Sunday, 15th December 2024

ತಾರಸಿ ಮೇಲೆ ತರಹೇವಾರಿ ತರಕಾರಿ

ಅಂಬ್ರೀಶ್ ಎಸ್.ಹೈಯ್ಯಾಳ್

ಇತ್ತೀಚಿನ ವಿದ್ಯಾರ್ಥಿಗಳಿಗೆ ಕೃಷಿಯ ಮೇಲಿನ ಆಸಕ್ತಿ ಕಡಿಮೆ ಆಗುತ್ತಿರುವುದನ್ನು ಗಮನಿಸುತ್ತೇವೆ. ಆದರೆ ತುಮಕೂರಿನ ವಿದ್ಯಾರ್ಥಿ ಅಭಯ್, ರಜಾ ಸಮಯವನ್ನು ತರಕಾರಿ ಕೃಷಿಗೆ ಉಪಯೋಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾನೆ.

ಒಂಬತ್ತು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯಯತೆ ಸೃಷ್ಟಿಯಾದಾಗ ಹಲವರು ಹೊಸ ಹೊಸ ರೀತಿಯ ಅಡುಗೆ ಕಲಿಕೆ, ದೇಸಿ ಆಟಗಳನ್ನು ಆಡುವುದು, ಪುಸ್ತಕ ಓದು, ಸಂಗೀತ ಹೀಗೆ ವಿಶೇಷ ಹವ್ಯಾಸಗಳನ್ನು ರೂಡಿಸಿಕೊಂಡರು.

ಮಕ್ಕಳಂತು ಆನ್ಲೈನ್ ಗೇಮ್ , ಆನ್ಲೈನ್ ಕ್ಲಾಸ್ ಗಳಲ್ಲಿ ಬ್ಯೂಸಿಯಾಗಿದ್ದರು. ಆದರೆ ಇದೇ ಸಮಯ ದಲ್ಲಿ ಆಹಾರಕ್ಕೆ ಬೇಕಾದ ತರಕಾರಿಯ ಅಲಭ್ಯತೆ ಉಂಟಾಯಿತು. ಇದನ್ನು ಮನಗಂಡ ತುಮ ಕೂರಿನ ಪಿಯುಸಿ ಓದುತ್ತಿರುವ ಅಭಯ್ ನಾಡಿಗ್ ಮಾತ್ರ ಕೊಂಚ ಬಿನ್ನವಾಗಿ ಯೋಚಿಸಿ ಪೇಪರ್‌’ ಗಳಲ್ಲಿ ತಾರಸಿ ತೋಟದ ಬಗ್ಗೆ ಓದಿದ್ದ ಅಭಯ್ ನಾನು ಯಾಕೇ ಮನೆಗೆ ಬೇಕಾಗುವಷ್ಟು ಸೊಪ್ಪು ತರಕಾರಿ ಬೆಳೆಯಲು ಮುಂದಾಗಬಾರದು ಎಂದು ಮನಗೊಂಡು ಹೊಸ ಪ್ರಯತ್ನಕ್ಕೆ ಮನಸ್ಸು ಮಾಡಿದರು.

ಅದೇನೆಂದರೆ ಮನೆ ಅಡುಗೆಗೆ ಅವಶ್ಯವಿರುವ ತರಕಾರಿಗಳನ್ನು ಸಾವಯುಕ್ತವಾಗಿ ಮತ್ತು ಸ್ವಂತವಾಗಿ ಬೆಳೆಸುವುದು. ಹೌದು ನಗರ ಪ್ರದೇಶಗಳಲ್ಲಿ ಮನೆಯ ಮುಂದೆ ಕಾರು ನಿಲ್ಲಿಸುವುದಕ್ಕೆ ಸ್ಥಳವಾಕಾಶ ವಿರುವುದಿಲ್ಲ. ಇನ್ನು ಮನೆ ಅಂಗಳದಲ್ಲಿ ಗಿಡ ಮರಗಳನ್ನು ಬೆಳೆಸುವುದು ಕಷ್ಟದ ಕೆಲಸ. ಹಾಗಾಗಿ ಯೇ ಅಭಯ್ ಆಯ್ದುಕೊಂಡದ್ದು ಮನೆಯ ಮೇಲಿನ ಬಯಲು ತಾರಸಿ. ಲಾಕ್ಡೌನ್ ಅವದಿಯಲ್ಲಿ ಮನೆಯ ಹೊರಗೆ ಹೊರಡುವು ದಕ್ಕೆ ಅವಕಾಶವಿರದಿದ್ದರಿಂದ ೨೩೪೦ ಸೈಜಿನ ತಮ್ಮ ಮನೆಯ ಮೇಲೆಯೆ ಮನೆಗೆ ಬೇಕಾದ ಸೊಪ್ಪು ತರಕಾರಿಗಳನ್ನು ಬೆಳೆಯಲು ಪುಟ್ಟ ತೋಟ ಶುರು ಮಾಡಿದರು.

ಈ ಕಾರ್ಯಕ್ಕೆ ಅಭಯ್ ಅವರ ತಂದೆ ಡಾ ಪ್ರಕಾಶ್ ಕೆ ನಾಡಿಗ್ ಕೈ ಜೋಡಿಸಿದರು. ಸಸ್ಯಗಳನ್ನು ನೆಡುವುದಕ್ಕಾಗಿಯೇ ಒಂದಿಷ್ಟು
ಹಳೆಯ ಬಕೆಟ್ ಮತ್ತು ಪಾಟ್ ಗಳನ್ನು ಸಂಗ್ರಹಿಸಿಕೊಂಡು ಅದರಲ್ಲಿ ಫಲವತ್ತಾದ ಮಣ್ಣು ತುಂಬಿ ತರಕಾರಿ, ಹೂವು, ಹಣ್ಣಿನ
ಬೀಜಗಳಲ್ಲದೆ ಔಷದಿ ಸಸ್ಯಗಳನ್ನು ಹಾಕಿದರು.

ಪ್ರತಿದಿನವೂ ಪಟ್ಟು ಬಿಡದೆ ನೀರು, ಮತ್ತು ಮನೆ ಹತ್ತಿರ ಹಸು ಕರುಗಳನ್ನು ಕಟ್ಟಿದ್ದವರಿಂದ ಮೊದಲಿಗೆ ಕೊಟ್ಟಿಗೆ ಗೊಬ್ಬರ ಸಾವಯುವ ಗೊಬ್ಬರಗಳನ್ನು ಹಾಕಿ ಪೋಷಿಸಿದರು. ಕೆಲ ದಿನಗಳ ಲ್ಲಿಯೇ ಬೀಜಗಳು ಮೊಳಕೆಯೊಡೆದವು. ಜೊತೆಗೆ ಉತ್ತಮ ನಿರ್ವಹಣೆಯಿಂದ ಸಸ್ಯ ರೆಂಬೆ ಕೊಂಬೆ ಗಳಿಂದ ನಳನಳಿಸಲು ಶುರುವಾದವು. ಅಭಯ್ ಪ್ರಯತ್ನ ಫಲಕೊಟ್ಟಿತು. ಅವರ ಮೊಗದಲಿ ಮಂದಹಾಸ ಮೂಡಿತು.

ಯಾವುದೇ ರಸಾಯನಿಕಗಳನ್ನು ಸಿಂಪಡಿಸದೆ ಮನೆಯಲ್ಲಿ ತಯಾರಿಸಿದ ಸಾವಯುವ ಗೊಬ್ಬರ ಗಳಿಂದ ಬೆಳೆಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅದರಲ್ಲಿ ಸಫಲತೆಯನ್ನು ಕಂಡರು. ಈಗ ಮನೆ ಅಡಿಗೆಗೆ ಅವಶ್ಯವಿರುವ ಟೊಮೊಟೋ, ಸೌತೆಕಾಯಿ, ಸೋರೆಕಾಯಿ, ಆಲುಗಡ್ಡೆ, ಈರುಳ್ಳಿ, ಮೂಲಂಗಿ, ಹೂಕೋಸು, ಮೆಣಸಿನಕಾಯಿ, ಸೊಪ್ಪುಗಳಾದ ದಂಟು, ಹರ್ವೆ, ಮೆಂತ್ಯೆ, ಕೋತಂಬರಿ, ಕರಿಬೇವು, ಪುದಿನ. ಔಷದಿ ಸಸ್ಯಗಳಾದ ಶುಂಠಿ, ನಿಂಬೆ, ದೊಡ್ಡ ಪತ್ರೆ, ರೋಸ್ ಮ್ಯಾರಿ, ವಿವಿಧ ವಿಶೇಷ ತರದ ಸಸ್ಯಗಳು ಅವರ ಮನೆಯ ತಾರಸಿಯಲ್ಲಿ ಹುಲುಸಾಗಿ ಬೆಳೆದಿದ್ದು ನೋಡುಗರನ್ನು ಆಕರ್ಷಿಸುತ್ತಿವೆ. ಇದರಿಂದ ದಿನನಿತ್ಯದ ಅಡುಗೆಗೆ ತರಕಾರಿ ವೆಚ್ಚ ಅರ್ಧದಷ್ಟು ಹಣ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಅಭಯ.

ಮನೆಯಲ್ಲಿಯೇ ಸಾವಯವ ಗೊಬ್ಬರ ತಯಾರಿಕೆ
ರಸಾಯನಿಕ ಬಳಕೆ ಆರೋಗ್ಯಕ್ಕೆ ಹಾನಿಕರವೆಂದು ಅರಿತ ಅಭಯ್ ಮನೆಯಲ್ಲಿಯೇ ಸಾವಯುವ ಗೊಬ್ಬರಗಳನ್ನು ತಯಾ ರಿಸಲು ಶುರುಮಾಡಿದರು. ಇದಕ್ಕೆ ಅಕ್ಕಪಕ್ಕದ ಮನೆಯವರಿಂದ ತರಕಾರಿ ತಾಜ್ಯವನ್ನು ಸಂಗ್ರಹಿಸಿ ದನು. ಮನೆಯಲ್ಲಿನ ಕಸ, ತರಕಾರಿ ಹಣ್ಣಿನ ಸಿಪ್ಪೆ, ತಾಜ್ಯ ವಸ್ತುಗಳನ್ನು ಜೊತೆಗೆ ಸೆಗಣಿಯನ್ನು ಸೇರಿಸಿ ಗುಂಡಿ ತೋಡಿ ಅಲ್ಲಿಯೇ ಕೆಲ ದಿನಗಳೆವರೆಗೆ ಕೊಳೆಯಲು ಬಿಟ್ಟು ಗೊಬ್ಬರವಾದ ನಂತರ ಎಲ್ಲ ಸಸ್ಯಗಳಿಗೂ ಬಳಸುತ್ತಾರೆ.

ಪರಿಣಾಮ ಈಗ ಸಂಪೂರ್ಣವಾಗಿ ರಸಾಯನಿಕ ಮುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ. ಪರಿಸರ ಪ್ರೇಮಿ, ಸಮಾಜ ಸೇವಕ ಅಭಯ ಮನೆಗಷ್ಟೆ ಸಿಮೀತವಾಗದೇ ಪರಿಸರದ ಸಂರಕ್ಷಣೆಯ ಕೈಂಕರ್ಯ ಗಳಲ್ಲೂ ಕೈ ಜೋಡಿಸುತ್ತಾರೆ, ಪರಿಸರದ ದಿನಾಚರಣೆ, ಗುಬ್ಬಿ ದಿನಾಚರಣೆಗಳಂದು ತನ್ನ ತಂದೆ ಮತ್ತು ಸಹೋದರಿ ರಾಘವಿಯ ಜೊತೆ ಸೇರಿ ಬಡಾವಣೆಯ ಮಕ್ಕಳನ್ನೇ ಸೇರಿಸಿಕೊಂಡು ರಸ್ತೆಬದಿ ಯಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ನಾಗರಿಕರಲ್ಲಿ ಪರಿಸರದ ಅರಿವು ಮೂಡಿಸುವ ಕಾರ್ಯಕ್ಕೆ ತಮ್ಮದೆ ಅಳಿಲು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಇಷ್ಟೇ ಅಲ್ಲದೇ ಇನ್ಸ್ಟಾಗ್ರಾಂ ನಲ್ಲಿರುವ ಇತನ ನೇರ್ಚಇಸ್ ಮೈಸೌಲ್ ಎಂಬ ಖಾತೆಯನ್ನು ೯೦೦೦ ಕ್ಕೂ ಹೆಚ್ಚು ಜನ ಹಿಂಬಾಲಿಸುತ್ತಿದ್ದಾರಲ್ಲದೇ, ಪರಿಸರಾಸಕ್ತರಿಗೆ ಇದರ ಮೂಲಕ ಬೇಕಾಗುವ ತರಕಾರಿ ಮತ್ತಿತ್ತರ ಸೊಪ್ಪಿನ ಬೀಜಗಳನ್ನು ಕೊಡುವ ಮೂಲಕ ಸಾವಿರಾರು ರೂಗಳನ್ನು ಸಂಪಾದಿಸುತ್ತಿದ್ದಾನೆ. ಅಷ್ಟೆ ಅಲ್ಲದೆ ಬೀದಿಬದಿಯ ಬಿಕ್ಷುಕರು, ಪುಟ್ಟ ವ್ಯಾಪಾರಿಗಳು, ನಿರ್ಗತಿಕರು, ಅನಾಥರಿಗೆ ಮನೆಯಲ್ಲಿಯೆ ಅಡಿಗೆ ತಯಾರಿಸಿ ಪ್ರತಿ ಭಾನುವಾರ ಊಟ ನೀಡುವದರೊಂದಿಗೆ ಅವರ ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸುವುದರ ಮೂಲಕ ಮಾನವೀಯತೆ ಮೆರೆಯು ತ್ತಿದ್ದಾರೆ.

ಈ ನಿಟ್ಟಿನಲ್ಲಿ ದಿನಪೂರ್ತಿ ಮೊಬೈಲ ಮುಳುಗಿರುವ ಇಂದಿನ ಮಕ್ಕಳೆದುರು ಬಿನ್ನವಾಗಿ ನಿಲ್ಲುವ ಮೂಲಕ ಅಭಯ್ ಇತರರಿಗೆ ಮಾದರಿಯಾಗಿದ್ದಾರೆ.