲೆ. ನಮಗೆಲ್ಲ ತಿಳಿದಿರುವಂತೆ ಮಾತನಾಡುವುದೂ ಒಂದು ಕಲೆ. ಮಾತಿನಿಂದಲೇ ವ್ಯವಹಾರ, ಸ್ನೆೆಹ, ಪ್ರಿಿತಿ. ಅದರಿಂದಲೇ ಬೇಸರ, ಮುನಿಸು, ಜಗಳ, ಹೊಡೆದಾಟ, ಕೊಲೆ. ಸಮಾರಂಭಗಳಲ್ಲಿ ವೇದಿಕೆಯ ಮೆಲೆ ಪರಿಣಾಮಕಾರಿಯಾಗಿ ಮಾತನಾಡುವುದು ಹೇಗೆ? ಎನ್ನುವುದನ್ನು ತಿಳಿಸುವ ಪುಸ್ತಕಗಳು ಬೇಕಾದಷ್ಟಿಿವೆ. ಭಾಷಣ ವಿಷಯ ಮಂಡನೆಯ ಕ್ರಮ, ಬಳಸುವ ಭಾಷೆ, ಸ್ವರದ ಏರಿಳಿತ, ಹಾವಭಾವ, ಪ್ರೇಕ್ಷಕರೊಂದಿಗೆ ಕಣ್ಣಿಿನ ಸಂಪರ್ಕ, ಧ್ವನಿವರ್ಧಕದ ಸಮರ್ಪಕ ಬಳಕೆ ಮುಂತಾದವುಗಳು ಬಹಳ ಮುಖ್ಯ. ಈ ಕುರಿತು ತರಬೇತಿ ನೀಡುವವರೂ ಇದ್ದಾರೆ.

ಚೆನ್ನಾಾಗಿ ಮಾತನಾಡಲು ಭಾಷೆ ಮೇಲೆ ಹಿಡಿತ ಮತ್ತು ಪದಬಳಕೆಯ ಬಗ್ಗೆೆ ಅರಿವಿರಬೇಕು. ಅಷ್ಟೇ ಅಲ್ಲದೇ ಮಾತನಾಡುವ ಮೊದಲು ಉತ್ತಮ ಕೇಳಗುನಾದಾಗ ಸಂವಹನ ಸಾರ್ಥಕವಾಗುತ್ತದೆ. ಮಾತನಾಡುವುದಕ್ಕಿಿಂತ ಇನ್ನೊೊಬ್ಬರ ಮಾತನ್ನು ಸಮಾಧಾನಚಿತ್ತದಿಂದ ಹಾಗೆಯೇ ಗಂಭೀರವಾಗಿ ಆಲಿಸಬೇಕು. ಇದರಿಂದ ಅದೆಷ್ಟೋೋ ಅರಿಯದ ವಿಚಾರಗಳು ತಿಳಿಯುತ್ತವೆ. ಉತ್ತಮ ಕೇಳುಗ ಉತ್ತಮ ಮಾತುಗಾರನಾಗುತ್ತಾಾನೆ.

ಇನ್ನು ಕೆಲವರು ವೇದಿಕೆ ಏರುವ ತನಕ ಮಾತನಾಡಲು ಭಾರೀ ಹುರುಪಿನಲ್ಲಿರುತ್ತಾಾರೆ. ವೇದಿಕೆ ಹತ್ತಿಿ ಜನರನ್ನು ನೊಡುತ್ತಿಿದ್ದ ಹಾಗೆ ಸಭಾಕಂಪದಿಂದ ತೊಡೆ ನಡುಗತೊಡಗುತ್ತದೆ. ನಾಲಿಗೆ ಪಸೆ ಆರಿ ಪದಗಳೇ ಹೊರಡುವುದಿಲ್ಲ. ಬರೆದುಕೊಂಡು ಬಂದದ್ದನ್ನೂ ತಪ್ಪುುತಪ್ಪಾಾಗಿ ಓದಿ ನಗೆಪಾಟಲಿಗೆ ಈಡಾಗುತ್ತಾಾರೆ. ಗಾದೆ, ಸುಭಾಷಿತ, ನಗೆಹನಿ, ಪ್ರಸಿದ್ಧ ಕವನದ ಸಾಲುಗಳನ್ನು ಸೇರಿಸಿದರೆ ಅವುಗಳು ಕೇಳುಗರ ಮೆಲೆ ಒಳ್ಳೆೆಯ ಪರಿಣಾಮ ಬೀರುವುದು ನಿಜ. ಆದರೆ ಅವು ಸಂದಭೊಚಿತವಾಗಿರಬೇಕು. ಅತಿಯಾದರೆ ಅಮೃತವೂ ವಿಷ.

ಸಂಸ್ಥೆೆಯ ಮುಖ್ಯಸ್ಥರು, ಹಿರಿಯರು, ದಾನಿಗಳು ಎಂಬ ಕಾರಣಕ್ಕೆೆ ವೇದಿಕೆಯನ್ನು ಅಲಂಕರಿಸುವವರಿಂದ ಒಳ್ಳೆೆಯ ಭಾಷಣ ನಿರೀಕ್ಷಿಸುವುದು ತಪ್ಪುು. ಇಂಗ್ಲಿಿಷ್ ಮಾಧ್ಯಮದಲ್ಲಿ ಓದಿ, ಕಚೇರಿಯಲ್ಲಿ ಇಂಗ್ಲಿಿಷ್‌ನಲ್ಲೆ ವ್ಯವಹರಿಸುವ ಬಹಳಷ್ಟು ಜನರಿಗೆ ಕನ್ನಡದಲ್ಲಿ ಭಾಷಣ ಮಾಡಲು ಬರುವುದಿಲ್ಲ. ಅವರ ಇಂಗ್ಲಿಿಷ್ ಕೂಡಾ ಕೃತಕ ಅನ್ನಿಿಸುತ್ತದೆ. ಯೊಚಿಸಿ ಇಂಗ್ಲಿಿಷ್‌ನಲ್ಲಿ ಮಾತನಾಡಿದರೆ ಅದು ಸಹಜವಾಗುವುದು ಹೇಗೆ? ಆದರೂ, ಒಂದು ಸಮಾಧಾನದ ಸಂಗತಿ ಎಂದರೆ ಇಂಥವರು ಮಾತನಾಡುವ ಮೊದಲು ಏನು ಮಾತನಾಡಬೇಕು ಎಂದು ಯೋಚಿಸಿ ಆಮೇಲೆ ಮಾತನಾಡುತ್ತಾಾರೆ.

ಭಾಷಣ ಮಾಡಲು ಅಂಜುವಷ್ಟು ಸಾಯಲು ಸಹಾ ಅಂಜಲ್ಲವಂತೆ. ಈ ಹೆದರಿಕೆ ನಮ್ಮಲ್ಲಿ ಹಲವಾರು ಬಾರಿ ಕೆಲವು ಪ್ರತಿಕ್ರಿಿಯೆಗಳನ್ನು ಉಂಟು ಮಾಡುತ್ತವೆ, ನಾವು ನಮಗರಿವಿಲ್ಲದಂತೆಯೇ ಕುಗ್ಗುವುದು, ಎಂಜಲು ನುಂಗುವುದು, ಬಟ್ಟೆೆ ಆಗಾಗೆ ಸರಿಪಡಿಸಿಕೊಳ್ಳುವುದು, ಅಂ ಆ ಮುಂತಾದ ಅನವಶ್ಯಕ ಉದ್ಗಾಾರಗಳನ್ನು ತೆಗೆಯುವುದು, ಬೆನ್ನ ಹಿಂದೆ ಮುಖದ ಮೇಲೆ ತರುವುದು, ಅಥವಾ ಹೇಳಬೇಕಾದುದನ್ನು ಮರೆತು ಬಿಡುವುದು ಮುಂತಾದ ಆನೈಚ್ಛಿಿಕ ಕ್ರಿಿಯೆಗಳನ್ನು ಮಾಡುತ್ತಿಿರುತ್ತೇವೆ. ಇವುಗಳು ನಮ್ಮ ಬೆರಳಚ್ಚಿಿನಂತೆ ಅವರವರಿಗೆ ಅನುಗುಣವಾಗಿರುತ್ತವೆ. ಇವುಗಳು ಯಾಕೆ ಆಗುತ್ತಿಿರುತ್ತವೆ? ಇವುಗಳನ್ನು ಹೇಗೆ ಸರಿಪಡಿಸಬಹುದು? ಮುಂತಾದ ಅನೇಕ ವಿಷಯಗಳನ್ನು ಕಲಿತು ಕೊಳ್ಳುವುದೇ ವಾಕ್ಪಥದ ಮೊದಲ ಧ್ಯೇಯ.