Sunday, 15th December 2024

ನಮಗೇಕೆ ವಿದೇಶಿ ಅಮಲು ?

ಗೀತಾ ಕುಂದಾಪುರ

ನಮಗೆ ಅದೇಕೋ ವಿದೇಶಿ ಅಮಲು. ಓದುವುದು, ಕೆಲಸ, ವಿಧ ವಿಧ ವಸ್ತುಗಳು, ಸೆಂಟ್ ಎಲ್ಲವೂ ವಿದೇಶದ್ದಾಗಿದ್ದರೆ ಉತ್ತಮ ಎಂಬ ನಂಬಿಕೆಯೋ ಭ್ರಮೆಯೋ ನಮ್ಮನ್ನು ಆವರಿಸಿದೆ. ಈಗ ಕರೋನಾ ಬಂದು ವಿದೇಶಿ ಅಮಲಿಗೆ ತನ್ನದೇ ಶೈಲಿಯ ಕಿಕ್ ಕೊಟ್ಟಿ!

ಇಂಗ್ಲೀಷರು ಬಿಟ್ಟು ಹೋದರೂ ಇಂಗ್ಲಿಷ್ ಮೋಹ ಬಿಟ್ಟಿಲ್ಲ ನಮ್ಮನ್ನು, ಬೇರೆ ದೇಶದಿಂದ ಬಂದಿದ್ದೆಲ್ಲವನ್ನು ತಬ್ಬಿಗೊಳ್ಳು ವವರು ನಾವು. ದೀಪಾವಳಿ ಹಬ್ಬ ನಮ್ಮದಾದರೂ ಕಟ್ಟುವ ಗೂಡುದೀಪ, ಹಚ್ಚುವ ಪಟಾಕಿ, ಮೇಣದ ಬತ್ತಿ ಚೀನಾದಿಂದ ಬಂತು, ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಸಮಜಾಯಿಷಿ. ವಿದೇಶಿ ವಸ್ತುಗಳ ಗುಣಮಟ್ಟ, ಸ್ಟೈಲ್ ಎಲ್ಲವೂ ಉತ್ಕ್ರೃಷ್ಟ ಎನ್ನುವ
ನಂಬಿಕೆ. ವಿದೇಶಿ ವಸ್ತುಗಳ ಮೇಲೆ ಕುರುಡು ಪ್ರೀತಿ, ಮಾತ್ರ ಅಲ್ಲ ಆಹಾರ, ಆಚಾರ, ವಿಚಾರವನ್ನೂ ಅನುಸರಿಸುತ್ತಿದ್ದೇವೆ.

ಭಾರತೀಯ ತಿಂಡಿಗಳಲ್ಲಿ ಕೊಬ್ಬು ಜಾಸ್ತಿ ಎಂದು ಬದಿಗಿರಿಸಿ ಮೈದಾದಿಂದ ತಯಾರಾದ ವಿದೇಶಿ ಆಹಾರ ಬ್ರೆಡ್, ಪಿಸ್ತಾ, ಪಾಸ್ತ, ನೂಡಲ್ಸ್‌ ಅನ್ನು ನಮ್ಮದಾಗಿಸಿಕೊಂಡಿದ್ದೇವೆ. ಗಲ್ಲಿ, ಗಲ್ಲಿಯಲ್ಲಿ ಪಬ್, ನೈಟ್ ಕ್ಲಬ್ಬುಗಳು ತಲೆ ಎತ್ತಿವೆ. ಗಾಂಧೀಜಿಯೇನೋ ವಿದೇಶಿ ವಸ್ತುಗಳನ್ನು ಸುಟ್ಟು ಹಾಕಿ. ಆದರೆ ಸ್ವದೇಶಿಯರಿಗಿರುವ ವಿದೇಶಿ ಅಮಲು ಇಂದು ನಿನ್ನೆಯದಲ್ಲ ಹಲವಾರು ದಶಕ ಗಳಿಂದ ಬಂದಿದೆ.

ನನ್ನ ಬಾಲ್ಯ ಕಾಲದಲ್ಲಿ ಅಂದರೆ ಸುಮಾರು 3-4 ದಶಕಗಳ ಹಿಂದೆ ವಿದೇಶದಿಂದ ತಂದ ಚಪ್ಪಲಿ, ಕೊಡೆ, ಎಮರ್ಜೆನ್ಸಿ ಲ್ಯಾಂಪು, ಬಟ್ಟೆ, ವಾಚು, ಚಾಕಲೇಟು, ಸಿಗರೇಟಿಗೆ ಭಾರಿ ಬೇಡಿಕೆ. ಫಾರಿನ್ ಸೀರೆಗಳಿಗೂ ಕ್ರೇಜು! ಸೀರೆಗಳೂ ಭಾರತದಲ್ಲೇ ತಯಾರಾಗಿ ವಿದೇಶಗಳಿಗೆ ರಫ್ತಾಗಿ ಅಲ್ಲಿ ಖರೀದಿಸಿ ತಂದಿದ್ದು, ಅದರ ಮೇಲೆ ನಮ್ಮ ದೇಶದ, ವಿದೇಶದ ಟ್ಯಾಕ್ಸ್‌ ಬೇರೆ ಹೇರಿರುತ್ತಾರೆ, ಆದರೂ ಫಾರಿನ್ ಸೀರೆಯೇ ಇಷ್ಟ. ವಿದೇಶದಿಂದ ಬಂದ ದ್ರಾಕ್ಷಿ, ಬಾದಾಮಿ, ಗೋಡಂಬಿಯದೂ ಇದೆ ಕತೆ. ಜನರ ವಿದೇಶಿ ಅಮಲು ಕಂಡು ಅಲ್ಲಲ್ಲಿ ಚೈನಾ ಬಜಾರ್, ಹಾಂಗಕಾಂಗ್ ಬಜಾರ್, ಬರ್ಮಾ ಬಜಾರುಗಳು ತಲೆ ಎತ್ತಿದವು, ಫಾರಿನ್ ವಸ್ತುಗಳ ಕಳ್ಳ ಸಾಗಣಿಕೆಯೂ ದೊಡ್ಡ ರೀತಿಯಲ್ಲಿ ನಡೆಯುತ್ತಿತ್ತು.

ಫಾರಿನ್ ಹುಡುಗ
ವಿದೇಶಿ ಅಮಲು ವಸ್ತುಗಳಿಗೆ ಮಾತ್ರ ಸೀಮಿತವಾಗಿರದೆ ಫಾರಿನ್ ಹುಡುಗ ಅಂದರೆ ವಿದೇಶದಲ್ಲಿ ಉದ್ಯೋಗದಲ್ಲಿರುವ
ಭಾರತೀಯ ಹುಡುಗರಿಗೂ ವಿಸ್ತರಿಸಿತ್ತು. ಮದುವೆಗಿರುವ ಹುಡುಗ ಅಮೇರಿಕದಲ್ಲೋ, ದುಬೈಯಲ್ಲೋ ನೆಲೆಸಿದ್ದರೆ ಸಂಬಂಧ ಬೆಳೆಸಲು ಸರತಿಯಲ್ಲಿ ನಿಲ್ಲುವಷ್ಟು ಜನರಿದ್ದರು. ಎರಡೋ, ನಾಲ್ಕೋ ವರುಷಕ್ಕೊಮ್ಮೆ ಬರುವ ಹುಡುಗ. ಹುಡುಗನ ತಂದೆ, ತಾಯಿ ಹುಡುಗಿಯರ ಲಿಸ್ಟ್‌‌ ಮಾಡಿ ಇಡುತ್ತಿದ್ದರು.

ಹುಡುಗ ಬಂದವನೇ ಎರಡೇ ದಿನಗಳಲ್ಲಿ ನಾಲ್ಕಾರು ಹುಡುಗಿಯರನ್ನು ನೋಡಿ ಒಬ್ಬಳನ್ನು ಸೆಲೆಕ್ಟ್‌‌ ಮಾಡಿ, ಹುಡುಗಿಯ ಕೈಗೆ ಎಂಗೇಜ್‌ಮೆಂಟ್ ರಿಂಗ್ ತೊಡಿಸಿ ಮತ್ತೆರಡು ವಾರಗಳಲ್ಲಿ ಮದುವೆ ಮುಗಿಸಿದವ, ಮತ್ತೊಂದು ವಾರದ ಹನಿಮೂನ್ ಮುಗಿಸಿ ವಿಮಾನ ಹತ್ತುತ್ತಿದ್ದ. ಮತ್ತೆ ಹುಡುಗ ಬರುವುದು 2 ವರ್ಷಗಳ ನಂತರವೇ. ಆರ್ಥಿಕವಾಗಿ ಸದೃಢವಿರುವವರು ಹೆಂಡತಿಯನ್ನು ಕರೆಸಿಕೊಳ್ಳುತ್ತಿದ್ದರು. ಉಳಿದವರು ಗಂಡನ ಕಾಗದ, ಫೋನು, ಕಳುಹಿಸುವ ನೀಡೋ ಹಾಲಿನ ಪುಡಿ, ಸೆಂಟು, ಮೇಕಪ್ ಕಿಟ್ಟಿನಲ್ಲಿ ಸಂತೋಷ ಅರಸುತ್ತಿದ್ದರು.

ವಿದೇಶದಿಂದ ಬಂದವರದೇ ಹತ್ತು ಹಲವು ಕತೆಗಳು. ವಿದೇಶಿ ರಿಟರ್ನ್ ನಮ್ಮ ದೇಶಕ್ಕೆ ಕಾಲಿಡುತ್ತಿದ್ದಂತೆ ಹಿಂದೆ ಮರೆತು ಹೋದ ಸ್ನೇೇಹಿತರೂ, ಸಂಬಂಧ ಕಡಿದುಕೊಂಡ ಬಂಧುಗಳೂ ಸಂಬಂಧ ನೆನೆಪಿಸುತ್ತಾ ಹತ್ತಿರವಾಗುತ್ತಿದ್ದರು. ವಿದೇಶ ಅನ್ನುವ ಹೆಸರಲ್ಲೇ ಕನಸುಗಳಿತ್ತು. ಕೇಶವ, ನಮ್ಮ ಮನೆಗೆ ಆಗಾಗ ಬರುತ್ತಿದ್ದ, ಡಿಗ್ರಿ ಮುಗಿಸಿ ಕೆಲಸ ಸಿಕ್ಕದೆ ರಿಕ್ಷಾ ಓಡಿಸುತ್ತಿದ್ದ. ವಿದೇಶದ ಬಣ್ಣ, ಬಣ್ಣದ ಕನಸಿನ ಬೆನ್ನು ಹತ್ತಿತು. ಏಜಂಟ್ ಆಫೀಸಿನ ಕೆಲಸ ಕೊಡಿಸುವುದಾಗಿ ಹೇಳಿದ. ಕೇಶವ ರಿಕ್ಷಾ ಮಾರಿ, ಅಲ್ಲಿ, ಇಲ್ಲಿ ಸಾಲ ಮಾಡಿ ಏಜಂಟಿಗೆ ಲಕ್ಷ ರೂಪಾಯಿಯ ಕಮಿಷನ್ ಕೊಟ್ಟು ದುಬೈ ವಿಮಾನ ಹತ್ತಿದ.

ಅಲ್ಲಿ ಹೋದಾಗ ಸಿಕ್ಕಿದ ಕೆಲಸ ಆಫೀಸಿನಲ್ಲಿ ಟೀ ಬಾಯ್. ಊರಿನಲ್ಲೇ ರಿಕ್ಷಾ ಓಡಿಸಿದರೂ ಮರ್ಯಾದೆಯ ಜೀವನವಿತ್ತು,
ತನ್ನವರೊಡದೆ ಇದ್ದೆೆ ಎಂದು ತನ್ನನ್ನು ತಾನೇ ಹಳಿದುಕೊಂಡ. ಇದರರ್ಥ ವಿದೇಶದಲ್ಲಿರುವ ಭಾರತೀಯರೆಲ್ಲಾ ಸಂಕಷ್ಟದಲ್ಲಿ ದ್ದಾರೆ ಎಂದಲ್ಲ, ದೊಡ್ಡ ಹುದ್ದೆ, ದೊಡ್ಡ ಬಂಗ್ಲೆಯಲ್ಲಿದ್ದು ದೊಡ್ಡ ಕಾರು ಓಡಿಸುತ್ತಿರುವ ಸಾಕಷ್ಟು ಭಾರತಿಯರಿದ್ದಾರೆ.

20ನೇ ಶತಮಾನದ ಕೊನೆಗೆ ಬರುತ್ತಿದ್ದಂತೆ ವಿದೇಶದಿಂದ ಬಂದವರ ಸೂಟಕೇಸಿನಲ್ಲಿ ಬರುತ್ತಿದ್ದ ವಸ್ತುಗಳು, ಕಳ್ಳ ಸಾಗಣಿಕೆ
ಯಾಗಿ ಬರುವ ವಸ್ತುಗಳು ಸಾರಾಸಗಟಾಗಿ ಮಾರುಕಟ್ಟೆಯಲ್ಲಿ ದೊರೆಯಿತು. ಪಕ್ಕನೆ ನೋಡಿದರೆ ಇವು ಭಾರತದಲ್ಲೇ ತಯಾರಾ ದವೋ ಏನೋ ಅನ್ನುವಷ್ಟು ಅಂಗಡಿಗಳ ಶೆಲ್ಫನ್ನು ಅಲಂಕರಿಸಿದವು. ವಸ್ತುಗಳನ್ನು ತಿರುಗಿಸಿದರೆ ಮೇಡ್ ಇನ್ ಕೊರಿಯಾ, ಮೇಡ್ ಇನ್ ಚೈನಾ ಎಂದೋ ಪುಟ್ಟದಾಗಿ ಕಾಣುತ್ತದೆ. ನಾವು ಉಪಯೋಗಿಸುವ ಫ್ರಿಡ್ಜು, ಮೊಬೈಲ್, ಕಂಪ್ಯೂಟರ್,  ಟೀವಿ, ಗ್ಯಾಸ್, ಪೆಟ್ರೋಲ್, ಪೀಠೋಪಕರಣ, ಮಕ್ಕಳ ಆಟಿಕೆ, ಇಸ್ತ್ರಿ ಪೆಟ್ಟಿಗೆ, ಬ್ರಾಂಡೆಡ್ ಬಟ್ಟೆ, ಶೂ, ಚಪ್ಪಲಿ ಹೊರದೇಶದಿಂದ ಬರು ತ್ತಿದೆ.

ಫೆರಾರೋ ರೋಷರ್, ಲಿಂಟ್, ಮಾರ್ಸ್, ಹೆರ್ಲೀಸ್ ಕಿಸ್ಸಸ್ ಭಾರತದಲ್ಲಿ ಸುಲಭದಲ್ಲಿ ಸಿಕ್ಕುವ ಫಾರಿನ್ ಬ್ರಾಂಡ್ ಚಾಕಲೇಟು ಗಳು. ಚಿನ್ನ, ಬೆಳ್ಳಿಯನ್ನೂ ಆಮದು ಮಾಡಿಕೊಂಡೆವು. ನಮ್ಮ ದೇಶದಲ್ಲಿ ಮಾತ್ರ ಅಲ್ಲ ವಿದೇಶಿ ಮಾರುಕಟ್ಟೆ ಯಲ್ಲಿಯೂ ಮೇಡ್ ಇನ್ ಚೀನಾ, ಮೇಡ್ ಇನ್ ಥೈಲ್ಯಾಂಡ್ ಜಯಭೇರಿ ಬಾರಿಸುತ್ತಿವೆ. ಇದಕ್ಕೆ ಹೊರತು ಇಲ್ಲದಿಲ್ಲ. ಜಪಾನ್ ದೇಶದಲ್ಲಿ ಮೇಡ್ ಇನ್ ಜಪಾನ್ ಬಿಟ್ಟು ಬೇರೆ ದೇಶಗಳಲ್ಲಿ ತಯಾರಾದ ವಸ್ತುಗಳು ಇಲ್ಲ ಎನ್ನುವಷ್ಟು ಕಡಿಮೆ ಇದೆ.

ಎಲ್ಲೆಲ್ಲೂ ಚೀನಾ ವಸ್ತುಗಳು ಈಗ ಗ್ಲೋಬಲೈಸೆಶನ್ ಕಾಲ, ವಿದೇಶ ನೆರಮನೆಯಂತಾಗಿದೆ. ಓದಿಗಾಗಿ, ಕೆಲಸಕ್ಕಾಗಿ ವಿದೇಶಗಳಗೆ ಹೋಗುವುದು ಸಾಮಾನ್ಯವಾಗಿದೆ. ಹುಡುಗಿಯರೂ ಓದು, ಕೆಲಸವೆನ್ನುತ್ತಾ ಅಮೇರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿಯ ವಿಮಾನ ಹತ್ತಿದರು.

ಮದುವೆಯ ಸಂಭ್ರಮದಲ್ಲೂ ಬದಲಾವಣೆ. ಮದುವೆಗೆ ನಾಲ್ಕು ದಿನಗಳಿರುವಾಗ ವಿದೇಶದಿಂದ ಆಗಮಿಸುವ ವರ, ವಧು, ಮದುವೆ ಮುಗಿದು ಎರಡೇ ದಿನಕ್ಕೆ ಮತ್ತೆ ವಿದೇಶವನ್ನು ತಮ್ಮದಾಗಿಸಿಕೊಂಡ ದೇಶಕ್ಕೆ ಮರುಳುತ್ತಿದ್ದರು. ಸ್ಯಾನ್ ಪ್ರಾನ್ಸಿಸ್ಕೋ, ಚಿಕಾಗೊ, ಹೂಸ್ಟನನ್ನು ನೆರಮನೆಯಾಗಿಸಿಕೊಂಡ ಮಾತಾ-ಪಿತೃರ ಸಂಖ್ಯೆ ಸಾಕಷ್ಟಿದೆ, ಬೆಂಗಳೂರು- ಮೈಸೂರಿನ ಬಸ್ಸು ಹತ್ತು ವಂತೆ ವಿಮಾನ ಹತ್ತುತ್ತಿದ್ದಾರೆ, ಅಂತವರ ಸ್ಟೇಟಸ್ ತುಸು ಹೆಚ್ಚೇ. ಇಲ್ಲೊಬ್ಬರು ಮಗಳ ಬಾಣಂತನಕ್ಕೆ ಎರಡು ಬಾರಿ ಅಮೆರಿಕಾಗೆ ಹೋಗಿ ಬಂದ ನಂತರ ಸ್ಟೈಲು ಬದಲಾಗಿದೆ.

ದೋಸೆ, ಇಡ್ಲಿ ತಿನ್ನುತ್ತಿದ್ದವರು ಬ್ರೆಡ್ಡು, ಜಾಮು, ಕಾರ್ನಫ್ಲೇಕ್ಸ್‌ ಎನ್ನುತ್ತಿದ್ದಾರೆ. ಬಂಧು, ಮಿತ್ರರ ಗುರುತು, ಪರಿಚಯ ಮರೆಯಲು ಶುರುವಾಗಿದೆ. ಈಗ ಟ್ರಂಪ್ ಭಯ! ಕರೋನಾ ಜೀವನದ ದೊಡ್ಡ ಪಾಠ ಕಲಿಸಿದೆ, ಕಲಿಸುತ್ತಿದೆ. ವಿದೇಶದಲ್ಲೂ ಆರ್ಥಿಕ ಸ್ಥಿತಿ ಇಳಿಮುಖವಾಗಿದೆ. ಲಕ್ಷಾಂತರ ಜನರು ಕೆಲಸ ಕಳೆದುಕೊಂಡರು. ವಿದೇಶದಿಂದ ಬಂದವರು ಎಂದ ಕೂಡಲೆ ಮಾರು ದೂರ ಸರಿಯುತ್ತಿದ್ದೇವೆ, ಎಲ್ಲಾದರೂ ಕೊರೋನಾ ಅಂಟಿಸಿಕೊಂಡಿದ್ದರೆ….ನಮಗೂ ಅಂಟಿಕೊಂಡರೆ!

ವಿದೇಶದಲ್ಲಿರುವ ವರನಿಗೆ ಹುಡುಗಿ ಕೊಡಲೂ ಹಿಂದೇಟು, ಅಲ್ಲಿನ ಉದ್ಯೋಗವೂ ಸ್ಥಿರವಲ್ಲ ಎಂಬ ಅನುಮಾನ. ವಿದೇಶಕ್ಕೆ
ಓದಲು ಹೋಗುವವರೂ ಕಡಿಮೆಯಾಗಿದ್ದಾರೆ! ಎಲ್ಲಾ ಕಡೆ ಅವರವರ ದೇಶದವರಿಗೇ ಉದ್ಯೋಗ ಎನ್ನುವ ಕಾನೂನು
ಬರುತ್ತಿದೆ. ಅಮೆರಿಕದಲ್ಲಿ ಟ್ರಂಪ್ ಇನ್ಯಾವ ಕಾನೂನು ತರುತ್ತಾನೋ ಎನ್ನುವ ಮತ್ತೊಂದು ಹೆದರಿಕೆ. ಎಲ್ಲಾ ಕಡೆ ಆತ್ಮ ನಿರ್ಭರ್ ಆಗಬೇಕೆನ್ನುವ ಮಾತು ಕೇಳಿ ಬರುತ್ತಿದೆ. ಹೇಳುವುದು, ಬರೆಯುವುದು ಸುಲಭ. ಅಷ್ಟು ಸುಲಭದಲ್ಲಿ ವಿದೇಶಿ ವಸ್ತುಗಳನ್ನು ದೂರ ಮಾಡಲು ಸಾಧ್ಯವೇ? ನಮ್ಮಲ್ಲೇ ಜನ ಸಂಪತ್ತು, ತಂತ್ರಜ್ಞಾನ ಇದೆ ಅನ್ನುವುದಾದರೂ ಚೀನಾ ತಯಾರಿಸಿದಷ್ಟು ಕಡಿಮೆ ಬೆಲೆ ಯಲ್ಲಿ ಜನ ಸಾಮಾನ್ಯರ ಕೈಗೆಟಕುವಂತೆ ವಸ್ತುಗಳನ್ನು ತಯಾರಿಸಲು ಸಾಧ್ಯವೇ? ಜಪಾನಿನ ವಸ್ತುಗಳಷ್ಟು ಉತ್ತಮ ಗುಣ ಮಟ್ಟದ ವಸ್ತುಗಳನ್ನು ತಯಾರಿಸಲು ಸಾಧ್ಯವೇ? ಬೆಲೆ ಜಾಸ್ತಿಯಾದರೂ ನಮ್ಮ ನಾಡಿನಲ್ಲೇ ತಯಾರಾದ ವಸ್ತುಗಳನ್ನು ಖರೀದಿಸುತ್ತೇನೆ ಎನ್ನುವ ದೃಢ ನಿರ್ಧಾರ ಇದ್ದರೆ ಸಾಧ್ಯ ಎನ್ನಬಹುದು.