Thursday, 12th December 2024

ಇನ್ನೆಷ್ಟು ದಿನ ಈ ಕಾಯುವಿಕೆ ?

ಸಾವಿತ್ರಿ ಶ್ಯಾನುಭಾಗ

ಒಲವಿನ ಬಳ್ಳಿಯ ಹೂವುಗಳಾದ ನಮ್ಮಿಬ್ಬರ ಮದುವೆ ಈ ಲಾಕ್‌ಡೌನ್‌ನಿಂದಾಗಿ ಮುಂದೆ ಹೋಗಿದೆ. ಇನ್ನಷ್ಟು ದಿನ ಕಾಯಬೇಕು, ನಮ್ಮ ಮಿಲನಕೆ?

ನನ್ನ ಪ್ರೀತಿಯ ಹುಡುಗನೇ, ಎಂಥಾ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡೆವು, ಅಲ್ಲವೆ! ಈ ಕರೋನಾ ಬಂದು ನಮ್ಮ ಮದ್ವೆನೇ ಮುಂದಕ್ಕೆ ಹಾಕ್ತಿದ್ದಾಳ, ಏನು ಮಾಡೋಣ. ಮನೆಯವರೆಲ್ಲ ಒಪ್ಪಿ, ಜೋಯಿಸರು ನೋಡಿ ಹೇಳಿದ ಮುಹೂರ್ತದಲ್ಲಿ (ಹೋದ ವರ್ಷದ ಮೇ ತಿಂಗಳಲ್ಲಿ) ನಮ್ಮ ಮದುವೆ ಎಂದು ನಿಶ್ಚಯವಾಯ್ತಲ್ಲ ಹುಡುಗ, ಆ ಕ್ಷಣನೇ ನನಗೆ ನಿನ್ನ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಯಿತು.

ಜನವರಿಲಿ ಎಂಗೇಜ್ಮೆಂಟ್ ಆಗಿ ಮೇನಲ್ಲಿ ಮದುವೆ ಎಂದೆಲ್ಲ ಕನಸು ಕಂಡವಳಿಗೆ, ಕೊರೋನಾ, ಲಾಕ್ ಡೌನ್ ಎಂದೆಲ್ಲ ಮದುವೆ ದಿನಾಂಕ ಅನಿರ್ದಷ್ಟವಾಧಿವರೆಗೆ ಮುಂದಕ್ಕೆ ಹಾಕೋಣ ಎಂದು ಮನೆಯವರೆಲ್ಲ ಹೇಳಿದಾಗ ಕಂಗಾಲಾಗದೆ ವಿಧಿಯಿಲ್ಲ. ಸರಿ, ಮೊಬೈಲು, ವಾಟ್ಸಾಪ್ಪು ಅಂತೆಲ್ಲ ಇದೆಯಲ್ಲ ಎಂದು ನಿನ್ನೊಂದಿಗೆ ಮಾತಾಡುತ್ತ ಕಾಲ ಕಳೆದದ್ದೇ ತಿಳಿಲಿಲ್ಲ. ಮಾತು, ಮಾತು, ಮಾತು. ಅಲ್ಲಾ, ಈ ಪ್ರೀತಿಯಲ್ಲಿ ಬಿದ್ದಾಗ ಎಷ್ಟು ಹೊತ್ತು ಮಾತನಾಡಿದರೂ ಸಮಯ ಹೋಗಿದ್ದೇ ಗೊತ್ತಾಗೊಲ್ಲವಲ್ಲ ಏಕೆ? ಮಾತು ಶುರು ಹಚ್ಚಿಕೊಂಡರೆ, ಒಂದರ ಹಿಂದೆ ಒಂದು ವಿಷಯ ಎಂದು ಮಾತನಾಡುತ್ತಾ ನಾವಿಬ್ಬರೂ ಸಮಯ ಕಳೆದಿದ್ದಾದರೂ ಎಷ್ಟು!

ಅಂದ ಹಾಗೆ, ಜಾಸ್ತಿ ಮಾತನಾಡಿದ್ವಿ ಎಂದು ನೆಟ್‌ವರ್ಕ್‌ನವರು ಸಬ್ಸಿಡಿ ಕೊಡೋಕೆ ತಯಾರಾಗಿದ್ದಾರೆ ನೋಡು! ಅನ್ಲಾಕ್ ಶುರುವಾದೊಡನೆ ಎಲ್ಲ ಸರಿ ಹೋಯ್ತು ಅಂದೆಲ್ಲ ಅಂದುಕೊಳ್ಳುವಷ್ಟರಲ್ಲಿ, ಜೋಯೀಸರನ್ನು ಕೇಳಿದರೆ ಮತ್ತೆ ನಮ್ಮಿಬ್ಬರ ಜಾತಕ ನೋಡಿ ಈ ವರ್ಷ ಮೇನಲ್ಲಿ ಮದುವೆ, ಅಲ್ಲಿಯವರೆಗೂ ಮುಹೂರ್ತ ಇಲ್ಲ ಅಂದರಲ್ಲ, ಇಷ್ಟು ದಿನ ಕಾದಿದ್ದಿವಿ,ಇನ್ನೂ ಸ್ವಲ್ಪ ದಿನವಲ್ಲ ಎಂದುಕೊಳ್ಳುವಷ್ಟರಲ್ಲಿ ಹಿಡಿ ಮುಳುಗಿದವನಿಗೆ, ಚಳಿಯೇನು ಎಂಬಂತೆ ಮತ್ತೆ ಕರೋನಾ ಲಾಕ್ ಡೌನ್ ಬಂದಿದೆ. ಅದೇನೋ ಸರಕಾರದವರು ಹತ್ತು ಜನ ಸೇರಲಿ, ಹದಿನೈದು ಜನ ಸೇರಲಿ, ಬೇರೆಯವರು ಬರುವಂತಿಲ್ಲ ಎಂದು ಕಾನೂನನ್ನೇ ತಂದಿದ್ದಾರಂತೆ!

ಇದೇನು ಜಾತಕದಲ್ಲಿ ಶುಕ್ರ ದೆಸೆ ರೀತಿಯಲ್ಲೇ, ಕರೋನಾ ದೆಸೆ ಇರುವುದು ಜೋಯಿಸರಿಗೆ ತಿಳಿಯಲಿಲ್ಲವೋ, ಇದಕ್ಕೇನಾದರೂ ಶಾಂತಿ ಮಾಡಬೇಕೆ ನಾನರಿಯೆ. ಕರೋನವನ್ನು ಶಾಂತಗೊಳಿಸಿ, ನಮ್ಮ ಮದುವೆಗೆ ಬೇಗ ದಿನ ಗೊತ್ತು ಮಾಡಲು ಒಮ್ಮೆ ದೇವ ರನ್ನೇ ಕೇಳಬೇಕೇನೋ. ಆದರೆ ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಪರಿಸ್ಥಿತಿ ಬಂದರೆ ಏನು ಮಾಡುವುದು? ನೀನಾದರೂ ಒಮ್ಮೆ ನಮ್ಮ ಜೋಯಿಸರನ್ನು ಕೇಳಿ ನೋಡು, ನಾನು ಕರೆ ಮಾಡಿ ದಾಗ ಆ ಪೂಜೆ, ಈ ಪೂಜೆ ವಿಡಿಯೋ ಕಾಲ್ ಮೂಲಕ
ಮಾಡುತ್ತಿದ್ದೇನೆ, ಬ್ಯುಸಿ ಎನ್ನುತ್ತಾರೆ.

ನನ್ನ ಫೋನ್ ಕರೆಯು ಅವರಿಗೆ ಕರೆಕರೆ ಆಗಿಬಿಟ್ಟಿದೆ! ಏಕೆಂದರೆ, ಯಾವಾಗ ನಮ್ಮ ವಿವಾಹ ಎಂಬ ಯೋಚನೆಯಲ್ಲಿ ಅವರಿಗೆ ಅದೆಷ್ಟೋ ಬಾರಿ ಕರೆ ಮಾಡಿದ್ದೇನೆ! ನೀನೊಮ್ಮೆ ಪ್ರಯತ್ನಿಸಿ ನೋಡು. ನನಗೆ ನೀನೇ ಆಮ್ಲಜನಕ. ನೀನೇ ನನ್ನ ಬಿಲಿಂಡರ್!
ಇನ್ನು ಸಿಲಿಂಡರ್ ಸಿಲಿಂಡರ್ ಯಾಕೆ ಬೇಕು. ಲಸಿಕೆ ಹಾಕಿಸಿಕೊಂಡು, ಮಾಸ್ಕು ಧರಿಸಿ, ಸ್ಯಾನಿಟೈಸರ್ ಬಳಸಿ ಅವರು ಈಗಲೇ ಮುಹೂರ್ತವಿದೆ ಅಂದರೂ,ಬೇಗ ಮದುವೆ ಯಾಗಿ ಬಿಡೋಣ, ಕರೋನವನ್ನು ಓಡಿಸೋಣ.

ಏನಂತೀಯಾ?