Astro Tips: ಶಿವನನ್ನು ಒಲಿಸಿಕೊಳ್ಳುವುದು ಹೇಗೆ? ಇಲ್ಲಿದೆ ಪೂಜಾ ವಿಧಾನ
Astro Tips: ಸೋಮವಾರ ಶಿವನನ್ನು ಪೂಜಿಸುವುದರಿಂದ ನಮ್ಮ ಆಸೆ-ಕನಸು ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಈ ಮೂಲಕ ಜೀವನದಲ್ಲಿ ಬೆಳವಣಿಗೆಯನ್ನು ಸಾಧಿಸಬಹುದು. ಶಿವ ಪೂಜೆಯನ್ನು ನೀವು ಮನೆಯಲ್ಲಿ ಬೇಕಾದರೂ ಮಾಡಬಹುದು ಅಥವಾ ದೇವಾಲಯದಲ್ಲೂ ಮಾಡಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

ಶಿವ.

ಬೆಂಗಳೂರು: ಶಿವನು (Lord Shiva) ಎಲ್ಲರ ಕಲ್ಯಾಣವನ್ನೇ ಬಯಸುವನು. ಮಹಾದೇವನು ತನ್ನೆಲ್ಲ ಭಕ್ತರ ಆಸೆಗಳನ್ನು ಪೂರೈಸುವವನು. ನಿಮ್ಮ ಜೀವನದಲ್ಲೇನಾದರೂ ಸಮಸ್ಯೆಗಳಿದ್ದರೆ ಅದನ್ನು ನಿವಾರಿಸಿಕೊಳ್ಳಲು ಸೋಮವಾರ ಶಿವಪೂಜೆಯನ್ನು ಮಾಡಬೇಕು (Astro Tips). ಶಿವ ಪೂಜೆಯನ್ನು ನೀವು ಮನೆಯಲ್ಲಿ ಬೇಕಾದರೂ ಮಾಡಬಹುದು ಅಥವಾ ದೇವಾಲಯದಲ್ಲೂ ಮಾಡಬಹುದು. ಶಿವನ ಕೃಪೆಯಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಇತರ ಎಲ್ಲ ದೇವರಿಗೆ ಹೋಲಿಸಿದರೆ ಶಿವನು ಬಹುಬೇಗ ಭಕ್ತರ ಎಲ್ಲ ಆಸೆಗಳನ್ನು ಪೂರೈಸುತ್ತಾನೆ. ಆದರೆ ಶಿವ ಪೂಜೆಗೆ ಅಪಾರ ಶ್ರದ್ಧಾ - ಭಕ್ತಿಯ ಅವಶ್ಯಕತೆಯಿದೆ. ಶಿವನನ್ನು ಪೂಜಿಸುವುದರಿಂದ ಅವನು ಬಹುಬೇಗ ಒಲಿಯುತ್ತಾನೆ. ಶಿವನನ್ನು ಆದಿ ಮತ್ತು ಅನಂತನೆಂದು ಪರಿಗಣಿಸಲಾಗುತ್ತದೆ. ಶಿವನು ಭೂಮಿಯಿಂದ ಆಕಾಶದವವರೆಗೆ ಮತ್ತು ನೀರಿನಿಂದ ಬೆಂಕಿಯವರೆಗಿನ ಪ್ರತಿಯೊಂದು ಅಂಶದಲ್ಲೂ ಅಡಗಿದ್ದಾನೆ.
ಹೌದು, ಶಿವನನ್ನು ಇಂತಹುದ್ದೇ ದಿನ, ಇಂತಹುದ್ದೇ ಸಮಯದಲ್ಲಿ ಪೂಜಿಸಬೇಕೆಂದೇನಿಲ್ಲ. ಶಿವನನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಾದರೂ ಕೂಡ ಪೂಜಿಸಬಹುದು. ಆದರೆ ಆತನಿಗೆ ಬಹಳ ಮುಖ್ಯವಾದುದ್ದು ಭಕ್ತನ ಭಕ್ತಿಯೊಂದೇ ಆಗಿದೆ. ಆದರೆ ಶಿವನ ಪೂಜೆಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದ ಒಂದು ದಿನವಿದೆ. ಅದುವೇ ಸೋಮವಾರ. ಇದು ಶಿವನಿಗೆ ಅರ್ಪಿತವಾದ ದಿನ. ಇದು ಶಿವ ಪೂಜೆಗೆ ಬಹಳ ಶುಭ ದಿನವೆಂದು ಪರಿಗಣಿಸಲಾಗುತ್ತದೆ.
ಜಲಾಭಿಷೇಕ
ಸೋಮವಾರ ಶಿವನನ್ನು ಪ್ರಾರ್ಥಿಸುವಾಗ ಆತನಿಗೆ ಅಭಿಷೇಕ ಸಲ್ಲಿಸಬೇಕು. ಇದರಿಂದ ಪ್ರಸನ್ನನಾಗಿ ನೀವು ಬೇಡಿದ ವರವನ್ನು ಕರುಣಿಸುತ್ತಾನೆ. ಈ ದಿನ ಶಿವನಿಗೆ ಅಭಿಷೇಕವನ್ನು ಅರ್ಪಿಸುವುದು ಆತನ ದೈವಿಕ ಅನುಗ್ರಹವನ್ನು ಪಡೆದುಕೊಳ್ಳುವ ಉತ್ತಮ ಮಾರ್ಗವಾಗಿದೆ. ಸೋಮವಾರ ಅಭಿಷೇಕ ಮಾಡಿ, ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿದರೆ ಶಿವನ ಕೃಪೆಯು ನಿಮ್ಮ ಮೇಲಿರುತ್ತದೆ. ಆತನು ನಿಮ್ಮ ದುಃಖವನ್ನು ತೆಗೆದು ಹಾಕುತ್ತಾನೆ ಮತ್ತು ಶಾಂತಿ ಮತ್ತು ಸಂತೋಷವನ್ನು ನೀಡುತ್ತಾನೆ ಎಂದು ಹಿರಿಯರು ಹೇಳುತ್ತಾರೆ.
ಶಿವನನ್ನು ನಾವು ಕೇವಲ ಜಲಾಭಿಷೇಕದಿಂದಲೇ ಒಲಿಸಿಕೊಳ್ಳಬಹುದು. ಶಿವನಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡುವುದರಿಂದ ಅವನು ಪ್ರಸನ್ನನಾಗುವನು. ಶಿವನಿಗೆ ಜಲಾಭಿಷೇಕವನ್ನು ಹೊರತುಪಡಿಸಿ, ಕ್ಷೀರಾಭಿಷೇಕವನ್ನು ಮಾಡಬಹುದು. ಕ್ಷೀರಾಭಿಷೇಕವೆಂದರೆ ಶಿವನಿಗೆ ಮಾಡುವ ಹಾಲಿನ ಅಭಿಷೇಕವಾಗಿದೆ. ಸೋಮವಾರ ಶಿವನಿಗೆ ಕ್ಷೀರಾಭಿಷೇಕದೊಂದಿಗೆ 108 ಬಾರಿ "ಓಂ ನಮಃ ಶಿವಾಯ" ಮಂತ್ರವನ್ನು ಪಠಿಸಬೇಕು.
ಈ ಸುದ್ದಿಯನ್ನು ಓದಿ: Vaastu Tips : ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ಯಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ..!
ಇನ್ನು ಶಿವನಿಗೆ ಜಲ, ಕ್ಷೀರ ಅಭಿಷೇಕವನ್ನು ಹೊರತುಪಡಿಸಿ ದ್ರವರೂಪದ ವಸ್ತುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ. ತುಪ್ಪ, ಮೊಸರು, ಜೇನುತುಪ್ಪ, ಶ್ರೀಗಂಧದ ಪುಡಿ ಸೇರಿದಂತೆ ಇನ್ನಿತರ ವಸ್ತುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ. ಶಿವರಾತ್ರಿಯಂತಹ ಪವಿತ್ರ ದಿನಗಳಲ್ಲಿ ಶಿವನಿಗೆ ಮೊಸರು, ಎಳನೀರು, ತುಪ್ಪ, ಜೇನುತುಪ್ಪದಂತಹ ದ್ರವರೂಪದ ವಸ್ತುಗಳಿಂದ ವಿಶೇಷವಾಗಿ ಅಭಿಷೇಕವನ್ನು ಮಾಡಿ ಶಿವನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
ಈ ವಸ್ತುಗಳನ್ನು ಅರ್ಪಿಸಿ
ಶಿವನನ್ನು ಪೂಜಿಸುವಾಗ ತಪ್ಪದೆ ತಾಜಾ ಬಿಲ್ವಪತ್ರೆ, ಧಾತುರಾ, ತಾಜಾ ಹಣ್ಣು, ತೆಂಗಿನಕಾಯಿ, ಜೇನುತುಪ್ಪ, ತುಪ್ಪ, ಸಕ್ಕರೆ, ಸುಗಂಧ ದ್ರವ್ಯ, ಶ್ರೀಗಂಧ, ಕುಂಕುಮ ಸೇರಿದಂತೆ ಅವನಿಗೆ ಪ್ರಿಯವಾದ ಎಲ್ಲ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಈ ಎಲ್ಲ ವಸ್ತುಗಳು ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳೆಂದು ಶಿವ ಮಹಾಪುರಾಣದಲ್ಲಿ ಹೇಳಲಾಗಿದೆ.
ಸೋಮವಾರವು ಶಿವನಿಗೆ ಅರ್ಪಿತವಾದ ದಿನವಾದ್ದರಿಂದ, ನಾವು ಈ ದಿನ ಶಿವನನ್ನು ಪೂಜಿಸಬೇಕು. ಸೋಮವಾರ ಶಿವ ಪೂಜೆಯಿಂದ ನಾವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು, ಬೆಳವಣಿಗೆಯನ್ನು ಪಡೆದುಕೊಳ್ಳಬಹುದು.