ನವದೆಹಲಿ: ಆಧುನಿಕ ಕ್ರಿಕೆಟ್‌ನಲ್ಲಿ ಟೆಸ್ಟ್ ಮಾದರಿಯನ್ನು ಜನಪ್ರಿಯಗೊಳಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಹಗಲು-ರಾತ್ರಿ ನಡೆಯುವ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಟೆಸ್ಟ್ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮತ್ತು ಐಸಿಸಿ ಅಧ್ಯಕ್ಷ ಜಯ ಶಾ (Jay Shah) ಅವರ ನಡುವೆ ಸಭೆ ನಡೆಯಲಿದೆ. ಈ ಸಭೆಯಲ್ಲಿ 2 ಟಯರ್ ಟೆಸ್ಟ್ ಕ್ರಿಕೆಟ್ ಕುರಿತು ಚರ್ಚೆ ನಡೆಯಲಿದೆ. ಈ ವ್ಯವಸ್ಥೆಯಡಿಯಲ್ಲಿ ಮೂರು ದೊಡ್ಡ ತಂಡಗಳು ಪರಸ್ಪರ ಸಾಧ್ಯವಾದಷ್ಟು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಲಿವೆ.
ಈ ತಿಂಗಳ ಕೊನೆಯಲ್ಲಿ ಎರಡು ಶ್ರೇಣಿಯ ಟೆಸ್ಟ್ ಯೋಜನೆಗೆ ಸಂಬಂಧಿಸಿದಂತೆ ಜಯ ಶಾ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ರಿಚರ್ಡ್ ಥಾಂಪ್ಸನ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಮೈಕ್ ಬೈರ್ಡ್ ನಡುವೆ ಸಭೆ ನಡೆಯಲಿದೆ. ವರದಿಯ ಪ್ರಕಾರ ಎರಡು ಹಂತದ ಟೆಸ್ಟ್ ವ್ಯವಸ್ಥೆಯನ್ನು ಈ ಸಭೆಯಲ್ಲಿ ಅಂತಿಮಗೊಳಿಸಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಗಾಧ ಯಶಸ್ಸಿನ ನಂತರ ಟೆಸ್ಟ್‌ನಲ್ಲಿ ಎರಡು ಹಂತದ ವ್ಯವಸ್ಥೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುತ್ತಿದೆ. ಉಭಯ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆದಿದೆ. ಎರಡು ತಿಂಗಳ ಕಾಲ ನಡೆದಿದ್ದ ಈ ಸರಣಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದಿದ್ದರು. ಇದು ಆಸ್ಟ್ರೇಲಿಯಾದಲ್ಲಿ ಇದುವರೆಗೆ ನಾಲ್ಕನೇ ಅತ್ಯುತ್ತಮ ಹಾಜರಾತಿಯಾಗಿದೆ. ಇದಲ್ಲದೆ, ಇದು ಇಲ್ಲಿಯವರೆಗೆ ಹೆಚ್ಚು ವೀಕ್ಷಿಸಲ್ಪಟ್ಟ ಟೆಸ್ಟ್ ಸರಣಿಯಾಗಿದೆ.
Jasprit Bumrah: ಇಂಗ್ಲೆಂಡ್ ವಿರುದ್ಧದ ಸರಣಿ; ಬುಮ್ರಾಗೆ ವಿಶ್ರಾಂತಿ?
2 ಟಯರ್ ಟೆಸ್ಟ್ ಕ್ರಿಕೆಟ್‌ಗೆ ರವಿಶಾಸ್ತ್ರಿ ಬೆಂಬಲ
ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಈ ಎರಡು ಹಂತದ ಟೆಸ್ಟ್ ವ್ಯವಸ್ಥೆಯನ್ನು ಬೆಂಬಲಿಸಿದ್ದರು. “ಟೆಸ್ಟ್ ಕ್ರಿಕೆಟ್ ಅನ್ನು ಜೀವಂತವಾಗಿಡಲು ನೀವು ಬಯಸಿದರೆ, ಅಗ್ರ ತಂಡಗಳು ಸಾಧ್ಯವಾದಷ್ಟು ಪರಸ್ಪರ ಆಡುವುದೊಂದೇ ದಾರಿ ಎಂಬ ಬಲವಾದ ನಂಬಿಕೆ ನನ್ನಲ್ಲಿದೆ,’ ಎಂದು ರವಿಶಾಸ್ತ್ರಿ ತಿಳಿಸಿದ್ದರು.
ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಹೆಚ್ಚು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ದೀರ್ಘಾವಧಿ ಸ್ವರೂಪವನ್ನು ಜನಪ್ರಿಯಗೊಳಿಸಲು ಸಹಾಯ ಮಾಡುವುದಲ್ಲದೆ ಆದಾಯವನ್ನು ಗಳಿಸುವ ಸಾಧ್ಯತೆಯಿದೆ. ಇದಕ್ಕೆ ಉತ್ತಮ ಉದಾಹರಣೆ ಟಿ20 ಲೀಗ್. ಐಪಿಎಲ್, ಬಿಬಿಎಲ್ ಮತ್ತು ದಿ ಹಂಡ್ರೆಡ್‌ನಂತಹ ಲೀಗ್‌ಗಳನ್ನು ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಆಡಲಾಗುತ್ತದೆ. ಇದನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಈ ಲೀಗ್‌ಗಳಿಂದಾಗಿಯೇ ಮಂಡಳಿ ಭಾರೀ ಲಾಭ ಗಳಿಸಿ ಆರ್ಥಿಕವಾಗಿ ಸದೃಢವಾಗಿದೆ.
2 ಟಯರ್ ಟೆಸ್ಟ್ ಕ್ರಿಕೆಟ್ ಅನ್ನು ವಿರೋಧಿಸಿದ್ದ ಬಿಸಿಸಿಐ
9 ವರ್ಷಗಳ ಹಿಂದೆ ಬಿಸಿಸಿಐ ಟೆಸ್ಟ್ ಕ್ರಿಕೆಟ್‌ನಲ್ಲಿ 2 ಟಯರ್ ಟೆಸ್ಟ್ ಕ್ರಿಕೆಟ್ ಯೋಜನೆಯನ್ನು ವಿರೋಧಿಸಿತ್ತು. 2016 ರಲ್ಲಿ ಎರಡು ಹಂತದ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಐಸಿಸಿ ಬಹಿರಂಗಪಡಿಸಿತ್ತು. ಎರಡು ಶ್ರೇಣಿಯ ಟೆಸ್ಟ್ ಕ್ರಿಕೆಟ್‌ನಿಂದಾಗಿ ಚಿಕ್ಕ ತಂಡಗಳಿಗೆ ಹಾನಿ ಮಾಡುತ್ತದೆ ಎಂದು ಭಾರತ ಬಲವಾಗಿ ವಿರೋಧಿಸಿತ್ತು. ಈ ವ್ಯವಸ್ಥೆಯಲ್ಲಿ ಅಗ್ರ ವಿಭಾಗದಲ್ಲಿ 7 ತಂಡಗಳು ಹಾಗೂ ಎರಡನೇ ವಿಭಾಗದಲ್ಲಿ ಐದು ತಂಡಗಳು ಆಡಲಿವೆ. ಭಾರತ, ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡಗಳು ಇದನ್ನು ವಿರೋಧಿಸಿದ್ದವು. ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎರಡು ಹಂತದ ವ್ಯವಸ್ಥೆಯನ್ನು ಬೆಂಬಲಿಸಿದ್ದವು.
2106ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್, “ಬಿಸಿಸಿಐ ಎರಡು ಹಂತದ ವ್ಯವಸ್ಥೆಯನ್ನು ವಿರೋಧಿಸುತ್ತದೆ. ಏಕೆಂದರೆ ಇದು ಟೆಸ್ಟ್ ಕ್ರಿಕೆಟ್ ಆಡಲು ಬಯಸುವ ಸಣ್ಣ ತಂಡಗಳಿಗೆ ಹಾನಿ ಮಾಡುತ್ತದೆ. ಸಣ್ಣ ತಂಡಗಳಿಗೂ ಸಮಾನ ಅವಕಾಶ ಇರುವುದು ಮುಖ್ಯ. ಈ ವ್ಯವಸ್ಥೆಯಲ್ಲಿ, ಸಣ್ಣ ತಂಡಗಳು ಆದಾಯವನ್ನು ಕಳೆದುಕೊಳ್ಳುವುದಿಲ್ಲ ಆದರೆ ಅಗ್ರ ತಂಡಗಳೊಂದಿಗೆ ಆಡುವುದರಿಂದ ವಂಚಿತವಾಗುತ್ತವೆ. ಇದು ನಡೆಯಲು ನಾವು ಬಯಸುವುದಿಲ್ಲ. ನಾವು ವಿಶ್ವ ಕ್ರಿಕೆಟ್‌ನ ಸುಧಾರಣೆಯನ್ನು ಬಯಸುತ್ತೇವೆ, ಅದಕ್ಕಾಗಿಯೇ ಭಾರತವು ಎಲ್ಲಾ ತಂಡಗಳೊಂದಿಗೆ ಕ್ರಿಕೆಟ್ ಆಡುತ್ತದೆ,” ಎಂದು ಹೇಳಿದ್ದರು.
ಹಣಕ್ಕಾಗಿ ಎರಡು ಹಂತದ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆಯೇ?
ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತದ ದೊಡ್ಡ ಕ್ರಿಕೆಟ್ ಮಂಡಳಿಗಳಾಗಿದ್ದು, ಗರಿಷ್ಠ ಆದಾಯವನ್ನು ಗಳಿಸಲು ಎರಡು ಹಂತದ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿವೆ ಎಂದು ನಂಬಲಾಗಿದೆ. ಏಕೆಂದರೆ ಕಳೆದ ಕೆಲವು ವರ್ಷಗಳಲ್ಲಿ, ಈ ಮೂರು ದೇಶಗಳ ಮಂಡಳಿಗಳು ಮತ್ತು ಪ್ರಸಾರಕರು ಸಣ್ಣ ತಂಡಗಳೊಂದಿಗೆ ಸರಣಿಯಲ್ಲಿ ಬಹಳ ಕಡಿಮೆ ಲಾಭವನ್ನು ಗಳಿಸಿವೆ. ಇದೀಗ ಬಿಸಿಸಿಐ ಈಗ ಎರಡು ಹಂತದ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ದೊಡ್ಡ ಮತ್ತು ಸಣ್ಣ ತಂಡಗಳ ನಡುವೆ ವ್ಯತ್ಯಾಸವನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ.
ಈ ಸುದ್ದಿಯನ್ನು ಓದಿ: PAK vs SA: ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಶಾನ್ ಮಸೂದ್!