Sunday, 8th September 2024

ಎಲೆ ಮರೆ ಪ್ರತಿಭೆ ಅಪ್ಪಣ್ಣ ರಾಮದುರ್ಗ

* ಮೌಲಾಲಿ ಕೆ ಆಲಗೂರ ಬೋರಗಿ

ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಡತನ ಕುಟುಂಬದಲ್ಲಿ ಜನಿಸಿದ ಪ್ರತಿಭಾನ್ವಿಿತ ಯುವ ಕಲಾವಿದನೊಬ್ಬ ಇಂದು ಪಂಚ ಭಾಷೆಗಳಲ್ಲಿ ಮೂಡಿ ಬಂದ ನಾಯಕ ನಟ ಸುದೀಪ್ ಅಭಿನಯದ ಪೈಲ್ವಾಾನ್ ಚಲನಚಿತ್ರದಲ್ಲಿ ಪ್ರಮುಖ ಹಾಸ್ಯ ನಟನಾಗಿ ಕಾಣಿಸಿಕೊಂಡು ನಾಡ ಜನರ ಮನ ಗೆದ್ದು, ಹೊರ ರಾಜ್ಯಗಳ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿದ್ದಾನೆ. ಅಲ್ಲದೇ ನಟ ಸುದೀಪ್ ಮತ್ತು ನಟ ಸುನಿಲ್ ಶೆಟ್ಟಿಿ ಅವರಿಂದ ಶಹಬ್ಬಾಾಸ್ ಗಿರಿ ಪಡೆದುಕೊಂಡಿದ್ದಾನೆ. ಈಗ ರಂಗಭೂಮಿಯಿಂದ ಚಲನಚಿತ್ರಕ್ಕೆೆ ಎಂಟ್ರಿಿ ಕೊಟ್ಟು ಗಾಂಧಿ ನಗರದಲ್ಲಿ ಮಿಂಚುತಿದ್ದಾನೆ. ಅವನೇ ಕಾವಿಡಿ ಕಿಲಾಡಿಗಳು ಖ್ಯಾಾತಿಯ ಅಪ್ಪಣ್ಣ ರಾಮದುರ್ಗ.

ಅಪ್ಪಣ್ಣ ಹುಟ್ಟಿಿದ್ದು ಕಡು ಬಡತನದ ಕೂಲಿ ಕಾರ್ಮಿಕ ಕುಟುಂಬದಲ್ಲಿ. ತಂದೆ ಮಹದೇವಪ್ಪ ತಾಯಿ ಕಲಾವತಿ. ಇವರ ತಾಯಿ ಈಗಲೂ ಬಾಳೆ ಹಣ್ಣಿಿನ ವ್ಯಾಾಪಾರ ಮಾಡುತ್ತಾಾರೆ. ಚಿಕ್ಕ ವಯಸ್ಸಿಿನಿಂದಲೂ ಬಡತನವೆಂಬ ಭೂತ ಬೆನ್ನು ಬಿಡದೆ ಕಾಡುತಿತ್ತು. ಒಂದು ಹೊತ್ತಿಿನ ಊಟಕ್ಕೂ ಮಾತಿನಲ್ಲಿ ಉತ್ತಮ ಚತುರತೆ ಹೊಂದಿದ್ದ ಅಪ್ಪಣ್ಣ ಕಾಮಿಡಿ ಮತ್ತು ಪಂಚ್ ಡೈಲಾಗ್ ಮೂಲಕ ಊರ ಜನರ ಮನ ಗೆದ್ದಿದ್ದರು. ನಿತ್ಯ ಜನರಿಗೆ, ಸ್ನೇಹಿತರಿಗೆ ನಗೆಸಿದ ನಂತರ ಅವರರು ನೀಡುವ ಪುಡಿಗಾಸಿನಿಂದ ತಮ್ಮ ದಿನ ಹೊಟ್ಟೆೆ ತುಂಬಿಸಿಕೊಳ್ಳುತಿದ್ದರು. ಕೆಲವೊಮ್ಮೆೆ ಜನರು ಅಪ್ಪಣ್ಣನಿಗೆ ಜೋಕರ್ ಎಂದು ಅಸೂಯೆ, ಅವಮಾನ ಮಾಡಿದ್ದು ಉಂಟು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಬಡತನ ಮತ್ತು ಹಸಿವು ಅವರನ್ನು ಅಸಹಾಯಕನನ್ನಾಾಗಿ ಮಾಡಿತ್ತು. ಅಪ್ಪಣ್ಣ ಊರಲ್ಲಿ ಹುಡುಗ ಆದರೆ ಅವನಲ್ಲಿನ ಕಲೆ ಮತ್ತು ಪ್ರತಿಭೆ ಮಾತ್ರ ಅಗಾಧವಾದದ್ದು. ಅದನ್ನು ಗುರುತಿಸಿದ ಅಶೋಕ ಗೋನವಾಲ್ ಎಂಬ ಗುರುಗಳು ಅಪ್ಪಣ್ಣನಿಗೆ ಕರೆದು ಬುದ್ದಿವಾದ ಹೇಳಿ ಕಲಾವಿದನಾಗು ಆಸೆ ಚಿಗುರೊಡಿಸಿದರು. ನೀನಾಸಂ ರಂಗ ಭೂಮಿ ತರಬೇತಿ ಬಗ್ಗೆೆ ಸೂಕ್ತ ಮಾಹಿತಿ ನೀಡಿದರು.

ಗುರುಗಳು ಹೇಳಿದ ಬುದ್ಧಿಿವಾದದ ಮಾತು ಹಸಿವು ಕಲಿಸಿದ ಪಾಠ, ಜೀವನದಲ್ಲಿ ಎದುರಾದ ಸಮಸ್ಯೆೆಗಳನ್ನೆೆ ತನ್ನ ಕಲೆಗೆ ಸ್ಫೂರ್ತಿಯಾಗಿ ತೆಗೆದುಕೊಂಡು, ಸಮಾಜದಲ್ಲಿನ ಜನರು ತನಗೆ ಮಾಡಿದ ಅವಮಾನಕ್ಕೆೆ ಮರು ಉತ್ತರ ನೀಡಬೇಕು ಎಂದು ನೀನಾಸಂನಲ್ಲಿ ಪ್ರವೇಶ ಪಡೆದರು. ಹಲವು ವರ್ಷಗಳ ಕಾಲ ನೀನಾಸಂ ನಲ್ಲಿ ಶ್ರದ್ಧೆೆ, ಭಕ್ತಿಿಯಿಂದ ಕಲಾ ದೇವಿಯನ್ನು ಒಲಿಸಿಕೊಂಡ ಅಪ್ಪಣ್ಣ, ತನಗಿಂತ ಹಿರಿಯ ರಂಗಭೂಮಿ ಕಲಾವಿದರಿಂದ ಅನೇಕ ಕಲಾ ವಿದ್ಯೆೆಯನ್ನು ಕಲಿತರು. ಅಲ್ಲಿಯಿಂದಲೇ ಅಪ್ಪಣ್ಣನವರ ಬದುಕಿನ ದಿಕ್ಕು ಬದಲಾಗಿದ್ದು. ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿದರು. ಅಲ್ಲದೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವಕಾಶಗಳು ಸಿಗದಿದ್ದಾಾಗ ಕೊರಿಯರ್ ಬಾಯ್, ಹೊಟೇಲ್ ಸಪ್ಲೆೆಯರ್ ಆಗಿ ಕೆಲಸ ಮಾಡಿದ್ದಾರೆ. ಅಷ್ಟೊೊತ್ತಿಿಗಾಗಲೇ ಕನ್ನಡ ಖಾಸಗಿ ನಡೆಸುತಿದ್ದ ಕಾಮಿಡಿ ಕಿಲಾಡಿಗಳು ಸೀಜನ್2ಗೆ ಆಯ್ಕೆೆಯಾದ ಅಪ್ಪಣ್ಣ ತನ್ನೊೊಳಗಿದ್ದ ಒಬ್ಬ ಕಲೆಗಾರನಿಗೆ ಹೊರ ಹಾಕಿ ಅತ್ಯುತ್ತಮ ಪ್ರದರ್ಶನ ನೀಡಿದರು.

ದಿನದ ಹೊಟ್ಟೆೆಪಾಡು ಮತ್ತು ಪುಡಿಗಾಸಿಗಾಗಿ ಕಲೆ ಪ್ರದರ್ಶನ ಮಾಡುತಿದ್ದ ಬಡ ಕಲಾವಿದನ ಪ್ರತಿಭೆ ಇಂದು ಕನ್ನಡ ಚಿತ್ರರಂಗದಲ್ಲಿ ಹಾಗೂ ನಾಡಿನ ಜನರಲ್ಲಿ ದೊಡ್ಡ ಹೆಸರು ನೀಡಿದೆ. ಬದುಕಿನುದ್ದಕ್ಕೂ ಅವಮಾನಿಸಿದವರಿಗೆ ಅಪ್ಪಣ್ಣ ಇಂದು ಗೌರವ ಸನ್ಮಾಾನ ಮತ್ತು ಪ್ರಶಸ್ತಿಿ ಪುರಸ್ಕಾಾರಗಳ ಮೂಲಕ ಉತ್ತರ ನೀಡುತ್ತಿಿದ್ದಾನೆ. ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ಅಪ್ಪಣ್ಣ ನಾಡಿನ ಭವಿಷ್ಯನ ದೊಡ್ಡ ಹಾಸ್ಯ ನಟನಾಗಿ ರಂಗ ಭೂಮಿ ಕಲೆ ಉಳಿಸಿ ಬೇಳೆಸಲು ಸ್ವತಃ ತಾವೇ ಒಂದು ರಂಗಭೂಮಿ ಕಲಾ ತರಬೇತಿ ಶಾಲೆ ಸ್ಥಾಾಪಿಸಿ ಗ್ರಾಾಮೀಣ ಭಾಗದ ಬಡ ಪ್ರತಿಭಾವಂತ ಕಲಾವಿದರಿಗೆ ಮುಖ್ಯ ವಾಹಿನಿಗೆ ತರುವ ಉದ್ದೇಶ ಹೊಂದಿದ್ದಾರೆ. ಅಪ್ಪಣ್ಣ ರಾಮದುರ್ಗ ರವರ ಈ ಸದುದ್ದೇಶ ಆದಷ್ಟು ಬೇಗ ಈಡೇರಲಿ. ಅಪ್ಪಣ್ಣ ನಾಡಿನ ಶ್ರೇಷ್ಠ ಹಾಸ್ಯ ನಟರ ಸಾಲಿಗೆ ಸೇರಲಿ ಎಂಬುದೇ ಕನ್ನಡಿಗರ ಮಹಾದಾಸೆಯಾಗಿದೆ.

Leave a Reply

Your email address will not be published. Required fields are marked *

error: Content is protected !!