Sunday, 8th September 2024

ಅವಳಾದ ಅವನ ಕತೆ

*ಮೋಕ್ಷ ರೈ ಎಸ್‌ಡಿಎಂ ಉಜಿರೆ

ಜೀವನದ ಸವಾಲುಗಳು ಯಶಸ್ಸಿಗೆ ಅಡ್ಡಗಾಲಲ್ಲ, ದೃಢ ಸಂಕಲ್ಪವಿದ್ದರೆ ಅಸಾಧ್ಯ ವಾಗುವುದು ಯಾವುದೂ ಇಲ್ಲ ಎನ್ನುವುದನ್ನು ನೀತು ಅವರು ಈ ಸಮಾಜಕ್ಕೆೆ ತೋರಿಸಿದ್ದಾಾರೆ ‘ಜೀವನದಲ್ಲಿ ಅವಕಾಶಗಳನ್ನು ನಾವು ಹುಡುಕಿಕೊಂಡು ಹೋಗಬಾರದು ನಮ್ಮನ್ನು ಅವಕಾಶಗಳು ಹುಡುಕಿಕೊಂಡು ಬರಬೇಕು ಮನೆಯಲ್ಲಿ ನಿಮ್ಮ ಅಣ್ಣ, ತಂಗಿ, ಮಕ್ಕಳಿಗೆ ಹೀಗಾದಾಗ ಅವರನ್ನು ನಿರಾಕರಿಸಬೇಡಿ ಪ್ರೋೋತ್ಸಾಾಹಿಸಿ ಅವರೂ ಮನುಷ್ಯರೇ’ ಎನ್ನುವುದು ನೀತು ಅವರ ಕಿವಿಮಾತು.

ಸಮಾಜದಲ್ಲಿ ಮತ್ತು ಹೆಣ್ಣು ಎನ್ನುವ ಸೃಷ್ಟಿಿ ಸಾಮಾನ್ಯ ಆದರೆ ನನ್ನ ಸೃಷ್ಟಿಿ ಇಷ್ಟೇ ಅಲ್ಲ ಎಲ್ಲದಕ್ಕೂ ಸವಾಲೊಡ್ಡುವ ಮತ್ತೊೊಂದು ಜೀವಿ ನನ್ನ ರಚನೆ ಎನ್ನುತ್ತಲೇ ಮುಂದಿಟ್ಟಿದ್ದು ಲೈಂಗಿಕ ಅಲ್ಪಸಂಖ್ಯಾಾತರೆನ್ನುವ ತೃತೀಯ ಲಿಂಗಿಗಳನ್ನು. ಗಂಡು ಹೆಣ್ಣುಗಳಂತೆಯೇ ಭಾವನೆಗಳು ಹಾಗೂ ಗೌರವಯುವತವಾಗಿ ಬಾಳಲು ಎಲ್ಲಾಾ ಹಕ್ಕು ಇರುವ ಇವರದು ಸವಾಲಿನ ಬದುಕು. ಈ ಹಿನ್ನೆೆಲೆಯಲ್ಲಿ ಸಮಾಜಿಕ ಕಟ್ಟುಪಾಡುಗಳು, ಸವಾಲುಗಳು, ಸಂಕಷ್ಟಗಳು ಎಲ್ಲವನ್ನೂ ಮೆಟ್ಟಿನಿಂತು ಸಾಧನೆಯ ಛಲಹಿಡಿದು ಯಶಸ್ವಿಿ ಬದುಕನ್ನು ನಡೆಸುತ್ತಿರುವವರು ಬೆಂಗಳೂರಿನ ಟ್ಯಾಾಟೂ ನೀತೂ.

ಇತ್ತೀಚೆಗೆ ದಕ್ಷಿಣ ಕನ್ನಡದ ಮೂಡಬಿದಿರೆಗೆ ರೋಡ್ ಶೋ ಕಾರ್ಯಕ್ರಮಕ್ಕೆ ಬಂದ ದೇಶದ ಪ್ರಥಮ ತೃತೀಯ ಲಿಂಗಿ ಮಾಡೆಲ್ ಹಾಗೂ ಟ್ಯಾಾಟೂ ಆರ್ಟಿಸ್‌ಟ್‌ ಮಾತಿಗೆ ಸಿಕ್ಕಾಾಗ ಹಂಚಿಕೊಂಡದ್ದು ಅವರ ಮನದಾಳದ ಮಾತುಗಳನ್ನು ಹಾಗೂ ಮಂಜುನಾಥ್ ಎನ್ನುವ ಪೋರನೊಬ್ಬ ನೀತೂ ಆಗಿ ಬದಲಾದ ಸನ್ನಿವೇಶವನ್ನು. ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಅವರ ಬದುಕಿನ ಕಥನ ಜೀವನದ ವೈಚಿತ್ರವನ್ನು ಅರ್ಥಮಾಡಿಕೊಳ್ಳಲಾರದೆ ತೊಳಲಾಡುತ್ತಿಿರುವವರಿಗೆ ಸ್ಫೂರ್ತಿಯ ಚಿಲುಮೆಯೇ ಸರಿ.

ಮಂಜುನಾಥ್ ಮೂಲತ: ಉತ್ತರ ಕರ್ನಾಟಕದ ಜಿಲ್ಲೆೆಯವರು. ಬಡ ಕುಟುಂಬದಲ್ಲಿ ಜನಿಸಿದ ಇವರಿಗೆ ಆರ್ಥಿಕ ಸಂಕಷ್ಟ ಹುಟ್ಟಿಿನಿಂದ ಬಂದ ಬಳುವಳಿ. ಆರನೇ ತರಗತಿಯಲ್ಲಿ ವ್ಯಾಾಸಂಗ ಮಾಡುತ್ತಿಿರುವಾಗ ಶಾಲೆಯ ಶುಲ್ಕವನ್ನು ಪಾವತಿಸಲಾಗದೆ ತಾನೆ ದುಡಿದು ತನ್ನ ಹಣದಲ್ಲಿಯೇ ವಿದ್ಯಾಾಭ್ಯಾಾಸ ಪಡೆಯುತ್ತೇನೆ ಎಂದು ಉಪ್ಪಿಿನಕಾಯಿ ಪ್ಯಾಾಕಿಂಗ್ ಮಾಡುವ ಕೆಲಸಕ್ಕೆೆ ಸೇರುತ್ತಾಾರೆ, ಅಲ್ಲದೆ ಬಿಡುವಿನ ಸಮಯದಲ್ಲಿ ಹೂ ಕಟ್ಟುವ ಕೆಲಸಕ್ಕೂ ಸೇರುತ್ತಾಾರೆ, ಚಿತ್ರಕಲೆಯಲ್ಲಿ ಮುಂದಿದ್ದ ಇವರು ಶಾಲಾ ಮಕ್ಕಳಿಗೆ ಪ್ರಾಾಜೆಕ್‌ಟ್‌ ವರ್ಕ್ ಮಾಡಿಕೊಟ್ಟು ಅಲ್ಲಿಂದ ಬಂದ ಒಂದಿಷ್ಟು ಹಿಡಿ ಕಾಸಿನಿಂದ ವಿದ್ಯಾಾಭ್ಯಾಾಸವನ್ನೂ ಹಾಗೂ ಜೀವನವನ್ನು ಕಷ್ಟದಲ್ಲಿ ಸಾಗಿಸುತ್ತಿಿರುವಾಗ ಮತ್ತೊೊಂದು ಶಾಕ್ ಎದುರಾಯಿತು.

ಹತ್ತನೇ ತರಗತಿಯಲ್ಲಿರುವಾಗ ತಮ್ಮ ದೇಹದ ದೈಹಿಕ ಗುಣಗಳಲ್ಲಿ ಬದಲಾವಣೆಗಳನ್ನು ಕಂಡು ತಳಮಳಗೊಂಡರು, ನೈಸರ್ಗಿಕವಲ್ಲದ ರೀತಿಯ ಬದಲಾವಣೆಯನ್ನು ಕಂಡು ಅತಂಕಕ್ಕೊೊಳಗಾದರು. ಜತೆಗೆ ಹುಡುಗರ ಜೊತೆಗಿನ ಹದಿಹರೆಯದ ಚೇಷ್ಟೆೆಗಳಿಗಿಂತ ಹುಚ್ಚುಕೋಡಿ ಮನಸ್ಸಿಿನ ಹುಡುಗಿಯರೇ ಪ್ರಿಿಯವಾಗತೊಡಗಿದರು. ಈ ವರ್ತನೆಯೇ ತರಗತಿಯ ಹುಡುಗರ ಚೇಷ್ಟೆೆ ಮತ್ತು ಅವಮಾನಕ್ಕೆೆ ಈಡಾಯಿತು. ಈ ಅವಮಾನಗಳ ನಡುವಿನಲ್ಲಿಯೇ ತನ್ನಲ್ಲಾಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಯ ಸ್ಪಷ್ಟತೆಯನ್ನು ಅರಿತ ನಾನು ಅವನಲ್ಲ ಅವಳೇ ಎಂಬ ಕಹಿ ಸತ್ಯವನ್ನು ಅರಿತುಕೊಂಡರು.

ದಿನ ಕಳೆದಂತೆ ಇವರಲ್ಲಿ ಮಾನಸಿಕ ಹಾಗೂ ದೈಹಿಕ ಲಕ್ಷಣಗಳಲ್ಲಿ ಅಭೂತಪೂರ್ಣ ಬದಲಾವಣೆಯಾಗುತ್ತವೆ. ಬದಲಾವಣೆಯ ಜತೆ ಸಾಮಾಜಿಕ ಅವಮಾನಗಳೂ ಹೆಚ್ಚಾಾಗುತ್ತವೆ. ಅವಮಾನಗಳಿಗೆ ಬೇಸೆತ್ತರು ಇವ್ಯಾಾವುದಕ್ಕು ಕಿವಿ ಕೊಡದೆ ಗಟ್ಟಿಿಯಾಗಿ ನಿಲ್ಲುತ್ತಾಾರೆ. ಈ ಎಲ್ಲವನ್ನು ತಮ್ಮ ಕುಟುಂಬದವರೊಡನೆ ಹೇಳಬೇಕೆಂಬ ದೃಢ ಸಂಕಲ್ಪ ಮಾಡಿ ತನ್ನೆೆಲ್ಲಾಾ ತೊಳಲಾಟವನ್ನು ತಮ್ಮ ಕುಟುಂಬದವರೊಡನೆ ಹೇಳಿಕೊಳ್ಳುತ್ತಾಾರೆ. ಈ ಆಘಾತವನ್ನು ಸಹಿಸಿಕೊಳ್ಳುವುದು ಕಷ್ಟವಾದರೂ ತದನಂತರ ಇದು ದೇವರ ಸೃಷ್ಟಿಿ ಕುಟುಂಬದವರು ಇವರನ್ನು ನಿರಾಕರಿಸಲಿಲ್ಲ ತಮ್ಮ ಇಚ್ಚೆೆಯಂತೆ ಇವರನ್ನು ಬಿಡುತ್ತಾಾರೆ.

ಹೀಗೆ ತಮ್ಮ ಊರಿನಿಂದ ಬೆಂಗಳೂರಿಗೆ ಬಂದ ಮಂಜುನಾಥ್ ನೀತೂ ಎಂಬ ಹೊಸ ನಾಮಾಧೇಯದೊಂದಿಗೆ ಬದುಕಿನ ಭರವಸೆಯನ್ನು ಕಂಡುಕೊಳ್ಳುತ್ತಾಾರೆ. ಮಾನಸಿಕ ತೊಳಲಾಟಗಳೊಂದಿಗೇ ಇವರು ಡಿಪ್ಲೊೊಮೋ ಇನ್ ವಿಶುವಲ್ ಆರ್ಟ್‌ಸ್‌‌ನಲ್ಲಿ ಐದು ವರ್ಷದ ಪದವಿಯನ್ನು ಪಡೆಯುತ್ತಾಾರೆ ಇದಾದ ನಂತರ ಆನಿಮೇಶನ್ ಡಿಪ್ಲೊೊಮೋ ಮಾಡಲು ಮುಂದಾಗುತ್ತಾಾರೆ ಈ ಸಂದರ್ಭದಲ್ಲಿ ಇವರಿಗೆ ಹಣದ ಸಮಸ್ಯೆೆ ಎದುರಾಗುತ್ತದೆ.

ಹೀಗಾದಾಗ ತಮ್ಮ ಚಿಕ್ಕವಯಸ್ಸಿಿನಲ್ಲಿ ರೂಢಿ ಮಾಡಿಕೊಂಡಿದ್ದ ಚಿತ್ರಕಲೆಯನ್ನೇ ಮದುವೆ ಸಮಾರಂಭದಲ್ಲಿ ಮೆಹಂದಿಯನ್ನು ಹಾಕುತ್ತಾಾರೆ ಅದರಲ್ಲಿ ಪಳಗಿದಮೇಲೆ ತಮ್ಮದೇ ಆದ ಒಂದು ಟ್ಯಾಾಟೋ ಪಾರ್ಲರ್ ಇಟ್ಟುಕೊಳ್ಳುತ್ತಾಾರೆ. ಅಲ್ಲಿನ ಯಶಸ್ಸು ಇವರಿಗೆ ‘ಭಾರತದ ಮೊದಲ ಟ್ರಾಾನ್‌ಸ್‌ ಟ್ಯಾಾಟೋ ಆರ್ಟಿಿಸ್‌ಟ್‌’ ಎನ್ನುವ ಬಿರುದಿಗೆ ಕಾರಣವಾಗುತ್ತದೆ. ಹೀಗೆ ಇದರಲ್ಲಿ ಬಂದ ಹಣದಿಂದ ಇವರು ತಮ್ಮ ಮುಂದಿನ ವಿದ್ಯಾಾಭ್ಯಾಾಸವನ್ನು ಮುಂದುವರಿಸುತ್ತಾಾರೆ.

ಇವರಿಗೆ ಸೌಂದರ್ಯದ ಮೇಲೆ ಹೆಚ್ಚು ಆಸಕ್ತಿಿ ಇದ್ದುದರಿಂದ ಮಾಡೆಲಿಂಗ್ ತರಬೇತಿ ಪಡೆದು ಹೆಸರು ಮಾಡುತ್ತಾಾರೆ. ಇದರೊಂದಿಗೆ ಇವರಿಗೆ ‘ಭಾರತದ ಮೊದಲ ಟ್ರಾಾನ್‌ಸ್‌ ಎನ್ನುವ ಬಿರುದುಕೂಡಾ ಲಭ್ಯವಾಗುತ್ತದೆ. ಪ್ರಸ್ತುತ ಬೆಂಗಳೂರಿನಲ್ಲಿ ನೀತೂಗೆ ಎರಡು ಬ್ಯೂಟಿಪಾರ್ಲರ್, ಮೂರು ಟ್ಯಾಾಟೊ ಪಾರ್ಲರ್ ಇದೆ. ಜೊತೆಗೆ ಅಮ್ಮನಿಗೆ ಅಡುಗೆಯಲ್ಲಿ ಆಸಕ್ತಿಿ ಇದ್ದುದರಿಂದ ಅವರಿಗೋಸ್ಕರ ‘ಉತ್ತರ ಕನ್ನಡ ಘಮ ಘಮ’ ಎಂಬ ರೆಸ್ಟೊೊರೆಂಟನ್ನು ಬೆಂಗಳೂರಿನಲ್ಲಿ ತೆರೆಯುತ್ತಾಾರೆ. ಪ್ರಸಕ್ತ ಸುಮಾರು ನಲುವತ್ತು ಕುಟುಂಬದವರಿಗೆ ಉದ್ಯೋೋಗ ನೀಡಿದ ಹೆಗ್ಗಳಿಕೆ ಇವರದು.

Leave a Reply

Your email address will not be published. Required fields are marked *

error: Content is protected !!