ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Astro Tips: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ಕೆಲಸ ಮಾಡಲೇಬೇಡಿ; ಆರ್ಥಿಕ ಸಂಕಷ್ಟ ಎದುರಾದೀತು...!

ಮುಸ್ಸಂಜೆ ಅಥವಾ ಸಂಜೆ ಸಮಯವು ದೇವರ ಪೂಜೆಗೆ ಉತ್ತಮವಾದ ಸಮಯ. ಈ ಕಾರಣದಿಂದ ಮುಸ್ಸಂಜೆ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಮುಸ್ಸಂಜೆ ನಾವು ಏನು ಮಾಡಬಾರದು..? ಸಂಜೆ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ಫಿಕ್ಸ್..

ಸಂಜೆ ಈ ಕೆಲಸ ಮಾಡಿದರೆ ಆರ್ಥಿಕ ಸಮಸ್ಯೆ ಗ್ಯಾರಂಟಿ.!

Profile Sushmitha Jain Mar 1, 2025 9:24 AM

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೆಲಸಕ್ಕೂ ಘಳಿಗೆ - ಸಮಯ ನೋಡುತ್ತೇವೆ. ಯಾವುದಾದರೂ ಶುಭಕಾರ್ಯ ಮಾಡಬೇಕು ಎಂದರೆ, ಮದುವೆ, ಉಪನಯನ ಹೀಗೆ ಯಾವುದೇ ಕೆಲಸ ಮಾಡಬೇಕಾದರೆ ಶುಭ ಸಮಯ ಅಥವಾ ಮುಹೂರ್ತವನ್ನು ನೋಡಿಯೇ ಮುಂದುವರಿಯುತ್ತೇವೆ. ಏಕೆಂದರೆ ಶುಭ ಸಮಯದಲ್ಲಿ ಮಾಡಿದರೆ ಅದರ ಫಲ ಸಿಗುತ್ತದೆ ಹಾಗೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಹೇಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಮುಹೂರ್ತ, ಘಳಿಗೆಗಳು ಇದೆಯೋ, ಹಾಗೆಯೇ ಅಶುಭ ಸಮಯ, ಘಳಿಗೆಗಳೂ ಇವೆ.

ಅಲ್ಲದೇ ಕೆಲವೊಂದು ಸಮಯದಲ್ಲಿ ಕೆಲಸಗಳನ್ನು ಮಾಡಬಾರದು ಎಂಬ ನಿಯಮಗಳು ಇವೆ, ಅದರಲ್ಲಿಯೂ ಮುಸ್ಸಂಜೆ ವೇಳೆ ಮಾಡಬಾರದ ಕೆಲ ವಿಚಾರಗಳ ಕುರಿತು ಉಲ್ಲೇಖವಿದ್ದು, ಸಂಜೆಯ ವೇಳೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದ್ರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಲಿದೆ.

ಹೌದು ಸಂಜೆ ವೇಳೆ ಕೆಲ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳಲಿದ್ದು, ನಿಮ್ಮ ಸಂಪತ್ತು ಮತ್ತು ಆಯಸ್ಸು ಕಡಿಮೆಯಾಗುತ್ತದೆ. ಇದರಿಂದ ಬಡತನವು ಮನೆಯಲ್ಲಿ ನೆಲೆಸುವುದು ಮತ್ತು ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಬರುತ್ತಲೇ ಇರಬಹುದು. ಹಾಗಾದ್ರೆ ಸಂಜೆ ಯಾವ ಕೆಲಸ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ಸಂಜೆ ಮಲಗಬೇಡಿ

ಹಿಂದೂ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ನಿದ್ರೆ ಮಾಡುವುದು, ಮಲಗಿಕೊಳ್ಳುವುದು ಮನೆಯಲ್ಲಿನ ದಾರಿದ್ರ್ಯಕ್ಕೆ ಕಾರಣವಾಗಲಿದ್ದು, ಮುಸ್ಸಂಜೆ ವೇಳೆ ಮನೆಗೆ ಲಕ್ಷ್ಮೀ ಬರುವ ಹೊತ್ತು ಆಗುವುದರಿಂದ ಸೋಮಾರಿಯಂತೆ ಮಲಗುವುದು ಮಂಗಳಕರವಲ್ಲ ಎನ್ನಲಾಗಿದೆ. ಹಾಗಾಗಿ ಈ ಸಮಯದಲ್ಲಿ ಭಗವಂತನನ್ನು ಸ್ಮರಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಸಂಜೆಯ ಸಮಯದಲ್ಲಿ ಮಲಗುವ ಜನರು ರಾತ್ರಿಯಲ್ಲಿ ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸುತ್ತಾರೆ. ರಾತ್ರಿ ನಿದ್ರೆಯ ಕೊರತೆಯು ಅನೇಕ ರೋಗಗಳನ್ನು ಉಲ್ಬಣಗೊಳಿಸುತ್ತದೆ.

ಯಾರಿಗೂ ಸಾಲ ಕೊಡಬೇಡಿ

ಕಷ್ಟ ಎಂಬುದು ಯಾರಿಗೆ ಬರುವುದಿಲ್ಲ, ಎಲ್ಲಾರಿಗೂ ಒಮ್ಮೆಯಾದರೂ ಈ ಹಣದ ಸಮಸ್ಯೆ ಎದುರಾಗೇ ಆಗುತ್ತದೆ. ಆದರಿಂದ ಹೊರಬರಲು ಸ್ನೇಹಿತರ ಬಳಿಯೋ, ಆಪ್ತರ ಬಳಿಯೋ ನಾವು ಸಹಾಯ ಕೇಳೇ ಕೇಳುತ್ತೇವೆ. ಆದರೆ, ಯಾವುದೇ ಸಂಧಿಗ್ದ ಪರಿಸ್ಥಿತಿ ಇದ್ದರೂ ಸೂರ್ಯಾಸ್ತದ ನಂತರ ಸಾಲ ನೀಡಬಾರದು ಹಾಗೂ ಪಡೆಯಬಾರದು ಎಂದು ಶಾಸ್ತ್ರ ಹೇಳುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾರೆ ಹಾಗೂ ಸಾಲ ನೀಡುವುದರಿಂದ ಮನೆಯ ಲಕ್ಷ್ಮೀ ಹೊರಹೋಗುತ್ತಾಳೆ ಎಂದು ನಂಬಲಾಗಿದ್ದು, ಸಂಜೆಯ ವೇಳೆಯಲ್ಲಿ ಹಣವ್=ನ್ನು ತೆಗೆದುಕೊಳ್ಳುವುದರಿಂದ ಮನೆಗೆ ಬಡತನ ಬರಲಿದೆ ಹಾಗೂ ಸಾಲ ತೀರುವುದಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಓದಿ: Vastu Tips: ಈ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಹೆಚ್ಚುತ್ತೆ ಸಂಪತ್ತು

ಉಗುರುಗಳನ್ನು ಕತ್ತರಿಸುವುದು

ಕೆಲವರಿಗೆ ಈ ಉಗುರು ಕಚ್ಚುವ ಅಭ್ಯಾಸ ಇರುತ್ತದೆ, ಯಾವಾಗಲೂ ಬಾಯಿಯಲ್ಲಿ ಬೆರಳಿಟ್ಟುಕೊಂಡು ಉಗುರು ಕಚ್ಚುತ್ತಿರುತ್ತಾರೆ. ಆದ್ರೆ ಸೂರ್ಯಾಸ್ತದ ನಂತರ ಈ ಉಗುರುಗಳು ಕತ್ತರಸುವು, ಕಚ್ಚಿ ಮನೆಯೊಳಗೆ ಬೀಸಾಕುವುದು ಮನೆಯಲ್ಲಿನ ಅಶಾಂತಿಗೆ ಕಾರಣವಾಗಬಹುದು. ಹಾಗೇ ಸಂಜೆ ಕೂದಲನ್ನು ಕತ್ತರಿಸುವುದು ಅಥವಾ ಬಾಚುವುದು ಅಶುಭವೆಂದು ಪರಿಗಣಿಸಲಾಗಿದ್ದು, ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯ ಜೊತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬದಲ್ಲಿ ಅಪಶ್ರುತಿ ಹೆಚ್ಚಾಗುತ್ತದೆ, ಆದ್ದರಿಂದ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ.

ತುಳಸಿ ಎಲೆಗಳನ್ನು ಕೀಳಬೇಡಿ

ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಅವರ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂದು ಶಾಸ್ತ್ರ ಹೇಳಿದ್ದು, ತುಳಸಿ ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆ ಸಿಗಲಿದೆ. ಆದ್ರೆ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬೇಡಿ. ಈ ರೀತಿಯ ಅಭ್ಯಾಸ ದುಷ್ಟ ಶಕ್ತಿಗಳಿಗೆ ಆಹ್ವಾನ ನೀಡುವುದಲ್ಲದೆ ಆರೋಗ್ಯದ ಸಮಸ್ಯೆಗೂ ಕಾರಣವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಕಸ ಗೂಡಿಸಬೇಡಿ

ಸಂಜೆ ವೇಳೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸಬಾರದು. ಸೂರ್ಯಾಸ್ತದ ಸಮಯದಲ್ಲಿ ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಮನೆಯ ಆಶೀರ್ವಾದ ಮತ್ತು ಸಂತೋಷ ಮತ್ತು ಸಮೃದ್ಧಿ ಹೊರಟು ಹೋಗುತ್ತದೆ. ಈ ಕಾರಣದಿಂದ ಮನೆಯ ಹಿರಿಯರು ಸಂಜೆ ಮನೆಯನ್ನುನ ಗುಡಿಸಬಾರದು ಎಂಬುದಾಗಿ ಸಲಹೆ ನೀಡುತ್ತಾರೆ. ಸಂಜೆ ಈ ರೀತಿ ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು ಮತ್ತು ಪಿತೃಗಳು ಕೂಡ ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು.