ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಗುರುವಾರ ಈ 'ಮಂತ್ರ' ಗಳನ್ನು ಹೇಳಿಕೊಂಡರೆ ಸಂಪತ್ತು, ಸಮೃದ್ಧಿ ಹೆಚ್ಚುವುದು ಶತಸಿದ್ಧ!

ಗುರುರಾಯರ ಪೂಜೆಗೆ ಗುರುವಾರವೇ ಶ್ರೇಷ್ಠ ದಿನವೆಂದು ಹೇಳಲಾಗುತ್ತೆ. ಗುರುವಾರದಂದು ಭಗವಾನ್ ವಿಷ್ಣು ಮತ್ತು ಶ್ರೀ ಗುರು ರಾಘವೇಂದ್ರರನ್ನು ಪೂಜಿಸಲಾಗುತ್ತೆ. ಗುರುವಾರ ರಾಯರ ಸೇವೆಯನ್ನು ಮಾಡಿದರೆ ಖಂಡಿತ ರಾಯರು ಒಲಿಯುತ್ತಾರೆ. ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಗಳನ್ನು ದೂರ ಮಾಡುತ್ತಾರೆ. ಈ ದಿನದಂದು ರಾಯರ ಯಾವೆಲ್ಲಾ ಮಂತ್ರವನ್ನು ಪಠಿಸಿಬೇಕು.?

ಗುರುವಾರ ರಾಘವೇಂದ್ರ ಸ್ವಾಮಿ ಯಾವ ಮಂತ್ರ ಪಠಿಸಬೇಕು.?

ರಾಘವೇಂದ್ರ ಸ್ವಾಮಿ

Profile Sushmitha Jain Mar 6, 2025 12:48 PM

ಹಿಂದೂ ಧರ್ಮದಲ್ಲಿ ಗುರುವಾರ ಮೂರು ದೇವರಿಗೆ ಸರ್ಮಪಿತವಾದ ದಿನವಾಗಿದ್ದು, ವಿಷ್ಣು ದೇವನನ್ನು, ಸಾಯಿಬಾಬರನ್ನು ಹಾಗೂ ರಾಘವೇಂದ್ರ ಸ್ವಾಮಿಗಳನ್ನು ಪೂಜಿಸುವ ದಿನ ಆಗಿದೆ(Astro Tips). ಅದರಲ್ಲೂ ಈ ದಿನ ಹೆಚ್ಚಾಗಿ, ರಾಯರನ್ನು ಮತ್ತು ಸಾಯಿಬಾಬಾರನ್ನು ಆರಾಧಿಸಲಾಗುತ್ತದೆ. ರಾಘವೇಂದ್ರ ಸ್ವಾಮಿಗಳ ಪೂಜೆಯನ್ನು ಮಾಡಿ, ಉಪವಾಸ ವ್ರತವನ್ನು ಕೈಗೊಳ್ಳುವ ಪದ್ಧತಿಯಿದೆ. ಹಾಗೇ ರಾಯದ ಆರಾಧನೆ ಮಾಡಿದರೆ ಸಾಕು ನಮ್ಮ ಜೀವನದಲ್ಲಿ ಎಂದಿಗೂ ಯಾವುದೇ ತೊಂದರೆಗಳು ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಗುರುವಿನ ಆರಾಧನೆ ಮಾಡುತ್ತಾರೆ. ಸಾಮಾನ್ಯವಾಗಿ ಗುರು ಎಂದರೆ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಲಾಗುತ್ತದೆ. ಇನ್ನು ಗುರುವಾರದ ಶುಭ ದಿನದಂದು ಗುರುರಾಯರನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ.ಹೀಗೇ ರಾಘವೇಂದ್ರ ಸ್ವಾಮಿ ಆರಾಧನೆ ಮಾಡುವಾಗ ಯಾವ ಶ್ಲೋಕಗಳನ್ನ ಹೇಳಬೇಕು ಎಂಬ ಮಾಹಿತಿ ಇಲ್ಲಿದೆ.

ರಾಘವೇಂದ್ರ ಸ್ವಾಮಿಯ ಮೂಲಮಂತ್ರ

"ಓಂ ಶ್ರೀ ರಾಘವೇಂದ್ರಾಯ ನಮಃ" ಈ ಮಂತ್ರವನ್ನು ಗುರುವಾರನೇ ಅಂತಲ್ಲ ಯಾವಾಗ ಬೇಕಾದರೂ ಪಠಿಸಬಹುದು. ಈ ಮಂತ್ರವನ್ನು ಪಠಿಸುವುದರಿಂದ ದೇವರ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ, ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ಋಣಾತ್ಮಕ ಆಲೋಚನೆಗಳು ದೂರಾಗಿ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳು ಹೆಚ್ಚಾಗುವುದು.

ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರ

ಓಂ ವೆಂಕಟನಾಥಯ ವಿದ್ಮಹೆ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್" ಓಂ ವೆಂಕಟನಾಥಯ ವಿದ್ಮಹೆ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್" ಈ ಮಂತ್ರವನ್ನು ತುಂಬಾ ಪವರ್‌ಫುಲ್ ಮಂತ್ರ ಎಂದು ಹೇಳಲಾಗುವುದು. ಈ ಮಂತ್ರವನ್ನು ಪ್ರತಿದಿನ ಬೆಳಗ್ಗೆ ದಿನಾ ಪಠಿಸಿದರೆ ತುಂಬಾ ಒಳ್ಳೆಯದು. ಇದನ್ನು ದಿನಾ ಪಠಿಸಲು ಸಾಧ್ಯವಾಗದಿದ್ದರೆ ಗುರುವಾರ ಹಾಗೂ ಶುಕ್ಲಪಕ್ಷದ ದಿನಗಳಲ್ಲಿ ಪಠಿಸುವುದರಿಂದ ಒಳಿತಾಗುವುದು.

ಈ ವಿಷಯಗಳನ್ನು ಗಮನದಲ್ಲಿರಲಿ

  • ಈ ಮಂತ್ರ ಪಠಣೆ ಮಾಡುವಾಗ ಗಮನಿಸಬೇಕಾದ ಸಂಗತಿಗಳು ಗಾಯತ್ರಿ ಮಂತ್ರ ಪಠಿಸುವಾಗ ಉಚ್ಛಾರಣೆ ದೋಷವಿರಬಾರದು.
  • ಈ ಮಂತ್ರವನ್ನು ಪ್ರತಿದಿನ ಪಠಿಸಬಹುದು ಅಥವಾ ಗುರುವಾರದಂದು ಮಾತ್ರ ಪಠಿಸಬಹುದು ಈ ಮಂತ್ರವನ್ನು ದಿನದಲ್ಲಿ ಒಂದು ಬಾರಿ, 3 ಬಾರಿ, 5 ಬಾರಿ, 9 ಬಾರಿ, 21ಬಾರಿ ಹಾಗೂ 1008 ಬಾರಿ ಜಪಿಸಿದರೆ ಒಳ್ಳೆಯದು.
  • ನಲವತ್ತೆಂಟು ದಿನಗಳವರೆಗೆ ಪಠಿಸಿದರೆ ತುಂಬಾ ಒಳ್ಳೆಯದು ನೀವು ಗಾಯತ್ರಿ ಮಂತ್ರವನ್ನು 48 ದಿನಗಳವರೆಗೆ ಪಠಿಸುವುದಾದರೆ ಗುರುವಾರ ಅಥವಾ ಶುಕ್ಲ ಪಕ್ಷದ ಪುಷ್ಯಾ ನಕ್ಷತ್ರದಂದು ಪಠಿಸಿದರೆ ಒಳ್ಳೆಯದು.
  • ಏನಾದರೂ ಸಂಕಲ್ಪ ನೆರವೇರಲು ನೀವು ಈ ಮಂತ್ರ ಪಠಿಸುವುದಾದರೆ ದಿನದಲ್ಲಿ 1008 ಬಾರಿ ಜಪಿಸಿ

ಇನ್ನು ಯಾರು ಈ ಮಂತ್ರವನ್ನು 48 ದಿನಗಳವರೆಗೆ ಪಠಿಸುತ್ತಾರೋ ಅವರ ಕನಸ್ಸಿನಲ್ಲಿ ಗುರು ರಾಘವೇಂದ್ರ ಸ್ವಾಮಿ ಕಾಣಿಸಿಕೊಳ್ಳುತ್ತಾರೆ ಎಂದು ಭಕ್ತರು ತಮ್ಮ ಸ್ವಅನುಭವದಿಂದ ಹೇಳುತ್ತಾರೆ. ಗುರು ರಾಯರ ಭಕ್ತರಿಗೆ ಸ್ವಾಮಿಯ ಶಕ್ತಿಯ ಅರಿವು ಖಂಡಿತವಾಗಿರುತ್ತದೆ. ಯಾವಾಗ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೋ ಕನಸುಗಳೆಲ್ಲಾ ಪರಿಹಾರವಾಗುವುದು ಎಂಬ ನಂಬಿಕೆ ಇದೆ.